ಮೇ ತಿಂಗಳಲ್ಲಿ ಯಾವುದೆಲ್ಲಾ ಬದಲಾವಣೆ, ಜೇಬಿಗೆ ಬೀಳುತ್ತಾ ಕತ್ತರಿ?
ಈಗಾಗಲೇ ಏಪ್ರಿಲ್ ತಿಂಗಳು ಕೊನೆಯಾಗಿದ್ದು, ಮೇ ತಿಂಗಳ ಮೂರು ದಿನದಲ್ಲಿ ನಾವಿದ್ದೇವೆ. ಈ ತಿಂಗಳ ಆರಂಭದಿಂದಲೇ ಹೊಸ ಬದಲಾವಣೆಗಳು ಆರಂಭವಾಗಿದೆ. ಹೊಸ ತಿಂಗಳಿನಲ್ಲಿ ಆದ ಹೊಸ ಬದಲಾವಣೆಗಳು, ಆಗಲಿರುವ ಹೊಸ ಬದಲಾವಣೆಗಳು ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ.
ನಮ್ಮ ಸಾಮಾನ್ಯ ಜೀವನದಲ್ಲಿ ವೈಯಕ್ತಿಕ ಹಣಕಾಸು ಬಹಳ ಮುಖ್ಯವಾಗಿದೆ. ನಮ್ಮ ನಿರಂತರ ಜೀವನದ ವೈಯಕ್ತಿಕ ಹಣಕಾಸಿನ ಮೇಲೆ ಯಾವುದೇ ನಿಯಮ ಬದಲಾವಣೆಯು ಪ್ರಭಾವ ಬೀರಲಿದೆ. ಕೆಲವು ನಿಯಮ ಬದಲಾವಣೆಯು ನಮಗೆ ಸಹಕಾರಿಯಾದರೆ, ಕೆಲವು ಬದಲಾವಣೆಯಿಂದ ನಮ್ಮ ಜೇಬಿಗೆ ಕತ್ತರಿ ಬೀಳಲಿದೆ.
ಎಲ್ಪಿಜಿ ಬೆಲೆ, ಐಎಂಪಿಎಸ್ ಶುಲ್ಕ: ಫೆ.1ರಿಂದ ಬದಲಾಗುವ ನಿಯಮಗಳನ್ನು ತಿಳಿಯಿರಿ
ಮೇ 1 ರಿಂದ, ಸಾಮಾನ್ಯ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುವ ಕೆಲವು ಬ್ಯಾಂಕಿಂಗ್, ಹಣಕಾಸು ಸಂಬಂಧಿತ ನಿಯಮಗಳಲ್ಲಿ ಬದಲಾವಣೆಯಾಗಿದೆ. ಆದ್ದರಿಂದ, ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ನಿಮ್ಮ ವೈಯಕ್ತಿಕ ಹಣಕಾಸಿನ ನಿರ್ವಹಣೆಯಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾದರೆ ಏನೆಲ್ಲಾ ಬದಲಾವಣೆ ಆಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯಲ್ಲಿ ತೆರಿಗೆ ಸಂಗ್ರಹ
ಉತ್ತರ ಪ್ರದೇಶದ ರಾಜಧಾನಿ ಗಾಜಿಪುರಕ್ಕೆ ಸಂಪರ್ಕ ಕಲ್ಪಿಸುವ 340 ಕಿ.ಮೀ ಉದ್ದದ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇಗೆ ಮೇ 1ರಿಂದ ಟೋಲ್ ತೆರಿಗೆ ವಿಧಿಸಲಾಗುತ್ತಿದೆ. ಅಂದರೆ ಈಗ ಈ ಎಕ್ಸ್ ಪ್ರೆಸ್ ವೇ ಪ್ರಯಾಣ ದುಬಾರಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಪೂರ್ವಾಂಚಲ್ ಎಕ್ಸ್ಪ್ರೆಸ್ವೇನಲ್ಲಿ ಪ್ರತಿ ಕಿಮೀಗೆ 2.45 ರೂ ದರದಲ್ಲಿ ಟೋಲ್ ತೆರಿಗೆ ವಿಧಿಸಲಾಗುತ್ತದೆ.

ತಿಂಗಳ ಮೊದಲ ನಾಲ್ಕು ದಿನ ಬ್ಯಾಂಕ್ ಬಂದ್
ಬ್ಯಾಂಕ್ಗಳಿಗೆ ಸಂಬಂಧಿಸಿದ ವ್ಯವಹಾರವಿದ್ದರೆ ಮೊದಲು ನಿಮ್ಮ ಪ್ರದೇಶದಲ್ಲಿ ಬ್ಯಾಂಕ್ಗಳನ್ನು ಮುಚ್ಚಲಾಗಿದೆಯೇ ಎಂದು ಪರಿಶೀಲಿಸಿ. ಮೇ 1 ರಿಂದ ಮೇ 4 ರವರೆಗೆ ಬ್ಯಾಂಕುಗಳು ಮುಚ್ಚಿರುತ್ತವೆ. ಆದರೆ ಈ ರಜಾದಿನಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದು. ಎಲ್ಲಾ ರಾಜ್ಯಗಳಲ್ಲಿಯೂ ನಾಲ್ಕು ದಿನ ಬ್ಯಾಂಕ್ ಬಂದ್ ಆಗದೆ ಇರಬಹುದು. ಮೇ 1 ಭಾನುವಾರ ಹಾಗೂ ಮೇ ದಿನದ ಹಿನ್ನೆಲೆ, ಮಹಾರಾಷ್ಟ್ರ ದಿನವೂ ಕೂಡಾ ಮೇ ಒಂದರಂದು ಇದ್ದ ಹಿನ್ನೆಲೆ ಬ್ಯಾಂಕ್ ಬಂದ್ ಆಗಿತ್ತು. ಮೇ 2 ರಂದು ಮಹರ್ಷಿ ಪರಶುರಾಮ ಜಯಂತಿ, ಅನೇಕ ರಾಜ್ಯಗಳಲ್ಲಿ, ಈ ದಿನವು ರಜಾದಿನವಾಗಿರುತ್ತದೆ. ಮೇ 3 ರಂದು ಈದ್ ಉಲ್ ಫಿತ್ರ್ ಮತ್ತು ಬಸವ ಜಯಂತಿ ಹಿನ್ನೆಲೆ ಬ್ಯಾಂಕ್ ರಜೆ ಇದೆ. ಕರ್ನಾಟಕದಲ್ಲಿ ಬ್ಯಾಂಕುಗಳು ಬಂದ್ ಆಗಿದೆ. ಅದೇ ಸಮಯದಲ್ಲಿ, ಮೇ 4 ರಂದು, ತೆಲಂಗಾಣದಲ್ಲಿ ಈದ್-ಉಲ್-ಫಿತರ್ ರಜೆ ಇರುತ್ತದೆ.

ಆಕ್ಸಿಸ್ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಬದಲಾವಣೆ
ಮೇ 1 ರಿಂದ ಜಾರಿಗೆ ಬರುವಂತೆ ಆಕ್ಸಿಸ್ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಬದಲಾವಣೆ ಆಗಿದೆ. ಆಕ್ಸಿಸ್ ಬ್ಯಾಂಕ್ನ ಎಟಿಎಂನಿಂದ ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ, ಈಗ ನೀವು ಎರಡು ಪಟ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಮಾತ್ರವಲ್ಲದೆ, ಬ್ಯಾಂಕ್ ತನ್ನ ಹಲವು ಸೇವೆಗಳಿಗೆ ಶುಲ್ಕವನ್ನು ಹೆಚ್ಚಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಏಪ್ರಿಲ್ನಲ್ಲಿ ನಿಧಿ ಆಧಾರಿತ ಸಾಲದ ದರಗಳ (ಎಂಸಿಎಲ್ಆರ್) ಬೆಂಚ್ಮಾರ್ಕ್ ಮಾರ್ಜಿನಲ್ ವೆಚ್ಚವನ್ನು ಹೆಚ್ಚಿಸಿವೆ.

ಐಪಿಒನಲ್ಲಿ ಯುಪಿಐ ಪಾವತಿ ಮಿತಿ ಹೆಚ್ಚಳ
ನೀವು ಚಿಲ್ಲರೆ ಹೂಡಿಕೆದಾರರಾಗಿದ್ದರೆ ಮತ್ತು ಕಂಪನಿಯ ಐಪಿಒ ನಲ್ಲಿ ಹೂಡಿಕೆ ಮಾಡಲು ಯುಪಿಐ ಮೂಲಕ ಪಾವತಿ ಮಾಡಿದ್ದರೆ, ಸೆಬಿಯು ನಿಮಗೆ ಪರಿಹಾರವನ್ನು ನೀಡಿದೆ. ಈಗ ನೀವು 5 ಲಕ್ಷದವರೆಗೆ ಬಿಡ್ ಸಲ್ಲಿಸಬಹುದು. ಇದುವರೆಗೆ ಇದರ ಮಿತಿ 2 ಲಕ್ಷ ರೂಪಾಯಿ ಆಗಿತ್ತು. ಈ ಹೊಸ ಪಾವತಿ ಮಿತಿಯು ಮೇ 1 ರ ನಂತರ ಬರುವ ಐಪಿಒಗೆ ಅನ್ವಯವಾಗಲಿದೆ.

ಐಆರ್ಡಿಎ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಮೊತ್ತ ದ್ವಿಗುಣ
ಕೊರೊನಾ ವೈರಸ್ ಹಿನ್ನೆಲೆ ಐಆರ್ಡಿಎ ಆರೋಗ್ಯ ಸಂಜೀವನಿ ವಿಮಾ ಪಾಲಿಸಿಯಲ್ಲಿ ಒಳಗೊಂಡಿರುವ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸಿದೆ. ಈಗ ಮೇ 1 ರಿಂದ, ವಿಮಾ ಕಂಪನಿಗಳು 10 ಲಕ್ಷದವರೆಗೆ ಕವರ್ ಮೊತ್ತವನ್ನು ನೀಡುತ್ತವೆ. ಏಪ್ರಿಲ್ 1, 2020 ರಿಂದ ಪ್ರಾರಂಭವಾದ ಈ ವಿಮಾ ಪಾಲಿಸಿಯ ಮೂಲಕ, ನೀವು ರೂ 5 ಲಕ್ಷದವರೆಗೆ ಕವರೇಜ್ ಪಡೆಯುತ್ತೀರಿ.