For Quick Alerts
ALLOW NOTIFICATIONS  
For Daily Alerts

ಇಪಿಎಫ್‌ ಚಂದಾದಾರರ ಅಕೌಂಟ್‌ಗೆ ಈ ದಿನದೊಳಗೆ 8.5% ಬಡ್ಡಿ ಜಮೆ ಆಗಲಿದೆ!

|

ಇಪಿಎಫ್‌ಒ ವ್ಯಾಪ್ತಿಯಲ್ಲಿ ಬರುವ ದೇಶದ ಸುಮಾರು ಆರು ಕೋಟಿಗೂ ಅಧಿಕ ಚಂದಾದಾರರಿಗೆ ಇಲ್ಲಿದೆ ಗುಡ್‌ನ್ಯೂಸ್. ಜೀ ಬಿಜಿನೆಸ್ ವರದಿಯ ಪ್ರಕಾರ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2020-21ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೀಡಲಾಗುವ ಶೇಕಡಾ 8.5 ರಷ್ಟು ಬಡ್ಡಿಯನ್ನು ಜುಲೈ ಅಂತ್ಯದೊಳಗೆ ನೀಡುತ್ತದೆ.

 

ಇಪಿಎಫ್‌ ಬಡ್ಡಿಯನ್ನು ಜುಲೈ ಅಂತ್ಯದ ವೇಳೆಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವಾಲಯವು ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿ ತಿಳಿಸಿದೆ.

ಮಾರ್ಚ್​ನಲ್ಲಿ ಶ್ರೀನಗರ್​ನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಕುಮಾರ್ ಗಂಗ್ವರ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮಂಡಳಿ ಟ್ರಸ್ಟಿಗಳ (CBT) ಸಭೆಯಲ್ಲಿ ಇಪಿಎಫ್​ ದರವನ್ನು ಶೇ 8.5 ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇದು ಕಳೆದ 7 ಏಳು ವರ್ಷಗಳಲ್ಲಿ ಭಾರತದ ಸಾಮಾಜಿಕ ಭದ್ರತಾ ಸಂಸ್ಥೆ ನೀಡುವ ಅತ್ಯಂತ ಕಡಿಮೆ ಬಡ್ಡಿದರವಾಗಿದೆ.

ಕೋವಿಡ್-19 ಹಿನ್ನೆಲೆ: ಪಿಫ್ ಮುಂಗಡ ಹಣ ಪಡೆಯುವ ಅವಕಾಶ

ಕೋವಿಡ್-19 ಹಿನ್ನೆಲೆ: ಪಿಫ್ ಮುಂಗಡ ಹಣ ಪಡೆಯುವ ಅವಕಾಶ

ಭಾರತದಲ್ಲಿ ಕೋವಿಡ್-19 ಎರಡನೇ ಅಲೆಯು ಸಾಕಷ್ಟು ತೀವ್ರವಾಗಿರುವ ಹಿನ್ನೆಲೆಯಲ್ಲಿ ಇಪಿಎಫ್​ಒದಿಂದ ತನ್ನ ಸದಸ್ಯರಿಗೆ ಕೋವಿಡ್- 19 ಮುಂಗಡ ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಕಳೆದ ವರ್ಷ ಕೋವಿಡ್‌ ಹಿನ್ನೆಲೆಯಲ್ಲಿ ಪಿಎಫ್‌ ವಿತ್‌ಡ್ರಾ ಅರ್ಜಿ ಹಾಕಿರುವಂತೆಯೇ ಈ ಸಲವು ಅಪ್ಲೈ ಮಾಡಬಹುದು.

ಪಿಎಫ್‌ ಜೊತೆಗೆ ಆಧಾರ್ ಲಿಂಡ್ ಕಡ್ಡಾಯ

ಪಿಎಫ್‌ ಜೊತೆಗೆ ಆಧಾರ್ ಲಿಂಡ್ ಕಡ್ಡಾಯ

ಇನ್ನು ಜೂನ್ 1ರಿಂದ ಅನ್ವಯ ಆಗುವಂತೆ ಪಿಎಫ್​ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಡದಿದ್ದಲ್ಲಿ ಉದ್ಯೋಗದಾತರ ಪಿಎಫ್​ ಕೊಡುಗೆ ಖಾತೆಗೆ ಜಮೆ ಆಗುವುದಿಲ್ಲ. ಈ ಬಾರಿ ಆಧಾರ್ ಜೋಡಣೆ ಜವಾಬ್ದಾರಿಯನ್ನು ಉದ್ಯೋಗದಾತರಿಗೆ ನೀಡಲಾಗಿದೆ. ತಮ್ಮ ಉದ್ಯೋಗಿಗೆ ಸೂಚನೆ ನೀಡಿ, ಆಧಾರ್ ಜತೆಗೆ ಪಿಎಫ್ ಖಾತೆ ಜೋಡಣೆ ಆಗಿದೆಯಾ ಎಂಬುದನ್ನು ಖಾತ್ರಿ ಪಡಿಸಬೇಕಾಗುತ್ತದೆ.

ಹೊಸ ನಿಯಮದ ಪ್ರಕಾರ ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡಲು ವಿಫಲಗೊಂಡರೆ ಉದ್ಯೋಗದಾತ(Employer) ಕೊಡುಗೆ ಸ್ಥಗಿತಗೊಳ್ಳುತ್ತದೆ.

Alert: ಎಸ್‌ಬಿಐ ಗ್ರಾಹಕರು ಈ 2 ಅಪ್‌ಡೇಟ್‌ ಮಾಡುವುದನ್ನ ಮಿಸ್‌ ಮಾಡಬೇಡಿ !

ಆನ್‌ಲೈನ್‌ನಲ್ಲಿ ಇಪಿಎಫ್- ಆಧಾರ್ ಲಿಂಕ್ ಮಾಡುವುದು ಹೇಗೆ ?
 

ಆನ್‌ಲೈನ್‌ನಲ್ಲಿ ಇಪಿಎಫ್- ಆಧಾರ್ ಲಿಂಕ್ ಮಾಡುವುದು ಹೇಗೆ ?

* ನೀವು ಮೊದಲು ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗ್ ಇನ್ ಆಗಬೇಕು.

* ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು

* ಒಟಿಪಿಯನ್ನು ಜನರೇಟ್ ಮಾಡಿ ಮತ್ತು ಸಬ್‌ಮಿಟ್‌ ಮಾಡಿ. ಜೊತೆಗೆ ಲಿಂಗವನ್ನು ಆಯ್ಕೆಮಾಡಿ

* ಇದನ್ನು ಮಾಡಿದ ನಂತರ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಆಧಾರ್ ಪರಿಶೀಲನೆ' ವಿಧಾನವನ್ನು ಆರಿಸಿ.

* 'ಮೊಬೈಲ್ ಅಥವಾ ಇ-ಮೇಲ್ ಆಧಾರಿತ ಪರಿಶೀಲನೆ ಬಳಸಿ' ವಿಧಾನವನ್ನು ಆಯ್ಕೆಯನ್ನು ಆರಿಸಿ

* ನಂತರ ನಿಮ್ಮ ಮೊಬೈಲ್‌ಗೆ ಮತ್ತೊಂದು ಒಟಿಪಿ ಬರಲಿದೆ. ಆ ಒಟಿಪಿಯನ್ನು ನಮೂದಿಸಿ.

* ಅಂತಿಮವಾಗಿ, ನಿಮ್ಮ ಪಿಎಫ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್‌ ಲಿಂಕ್ ಮಾಡುವುದನ್ನು ಮರೆಯದಿರಿ!

ಆಧಾರ್ ಜೊತೆಗೆ ಪ್ಯಾನ್ ಕಾರ್ಡ್‌ ಲಿಂಕ್ ಮಾಡುವುದನ್ನು ಮರೆಯದಿರಿ!

ಇಪಿಎಫ್‌ಒ ಇತ್ತೀಚೆಗೆ ಪಿಎಫ್ ಖಾತೆದಾರರಿಗೆ ತುರ್ತು ಕಾರ್ಯವನ್ನು ಇತ್ಯರ್ಥಪಡಿಸುವಂತೆ ಕೇಳಿಕೊಂಡಿತ್ತು. ಇದು ಪ್ಯಾನ್ ಕಾರ್ಡ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡುವುದಾಗಿದೆ. ನಿಮ್ಮ ಪ್ಯಾನ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡಿದ್ದರೆ ಉತ್ತಮ, ಇಲ್ಲದಿದ್ರೆ ಸಾಧ್ಯವಾದಷ್ಟು ಬೇಗ ಲಿಂಕ್‌ ಮಾಡಿ.

ಪಿಎಫ್ ಖಾತೆಗೆ ಪ್ಯಾನ್ ಲಿಂಕ್‌ ಮಾಡದಿದ್ರೆ ಏನಾಗಲಿದೆ?

ಪಿಎಫ್ ಖಾತೆಗೆ ಪ್ಯಾನ್ ಲಿಂಕ್‌ ಮಾಡದಿದ್ರೆ ಏನಾಗಲಿದೆ?

ನೀವು ಪ್ಯಾನ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡದಿದ್ದರೆ ಎರಡು ಪ್ರಮುಖ ನಷ್ಟಗಳನ್ನು ಅನುಭವಿಸಬಹುದು. ಇವುಗಳಲ್ಲಿ ಮೊದಲನೆಯದು, ನೀವು ಪಿಎಫ್ ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ, ಅದರ ಮೇಲೆ ಗರಿಷ್ಠ ತೆರಿಗೆ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದರೆ ಇದನ್ನು ತಪ್ಪಿಸಬಹುದು. ಎರಡನೆಯದಾಗಿ, ನೀವು ಹಣವನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಪಿಎಫ್ ಖಾತೆಯು ಐದು ವರ್ಷಕ್ಕಿಂತ ಕಡಿಮೆ ಮತ್ತು ಖಾತೆಯಲ್ಲಿ ಠೇವಣಿ ಇರಿಸಿದ ಜನರು 50,000 ರೂ. ಹೆಚ್ಚಿದ್ದರೆ ಆಗ ಆ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.

English summary

Alert: EPFO Likely To Credit 8.5 Percent Interest For 2020-21 By end of July 2021

The Employees Provident Fund Organization (EPFO) is expected to credit 8.5 percent interest for the financial year 2020-21 till the end of July, as per a Zee Business report.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X