For Quick Alerts
ALLOW NOTIFICATIONS  
For Daily Alerts

ನಾನಾ ವಿಧದ ವೈಯಕ್ತಿಕ ಸಾಲ ಯೋಜನೆಗಳು; ಎಲ್ಲ ಪರಿಸ್ಥಿತಿಗಳಿಗೂ ಸಿಗಲಿದೆ ಸಾಲ ಸೌಲಭ್ಯ

By ದಿನಿ
|

ಮಧ್ಯಮ, ಕೆಳಮಧ್ಯಮ ಮತ್ತು ವೇತನದಾರ ವರ್ಗಕ್ಕೆ ವೈಯಕ್ತಿಕ ಸಾಲ ಯೋಜನೆಗಳು ಹಣಕಾಸಿನ ಅಗತ್ಯಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತವೆ. ಆರ್ಥಿಕ ಸಂಕಷ್ಟ ಕಾಲದಲ್ಲಿ ಅವು ನಿಮಗೆ ಸಹಾಯ ಮಾಡುತ್ತವೆ. ಸಾಲದಾತರ ಸಾಲ ನೀಡಿಕೆ ಮೊತ್ತ ಆಧರಿಸಿ, ನೀವು ಸಾವಿರಾರು ರೂಪಾಯಿಯಿಂದ ಲಕ್ಷಾಂತರ ರೂ. ತನಕ ನಿಮ್ಮ ಅಗತ್ಯಗಳಿಗೆ ತಕ್ಕಂತೆ ವೈಯಕ್ತಿಕ ಸಾಲ ಸೌಲಭ್ಯ ಪಡೆಯಬಹುದು.

 

ಹಣಕಾಸು ಮಾರುಕಟ್ಟೆಯಲ್ಲಿ ಇದೀಗ ನಾನಾ ವಿಧದ ವೈಯಕ್ತಿಕ ಸಾಲ ಯೋಜನೆಗಳು ಜನಪ್ರಿಯವಾಗಿವೆ. ನೀವು ವೈಯಕ್ತಿಕ ಸಾಲ ಪಡೆದರೆ ಮರುಪಾವತಿ ಅವಧಿಯನ್ನು 1 ವರ್ಷದಿಂದ ಹಿಡಿದು ಗರಿಷ್ಠ 5 ವರ್ಷಗಳ ತನಕ ನೀಡಲಾಗುತ್ತದೆ. ನಿಮಗೆ ಹೆಚ್ಚಿನ ಕಾಲಾವಧಿ ಅಗತ್ಯ ಎನಿಸಿದರೆ ದೀರ್ಘಾವಧಿಯ ಸಾಲ ಯೋಜನೆಗಳನ್ನು ಆಯ್ಕೆ ಮಾಡಲು ಅವಕಾಶವಿದೆ. ನಿಮ್ಮ ತುರ್ತು ಮತ್ತು ಉತ್ತಮ ಬಳಕೆಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ತಮ ವೈಯಕ್ತಿಕ ಸಾಲ ಯೋಜನೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ವಿವಾಹ ಸಾಲ

ವಿವಾಹ ಸಾಲ

ವಿವಾಹ ಸಂದರ್ಭದಲ್ಲಿ ಎದುರಾಗುವ ಹಣಕಾಸು ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ದಂಪತಿ ಅಥವಾ ಕುಟುಂಬಕ್ಕೆ ವಿವಾಹ ಸಾಲ ನೆರವಾಗುತ್ತದೆ. ವಿವಾಹಕ್ಕೆ ಅಗತ್ಯವಾದ ಎಲ್ಲ ಖರ್ಚುಗಳನ್ನು ನಿಭಾಯಿಸಲು ಅಂದರೆ, ಕಲ್ಯಾಣ ಮಂಟಪ ವೆಚ್ಚ, ಊಟ, ಅತಿಥಿಗಳಿಗೆ ವಾಸ್ತವ್ಯ, ಚಿನ್ನಾಭರಣ, ವಧುವಿಗೆ ಸೀರೆ ವರನಿಗೆ ವಸ್ತ್ರ ಸೇರಿದಂತೆ ಎಲ್ಲ ರೀತಿಯ ಉಡುಪುಗಳು ಮತ್ತು ಅಲಂಕಾರ ವೆಚ್ಚಗಳಿಗೆ ವಿವಾಹ ಸಾಲ ಸಹಾಯ ಮಾಡುತ್ತದೆ. ಮದುವೆ ಋತುವಿನಲ್ಲಿ ವಿವಾಹ ಸಾಲ ಯೋಜನೆಗಳ ಬಡ್ಡಿದರ ಸಾಮಾನ್ಯ ಋತುವಿಗಿಂತ ಕೊಂಚ ಜಾಸ್ತಿ ಇರುತ್ತದೆ. ವೈಯಕ್ತಿಕ ಸಾಲ ಉತ್ಪನ್ನಗಳು ನಿಮ್ಮ ವಿವಾಹ ಮತ್ತಿತರೆ ಕನಸುಗಳನ್ನು ಸಾಕಾರಗೊಳಿಸಲು ನೆರವಾಗುತ್ತವೆ. ಹಾಗಾಗಿ, ವೈಯಕ್ತಿಕ ಸಾಲವು ನಿಮ್ಮ ಹಣಕಾಸಿನ ಎಲ್ಲಾ ಅಗತ್ಯಗಳು ಮತ್ತು ಬೇಡಿಕೆಗಳನ್ನು ಈಡೇರಿಸುವ ಉತ್ತಮ ಮತ್ತು ಸೂಕ್ತ ಸಾಧನವಾಗಿದೆ.

ಮನೆ ನವೀಕರಣ
 

ಮನೆ ನವೀಕರಣ

ನಿಮ್ಮ ಹಳೆ ಮನೆಯ ಆಂತರಿಕ ಅಲಂಕಾರ, ಅಡುಗೆ ಕೋಣೆಯ ನವೀಕರಣ, ಪೀಠೋಪಕರಣಗಳ ಬದಲಾವಣೆ ಸೇರಿದಂತೆ ಇಡೀ ಮನೆಯ ನವೀಕರಣ ಮಾಡಬೇಕೆ? ಅದಕ್ಕೂ ಲಭ್ಯವಿದೆ ವೈಯಕ್ತಿಕ ಸಾಲ ಯೋಜನೆ. ವಾಸ್ತವವಾಗಿ, ಮನೆ ನವೀಕರಣ ನಿಜಕ್ಕೂ ದುಬಾರಿ ದುನಿಯಾ, ಅದರಲ್ಲೂ ವಿಶೇಷವಾಗಿ ಇಡೀ ಮನೆಯ ನವೀಕರಣ ಕೆಲಸಕ್ಕೆ ವಿಪರೀತ ವೆಚ್ಚ ತಗುಲುತ್ತದೆ. ಇಂತಹ ವೆಚ್ಚಗಳಿಗೆ ಮಧ್ಯಮ, ಕೆಳಮಧ್ಯಮ ಮತ್ತು ವೇತನದಾರ ವರ್ಗ ಕೈಯಲ್ಲಿ ದುಡ್ಡು ಇಟ್ಟುಕೊಂಡಿರುವುದಿಲ್ಲ. ಹಾಗಾಗಿ, ಮನೆ ನವೀಕರಣ ಸಾಲ ಪಡೆಯುವುದೇ ಸೂಕ್ತ ಪರ್ಯಾಯ ಮಾರ್ಗವಾಗಿದೆ. ದೇಶದ ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕ್‌ಗಳು ಹಾಗೂ ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು ಮನೆ ನವೀಕರಣಕ್ಕಾಗಿ ನಾನಾ ಸಾಲ ಯೋಜನೆಗಳನ್ನು ರೂಪಿಸಿವೆ. ಹಾಗಾಗಿ, ನೀವು ಈ ಸಾಲ ಪಡೆದು ನಿಮ್ಮ ಮನೆಗೆ ಹೊಸ ರೂಪು ನೀಡಬಹುದು. ಇದರಿಂದ ನಿಮ್ಮ ಕನಸಿನ ಮನೆಯ ಸೌಂದರ್ಯ ಹೆಚ್ಚಾಗುವ ಜತೆಗೆ, ಸ್ವತ್ತಿನ ಮೂಲ್ಯವೂ ಹೆಚ್ಚಾಗುತ್ತದೆ.

ಪ್ರವಾಸ ಸಾಲ

ಪ್ರವಾಸ ಸಾಲ

ಕಚೇರಿಯ ಒತ್ತಡ ಕೆಲಸದಿಂದ ಬಳಲಿಕೆ ಆಗುವುದು ಸಹಜ. ದಿನನಿತ್ಯದ ಕೆಲಸದ ಜಂಜಡದಿಂದ ಮುಕ್ತರಾಗಬೇಕಾದರೆ, ಪ್ರವಾಸ ಕೈಗೊಳ್ಳುವುದು ಸೂಕ್ತ. ಇದಕ್ಕಾಗಿ ನಿಮ್ಮ ಉಳಿತಾಯ ಮತ್ತು ಹೂಡಿಕೆಯನ್ನು ಪೋಲು ಮಾಡದಂತೆ ಕುಟುಂಬ ಸದಸ್ಯರ ಜತೆ ಪ್ರವಾಸ ಕೈಗೊಳ್ಳಲು ಲಭ್ಯವಿದೆ ಪ್ರವಾಸ ಸಾಲ. ಇದು ಸಹ ವೈಯಕ್ತಿಕ ಸಾಲವೇ.

ಆದರೆ ಇದಕ್ಕೆ ಪ್ರವಾಸ ಸಾಲದ ರೂಪ ನೀಡಲಾಗಿದೆ. ಈ ಸಾಲ ಪಡೆಯಬೇಕಾದರೆ ನೀವು ಪ್ರವಾಸದ ದಾಖಲೆಗಳು ಮತ್ತು ಮಾಹಿತಿ ಒದಗಿಸಬೇಕಾಗುತ್ತದೆ. ಉದಾಹರಣೆಗೆ ವಿಮಾನ ಪ್ರಯಾಣದ ಟಿಕೆಟ್‌ಗಳು, ಹೋಟೆಲ್ ಮುಂಗಡ ಕಾಯ್ದಿರಿಸಿರುವ ದಾಖಲೆ ಪತ್ರಗಳು, ಅಂತಾರಾಷ್ಟ್ರೀಯ ಪ್ರವಾಸವಾದರೆ ಪಾಸ್ ಪೋರ್ಟ್ ಅಥವಾ ವೀಸಾ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.

ಹಾಗಾಗಿ, ವೈಯಕ್ತಿಕ ಸಾಲದ ಸಹಾಯದಿಂದ, ನಿಮ್ಮ ಉಳಿತಾಯದ ಹಣವನ್ನು ವೆಚ್ಚ ಮಾಡದೆಯೇ, ನಿಮ್ಮ ಕುಟುಂಬವನ್ನು ರಜೆಯ ಮೇಲೆ ಪ್ರವಾಸ ಕರೆದೊಯ್ಯಬಹುದು. ನಿಮ್ಮ ಪ್ರಯಾಣ ವೆಚ್ಚಗಳನ್ನು ವೈಯಕ್ತಿಕ ಸಾಲ ಒದಗಿಸುತ್ತದೆ. ಈ ಸಾಲದ ಹಣವನ್ನು ಎಲ್ಲಿ ಬೇಕಾದರೂ ಮತ್ತು ಯಾವುದೇ ಸಮಯದಲ್ಲೂ ಅದರಲ್ಲೂ ವಿಶೇಷವಾಗಿ ರಜೆ ಅವಧಿಯಲ್ಲಿ ಬಳಸಿಕೊಳ್ಳಬಹುದು.

ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿ ಸಾಲ

ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿ ಸಾಲ

ಗ್ರಾಹಕ ಬಾಳಿಕೆ ಉತ್ಪನ್ನಗಳ ಖರೀದಿಗೆ ಬಹುತೇಕ ಎಲ್ಲಾ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳು ಸಾಲ ನೀಡುತ್ತವೆ. ಈ ಸಾಲಕ್ಕೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಮೊಬೈಲ್ ಫೋನ್, ರೆಫ್ರಿಜರೇಟರ್, ಪೀಠೋಪಕರಣಗಳು, ವಾಷಿಂಗ್ ಮೆಷಿನ್, ಮೈಕ್ರೊವೇವ್, ಚಿಮ್ನಿ ಸೇರಿದಂತೆ, ಎಲ್ಲ ರೀತಿಯ ಗೃಹೋಪಯೋಗಿ ವಸ್ತುಗಳ ಖರೀದಿಗೆ ಈ ಸಾಲ ಸಿಗುತ್ತದೆ. ಉತ್ಪನ್ನದ ಬೆಲೆಯನ್ನು ಇಎಂಐ ಆಗಿ ವಿಭಜಿಸಲಾಗುತ್ತದೆ. ನಿಗದಿತ ಕಾಲಾವಧಿವರೆಗೆ ಸಮಾನ ಮಾಸಿಕ ಕಂತು(ಇಎಂಐ)ಗಳನ್ನು ಪಾವತಿಸಿದರೆ ಸಾಕು. ಆದರೆ ಕೆಲವು ಉತ್ಪನ್ನಗಳಿಗೆ ಠೇವಣಿ ಇಡಬೇಕಾಗುತ್ತದೆ ಮತ್ತು ಸಂಸ್ಕರಣಾ ಶುಲ್ಕ ವಿಧಿಸಲಾಗುತ್ತದೆ.

ಪಿಂಚಣಿ ಸಾಲ

ಪಿಂಚಣಿ ಸಾಲ

ಹೌದು, ಪಿಂಚಣಿದಾರರಿಗೂ ಸಾಲ ಸೌಲಭ್ಯ ಸಿಗುತ್ತಿದೆ. ನಿವೃತ್ತ ಉದ್ಯೋಗಿಗಳು ತಾವು ಪಡೆಯುವ ಪಿಂಚಣಿ ಮೊತ್ತದ 7ರಿಂದ 10 ಪಟ್ಟು ಹೆಚ್ಚಿಗೆ ಸಾಲ ಪಡೆಯಬಹುದು. ಆರೋಗ್ಯ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಗೆ ಪಿಂಚಣಿದಾರರು ಪಿಂಚಣಿ ಸಾಲ ಪಡೆಯಬಹುದು. ಇದು ಸಹ ವೈಯಕ್ತಿಕ ಸಾಲ ಯೋಜನೆಯ ಮತ್ತೊಂದು ರೂಪ. ನಿವೃತ್ತ ಉದ್ಯೋಗಿ ಪಿಂಚಣಿ ಪಡೆಯುವ ಬ್ಯಾಂಕ್‌ನಿಂದ ಮಾತ್ರ ಈ ಸಾಲ ಸಿಗುತ್ತದೆ ಎಂಬುದು ಗಮನಾರ್ಹ.

English summary

Different Types Of Personal Loans; Loans For Every Situation

Different Types Of Personal Loans; The following are a few of the most common sorts of personal loans that can be put to good use.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X