For Quick Alerts
ALLOW NOTIFICATIONS  
For Daily Alerts

ಹೊಸ ಮನೆ ಖರೀದಿ, ನಿರ್ಮಾಣಕ್ಕೆ 2021ಕ್ಕಿಂತ ಸೂಕ್ತ ವರ್ಷ ಇದೆಯಾ!

|

ವರ್ಷಗಳಿಂದ ಮನೆ ಖರೀದಿಗೆ, ನಿರ್ಮಾಣಕ್ಕೆ ಎದುರು ನೋಡುತ್ತಿರುವವರಿಗೆ 2021ನೇ ಇಸವಿ ಉತ್ತಮ ವರ್ಷವಾಗಿದೆ. ಗೃಹ ಸಾಲದ ಬಡ್ಡಿ ದರವು ಆಸ್ತಿಗಳ ಬೆಲೆಯಂತೆಯೇ ಕಡಿಮೆ ಆಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಂಥ ರಾಜ್ಯಗಳು ನೋಂದಣಿ ಶುಲ್ಕವನ್ನು ಸಹ ಕಡಿಮೆ ಮಾಡಿವೆ. ಇದರ ಜತೆಗೆ ತೆರಿಗೆ ಅನುಕೂಲಗಳು ಸಹ ದೊರೆಯಲಿವೆ.

ಅಸಲಿನ ಮೇಲೆ ತೆರಿಗೆ ಅನುಕೂಲಗಳು

ಸಾಲವಾಗಿ ಪಡೆಯುವ ಅಸಲು ಮೊತ್ತ ಮತ್ತು ಬಡ್ಡಿ ಎರಡನ್ನೂ ಸಮಾನವಾಗಿ ಭಾಗ ಮಾಡಿ, ಸಮಾನ ಮಾಸಿಕ ಕಂತುಗಳಾಗಿ (ಇಎಂಐ) ಹಂಚಲಾಗುತ್ತದೆ. ತೆರಿಗೆ ಪಾವತಿದಾರರ ಗ್ರಾಸ್ ಟೋಟಲ್ ಇನ್ ಕಮ್ ನಿಂದ ವಿನಾಯಿತಿಯಾಗಿ ಅವಕಾಶ ನೀಡಲಾಗುತ್ತದೆ. ಆದರೆ ಸೆಕ್ಷನ್ 80C ಅಡಿಯಲ್ಲಿ ಇತರ ಅರ್ಹ ಹೂಡಿಕೆ ಮಿತಿ ರು. 1.50 ಲಕ್ಷ ಮಾತ್ರ.

 

ಬಡ್ಡಿ ಪಾವತಿ ಮೇಲೆ ತೆರಿಗೆ ಅನುಕೂಲ

ಇನ್ ಕಮ್ ಫ್ರಮ್ ಹೌಸ್ ಪ್ರಾಪರ್ಟಿ ಅಡಿಯಲ್ಲಿ ತಾವಿರುವ ಮನೆಗೆ ಗರಿಷ್ಠ ವಿನಾಯಿತಿ ಎರಡು ಲಕ್ಷ ರುಪಾಯಿ ಬಡ್ಡಿ ಪಾವತಿಗೆ ದೊರೆಯುತ್ತದೆ. ಇದನ್ನು ವೇತನ ಆದಾಯದ ಜತೆಗೆ ಇತರ ಆದಾಯಗಳ ಜತೆಗೆ ಅದೇ ವರ್ಷ ಹೊಂದಾಣಿಕೆ ಮಾಡಬಹುದು. ಇದರಿಂದ ಒಟ್ಟಾರೆ ತೆರಿಗೆ ಜವಾಬ್ದಾರಿ ಕಡಿಮೆ ಆಗುತ್ತದೆ.

ಪೆಟ್ರೋಲ್ ದರ: ರಾಮನ ಭಾರತದಲ್ಲಿ ರು. 93, ರಾವಣನ ಲಂಕೆಯಲ್ಲಿ ರು. 51

ಆದರೆ, ಇದಕ್ಕಾಗಿ ಕ್ಲೇಮ್ ಮಾಡುವುದಕ್ಕೆ ಸಾಲ ಪಡೆದ ಐದು ವರ್ಷಗಳಲ್ಲಿ ಮನೆ ಖರೀದಿ ಅಥವಾ ನಿರ್ಮಾಣ ಪೂರ್ಣಗೊಂಡಿರಬೇಕು. ಇಲ್ಲದಿದ್ದಲ್ಲಿ ವಿನಾಯಿತಿ ರು. 30,000ಕ್ಕೆ ಮಿತಿಗೊಳ್ಳುತ್ತದೆ.

ಹೊಸ ಮನೆ ಖರೀದಿ, ನಿರ್ಮಾಣಕ್ಕೆ 2021ಕ್ಕಿಂತ ಸೂಕ್ತ ವರ್ಷ ಇದೆಯಾ!

ಏಪ್ರಿಲ್ 1, 2019ರಿಂದ ಮಾರ್ಚ್ 31, 2022ರ ಮಧ್ಯೆ ರು. 45 ಲಕ್ಷದ ನೋಂದಣಿ ಮೌಲ್ಯದ ವಸತಿ ಮನೆಯನ್ನು ಖರೀದಿಸಿದಲ್ಲಿ ಗೃಹ ಸಾಲಕ್ಕೆ ಹೆಚ್ಚುವರಿಯಾಗಿ ರು. 1.5 ಲಕ್ಷ ತೆರಿಗೆ ವಿನಾಯಿತಿ ದೊರೆಯುತ್ತದೆ. ಆದರೆ ವೈಯಕ್ತಿಕ ತೆರಿಗೆದಾರರಿಗೆ ಸಾಲ ವಿತರಣೆ ಸಂದರ್ಭದಲ್ಲಿ ಬೇರೆ ಯಾವುದೇ ವಸತಿ ಆಸ್ತಿ ಇರಬಾರದು. ಇನ್ನೂ ನೀವು ಮೊದಲ ಮನೆ ಖರೀದಿ ಮಾಡದಿದ್ದಲ್ಲಿ ಶೀಘ್ರವೇ ಆ ಬಗ್ಗೆ ತೀರ್ಮಾನಿಸಿ.

ನಿಮ್ಮ ಆಸ್ತಿಯನ್ನು ಬಾಡಿಗೆಗೆ ನೀಡಿದ್ದಲ್ಲಿ, ಬಾಡಿಗೆ ಹಾಗೂ ಸ್ಥಳೀಯ ಸಂಸ್ಥೆಗೆ ತೆರಿಗೆ ಕಟ್ಟಿದ ಮೊತ್ತ, ಸ್ಟ್ಯಾಂಡರ್ಡ್ ಡಿಡಕ್ಷನ್ ಮತ್ತು ಗೃಹ ಸಾಲದ ಮೇಲಿನ ಬಡ್ದಿಯ ವ್ಯತ್ಯಾಸವೇ ಹೌಸ್ ಪ್ರಾಪರ್ಟಿಯಿಂದ ಆದ ನಷ್ಟ. ಇದನ್ನು ರು. ಎರಡು ಲಕ್ಷದ ತನಕ ಹೊಂದಾಣಿಕೆ ವೇತನ ಸೇರಿದಂತೆ ಇತರ ಆದಾಯಕ್ಕೆ ಹೊಂದಾಣಿಕೆ ಮಾಡಬಹುದು.

ಸ್ವಂತವಾಗಿ ಇರುವ ಮನೆಗೆ ಹೌಸಿಂಗ್ ಲೋನ್ ಮೇಲಿನ ಬಡ್ದಿ ವಿನಾಯಿತಿಯು ಹೊಸ 'ಸರಳ' ವೈಯಕ್ತಿಕ ಆದಾಯ ತೆರಿಗೆಯಲ್ಲಿ ದೊರೆಯುದಿಲ್ಲ. ಹೌಸ್ ಪ್ರಾಪರ್ಟಿ ನಷ್ಟವನ್ನು ಇತರ ಆದಾಯಗಳ ಜತೆಗೆ ಹೊಂದಾಣಿಕೆ ಮಾಡುವುದಕ್ಕೂ ಸಾಧ್ಯವಿಲ್ಲ.

English summary

Budget 2021: Is It Best Time In 2021 To Go For Housing Loan?

Budget 2021: Here is an analysis about, is 2021 best time to go for housing loan?
Company Search
COVID-19