For Quick Alerts
ALLOW NOTIFICATIONS  
For Daily Alerts

ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆದಾರರಿಗೆ ಸರ್ಕಾರದಿಂದ ಹಲವು ವಿನಾಯಿತಿ

|

ಕೊರೊನಾ ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದ ಭಾರತ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆಗಳು ಎದುರಾಗಬಹುದು ಅಥವಾ ಹಣಕಾಸಿನ ಅಗತ್ಯ ಕಂಡುಬರುತ್ತದೆ ಎಂಬ ಕಾರಣಕ್ಕೆ ಅಂಚೆ ಕಚೇರಿಗಳಲ್ಲಿನ ಸಣ್ಣ ಉಳಿತಾಯ ಹೂಡಿಕೆದಾರರ ಅನುಕೂಲಕ್ಕೆ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ.

ಇದರಿಂದ ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ ಮತ್ತು ರೆಕರಿಂಗ್ ಡೆಪಾಸಿಟ್ (ಆರ್.ಡಿ.) ಖಾತೆದಾರರಿಗೆ ಅನುಕೂಲವಾಗಲಿದೆ. ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆದಾರರು ತಮ್ಮ ಉಳಿತಾಯ ಖಾತೆಗಳಿಗೆ ಹಣ ಹಾಕಲು 30ನೇ ಜೂನ್ 2020ರ ತನಕ ಅವಕಾಶ ನೀಡಲಾಗಿದೆ. ದೇಶದಾದ್ಯಂತ ಲಾಕ್ ಡೌನ್ ಇರುವುದರಿಂದ 2019- 20ರ ಅವಧಿಗೆ ಯಾರಿಗೆ ಈ ಮೊತ್ತವನ್ನು ಕಟ್ಟಲು ಸಾಧ್ಯವಾಗಿಲ್ಲವೋ ಅಂಥವರು ಈ ಅವಕಾಶ ಬಳಸಿಕೊಳ್ಳಬಹುದು.

ನವೀಕರಣ ಶುಲ್ಕ ಅಥವಾ ದಂಡ ಶುಲ್ಕ ಮನ್ನಾ
 

ನವೀಕರಣ ಶುಲ್ಕ ಅಥವಾ ದಂಡ ಶುಲ್ಕ ಮನ್ನಾ

ಮಾರ್ಚ್ 31. 2020ಕ್ಕೆ ಕಡ್ಡಾಯವಾಗಿ ಕನಿಷ್ಠ ಮೊತ್ತವನ್ನು ತುಂಬಲೇ ಬೇಕಿದ್ದ ಖಾತೆದಾರರಿಗೆ ಜೂನ್ ತನಕ ಸಮಯ ನೀಡಿದ್ದು, ನವೀಕರಣ ಶುಲ್ಕ ಅಥವಾ ದಂಡ ಶುಲ್ಕ ಮನ್ನಾ ಮಾಡಲಾಗಿದೆ. ಇನ್ನು ಪಿಪಿಎಫ್ ಖಾತೆ ಮಾರ್ಚ್ 31ರಂದು ಮೆಚ್ಯೂರ್ ಆಗಿದ್ದಲ್ಲಿ (ಒಂದು ವಿಸ್ತರಣೆ ನಂತರವೂ) ಅದನ್ನು ಈಗ ಜೂನ್ 30, 2020ರ ತನಕ ವಿಸ್ತರಿಸಲು ಅವಕಾಶ ಇದೆ.

ಒಂದು ಕಂತಿನಲ್ಲಿ ಠೇವಣಿ ಕಟ್ಟಬಹುದು

ಒಂದು ಕಂತಿನಲ್ಲಿ ಠೇವಣಿ ಕಟ್ಟಬಹುದು

ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಖಾತೆದಾರರು ತಮ್ಮ ಹೆಸರಲ್ಲೋ ಅಥವಾ ಅಪ್ರಾಪ್ತರ ಹೆಸರಲ್ಲಿ ಖಾತೆ ತೆರೆದಿದ್ದರೆ ಒಂದು ಕಂತಿನಲ್ಲಿ ಠೇವಣಿ ಕಟ್ಟಬಹುದು. ಆದರೆ ನಿಯಮಾನುಸಾರ, 2019-20ರ ಆರ್ಥಿಕ ವರ್ಷಕ್ಕೆ ಜೂನ್ 30ರೊಳಗೆ ಹಣ ಪಾವತಿ ಮಾಡಲೇಬೇಕು. ಇನ್ನು ಠೇವಣಿಯ ಗರಿಷ್ಠ ಮೊತ್ತದ ಮಿತಿಯನ್ನು ಮೀರುವಂತಿಲ್ಲ ಮತ್ತು ಒಂದು ವೇಳೆ ಮೀರಿದ್ದರೆ ಯಾವುದೇ ಬಡ್ಡಿ ನೀಡದೆ ಹಿಂತಿರುಗಿಸಲಾಗುತ್ತದೆ.

ವಿಥ್ ಡ್ರಾ ಮಾಡುವುದಕ್ಕೆ ಮಾರ್ಚ್ 31, 2020ರ ಬಾಕಿ ಲೆಕ್ಕಕ್ಕೆ

ವಿಥ್ ಡ್ರಾ ಮಾಡುವುದಕ್ಕೆ ಮಾರ್ಚ್ 31, 2020ರ ಬಾಕಿ ಲೆಕ್ಕಕ್ಕೆ

2020- 21 ಹಾಗೂ 2019- 20ನೇ ಸಾಲಿಗೆ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ಠೇವಣಿ ಮಾಡಲು ಬಯಸುವವರು ಮಾಡಬಹುದು. ಆದರೆ ಅದನ್ನು ಪ್ರತ್ಯೇಕವಾಗಿ ಮಾಡಬೇಕು. ಐದು ವರ್ಷಗಳ ಒಂದು ಅವಧಿಯ ವಿಸ್ತರಣೆ ಸಮಯ ನಂತರವೂ ಪಿಪಿಎಫ್ ಖಾತೆ ಮೆಚ್ಯೂರ್ ಆಗಿದ್ದಲ್ಲಿ ಇನ್ನೂ ಐದು ವರ್ಷಕ್ಕೆ ವಿಸ್ತರಿಸಬೇಕಿದ್ದಲ್ಲಿ ಅದನ್ನು ಜೂನ್ 30, 2020ರೊಳಗೆ ಮಾಡಬಹುದು. ಪಿಪಿಎಫ್ ಮೇಲೆ ಸಾಲ ಪಡೆಯುವುದಕ್ಕೆ ಅಥವಾ ವಿಥ್ ಡ್ರಾ ಮಾಡುವುದಕ್ಕೆ ಮಾರ್ಚ್ 31, 2020ಕ್ಕೆ ಎಷ್ಟು ಮೊತ್ತ ಖಾತೆಯಲ್ಲಿ ಇರುತ್ತದೋ ಅದನ್ನು ಪರಿಗಣಿಸಲಾಗುತ್ತದೆ.

English summary

Deposit, Withdrawal Changes For PPF, Sukanya Samriddhi Yojna Account

Government announced relief changes for post office small savings account due to Corona virus lock down.
Story first published: Sunday, April 12, 2020, 11:12 [IST]
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more