For Quick Alerts
ALLOW NOTIFICATIONS  
For Daily Alerts

ಅಟಲ್‌ ಪಿಂಚಣಿ ಯೋಜನೆ: ದಿನಕ್ಕೆ 7 ರೂ. ಹೂಡಿಕೆ, ತಿಂಗಳಿಗೆ 5000 ರೂಪಾಯಿ ಪಿಂಚಣಿ!

|

ದೇಶದಲ್ಲಿನ ಕೋಟ್ಯಾಂತರ ಅಸಂಘಟಿತ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರುವ 2015ರಲ್ಲಿ 'ಅಟಲ್ ಪಿಂಚಣಿ ಯೋಜನೆ' (Atal Pension Yojana - APY) ಯನ್ನು ಜಾರಿಗೆ ತಂದಿದೆ. ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಜೀವನವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಯಿತು.

 

2015ರಲ್ಲಿ ಜಾರಿಯಾದ ಈ ಪಿಂಚಣಿ ಯೋಜನೆಯನ್ನು 18 ರಿಂದ 40 ವಯೋಮಾನದ ಭಾರತದ ನಾಗರಿಕರು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಯೋಜನೆಯನ್ನು ಪಡೆದ ನಂತರ ಪ್ರತಿ ತಿಂಗಳು ನಿಗದಿತ ಹಣವನ್ನು ಪಾವತಿಸುವ ಮೂಲಕ ನಿವೃತ್ತಿಯ ನಂತರ ಮಾಸಿಕವಾಗಿ ಒಂದು ಸಾವಿರದಿಂದ, ಐದು ಸಾವಿರ ರೂಪಾಯಿಗಳವರೆಗೆ ಪಿಂಚಣಿ ಪಡೆಯಬಹುದು.

ಅಟಲ್ ಪಿಂಚಣಿ ಯೋಜನೆಯಡಿ, ಚಂದಾದಾರರಿಗೆ ತಿಂಗಳಿಗೆ ಕನಿಷ್ಠ 1,000 ಮತ್ತು ಗರಿಷ್ಠ 5,000 ಪಿಂಚಣಿ ನೀಡಲಾಗುತ್ತದೆ. ಕನಿಷ್ಠ ಪಿಂಚಣಿ ಪ್ರಯೋಜನವನ್ನು ಭಾರತ ಸರ್ಕಾರವು ಖಾತರಿಪಡಿಸುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಏನಂದ್ರೆ, ನೀವು ಇದರಲ್ಲಿ ಹೂಡಿಕೆ ಮಾಡಲು ಬಹಳ ಕಷ್ಟಪಡಬೇಕಾಗಿಲ್ಲ. ದಿನಕ್ಕೆ ಕೇವಲ 7 ರೂಪಾಯಿ ಠೇವಣಿ ಇಡುವ ಮೂಲಕ ಮಾಸಿಕ 5000 ರೂ. ಪಿಂಚಣಿ ಪಡೆಯಬಹುದು. ಅದು ಹೇಗೆ ಎಂದು ತಿಳಿಯಿರಿ.

ಸರ್ಕಾರ ಕೂಡ ಹಣ ಜಮಾ ಮಾಡುತ್ತದೆ

ಸರ್ಕಾರ ಕೂಡ ಹಣ ಜಮಾ ಮಾಡುತ್ತದೆ

ಈ ಯೋಜನೆಯಡಿ, ಸರ್ಕಾರವು ನಿಮ್ಮ ಕೊಡುಗೆಯ 50 ಪ್ರತಿಶತದಷ್ಟು ಅಥವಾ ವರ್ಷಕ್ಕೆ 1,000 ರೂಪಾಯಿಗಳಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು ಕೊಡುಗೆಯಾಗಿ ನೀಡುತ್ತದೆ. ಆದರೆ ಯಾವುದೇ ಕಾನೂನುಬದ್ಧ ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ಒಳಪಡದ ಮತ್ತು ಆದಾಯ ತೆರಿಗೆಯನ್ನು ಪಾವತಿಸದ ಜನರಿಗೆ ಸರ್ಕಾರದ ತೆರಿಗೆ ಲಭ್ಯವಿರುತ್ತದೆ. ಈಗ ಈ ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು ಎಂದು ಈ ಕೆಳಗೆ ತಿಳಿಯಿರಿ.

ಯಾರು ಹೂಡಿಕೆ ಮಾಡಬಹುದು ?

ಯಾರು ಹೂಡಿಕೆ ಮಾಡಬಹುದು ?

ಚಂದಾದಾರರ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು. ಆತ ಉಳಿತಾಯ ಬ್ಯಾಂಕ್ ಖಾತೆ / ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ನೀವು ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಯಾವುದೇ ಕಾರಣದಿಂದ ಚಂದಾದಾರರ ಸಾವಿನ ಸಂದರ್ಭದಲ್ಲಿ, ಪಿಂಚಣಿಯನ್ನು ಸಂಗಾತಿಗೆ ನೀಡಲಾಗುತ್ತದೆ ಮತ್ತು ಇಬ್ಬರೂ (ಚಂದಾದಾರರು ಮತ್ತು ಸಂಗಾತಿ) ಸಾವಿನ ನಂತರ, ಪಿಂಚಣಿ ಮೊತ್ತವನ್ನು ಅವನ/ಅವಳ ನಾಮಿನಿಗೆ ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ: ಮೂವರು ಹೆಣ್ಣು ಮಕ್ಕಳಿಗೂ ಹೇಗೆ ಅನ್ವಯವಾಗುತ್ತದೆ ಎಂದು ತಿಳಿಯಿರಿ

ಎಷ್ಟು ಪ್ರೀಮಿಯಂ ಪಾವತಿಸಬೇಕು ?
 

ಎಷ್ಟು ಪ್ರೀಮಿಯಂ ಪಾವತಿಸಬೇಕು ?

ನಿಮಗೆ ಬೇಕಾದ ಪಿಂಚಣಿಯ ಮೊತ್ತಕ್ಕೆ ಅನುಗುಣವಾಗಿ ನಿಮ್ಮ ಪ್ರೀಮಿಯಂ ಅನ್ನು ಕೂಡ ನಿರ್ಧರಿಸಲಾಗುತ್ತದೆ. 18 ವರ್ಷ ವಯಸ್ಸಿನವರು APY ಖಾತೆಯನ್ನು ತೆರೆದರೆ ಮತ್ತು ಪ್ರತಿ ತಿಂಗಳು 1000 ರೂಪಾಯಿ ಮಾಸಿಕ ಪಿಂಚಣಿ ಬಯಸಿದರೆ, ಅವರು ತಿಂಗಳಿಗೆ ಕೇವಲ 42 ರೂ. ಪಾವತಿಸಬೇಕು. ಇನ್ನು ನೀವು ಮಾಸಿಕ ಪಿಂಚಣಿ ರೂ. 2000 ಬೇಕಾದಲ್ಲಿ ರೂ. 84 ರೂಪಾಯಿ, ಮಾಸಿಕ ಪಿಂಚಣಿ ರೂ .3000 ಬೇಕಾದಲ್ಲಿ 126 ರೂ., ಮಾಸಿಕ ಪಿಂಚಣಿ ರೂ .4000 ರೂಪಾಯಿಗೆ 168 ರೂಪಾಯಿ ಮತ್ತು ಮಾಸಿಕ ಪಿಂಚಣಿ 5000 ಗಳನ್ನು ಪಡೆಯಲು ಪ್ರತಿ ತಿಂಗಳು 210 ರೂಪಾಯಿ ಹೂಡಿಕೆ ಮಾಡಬೇಕು. ಇದರರ್ಥ ನೀವು ಮಾಸಿಕ 5000 ರೂಪಾಯಿ ಪಿಂಚಣಿ ಪಡೆಯಲು ಬಯಸಿದರೆ ನಿಮ್ಮ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ದಿನಕ್ಕೆ 7 ರೂಪಾಯಿ ಹೂಡಿಕೆ ಮಾಡಿದರೆ ಸಾಕು. 60 ವರ್ಷ ವಯಸ್ಸಿನಲ್ಲಿ ಆರಂಭದಿಂದ 5,000 ರೂಪಾಯಿ ಪಿಂಚಣಿ ಪಡೆಯಬಹುದು.

ಬ್ಯಾಂಕ್ ಲಾಕರ್‌ಗಳಿಗೆ ಹೊಸ ನಿಯಮ ಜಾರಿಗೆ ತಂದ RBI: ಮಿಸ್‌ ಮಾಡದೆ ಓದಿ

ಎಲ್ಲಾ ಬ್ಯಾಂಕುಗಳು ಸೌಲಭ್ಯ ಒದಗಿಸುತ್ತವೆ

ಎಲ್ಲಾ ಬ್ಯಾಂಕುಗಳು ಸೌಲಭ್ಯ ಒದಗಿಸುತ್ತವೆ

ದೇಶದ ಎಲ್ಲಾ ಬ್ಯಾಂಕುಗಳು APY ಖಾತೆ ತೆರೆಯುವ ಸೌಲಭ್ಯವನ್ನು ನೀಡುತ್ತವೆ. ನೀವು ಖಾತೆ ಹೊಂದಿರುವ ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಮತ್ತು APY ಗೆ ನೋಂದಾಯಿಸಿ. ಆನ್‌ಲೈನ್ ಹೊರತುಪಡಿಸಿ, ಬ್ಯಾಂಕ್ ಶಾಖೆಗಳಲ್ಲಿ ನೋಂದಣಿ ನಮೂನೆಗಳು ಲಭ್ಯವಿದೆ. ನೀವು ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಬ್ಯಾಂಕ್‌ಗೆ ಸಲ್ಲಿಸಬಹುದು. ಅಥವಾ ನೀವು ಅದನ್ನು ಬ್ಯಾಂಕಿನಲ್ಲಿಯೇ ತೆಗೆದುಕೊಂಡು ಅದನ್ನು ಅಲ್ಲಿ ತುಂಬಿಸಿ ಠೇವಣಿ ಮಾಡಬಹುದು. ಅಂಚೆ ಕಚೇರಿಗಳಲ್ಲೂ ಈ ಯೋಜನೆಯ ಸೌಲಭ್ಯ ಪಡೆಯಬಹುದು.

ಎಪಿವೈ ತೆರಿಗೆ ವಿನಾಯಿತಿಗಳು

ಎಪಿವೈ ತೆರಿಗೆ ವಿನಾಯಿತಿಗಳು

ಆದಾಯ ತೆರಿಗೆ ಕಾಯ್ದೆ 80 ಸಿಸಿಡಿ (1ಬಿ) ಪ್ರಕಾರ ಈ ಯೋಜನೆಯಲ್ಲಿ ಹೂಡಿಕೆ ಮಾಡಲಾಗುವ ಮೊತ್ತದ ಗರಿಷ್ಠ 50 ಸಾವಿರ ರೂಪಾಯಿಗಳಿಗೆ ಆದಾಯ ತೆರಿಗೆ ವಿನಾಯಿತಿ ಹಾಗೂ ಕಾಯ್ದೆ 80ಸಿ ಪ್ರಕಾರ ಪ್ರತಿ ವರ್ಷ 1.5 ಲಕ್ಷ ರೂ. ಅಥವಾ ಅದಕ್ಕೂ ಮೇಲ್ಪಟ್ಟ ಮೊತ್ತಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

English summary

Atal Pension Yojana: Deposit Rs 7 Every Day and Get a Monthly Pension Of Rs 5000 Every Month

Here the details of how to get Rs 5000 Pension after deposit Rs 7 Every day. Explained In Kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X