For Quick Alerts
ALLOW NOTIFICATIONS  
For Daily Alerts

ಚಿಟ್ ಫಂಡ್ ನ ಬಗ್ಗೆ 5 ಮಿಥ್ಯೆಗಳು ಮತ್ತು ವಾಸ್ತವ

|

ಚಿಟ್ ಫಂಡ್ ಅಥವಾ ಚೀಟಿ ಹಾಕುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಇಂಥದ್ದೊಂದು ಪ್ರಶ್ನೆ ಕೇಳುತ್ತಿದ್ದ ಹಾಗೆ ಸೊಂಯ್ಯನೆ ನಾನಾ ಬಗೆಯಲ್ಲಿ ಉತ್ತರಗಳು ಬರುತ್ತವೆ. ಉಳಿತಾಯದ ಮಾರ್ಗಗಳ ಪೈಕಿ ಒಂದಾದ ಚಿಟ್ ಫಂಡ್ ಬಗ್ಗೆ ಮಿಶ್ರ ಅಭಿಪ್ರಾಯ ಇದೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಸಮಾಜದಲ್ಲಿ ಕೆಲವು ಮಿಥ್ಯೆಗಳಿವೆ.

ಉಳಿತಾಯದ ಮಾರ್ಗಗಳಲ್ಲಿ ಚಿಟ್ ಫಂಡ್ ಕೂಡ ಒಂದು ಎಂದು ಹೇಳಿದರೆ ತಕ್ಷಣಕ್ಕೆ ಒಪ್ಪುವ ಸ್ಥಿತಿಯಲ್ಲಿ ಬಹಳ ಮಂದಿ ಇಲ್ಲ. ಆದ್ದರಿಂದಲೇ ಈ ಲೇಖನದಲ್ಲಿ ಚಿಟ್ ಫಂಡ್ ಗಳ ಬಗ್ಗೆ ಇರುವ ಮಿಥ್ಯೆಗಳು ಮತ್ತು ವಾಸ್ತವವನ್ನು ತೆರೆದಿಡಲಾಗುತ್ತಿದೆ. ಈ ಲೇಖನದಲ್ಲಿ ಪ್ರಸ್ತಾವ ಮಾಡಿರುವುದು ಟಾಪ್ ಐದು ಮಿಥ್ಯೆಗಳು ಮಾತ್ರ.

ಮಿಥ್ಯೆ ಒಂದು: ಆರ್ಥಿಕ ಹೂಡಿಕೆಯೆಂದು ಚಿಟ್ ಫಂಡ್ ಅನ್ನು ಪರಿಗಣಿಸುವಷ್ಟು ರಿಟರ್ನ್ಸ್ ಸಿಗಲ್ಲ
 

ಮಿಥ್ಯೆ ಒಂದು: ಆರ್ಥಿಕ ಹೂಡಿಕೆಯೆಂದು ಚಿಟ್ ಫಂಡ್ ಅನ್ನು ಪರಿಗಣಿಸುವಷ್ಟು ರಿಟರ್ನ್ಸ್ ಸಿಗಲ್ಲ

ದೀರ್ಘಾವಧಿಯ ಮತ್ತು ಹೆಚ್ಚಿನ ಮೊತ್ತದ ಚಿಟ್ ಫಂಡ್ ಯಾವಾಗಲೂ ಹೂಡಿಕೆದಾರರಿಗೆ ಲಾಭದಾಯಕ. ಅದರಲ್ಲೂ ಅಲ್ಪಾವಧಿ, ಮಧ್ಯಮಾವಧಿಯ ಬ್ಯಾಂಕ್ ಉಳಿತಾಯ, ಎಫ್.ಡಿ., ಆರ್.ಡಿ. ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿಟ್ ಫಂಡ್ ನ ರಿಟರ್ನ್ಸ್ ಹೆಚ್ಚಾಗಿರುತ್ತದೆ. ಚಿಟ್ ಫಂಡ್ ನ ಅತಿ ದೊಡ್ಡ ಲಾಭ ಏನೆಂದರೆ, ಒಂದೇ ಸಲಕ್ಕೆ ದೊಡ್ಡ ಮೊತ್ತವು ಹೂಡಿಕೆದಾರರಿಗೆ ದೊರೆಯುತ್ತದೆ. ಅಲ್ಪಾವಧಿಯ ಹಣಕಾಸು ಗುರಿಗಳನ್ನು ತಲುಪಲು ಇದರಿಂದ ನೆರವಾಗುತ್ತದೆ. ಬೇರೆಡೆ ಸಾಲ ತೆಗೆದುಕೊಂಡು, ಅದಕ್ಕೆ ಬಡ್ಡಿ ಪಾವತಿಸುವುದಕ್ಕಿಂತ ಈ ಆಯ್ಕೆ ಉತ್ತಮವಾಗಿರುತ್ತದೆ. ಪರ್ಸನಲ್ ಲೋನ್ ಗೆ ಚಿಟ್ ಫಂಡ್ ಅತ್ಯುತ್ತಮ ಪರ್ಯಾಯ. ತಿಂಗಳ ಸಮಾನ ಕಂತಿನ ಜತೆಗೆ ಪ್ರತಿ ತಿಂಗಳು ಲಾಭಾಂಶವೂ ದೊರೆಯುತ್ತದೆ.

ಚಿಟ್ ಫಂಡ್ ಗಳಿಗೆ ಯಾವುದೇ ಮಾರ್ಕೆಟ್ ರಿಸ್ಕ್ ಇಲ್ಲ. ಮ್ಯೂಚುವಲ್ ಫಂಡ್ ಗಳು ಅಥವಾ ಷೇರುಗಳು ಆಯಾ ಕಂಪೆನಿಯ ಪರ್ಫಾರ್ಮೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ.

ಮಿಥ್ಯೆ ಎರಡು: ಚಿಟ್ ಫಂಡ್ ಗಳು ಸರ್ಕಾರದಿಂದ ಮಾನ್ಯತೆ ಪಡೆದಿಲ್ಲ

ಮಿಥ್ಯೆ ಎರಡು: ಚಿಟ್ ಫಂಡ್ ಗಳು ಸರ್ಕಾರದಿಂದ ಮಾನ್ಯತೆ ಪಡೆದಿಲ್ಲ

ಸತ್ಯ ಏನೆಂದರೆ, ಚಿಟ್ ಫಂಡ್ಸ್ ಕಾಯ್ದೆ 1982ರ ಅಡಿಯಲ್ಲಿ ನಡೆಯುತ್ತಿರುವಾಗ ಚಿಟ್ ಫಂಡ್ ಬಹಳ ಸುರಕ್ಷಿತ. ಭಾರತದಾದ್ಯಂತ ಸರ್ಕಾರಗಳು ಈ ಕಾನೂನು ಜಾರಿಗೊಳಿಸಿದೆ. ಚಿಟ್ ಫಂಡ್ ನಡೆಸುವ ಸಂಸ್ಥೆಗಳು ಮತ್ತು ಗ್ರಾಹಕರ ಸುರಕ್ಷತೆಗಾಗಿಯೇ ಈ ಕಾಯ್ದೆ ಅಡಿಯಲ್ಲಿ ಹಲವು ನಿಯಮಗಳು ಇವೆ.

ಮಿಥ್ಯೆ ಮೂರು: ಚಿಟ್ ಫಂಡ್ ರಿಟರ್ನ್ಸ್ ಗೆ ತೆರಿಗೆ ಬೀಳುತ್ತದೆ

ಮಿಥ್ಯೆ ಮೂರು: ಚಿಟ್ ಫಂಡ್ ರಿಟರ್ನ್ಸ್ ಗೆ ತೆರಿಗೆ ಬೀಳುತ್ತದೆ

ಚಿಟ್ ಫಂಡ್ ರಿಟರ್ನ್ಸ್ ಅನ್ನು ಲಾಭಾಂಶ ಎಂದು ಕರೆಯಲಾಗುತ್ತದೆ. ಅದು ತೆರಿಗೆಯಿಂದ ಮುಕ್ತವಾಗಿದೆ. ಯಾವುದೇ ಟಿಡಿಎಸ್ ಕಡಿತ ಆಗುವುದಿಲ್ಲ. ಸೆಕ್ಷನ್ 194A ಅಡಿಯಲ್ಲಿ ಲಾಭಾಂಶವನ್ನು ಬಡ್ಡಿ ಎಂದು ವರ್ಗೀಕರಿಸುವುದಿಲ್ಲ. ಚಿಟ್ ಫಂಡ್ ನಲ್ಲಿ ಬರುವ ಲಾಭಾಂಶ ಅಥವಾ ಬಹುಮಾನಕ್ಕೆ ತೆರಿಗೆ ಬೀಳುವುದಿಲ್ಲ. ಚಿಟ್ ಫಂಡ್ ಅನ್ನು ವ್ಯಾಪಾರದ ಹೂಡಿಕೆ ಎಂದು ತೋರಿಸಿದ್ದಲ್ಲಿ ಒಟ್ಟಾರೆ ಲಾಭ ಅಥವಾ ನಷ್ಟವನ್ನು ವ್ಯಾಪಾರದಲ್ಲಿ ಆದ ಲಾಭ ಅಥವಾ ನಷ್ಟ ಎಂದು ಲೆಕ್ಕ ದಾಖಲಿಸಬಹುದು. ಆದರೆ ಚಿಟ್ ಗ್ರೂಪ್ ನಿಂದ ಬರುವ ಆದಾಯವನ್ನು ಯಾವುದಾದರೂ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿ ಅಥವಾ ಆಸ್ತಿ ಮೇಲೆ ಹೂಡಿಕೆ ಮಾಡಿದಲ್ಲಿ, ಅದರ ಮೂಲಕ ಬಡ್ಡಿಯೋ ಲಾಭವೋ ಬಂದರೆ ಆಗ ಅದಕ್ಕೆ ನಿಯಮಾನುಸಾರ ತೆರಿಗೆ ಕಟ್ಟಬೇಕಾಗುತ್ತದೆ.

ಮಿಥ್ಯೆ ನಾಲ್ಕು: ಚಿಟ್ ಫಂಡ್ ಅಸಂಘಟಿತ, ಸ್ಥಳೀಯ ಹಣಕಾಸು ಹೂಡಿಕೆ ಸಾಧನ
 

ಮಿಥ್ಯೆ ನಾಲ್ಕು: ಚಿಟ್ ಫಂಡ್ ಅಸಂಘಟಿತ, ಸ್ಥಳೀಯ ಹಣಕಾಸು ಹೂಡಿಕೆ ಸಾಧನ

ಡಿಜಿಟಲ್ ಕ್ರಾಂತಿಯಾದ ಮೇಲೆ ಆರ್ಥಿಕ ವಲಯ, ಚಿಟ್ ಫಂಡ್ಸ್ ನಲ್ಲೂ ಬದಲಾವಣೆ ಆಗಿದೆ. ಈಗೀಗ ಡಿಜಿಟಲ್ ಚಿಟ್ಸ್ ಗಳನ್ನು ನೋಡಬಹುದು. ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಚಿಟ್ ಫಂಡ್ ಗೂ ಡಿಜಿಟಲ್ ಪ್ಲಾಟ್ ಫಾರ್ಮ್ ಪರಿಚಯಿಸಲಾಗಿದೆ. ಇಂಟರ್ ನೆಟ್ ಸಂಪರ್ಕದ ಮೂಲಕ ಇದು ಸಾಧ್ಯವಾಗುತ್ತದೆ. ಚಿಟ್ ಗ್ರೂಪ್ ಗಳನ್ನು ಸುಲಭವಾಗಿ ಹುಡುಕಿ, ಸದಸ್ಯರಾಗಬಹುದು. ಆನ್ ಲೈನ್ ಮೂಲಕ ಪಾವತಿ ಮಾಡಬಹುದು, ಆಕ್ಷನ್ ಗೆ ಬಿಡ್ ಮಾಡಬಹುದು, ನಿಮ್ಮ ಹಣದ ಸ್ಥಿತಿ ತಿಳಿಯಬಹುದು. ಇತ್ಯಾದಿ ಅನುಕೂಲಗಳು ಇವೆ.

ಮಿಥ್ಯೆ ಐದು: ಚಿಟ್ ಫಂಡ್ ಗಳು ಕೆಳವರ್ಗದವರಿಗೆ, ಸಣ್ಣ ಪಟ್ಟಣ- ಹಳ್ಳಿಗಳಿಗೆ

ಮಿಥ್ಯೆ ಐದು: ಚಿಟ್ ಫಂಡ್ ಗಳು ಕೆಳವರ್ಗದವರಿಗೆ, ಸಣ್ಣ ಪಟ್ಟಣ- ಹಳ್ಳಿಗಳಿಗೆ

ಚಿಟ್ ಫಂಡ್ ಗಳನ್ನೇ ತಮ್ಮ ಪ್ರಾಥಮಿಕವಾದ ಹಣ ಉಳಿತಾಯ ಮೂಲ ಮಾಡಿಕೊಂಡವರು ಬಹಳ ಮಂದಿ ಸಿಗುತ್ತಾರೆ. ಮಾರ್ಕೆಟ್ ನಲ್ಲಿ ಇರುವ ತುಂಬ ವಿಶಿಷ್ಟವಾದ ಹಣಕಾಸು ಉಳಿತಾಯ ಸಾಧನ ಚಿಟ್ ಫಂಡ್ ಗಳು. ಗೃಹಿಣಿಯರು, ವಿದ್ಯಾರ್ಥಿಗಳು, ಯುವ ವೃತ್ತಿಪರರು ಹೊರತುಪಡಿಸಿ ಇತರರು ಕೂಡ ಚಿಟ್ ಫಂಡ್ ಗಳನ್ನು ತಮ್ಮ ಹಣಕಾಸು ಉಳಿತಾಯದ ಮೂಲವಾಗಿ ಬಳಸಿಕೊಳ್ಳುತ್ತಾಅರೆ. ಏಕೆಂದರೆ, ಚಿಟ್ ಫಂಡ್ ನ ಉಳಿತಾಯ ವಿಧಾನ ಹಾಗೂ ಹಣ ತೆಗೆಯಬಹುದಾದ ಸರಳ ಮಾರ್ಗ ಇದು. ಈಚೆಗಂತೂ ಉದ್ಯಮಿಗಳು, ಐಟಿ ವೃತ್ತಿಪರರು ಮತ್ತು ಬ್ಯಾಂಕಿಂಗ್ ವೃತ್ತಿಪರರು ಸಹ ಚಿಟ್ ಫಂಡ್ಸ್ ಗಳಲ್ಲಿ ಹಣ ಹೂಡುತ್ತಾರೆ.

ಒಟ್ಟಾರೆ ಹೇಳಬೇಕೆಂದರೆ, ಚಿಟ್ ಫಂಡ್ ಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. ಸರಿಯಾದ ಮಾಹಿತಿ ಪಡೆದು, ಹೂಡಿಕೆ ಮಾಡಿದರೆ ವಿಷಾದ ಪಡುವಂತೆ ಆಗುವುದಿಲ್ಲ.

English summary

Chit Funds 5 Myths And Facts Must Know

Chit funds is best financial tool. Here is the 5 myths and truths about chit funds.
Story first published: Friday, January 17, 2020, 18:37 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more