For Quick Alerts
ALLOW NOTIFICATIONS  
For Daily Alerts

ಬಜೆಟ್‌ನಿಂದ ಸ್ಟಾರ್ಟ್-ಅಪ್‌ಗಳ ನಿರೀಕ್ಷೆಯೇನು?

|

ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. ಇದಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದೆ. ಈ ನಡುವೆ ಎಲ್ಲಾ ವಲಯಗಳು ಬಜೆಟ್‌ ನಿರೀಕ್ಷೆಯನ್ನು ಹೊರಹಾಕಿದೆ. ಈ ನಡುವೆ ಉದ್ಯಮಗಳು ಮತ್ತು ಉದ್ಯಮ ತಜ್ಞರು ಕೂಡಾ ಬಜೆಟ್‌ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

 

ಈ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಹೆಚ್ಚಾಗಿ ಸಂಕಷ್ಟಕ್ಕೆ ಒಳಗಾಗಿರುವ ಈ ಸ್ಟಾರ್ಟ್‌ಅಪ್‌ಗಳು ಬಜೆಟ್‌ನಿಂದ ಕೆಲವು ಮಹತ್ತರವಾಗಿ, ಮಹತ್ವದ ನಿರೀಕ್ಷೆಯನ್ನು ಹೊಂದಿದೆ. ಜೊತೆಗೆ ಉದ್ಯಮದ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವಂತೆ ಭಾರತೀಯ ಸ್ಟಾರ್ಟ್‌ಅಪ್‌ಗಳು ಸರ್ಕಾರಕ್ಕೆ ಮನವಿ ಮಾಡಿದೆ.

ಬಜೆಟ್ 2022: ಚಿನ್ನದ ಮೇಲಿನ ಆಮದು ತೆರಿಗೆ ತೆಗೆದರೆ ಜನರಿಗೆ ಏನು ಲಾಭ?

ಕೋವಿಡ್‌ ಸಾಂಕ್ರಾಮಿಕ ರೋಗದ ಪರಿಣಾಮಗಳಿಂದ ಈಗಾಗಲೇ ತತ್ತರಿಸುತ್ತಿರುವ ಭಾರತೀಯ ಆರ್ಥಿಕತೆ ಮತ್ತು ಸ್ಟಾರ್ಟ್‌ಅಪ್‌ಗಳು ಮುಂಬರುವ ಬಜೆಟ್‌ನ ಕಾರಣದಿಂದಾಗಿ ಉತ್ತಮ ಬೆಳವಣಿಗೆ ಕಾಣುವ ಆಶಾದಾಯಕ ನಿರೀಕ್ಷೆಯನ್ನು ಹೊಂದಿದೆ. ಸ್ಟಾರ್ಟ್-ಅಪ್ ವ್ಯವಸ್ಥೆಯು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಪ್ರಮುಖವಾಗಿ ಹೊಸ ಪಾಲಿಸಿ, ತೆರಿಗೆ ವಿನಾಯಿತಿ ನಿರೀಕ್ಷೆಯನ್ನು ಹೊಂದಿದೆ. ಆ ನಿರೀಕ್ಷೆಗಳು ಏನು ಎಂಬುವುದನ್ನು ತಿಳಿಯಲು ಮುಂದೆ ಓದಿ..

ಕೇಂದ್ರ ಬಜೆಟ್ 2022: ಆದಾಯ ತೆರಿಗೆ ಮಿತಿ ಹೆಚ್ಚಳ ಸಾಧ್ಯತೆ ಕಡಿಮೆ

 ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ

ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ

ಕೇಂದ್ರ ಬಜೆಟ್ 2022-23 ರಲ್ಲಿ ಹೊಸ ಸ್ಟಾರ್ಟ್ಅಪ್-ಸ್ನೇಹಿ ಪಾಲಿಸಿ ಹಾಗೂ ತೆರಿಗೆ ಸಡಿಲಿಕೆ ಮಾಡುವುದು ಸಹಾಯಕ ಎಂದು ಸ್ಥಳೀಯ ಸ್ಟಾರ್ಟ್‌ಅಪ್‌ಗಳ ಗುಂಪು ಸಲಹೆ ನೀಡಿದೆ. ಸಣ್ಣ ಉದ್ಯಮಗಳಿಗೆ ಮತ್ತಷ್ಟು ಪ್ರಯೋಜನವನ್ನು ನೀಡುವ ಸಲುವಾಗಿ, ವ್ಯವಹಾರವನ್ನು ಸುಲಭಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದೆ. ತಂತ್ರಜ್ಞಾನದ ಮೂಲಕ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಹೊಸ ಸುಧಾರಣೆಗಳು, ನೀತಿ ಹಾಗೂ ಬೆಂಬಲ ಕಾರ್ಯವಿಧಾನಗಳನ್ನು ಜಾರಿಗೆ ತರುವುದರಿಂದಾಗಿ ದೊಡ್ಡ ಆರ್ಥಿಕ ಪರಿಣಾಮವನ್ನು ಬೀರುತ್ತವೆ ಎಂದು ಒತ್ತಿ ಹೇಳಿದೆ. ಸ್ಟಾರ್ಟ್‌ಅಪ್‌ಗಳು ಪ್ರಗತಿಪರ ಬಜೆಟ್‌ ಅನ್ನು ಎದುರು ನೋಡುತ್ತಿದೆ. ಇದು ಭಾರತದಲ್ಲಿ ಸ್ಟಾರ್ಟ್ಅಪ್‌ಗಳ ಸಮಸ್ಯೆಗಳನ್ನು ಪರಿಹರಿಸುವ ದೇಶೀಯ ಉದ್ಯಮಿಗಳನ್ನು ಬೆಳೆಸಲು ಒತ್ತು ನೀಡಲಿದೆ ಎಂಬ ನಿರೀಕ್ಷೆ ಇದೆ. ಸರ್ಕಾರವು ಉದ್ಯಮಿಗಳಿಗೆ ಸರಳವಾದ ಕಾನೂನು, ಮಾನದಂಡಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಬೇಕಾಗಿದೆ ಎಂದು ಸ್ಟಾರ್ಟ್‌ಅಪ್‌ಗಳ ಗುಂಪು ಸಲಹೆ ನೀಡಿದೆ.

 ಸ್ಟಾರ್ಟ್‌ಅಪ್‌ಗಳಿಗೆ ಫಂಡ್‌ ಹೆಚ್ಚಳ ನಿರೀಕ್ಷೆ

ಸ್ಟಾರ್ಟ್‌ಅಪ್‌ಗಳಿಗೆ ಫಂಡ್‌ ಹೆಚ್ಚಳ ನಿರೀಕ್ಷೆ

ಸ್ಟಾರ್ಟ್‌ಅಪ್‌ಗಳಿಗಾಗಿ ಇರುವ ಫಂಡ್ಸ್‌ ಫಾರ್‌ ಸ್ಟಾರ್ಟ್‌ಅಪ್‌ (ಎಫ್‌ಎಫ್‌ಎಸ್‌) ಫಂಡ್‌ಗೆ ಸರ್ಕಾರ ನೀಡುವ ಕೊಡುಗೆಯನ್ನು ಹೆಚ್ಚಳ ಮಾಡಲು ಸ್ಟಾರ್ಟ್‌ಅಪ್‌ಗಳು ಬಯಸು‌ತ್ತಿದೆ. ಈ ಫಂಡ್‌ ಹೆಚ್ಚಳ ಮಾಡಿದರೆ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಸಹಾಯ ಆಗಲಿದೆ. ಸುಲಭವಾದ ಸಾಲ ನೀಡಿಕೆ ಪ್ರಕ್ರಿಯೆ, ತೆರಿಗೆ ನಿಯಮ ಸರಳ ಮಾಡುವುದು, ಕಾಗದರಹಿತ ವಹಿವಾಟು ಮೂಲಕ ಸರ್ಕಾರವು ಸ್ಟಾರ್ಟ್‌ಅಪ್‌ಗಳು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕಾಗಿದೆ.

 ಇಜಿಎಲ್‌ಜಿಎಸ್‌ ಕಾರ್ಯಕ್ರಮ ವಿಸ್ತರಣೆ
 

ಇಜಿಎಲ್‌ಜಿಎಸ್‌ ಕಾರ್ಯಕ್ರಮ ವಿಸ್ತರಣೆ

ಮುಂದಿನ ಆರ್ಥಿಕ ವರ್ಷದ ಬಹುಪಾಲು ಅವಧಿಗೆ, ಇಜಿಎಲ್‌ಜಿಎಸ್‌ (ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್) ಅನ್ನು ವಿಸ್ತರಣೆ ಮಾಡುವಂತೆ ಸರ್ಕಾರ ಗಮನ ಹರಿಸಲಿದೆ ಎಂಬ ಭರವಸೆಯನ್ನು ಸ್ಟಾರ್ಟ್‌ಅಪ್‌ಗಳು ಹೊಂದಿದೆ. ಈ ಕಾರ್ಯಕ್ರಮಗಳಲ್ಲಿನ ಬಡ್ಡಿದರದ ಮೇಲೆ ನಿರ್ಬಂಧವಿರಬಾರದು, ಏಕೆಂದರೆ ಇದು ಮೈಕ್ರೋ-ಸ್ಕೇಲ್ ಉದ್ಯಮಗಳಿಗೆ ಹಣವು ಲಭ್ಯವಾಗುವಂತೆ ಮಾಡಲು ಸಹಕಾರಿ ಎಂದು ಗುಂಪು ಹೇಳಿಕೊಂಡಿದೆ. ಬಡ್ಡಿಯ ಮೇಲಿನ ಮಿತಿಯು ದೊಡ್ಡ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ, ಆದರೆ ಸಣ್ಣ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ವಿವರಿಸಿದೆ. ಭಾಷೆ, ಸಾಕ್ಷರತೆ, ಭೌಗೋಳಿಕತೆ ಅಥವಾ ಆದಾಯದ ಮೂಲವನ್ನು ಲೆಕ್ಕಿಸದೆ ಮುಂಬರುವ ಬಜೆಟ್‌ನಲ್ಲಿ ಸಾಲ ಪಡೆಯಲು ಮುಂದಾಗುವ ಸ್ಟಾರ್ಟ್‌ಅಪ್‌ಗಳನ್ನು ಕೇಂದ್ರ ಸರ್ಕಾರ ಬೆಂಬಲಿಸಬೇಕು ಎಂದು ಸ್ಟಾರ್ಟ್‌ಅಪ್‌ಗಳ ಗುಂಪು ಹೇಳಿದೆ.

"ಇಎಸ್‌ಒಪಿ ಆದಾಯದ ಮೇಲಿನ ತೆರಿಗೆ ತೆಗೆಯಿರಿ"

ಕಳೆದ ವರ್ಷ, ಸರ್ಕಾರವು ಇಎಸ್‌ಒಪಿಗಳನ್ನು ಉತ್ತೇಜಿಸಲು ಸ್ಟಾರ್ಟ್‌ಅಪ್‌ಗಳಿಗೆ ತೆರಿಗೆ ವಿನಾಯಿತಿ ಕ್ಲೈಮ್ ಮಾಡುವ ಗಡುವನ್ನು ಒಂದು ವರ್ಷದವರೆಗೆ ವಿಸ್ತರಿಸಿತು. ಅಂದರೆ ಮಾರ್ಚ್ 31, 2022 ರವರೆಗೆ ವಿಸ್ತಾರ ಮಾಡಲಾಗಿದೆ. ಅದರ ಹೊರತಾಗಿ, ಹಣಕಾಸು ಉತ್ತೇಜನಕ್ಕಾಗಿ ಸ್ಟಾರ್ಟ್‌ಅಪ್‌ ಹೂಡಿಕೆಗಳಿಗೆ ಬಂಡವಾಳ ಲಾಭದ ವಿನಾಯಿತಿಯನ್ನು ಸರ್ಕಾರವು ಒಂದು ವರ್ಷದವರೆಗೆ ವಿಸ್ತರಿಸಿದೆ. ಅಂದರೆ ಅದು ಕೂಡಾ ಮಾರ್ಚ್ 31, 2022 ರವರೆಗೆ ವಿಸ್ತಾರ ಮಾಡಲಾಗಿದೆ. ರಾಷ್ಟ್ರದ ಅನೇಕ ಸ್ಟಾರ್ಟ್‌ಅಪ್‌ಗಳು ಹಿಂದಿನ ವರ್ಷದಲ್ಲಿ ಉದ್ಯೋಗಿಗಳ ಸ್ಟಾಕ್ ಮಾಲೀಕತ್ವದ ಯೋಜನೆಗಳನ್ನು (ಇಎಸ್‌ಒಪಿ) ಖರೀದಿ ಮಾಡುವಂತೆ ತಮ್ಮ ಉದ್ಯೋಗಿಗಳಿಗೆ ಹೇಳಿದೆ. ಈ ಆಯ್ಕೆಯ ಮೂಲಕ ತೆರಿಗೆ ಪಾವತಿಗಳನ್ನು ಮುಂದೂಡುವುದು, ಹಾಗೆಯೇ ಕೆಲವು ಇಎಸ್‌ಒಪಿ ಆದಾಯದ ಮೇಲಿನ ತೆರಿಗೆಯನ್ನು ತೆಗೆದುಹಾಕುವುದು ಮುಂದಿನ ಬಜೆಟ್‌ನಲ್ಲಿ ಇದ್ದರೆ ಅದು ಸ್ವಾಗತಾರ್ಹ ವಿಚಾರವಾಗಿದೆ ಎಂದು ಸ್ಟಾರ್ಟ್‌ಅಪ್‌ ಗುಂಪು ತಿಳಿಸಿದೆ.

 ಎಲೆಕ್ಟ್ರಿಕ್ ಕಾರ್ ಸ್ನೇಹಿ ವ್ಯವಸ್ಥೆ

ಎಲೆಕ್ಟ್ರಿಕ್ ಕಾರ್ ಸ್ನೇಹಿ ವ್ಯವಸ್ಥೆ

ಸ್ಥಳೀಯ ಎಲೆಕ್ಟ್ರಿಕ್ ಕಾರು ತಯಾರಿಕೆಯನ್ನು ಉತ್ತೇಜಿಸಲು, ಹಣಕಾಸು ಹರಿವು ಸರಾಗಗೊಳಿಸಲು ಮತ್ತು ಇವಿ-ಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರವು ಹೊಸ ಸುಧಾರಣೆಯನ್ನು ತರುವ ನಿರೀಕ್ಷೆಯನ್ನು ಸ್ಟಾರ್ಟ್‌ಅಪ್‌ಗಳು ಹೊಂದಿದೆ. ದೇಶದಲ್ಲಿ ಇವಿ ಅನ್ನು ಪ್ರಚಾರ ಮಾಡಲು ಮತ್ತು ವಿಸ್ತರಿಸಲು ಇದು ಉತ್ತಮ ಹೆಜ್ಜೆ ಎಂದು ನಿರೀಕ್ಷಿಸಲಾಗಿದೆ. ಇವಿ ಸೆಕ್ಟರ್ ಸ್ಟಾರ್ಟ್‌ಅಪ್‌ಗಳು ಇವಿ ಖರೀದಿ ಮತ್ತು ಬಾಡಿಗೆಗಳ ಮೇಲಿನ ಜಿಎಸ್‌ಟಿ ಅನ್ನು 5% ರಿಂದ 2% ಕ್ಕೆ ಇಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿವೆ. ಜಿಎಸ್‌ಟಿ ಇಳಿಕೆಯಾದರೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಲು ಗ್ರಾಹಕರು ಮುಂದೆ ಬರುತ್ತಾರೆ ಎಂಬುವುದು ಈ ವಲಯದ ಅಭಿಪ್ರಾಯವಾಗಿದೆ.

English summary

Budget 2022: What Indian Start-Ups Expecting From The Budget, Explained in Kannada

Budget 2022: What Indian Start-Ups Expecting From The Budget, Explained in Kannada. ಬಜೆಟ್ 2022
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X