For Quick Alerts
ALLOW NOTIFICATIONS  
For Daily Alerts

Budget 2022: ಎಂಎಸ್‌ಎಂಇ, ಸ್ಟಾರ್ಟ್-ಅಪ್‌ ವಲಯಕ್ಕೆ ಏನಿದೆ?

|

ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ. ಘೋಷಣೆಗೂ ಮುನ್ನ ಹಲವಾರು ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಸರ್ಕಾರದ ಮುಂದೆ ಇಟ್ಟಿದ್ದವು, ಸ್ಟಾರ್ಟ್-ಅಪ್‌ ವಲಯವೂ ಕೂಡಾ ತಮ್ಮದೇ ಆದ ನಿರೀಕ್ಷೆಯನ್ನು ಸರ್ಕಾರದ ಮುಂದೆ ಇಟ್ಟಿದ್ದವು. ಪ್ರಮುಖವಾಗಿ ಉದ್ಯಮದ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವಂತೆ ಭಾರತೀಯ ಸ್ಟಾರ್ಟ್‌ಅಪ್‌ಗಳು ಸರ್ಕಾರಕ್ಕೆ ಮನವಿ ಮಾಡಿತ್ತು.

 

ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾಗಿರುವ ಈ ಸ್ಟಾರ್ಟ್‌ಅಪ್‌ಗಳು ಬಜೆಟ್‌ನಿಂದ ಕೆಲವು ಮಹತ್ತರವಾಗಿ, ಮಹತ್ವದ ನಿರೀಕ್ಷೆಯನ್ನು ಹೊಂದಿತ್ತು. ಕೋವಿಡ್‌ ಸಾಂಕ್ರಾಮಿಕ ರೋಗದ ಪರಿಣಾಮಗಳಿಂದ ಈಗಾಗಲೇ ತತ್ತರಿಸುತ್ತಿರುವ ಭಾರತೀಯ ಆರ್ಥಿಕತೆ ಮತ್ತು ಸ್ಟಾರ್ಟ್‌ಅಪ್‌ಗಳು ಮುಂಬರುವ ಬಜೆಟ್‌ನ ಕಾರಣದಿಂದಾಗಿ ಉತ್ತಮ ಬೆಳವಣಿಗೆ ಕಾಣುವ ಆಶಾದಾಯಕ ನಿರೀಕ್ಷೆಯನ್ನು ಹೊಂದಿತ್ತು.

ಬಜೆಟ್‌ನಿಂದ ಸ್ಟಾರ್ಟ್-ಅಪ್‌ಗಳ ನಿರೀಕ್ಷೆಯೇನು?

ಸ್ಟಾರ್ಟ್‌ಅಪ್‌ಗಳಿಗೆ ಫಂಡ್‌ ಹೆಚ್ಚಳ, ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ, ಇಜಿಎಲ್‌ಜಿಎಸ್‌ ಕಾರ್ಯಕ್ರಮ ವಿಸ್ತರಣೆ, ಎಲೆಕ್ಟ್ರಿಕ್ ಕಾರ್ ಸ್ನೇಹಿ ವ್ಯವಸ್ಥೆ ಮೊದಲಾದ ನಿರೀಕ್ಷೆಯನ್ನು ಸ್ಟಾರ್ಟ್‌ಅಪ್‌ ವಲಯವು ಹೊಂದಿದ್ದವು. ಹಾಗಾದರೆ ಈ ಬಜೆಟ್‌ನಲ್ಲಿ ಎಂಎಸ್‌ಎಂಇ ಹಾಗೂ ಸ್ಟಾರ್ಟ್-ಅಪ್‌ ವಲಯದ ನಿರೀಕ್ಷೆ ಪೂರ್ಣವಾಗಿದೆಯೇ? ಎಂಎಸ್‌ಎಂಇ, ಸ್ಟಾರ್ಟ್-ಅಪ್‌ ವಲಯಕ್ಕೆ ಏನಿದೆ? ಎಂದು ತಿಳಿಯಲು ಮುಂದೆ ಓದಿ...

 Budget 2022: ಎಂಎಸ್‌ಎಂಇ, ಸ್ಟಾರ್ಟ್-ಅಪ್‌ ವಲಯಕ್ಕೆ ಏನಿದೆ?

ಎಂಎಸ್‌ಎಂಇ, ಸ್ಟಾರ್ಟ್-ಅಪ್‌ ವಲಯಕ್ಕೆ ಏನಿದೆ?

* ಕೊರೊನಾ ವೈರಸ್‌ ಸಾಂಕ್ರಾಮಿಕ ಕಾರಣದಿಂದಾಗಿ ಸ್ಟಾರ್ಟ್‌ಅಪ್‌ಗಳಿಗೆ ಇನ್ನೂ ಒಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ.
* ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು. ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು. 7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
* ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಪ್​ಡೇಟೆಡ್​ ರಿಟರ್ನ್ ಫೈಲ್ ಮಾಡಬಹುದು. ಆ ಆದಾಯ ರಿಟರ್ನ್ ಸಲ್ಲಿಕೆ ಮಾಡಿದ ಎರಡು ವರ್ಷದೊಳಗೆ ಈ ಬದಲಾವಣೆಯನ್ನು ಮಾಡಬಹುದು. ತೆರಿಗೆ ಪಾವತಿ, ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿ ಜಾರಿಮಾಡಲಾಗುವುದು. ತೆರಿಗೆ ಸಲ್ಲಿಕೆ ವೇಳೆ ಸಮಸ್ಯೆ ಕಂಡು ಬಂದರೆ 2 ವರ್ಷದೊಳಗೆ ತಪ್ಪು ಸರಿಪಡಿಸುವುದಕ್ಕೆ ಅವಕಾಶ ನೀಡಲಾಗಿದೆ.
* ಎಂಎಸ್‌ಎಂಇ ವಲಯಕ್ಕಾಗಿ ರೂ 6,000 ಕೋಟಿ ಕಾರ್ಯಕ್ರಮವನ್ನು 5 ವರ್ಷಗಳಲ್ಲಿ ಹೊರತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
* ಉದ್ಯಮ, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸೀಮ್ ಪೋರ್ಟಲ್‌ಗಳಂತಹ ಎಂಎಸ್‌ಎಂಇಗಳು ಪರಸ್ಪರ ಸಂಬಂಧ ಹೊಂದಿದ್ದು, ಅವುಗಳ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
* ಕೃಷಿ ಮತ್ತು ಗ್ರಾಮೀಣ ಉದ್ಯಮಗಳಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಒದಗಿಸಲು ಹೂಡಿಕೆ
* ಡ್ರೋನ್ ಶಕ್ತಿಗಾಗಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲಾಗುತ್ತದೆ
* ಪಿಇ/ವಿಸಿ ಸ್ಟಾರ್ಟ್‌ಅಪ್‌ನಲ್ಲಿ ರೂ 5.5 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಹೂಡಿಕೆಯನ್ನು ಆಕರ್ಷಿಸಲು ಸಹಾಯ ಮಾಡುವ ಕ್ರಮಗಳನ್ನು ಸೂಚಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

 

Budget 2022: ಬಜೆಟ್‌ನಿಂದ ಹಣಕಾಸು ವಲಯಕ್ಕೆ ಲಭಿಸಿದ್ದೇನು?

ಸ್ಟಾರ್ಟ್-ಅಪ್‌ ವಲಯದ ನಿರೀಕ್ಷೆ ಏನಿತ್ತು?

ಕೇಂದ್ರ ಬಜೆಟ್ 2022-23 ರಲ್ಲಿ ಹೊಸ ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ ಹಾಗೂ ತೆರಿಗೆ ಸಡಿಲಿಕೆ ಮಾಡುವುದು ಸಹಾಯಕ ಎಂದು ಸ್ಥಳೀಯ ಸ್ಟಾರ್ಟ್‌ಅಪ್‌ಗಳ ಗುಂಪು ಸಲಹೆ ನೀಡಿತ್ತು. ಸ್ಟಾರ್ಟ್‌ಅಪ್‌ಗಳಿಗಾಗಿ ಇರುವ ಫಂಡ್ಸ್‌ ಫಾರ್‌ ಸ್ಟಾರ್ಟ್‌ಅಪ್‌ (ಎಫ್‌ಎಫ್‌ಎಸ್‌) ಫಂಡ್‌ಗೆ ಸರ್ಕಾರ ನೀಡುವ ಕೊಡುಗೆಯನ್ನು ಹೆಚ್ಚಳ ಮಾಡಲು ಸ್ಟಾರ್ಟ್‌ಅಪ್‌ಗಳು ಬಯಸಿತ್ತು. ಮುಂದಿನ ಆರ್ಥಿಕ ವರ್ಷದ ಬಹುಪಾಲು ಅವಧಿಗೆ, ಇಜಿಎಲ್‌ಜಿಎಸ್‌ (ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್) ಅನ್ನು ವಿಸ್ತರಣೆ ಮಾಡುವಂತೆ ಸರ್ಕಾರ ಗಮನ ಹರಿಸಲಿದೆ ಎಂಬ ಭರವಸೆಯನ್ನು ಸ್ಟಾರ್ಟ್‌ಅಪ್‌ಗಳು ಹೊಂದಿತ್ತು. ಸ್ಥಳೀಯ ಎಲೆಕ್ಟ್ರಿಕ್ ಕಾರು ತಯಾರಿಕೆಯನ್ನು ಉತ್ತೇಜಿಸಲು, ಹಣಕಾಸು ಹರಿವು ಸರಾಗಗೊಳಿಸಲು ಮತ್ತು ಇವಿ-ಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರವು ಹೊಸ ಸುಧಾರಣೆಯನ್ನು ತರುವ ನಿರೀಕ್ಷೆಯನ್ನು ಸ್ಟಾರ್ಟ್‌ಅಪ್‌ಗಳು ಹೊಂದಿತ್ತು.

English summary

Budget 2022 Highlights for MSMEs & startups Sector in Kannada

Budget 2022 for MSMEs & startups: Know about Union Budget 2022 Highlights for MSMEs & startups Sector. Check New reforms & schemes announced for the MSMEs & startups sector in Budget 2022.
Story first published: Tuesday, February 1, 2022, 18:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X