ಗಮನಿಸಿ: ಡಿಸೆಂಬರ್ನಲ್ಲಿ ಇನ್ನೂ 6 ದಿನ ಬ್ಯಾಂಕ್ ಬಂದ್!
ಸತತವಾಗಿ ಹಬ್ಬಗಳೇ ಬರುವ ವಾರವು ಸಮೀಪವಾಗುತ್ತಿದೆ. ಈಗಾಗಲೇ ಡಿಸೆಂಬರ್ 20 ದಿನಗಳು ಕಳೆದಿದೆ. ಆದರೆ ಈ ನಡುವೆ ಉಳಿದ ಹತ್ತು ದಿನದಲ್ಲಿ ಆರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದೆ. ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳು ಡಿಸೆಂಬರ್ನಲ್ಲಿ ಕನಿಷ್ಠ ಆರು ದಿನಗಳವರೆಗೆ ಮುಚ್ಚಲ್ಪಡುತ್ತವೆ.
ಕ್ರಿಸ್ಮಸ್ಗಾಗಿ ಹಿನ್ನೆಲೆ ಡಿಸೆಂಬರ್ 25 ರಂದು ರಾಷ್ಟ್ರೀಯ ರಜಾದಿನವಾಗಿದ್ದು, ಭಾರತದಾದ್ಯಂತ ಬ್ಯಾಂಕುಗಳು ಅಂದು ಮುಚ್ಚಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರತಿ ವರ್ಷ ಬ್ಯಾಂಕ್ಗಳಿಗೆ ರಜಾದಿನಗಳ ಪಟ್ಟಿಯನ್ನು ಒದಗಿಸುತ್ತದೆ. ಈ ವರ್ಷ, ಡಿಸೆಂಬರ್ನಲ್ಲಿ ಕ್ರಿಸ್ಮಸ್ ಸೇರಿದಂತೆ ಏಳು ರಾಜ್ಯವಾರು ರಜಾದಿನಗಳು ಸೇರಿವೆ. ಇದು ತಿಂಗಳ ಎರಡನೇ ಶನಿವಾರದಂದು ಬೀಳುತ್ತದೆ. ಆದರೆ ಈಗಾಗಲೇ ಭಾರತದಾದ್ಯಂತ ತಿಂಗಳ ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ಗಳಿಗೆ ರಜಾ ದಿನವಾಗಿದೆ.
ಗಮನಿಸಿ: ಮುಂದಿನ ವಾರ ನಾಲ್ಕು ದಿನ ಬ್ಯಾಂಕ್ ರಜೆ: ಇಲ್ಲಿದೆ ಮಾಹಿತಿ
ಆದರೆ ನೀವು ಯಾವುದೇ ಬ್ಯಾಂಕ್ ವಹಿವಾಟು ಇದ್ದರೆ ಶೀಘ್ರವೇ ಮುಗಿಸಿಬಿಡುವುದು ಒಳಿತು. ಏಕೆಂದರೆ ಮುಂದಿನ ಹತ್ತು ದಿನಗಳಲ್ಲಿ ಆರು ದಿನ ಬ್ಯಾಂಕ್ ಬಂದ್ ಆಗಲಿದೆ. ಈ ಸಮಯದಲ್ಲಿ ಎಲ್ಲಾ ಬ್ಯಾಂಕುಗಳ ಆನ್ಲೈನ್ ವಹಿವಾಟು ಅಥವಾ ಮೊಬೈಲ್ ವಹಿವಾಟು ಎಂದಿನಂತೆಯೇ ನಡೆಯಲಿದೆ. ಆದರೆ ಬ್ಯಾಂಕುಗಳಿಗೆ ಹೋಗಿಯೇ ಮಾಡಬೇಕಾದ ಕಾರ್ಯಗಳು ಇದ್ದಲ್ಲಿ ಮುಗಿಸುವುದು ಉತ್ತಮ. ಆದರೆ ಈ ನಡುವೆಯೂ ಬ್ಯಾಂಕ್ ಗ್ರಾಹರಿಕರಿಗೆ ಸಿಹಿ ಸುದ್ದಿ ಇದೆ. ಈ ಆರು ದಿನಗಳ ಪೈಕಿ ಹೆಚ್ಚಿನವು ರಾಜ್ಯಾವಾರು ಬ್ಯಾಂಕ್ ರಜೆಗಳು ಆಗಿದೆ. ಆದ್ದರಿಂದಾಗಿ ಆಯಾ ರಾಜ್ಯಗಳಿಗೆ ಮಾತ್ರ ಈ ಬ್ಯಾಂಕ್ ರಜೆಗಳು ಪ್ರಭಾವ ಬೀರಲಿದೆಯೇ ಹೊರತು, ಭಾರತದಾದ್ಯಂತ ಪರಿಣಾಮ ಬೀರಲಾರದು. ಆದರೆ ಯಾವೆಲ್ಲಾ ದಿನ ಬ್ಯಾಂಕ್ ರಜಾ ಹಿನ್ನೆಲೆ ಬಂದ್ ಆಗಲಿದೆ ಹಾಗೂ ಎಲ್ಲಿ ಬಂದ್ ಆಗಲಿದೆ ಎಂಬ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ...

ಆರ್ಬಿಐ ಪ್ರಕಾರ ಡಿಸೆಂಬರ್ನ ಇನ್ನುಳಿದ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
* ಡಿಸೆಂಬರ್ 24: ಕ್ರಿಸ್ಮಸ್ ಈವ್ - ಐಜ್ವಾಲ್, ಶಿಲ್ಲಾಂಗ್
* ಡಿಸೆಂಬರ್ 25: ಕ್ರಿಸ್ಮಸ್ - ಗುವಾಹಟಿ, ಹೈದರಾಬಾದ್, ಇಂಫಾಲ್, ಜೈಪುರ, ಜಮ್ಮು, ಕಾನ್ಪುರ್, ಕೊಚ್ಚಿ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್ಪುರ್, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ, ತಿರುವನಂತಪುರಂ
* ಡಿಸೆಂಬರ್ 27: ಕ್ರಿಸ್ಮಸ್ ಆಚರಣೆ - ಐಜ್ವಾಲ್
* ಡಿಸೆಂಬರ್ 30: ತಮು ಲೊಸಾರ್/ಯು ಕಿಯಾಂಗ್ ನಂಗ್ಬಾ (ಸಿಕ್ಕಿಂ ಹಾಗೂ ಮೇಘಾಲಯ)
* ಡಿಸೆಂಬರ್ 31: ಹೊಸ ವರ್ಷಾಚರಣೆ (ಮಣಿಪುರ)
ಡಿಸೆಂಬರ್ನಲ್ಲಿ ದೇಶಾದ್ಯಂತ ರಜಾದಿನಳು ಇಲ್ಲಿದೆ ನೋಡಿ
ಡಿಸೆಂಬರ್ 25: ತಿಂಗಳ ನಾಲ್ಕನೇ ಶನಿವಾರ ಮತ್ತು ಕ್ರಿಸ್ಮಸ್
ಡಿಸೆಂಬರ್ 26: ಭಾನುವಾರ
ಡಿಸೆಂಬರ್ನಲ್ಲಿ ಎಷ್ಟು ದಿನ ರಜೆ ಇದ್ದವು?
* ಡಿಸೆಂಬರ್ 1: ರಾಜ್ಯೋತ್ಸವ (ನಾಗಲ್ಯಾಂಡ್, ಅರುಣಾಚಲ ಪ್ರದೇಶ)
* ಡಿಸೆಂಬರ್ 3: ವಿಶ್ವ ದಿವ್ಯಾಂಗ ದಿನ/ಸೈಂಟ್ ಫ್ರಾನ್ಸಿನ್ ಕ್ಸೇವಿಯರ್ ಹಬ್ಬ (ತ್ರಿಪುರಾ ಹಾಗೂ ಗೋವಾ)
* ಡಿಸೆಂಬರ್ 5: ವಾರದ ರಜೆ (ಭಾನುವಾರ ಭಾರತದೆಲ್ಲೆಡೆ ರಜೆ)
* ಡಿಸೆಂಬರ್ 11: ಎರಡನೇ ಶನಿವಾರ ಭಾರತದೆಲ್ಲೆಡೆ ರಜೆ
* ಡಿಸೆಂಬರ್ 16: ಬ್ಯಾಂಕ್ ಖಾಸಗೀಕರಣದ ವಿರುದ್ಧ ಬ್ಯಾಂಕ್ ಯೂನಿಯನ್ ಮುಷ್ಕರ
* ಡಿಸೆಂಬರ್ 17: ಬ್ಯಾಂಕ್ ಖಾಸಗೀಕರಣದ ವಿರುದ್ಧ ಬ್ಯಾಂಕ್ ಯೂನಿಯನ್ ಮುಷ್ಕರ
* ಡಿಸೆಂಬರ್ 18: ಯು ಸೊಸೊ ಥಾಮ್ ಪುಣ್ಯ ಸ್ಮರಣೆ/ಗುರುಘಿಸಿದಾಸ್ ಜಯಂತಿ (ಮೇಘಾಲಯ/ಚಂಡೀಗಢ)
* ಡಿಸೆಂಬರ್ 19: ಭಾನುವಾರ ದೇಶದೆಲ್ಲೆಡೆ