For Quick Alerts
ALLOW NOTIFICATIONS  
For Daily Alerts

ಅಬ್ಬಾ, ಎಂಥ ಸ್ಕೀಮು! ಕಾರು ಖರೀದಿಸಿ, 12 ಇಎಂಐ ವಿನಾಯಿತಿ ಪಡೆಯಿರಿ

|

ಕೊರೊನಾ ಹೊಡೆತಕ್ಕೆ ಸಿಲುಕಿ ವಾಹನ ಮಾರಾಟ ಉದ್ಯಮ ನೆಲ ಕಚ್ಚಿಹೋಗಿದೆ. ಅದರಲ್ಲೂ 2020ರ ಏಪ್ರಿಲ್ ತಿಂಗಳಂತೂ ಕೆಟ್ಟದರಲ್ಲೇ ಅತ್ಯಂತ ಕೆಟ್ಟ ಸ್ಥಿತಿಗೆ ದೂಡಿದೆ. ಆರು ವಾರಗಳ ಕಾಲ ಉತ್ಪಾದನೆಯನ್ನು ನಿಲ್ಲಿಸಿದ್ದ ಕಾರು ತಯಾರಕರು ಮತ್ತೆ ಚಟುವಟಿಕೆ ಆರಂಭಿಸಿದ್ದಾರೆ. ಇದೀಗ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಹಲವು ಆಫರ್ ಗಳನ್ನು ನೀಡಲಾಗುತ್ತಿದೆ.

ಹುಂಡೈ, ಹೋಂಡಾ, ಮಹೀಂದ್ತಾ ಅಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್, ಸ್ಕೋಡಾ, ರೆನಾಲ್ಟ್, ಫೋಕ್ಸ್ ವ್ಯಾಗನ್... ಕಂಪೆನಿಗಳು ವಿವಿಧ ಸಾಲ ಯೋಜನೆಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಸಾಲ ಪಡೆದ ನಂತರ ಮೊದಲ ಹನ್ನೆರಡು ತಿಂಗಳು ಇಎಂಐನಿಂದ ವಿನಾಯಿತಿ ಇರುವುದಂತೂ ಮತ್ತೂ ಅಚ್ಚರಿಯ ಯೋಜನೆ. ಹಾಗಿದ್ದರೆ ಯಾವ ಕಾರು ಕಂಪೆನಿಯಿಂದ ಯಾವ ಫೈನಾನ್ಸಿಂಗ್ ಸ್ಕೀಮ್ ಬಂದಿದೆ ನೋಡಿ.

ಫೋಕ್ಸ್ ವ್ಯಾಗನ್
 

ಫೋಕ್ಸ್ ವ್ಯಾಗನ್

ಬಿಎಸ್ 6 ಎಂಜಿನ್ ಕಾರುಗಳಿಗೆ ಮಾಮೂಲಿಯ ರಿಯಾಯಿತಿ ಜತೆಗೆ ಫೋಕ್ಸ್ ವ್ಯಾಗನ್ ನ ಪೋಲೋ ಹಾಗೂ ವೆಂಟೋಗೆ 12 ತಿಂಗಳ ಇಎಂಐ ವಿನಾಯಿತಿ ದೊರೆಯುತ್ತದೆ. ಆದ್ದರಿಂದ ಗ್ರಾಹಕರು ಕಾರು ಖರೀದಿಸಿದ ಎರಡನೇ ವರ್ಷದಿಂದ ಸಾಲ ಮರುಪಾವತಿ ಶುರು ಮಾಡಿದರೆ ಆಯಿತು. ಫೋಕ್ಸ್ ವ್ಯಾಗನ್ ನಿಂದ ಆರು ಹಣಕಾಸು ಯೋಜನೆಗಳನ್ನು ಪರಿಚಯಿಸಲಾಗಿದೆ. ಎಲ್ಲವೂ ಅದರ ಅಂಗ ಸಂಸ್ಥೆಯಾದ ಸ್ಕೋಡಾದಿಂದ ಜಾರಿಗೆ ತಂದಿರುವ ಯೋಜನೆಗಳಿದ್ದಂತೆಯೇ ಇವೆ. ಅಂದ ಹಾಗೆ ಸ್ಕೋಡಾ ಕೊಡಿಯಾಕ್ ಹಾಗೂ ಸೂಪರ್ಬ್ ಗೂ ಫೈನಾನ್ಸಿಂಗ್ ಸ್ಕೀಮ್ ಒಳಗೊಂಡಿದೆ.

ಹುಂಡೈ

ಹುಂಡೈ

ಹುಂಡೈನಿಂದ ಐದು ಆಕರ್ಷಕ ಯೋಜನೆಗಳನ್ನು ತರಲಾಗಿದೆ. ಅದರಲ್ಲಿ ಎಂಟು ವರ್ಷಗಳ ತನಕ ಸಾಲದ ಅವಧಿ ದೊರೆಯುತ್ತದೆ. ಇನ್ನು ಮತ್ತೊಂದು ಸ್ಕೀಂನಲ್ಲಿ ಆರಂಭದ ಮೊದಲ ಮೂರು ಇಎಂಐ ಅತ್ಯಂತ ಕಡಿಮೆ ಇರುತ್ತದೆ, ಬಾಕಿ ಮೊತ್ತವನ್ನು ಮುಂದಿನ 3, 4 ಅಥವಾ 5 ವರ್ಷಗಳ ಅವಧಿಯಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಇದರ ಜತೆಗೆ ನಗದು ರಿಯಾಯಿತಿ 10ರಿಂದ 40 ಸಾವಿರ ರುಪಾಯಿ ತನಕ ಇದೆ. ಉಳಿದಂತೆ ಎಕ್ಸ್ ಚೇಂಜ್ ಬೋನಸ್ 40 ಸಾವಿರ ರುಪಾಯಿ ತನಕ ಇದ್ದೇ ಇದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಮಾನೆಸರ್ ನಲ್ಲಿ ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ. ಕಂಪೆನಿಯ ಎಲ್ಲ ಕಾರುಗಳಿಗೂ ಅನ್ವಯ ಆಗುವಂತೆ 10ರಿಂದ 45 ಸಾವಿರ ರುಪಾಯಿ ಅನುಕೂಲ ನೀಡುತ್ತಿದೆ.

ಟಾಟಾ ಮೋಟಾರ್ಸ್
 

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ನ ಟಿಗೋರ್, ಟಿಯಾಗೋ, ಹ್ಯಾರಿಯರ್ ಕಾರುಗಳಿಗೆ 25ರಿಂದ 40 ಸಾವಿರ ರುಪಾಯಿ ತನಕ ವಿವಿಧ ಆಫರ್ ಗಳನ್ನು ನೀಡುತ್ತಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗೆ ಹತ್ತಿರದ ಟಾಟಾ ಮೋಟಾರ್ಸ್ ಶೋ ರೂಮ್ ಗೆ ಭೇಟಿ ನೀಡಿ, ವಿಚಾರಿಸಬಹುದು.

ಹೋಂಡಾ ಕಾರ್ಸ್ ಇಂಡಿಯಾ

ಹೋಂಡಾ ಕಾರ್ಸ್ ಇಂಡಿಯಾ

ಇನ್ನು ಹೋಂಡಾ ಕಂಪೆನಿಯು ಅಮೇಜ್ ಸೆಡಾನ್ ಮೇಲೆ 32 ಸಾವಿರ ರುಪಾಯಿಗಳ ಅನುಕೂಲ, ಅಂದರೆ 4 ಮತ್ತು 5ನೇ ವರ್ಷಕ್ಕೆ ವಾರಂಟಿ ವಿಸ್ತರಣೆ ಮಾಡಿದೆ. ಇದನ್ನು ಹೊರತುಪಡಿಸಿ ಕಾರು ಎಕ್ಸ್ ಚೇಂಜ್ ಮೇಲೆ ರಿಯಾಯಿತಿ ಇದ್ದೇ ಇದೆ. ಹೋಂಡಾ ಸಿಟಿ ಮಾಡೆಲ್ ಮೇಲೆ 1 ಲಕ್ಷದ ತನಕ ಆಫರ್ ಇದೆ. ಅದರಲ್ಲಿ 50 ಸಾವಿರ ರುಪಾಯಿ ತನಕ ರಿಯಾಯಿತಿ ಇದೆ.

English summary

Check Here Various Car Makers Offers On Sale

Here is the various financing schemes, offers by car makers to attract buyers.
Story first published: Wednesday, May 13, 2020, 9:14 [IST]
Company Search
COVID-19