For Quick Alerts
ALLOW NOTIFICATIONS  
For Daily Alerts

EMI ಮೂಲಕ ಹಣ ಪಾವತಿ: ಪ್ರತಿ ತಿಂಗಳು ಆದಾಯಕ್ಕೆ ದಾರಿ

|

ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಯೋಜನೆಯೊಂದನ್ನು ರೂಪಿಸಿದೆ. ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಹೂಡಿಕೆ ಬಯಸುವವರಿಗೆ ವರ್ಷಾಶನ ಠೇವಣಿ ಯೋಜನೆ(Annuity deposit scheme) ಪರಿಚಯಿಸಿದೆ.

ಸ್ಥಿರ ಠೇವಣಿಗೆ ನಮ್ಮ ಬಳಿ ಜಾಸ್ತಿ ಹಣವಿಲ್ಲ ಎಂದು ಕೊರಗುವಂತಿಲ್ಲ. EMI ಮೂಲಕ ಹಣ ಪಾವತಿಸಿ ಪ್ರತಿ ತಿಂಗಳು ಆದಾಯ ಪಡೆಯಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಮೂಲಕ ಪ್ರತಿ ತಿಂಗಳು 5,500 ಗಳಿಸಿ..

SBI ಅಧಿಕೃತ ವೆಬ್‌ಸೈಟ್ ಪ್ರಕಾರ ಖಾತೆದಾರರು EMI ಮುಖಾಂತರ ಪ್ರತಿ ತಿಂಗಳು ಹಣ ಪಾವತಿಸಿ ವರ್ಷಾಶನ ಠೇವಣಿ ಯೋಜನೆ(Annuity deposit scheme) ಪ್ರಯೋಜನ ಪಡೆದುಕೊಳ್ಳಬಹುದು. EMIಗಳು ನೀವು ಎಷ್ಟು ಹಣವನ್ನು ಒಟ್ಟಾರೆ ಠೇವಣಿ ಮಾಡುತ್ತೀರಾ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಠೇವಣಿ ಮಾಡಿದ ಹಣಕ್ಕೆ ಪ್ರತಿಯಾಗಿ ಪ್ರತಿ ತಿಂಗಳು ಗ್ರಾಹಕರಿಗೆ ಬಡ್ಡಿಯನ್ನು ನೀಡಲಾಗುವುದು.

 

ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ

ಠೇವಣಿ ಮೊತ್ತ

ಠೇವಣಿ ಮೊತ್ತ

ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯಡಿಯಲ್ಲಿ ಗ್ರಾಹಕರು ಕನಿಷ್ಟ 25,000 ರುಪಾಯಿ ಠೇವಣಿ ಹೂಡಬಹುದು. ಆದಾಗ್ಯೂ ಯಾವುದೇ ಗರಿಷ್ಟ ಮಿತಿಯಿಲ್ಲ.

ಠೇವಣಿ ಯೋಜನಾ ಅವಧಿ

ಠೇವಣಿ ಯೋಜನಾ ಅವಧಿ

3 ವರ್ಷಗಳು, 5 ವರ್ಷಗಳು, 7 ವರ್ಷಗಳು ಮತ್ತು 10 ವರ್ಷಗಳ ವರೆಗೆ ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆ ಆಯ್ಕೆಗಳಿವೆ.

ಯೋಜನೆಯ ಬಡ್ಡಿ ದರ

ಯೋಜನೆಯ ಬಡ್ಡಿ ದರ

ಬಡ್ಡಿದರವು ಗ್ರಾಹಕರು ಆಯ್ಕೆ ಮಾಡಿಕೊಂಡ ಠೇವಣಿ ಯೋಜನೆ ಅನ್ವಯ ಅನುಗುಣವಾಗಿದೆ. 3 ರಿಂದ 10 ವರ್ಷದೊಳಗಿನ ಠೇವಣಿ ಯೋಜನೆಗೆ ಶೇಕಡಾ 6.25ರಷ್ಟು ಬಡ್ಡಿದರವಿದೆ

ಅಕಾಲಿಕ ಪಾವತಿ (Premature Payment)
 

ಅಕಾಲಿಕ ಪಾವತಿ (Premature Payment)

SBI ಅಧಿಕೃತ ವೆಬ್‌ಸೈಟ್ ಪ್ರಕಾರ ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯಲ್ಲಿ ಅಕಾಲಿಕ ಪಾವತಿ (Premature Payment) ಕೇವಲ ಠೇವಣಿದಾರರ ಸಾವಿನ ಸಂದರ್ಭದಲ್ಲಿ ಮಾತ್ರ ಪಾವತಿಗೆ ಅನುಮತಿಸಲಾಗುತ್ತದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ಈ ಯೋಜನೆಯಲ್ಲಿ ನಾಮ ನಿರ್ದೇಶನ ಸೌಲಭ್ಯವನ್ನೂ ನೀಡಲಾಗಿದೆ (Nomination facility). SBI ಅಧಿಕೃತ ವೆಬ್‌ಸೈಟ್ ಪ್ರಕಾರ ವರ್ಷಾಶಸನದ ಬಾಕಿ ಮೊತ್ತದ ಶೇಕಡಾ 75ರಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಸಾಲ ಪಡೆದ ಬಳಿಕ ಈ ಯೋಜನೆಯ ಪಾವತಿಯನ್ನು ಸಾಲ ಖಾತೆಯಲ್ಲಿ ಮಾತ್ರ ಜಮಾ ಮಾಡಲಾಗುವುದು.

English summary

Annuity Deposite Scheme To Earn Monthly Income

SBI Annuity Deposite Scheme: a fixed amount is provided to the account holder in equated monthly instalments
Story first published: Thursday, November 14, 2019, 19:01 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more