For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಬಡ್ಡಿಗಿಂತ ಉತ್ತಮ ಡಿವಿಡೆಂಡ್ ನೀಡಬಹುದಾದ ಐದು ಕಂಪೆನಿಗಳು

|

ಸರ್ಕಾರಿ ಸ್ವಾಮ್ಯದ ಹಲವು ಕಂಪೆನಿಗಳು ಮತ್ತು ಹೆಚ್ಚಿನ ಡಿವಿಡೆಂಡ್ ನೀಡುವ ಕಂಪೆನಿಗಳು ಸಾಮಾನ್ಯವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಲಾಭಾಂಶ ಘೋಷಣೆ ಮಾಡುತ್ತವೆ. ಇನ್ನೂ ಕೆಲವು ಕಂಪೆನಿಗಳು ಮುಂದಿನ ಎರಡ್ಮೂರು ತಿಂಗಳಲ್ಲಿ ಲಾಭಾಂಶವನ್ನು ಘೋಷಣೆ ಮಾಡುತ್ತವೆ. ಈ ಲೇಖನದಲ್ಲಿ ಆಯ್ದ ಐದು ಕಂಪೆನಿಗಳ ಷೇರುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಇವು ಅದ್ಭುತವಾದ ಡಿವಿಡೆಂಡ್ ವಿತರಿಸುವುದು ಮಾತ್ರವಲ್ಲ, ವ್ಯವಹಾರ- ಉದ್ಯಮದ ದೃಷ್ಟಿಯಿಂದಲೂ ಗಟ್ಟಿಯಾದ ತಳಹದಿ ಇರುವ ಕಂಪೆನಿಗಳು ಇವು. ಹಲವು ವರ್ಷಗಳಿಂದ ನಿರಂತರವಾಗಿ ಅತ್ಯುತ್ತಮವಾದ ಲಾಭಾಂಶವನ್ನು ನೀಡುತ್ತಾ ಬರುತ್ತಿವೆ. ಆ ಲೆಕ್ಕಾಚಾರದಲ್ಲಿ ನೋಡಿದರೆ ಇವುಗಳ ಡಿವಿಡೆಂಡ್ ವಿತರಣೆ ಪ್ರಮಾಣ ಬ್ಯಾಂಕ್ ಎಫ್.ಡಿ. ದರಕ್ಕಿಂತ ಉತ್ತಮವಾಗಿದೆ.

ಕೋಲ್ ಇಂಡಿಯಾ
 

ಕೋಲ್ ಇಂಡಿಯಾ

ಕಳೆದ ವರ್ಷ ಮಾರ್ಚ್ ನಲ್ಲಿ ಪ್ರತಿ ಷೇರಿಗೆ ಹದಿಮೂರು ರುಪಾಯಿ ಡಿವಿಡೆಂಡ್ ವಿತರಿಸಿತ್ತು ಕೋಲ್ ಇಂಡಿಯಾ. ಸದ್ಯಕ್ಕೆ ಈ ಷೇರಿನ ಮಾರುಕಟ್ಟೆ ಬೆಲೆ ನೂರಾ ತೊಂಬತ್ನಾಲ್ಕು ರುಪಾಯಿ ಇದೆ. ಈ ಮೊತ್ತದ ಹಣ ಹೂಡಿದರೆ ಲಾಭಾಂಶದ ಪ್ರಮಾಣ ವಾರ್ಷಿಕ ಏಳು ಪರ್ಸೆಂಟ್ ಹತ್ತಿರಕ್ಕೆ ಬರುತ್ತದೆ. ಹಾಗೆ ನೋಡಿದರೆ ಬ್ಯಾಂಕ್ ಗಳಲ್ಲಿ ಆರೂವರೆ ಪರ್ಸೆಂಟ್ ಬಡ್ಡಿ ವಾರ್ಷಿಕವಾಗಿ ನೀಡಲಾಗುತ್ತದೆ. ಅದು ಕೂಡ ತೆರಿಗೆ ವ್ಯಾಪ್ತಿಯೊಳಗೆ ಬರುತ್ತದೆ. ನೆನಪಿರಲಿ, ಲಾಭಾಂಶವು ಹತ್ತು ಲಕ್ಷದ ತನಕ ತೆರಿಗೆ ಮುಕ್ತ. ಕೋಲ್ ಇಂಡಿಯಾ ಷೇರಿನ ಮೂಲಕ ಬರುವ ಡಿವಿಡೆಂಡ್, ಬ್ಯಾಂಕ್ ಠೇವಣಿಗಳಿಗಿಂತ ಉತ್ತಮ.

ಈ ಸಮಯದಲ್ಲಿ ಒಂದು ಅಂಶವನ್ನು ಊಹೆ ಮಾಡಿ, ಈ ಲೆಕ್ಕಾಚಾರ ನೀಡಲಾಗಿದೆ. ಅದೇನೆಂದರೆ ಕಳೆದ ವರ್ಷದಷ್ಟೇ ಈ ಬಾರಿಯೂ ಡಿವಿಡೆಂಡ್ ಕೊಡಬಹುದು ಎಂಬ ಊಹೆ. ಈ ವರ್ಷದಲ್ಲಿ ಕಳೆದ ಬಾರಿಯಷ್ಟು ಡಿವಿಡೆಂಡ್ ಕೊಡಲಾರದು ಎನ್ನುವುದಕ್ಕೆ ಯಾವ ಕಾರಣವೂ ಗೋಚರಿಸುವುದಿಲ್ಲ. ಸರ್ಕಾರವೇ ತನ್ನ ಸ್ವಾಮ್ಯದಲ್ಲಿನ ಕಂಪೆನಿಗಳಿಗೆ ಹೆಚ್ಚಿನ ಡಿವಿಡೆಂಡ್ ಪಾವತಿಸಲು ಸೂಚಿಸಬಹುದು.

ಒಎನ್ ಜಿಸಿ

ಒಎನ್ ಜಿಸಿ

ಕೋಲ್ ಇಂಡಿಯಾ ರೀತಿಯಲ್ಲೇ ಒಎನ್ ಜಿಸಿ ಕೂಡ ಸರ್ಕಾರಿ ಸ್ವಾಮ್ಯದ ಕಂಪೆನಿ. ಸದ್ಯಕ್ಕೆ ಪ್ರತಿ ಷೇರಿನ ಬೆಲೆ ನೂರಾ ಹದಿನೆಂಟು ರುಪಾಯಿ ಇದೆ. ಕಳೆದ ವರ್ಷದ ಡಿವಿಡೆಂಡ್ ಲೆಕ್ಕಾಚಾರವನ್ನು ಗಮನಿಸಿ ಹೇಳುವುದಾದರೆ, ಆರು ಪರ್ಸೆಂಟ್ ಆಗುತ್ತದೆ. ಒಂದು ವೇಳೆ ಹೆಚ್ಚಿನ ಟಾಕ್ಸ್ ಬ್ರ್ಯಾಕೆಟ್ ನೊಳಗಿದ್ದರೆ ತೆರಿಗೆ ಕಡಿತದ ನಂತರ ಅದು ನಾಲ್ಕು ಪರ್ಸೆಂಟ್ ಗೆ ಇಳಿಯುತ್ತದೆ. ಒಎನ್ ಜಿಸಿಯ ಲಾಭಾಂಶಕ್ಕೆ ಹತ್ತು ಲಕ್ಷದ ತನಕ ಯಾವುದೇ ತೆರಿಗೆ ಕಟ್ಟುವ ಅಗತ್ಯ ಇಲ್ಲ. ಸದ್ಯಕ್ಕೆ ಐವತ್ತೆರಡು ವಾರಗಳ ಕನಿಷ್ಠ ಮಟ್ಟದ ಬೆಲೆಯಲ್ಲಿ ಇದೆ ಒಎನ್ ಜಿಸಿ. ಆ ಕಾರಣಕ್ಕೆ ಹೋಲಿಸಿದರೆ ಈ ಷೇರು ಅತ್ಯಾಕರ್ಷಕವಾಗಿದೆ.

ಆಯಿಲ್ ಇಂಡಿಯಾ

ಆಯಿಲ್ ಇಂಡಿಯಾ

ಕಳೆದ ವರ್ಷ ಈ ಕಂಪೆನಿಯು ಹತ್ತು ರುಪಾಯಿ ಇಪ್ಪತ್ತೈದು ಪೈಸೆ ಡಿವಿಡೆಂಡ್ ಅನ್ನು ಪ್ರತಿ ಷೇರಿಗೆ ನೀಡಲಾಗಿತ್ತು. ಸದ್ಯದ ಮಾರುಕಟ್ಟೆ ಬೆಲೆಗೆ ಹೋಲಿಸಿ ಹೇಳುವುದಾದರೆ ಏಳೂವರೆ ಪರ್ಸೆಂಟ್ ನಷ್ಟು ಲಾಭ ಬರುತ್ತದೆ. ಹೋದ ಸಲದಷ್ಟೇ ಲಾಭಾಂಶ ಕೊಡಬಹುದಾ ಎಂದು ಚಿಂತೆ ಮಾಡುವಂಥ ಅಪಾಯಗಳು ಕಂಪೆನಿಯೊಳಗೆ ಏನೂ ಇಲ್ಲ. ಕಳೆದ ಫೆಬ್ರವರಿಯಲ್ಲಿ ಕಂಪೆನಿ ಡಿವಿಡೆಂಡ್ ಘೋಷಣೆ ಮಾಡಿತ್ತು. ಈ ಸಲವೂ ಫೆಬ್ರವರಿ- ಮಾರ್ಚ್ ನಲ್ಲಿ ಘೋಷಣೆ ಮಾಡಬಹುದು. ಈ ಷೇರನ್ನು ದೀರ್ಘಾವಧಿಗೆ ಇಟ್ಟುಕೊಳ್ಳಬಹುದು. ನಿರಂತರವಾಗಿ ಡಿವಿಡೆಂಡ್ ಕೂಡ ದೊರೆಯುವ ಅವಕಾಶ ಉಂಟು.

ಐಒಸಿ
 

ಐಒಸಿ

ದೇಶದ ಅತಿ ದೊಡ್ಡ ತೈಲ ಮಾರ್ಕೆಟಿಂಗ್ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್. ಐವತ್ತೆರಡು ವಾರಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ವರ್ಷ ಪ್ರತಿ ಷೇರಿಗೆ ಒಂಬತ್ತೂ ಕಾಲು ರುಪಾಯಿ ಡಿವಿಡೆಂಡ್ ನೀಡಲಾಗಿತ್ತು. ಆ ಲೆಕ್ಕಾಚಾರದಲ್ಲಿ ನೋಡಿದರೆ ಎಂಟು ಪರ್ಸೆಂಟ್ ಗೂ ಹೆಚ್ಚು ದೊರೆಯುತ್ತದೆ. ಮೇಲೆ ಪ್ರಸ್ತಾವಿಸಿದ ಉಳಿದ ಕಂಪೆನಿಗಳಿಗಿಂತ ತೈಲ ಮಾರ್ಕೆಟಿಂಗ್ ಕಂಪೆನಿಯ ಡಿವಿಡೆಂಡ್ ಅನಿಶ್ಚಿತತೆಯಿಂದ ಕೂಡಿರುತ್ತದೆ. ಆದ್ದರಿಂದ ಕಳೆದ ಬಾರಿ ನೀಡಿದಷ್ಟೇ ಡಿವಿಡೆಂಡ್ ಈ ಬಾರಿಯೂ ನೀಡಬಹುದು ಎಂಬ ಯಾವ ಖಾತ್ರಿಯೂ ಇಲ್ಲ.

ಐಒಸಿ, ಎಚ್ ಪಿಸಿಎಲ್, ಬಿಪಿಸಿಎಲ್ ನಂಥ ತೈಲ ಮಾರ್ಕೆಟಿಂಗ್ ಕಂಪೆನಿಗಳ ಡಿವಿಡೆಂಡ್ ಅನಿಶ್ಚಿತತೆಯಿಂದ ಕೂಡಿರುತ್ತದೆ. ಆದರೆ ಈ ಷೇರಿನ ವಿಚಾರದಲ್ಲಿ ಒಂದು ಅನುಕೂಲದ ಅಂಶ ಇದೆ. ಅದೇನೆಂದರೆ, ಈ ಷೇರಿನ ಬೆಲೆ ಐವತ್ತೆರಡು ವಾರಗಳ ಕನಿಷ್ಠ ಮಟ್ಟದಲ್ಲಿದೆ.

ಆರ್ ಇಸಿ

ಆರ್ ಇಸಿ

ರೂರಲ್ ಎಲೆಕ್ಟ್ರಿಫಿಕೇಷನ್ ಸರ್ಕಾರಿ ಸ್ವಾಮ್ಯದ ಮತ್ತೊಂದು ಸಂಸ್ಥೆ. ಕಳೆದ ಬಾರಿ ಪ್ರತಿ ಷೇರಿಗೆ ಹನ್ನೊಂದು ರುಪಾಯಿ ಡಿವಿಡೆಂಡ್ ವಿತರಿಸಿತ್ತು. ಸದ್ಯಕ್ಕೆ ಈ ಷೇರಿನ ಮಾರುಕಟ್ಟೆ ಬೆಲೆಯನ್ನು ಗಮನಿಸಿದರೆ ವರ್ಷಕ್ಕೆ ಎಂಟೂವರೆ ಪರ್ಸೆಂಟ್ ರಿಟರ್ನ್ಸ್ ದೊರೆಯುತ್ತದೆ. ಇದು ಫೈನಾನ್ಸ್ ಕಂಪೆನಿ. ಭಾರತದಲ್ಲಿ ವಿದ್ಯುತ್ ಮೂಲಸೌಕರ್ಯ ವ್ಯವಹಾರಕ್ಕೆ ಹಣಕಾಸು ನೀಡುತ್ತದೆ. ಕಳೆದ ಹಲವು ವರ್ಷಗಳಿಂದ ಅತ್ಯುತ್ತಮವಾದ ಲಾಭಾಂಶ ನೀಡುತ್ತಾ ಬರುತ್ತಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಆಗಬಹುದು ಎನಿಸುವುದಿಲ್ಲ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಈ ಕಂಪೆನಿ ಲಾಭಾಂಶ ಘೋಷಣೆ ಮಾಡಬಹುದು.

English summary

5 Stocks With A Good Dividend Yield Than Bank FD Interest Rates

Here are 5 companies that are not only great on dividend yield, but, have strong businesses and have been paying dividends on a consistent basis.
Story first published: Wednesday, January 22, 2020, 20:22 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more