For Quick Alerts
ALLOW NOTIFICATIONS  
For Daily Alerts

ದೀಪಾವಳಿ ಚಿನ್ನ ಖರೀದಿಗೆ ಇರುವ ರಿಯಾಯಿತಿ, ಆಫರ್ ಗಳು

|

ದೀಪಾವಳಿಗೆ ಚಿನ್ನವನ್ನು ಖರೀದಿ ಮಾಡಬೇಕು ಅನ್ನೋದನ್ನು ಪದ್ಧತಿ ಎಂಬಂತೆ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ದೀಪಾವಳಿಗೆ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿದೆ. ಇದು ಕೊರೊನಾ ಬಿಕ್ಕಟ್ಟು ತಂದಿರುವ ವಿಭಿನ್ನತೆ. ಅಂದ ಹಾಗೆ ಚಿನ್ನದ ಬೆಲೆಯು ಪ್ರತಿ ಹತ್ತು ಗ್ರಾಮ್ ಗೆ ಐವತ್ತು ಸಾವಿರ ಸಮೀಪ ಇದೆ. ಇಷ್ಟು ಮೊತ್ತ ನೀಡಿ ಎಲ್ಲರಿಗೂ ಖರೀದಿ ಸಾಧ್ಯವಿಲ್ಲ.

 

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

ಇದರ ಹೊರತಾಗಿ, ನಿಮ್ಮ ಜೇಬಿಗೆ ಹಣ ಭಾರ ಆಗಲಿಕ್ಕಿಲ್ಲ ಅನ್ನೋದಾದರೆ ಚಿನ್ನದ ಮೇಲೆ ಹೂಡಿಕೆ ಮಾಡಬಹುದು ಅಥವಾ ಬೇರೆಯವರಿಗೆ ಗಿಫ್ಟ್ ನೀಡುವುದಕ್ಕೆ ಸಹ ಪರಿಗಣಿಸಬಹುದು. ಈ ಲೇಖನದಲ್ಲಿ ಕೆಲವು ಆಯ್ಕೆಗಳು ನೀಡಲಾಗುತ್ತಿದೆ. ಇಲ್ಲಿ ಆಕರ್ಷಕ ರಿಯಾಯಿತಿ ಆಫರ್ ಗಳು ಕೂಡ ದೊರೆಯುತ್ತವೆ.

ಅಮೆಜಾನ್

ಅಮೆಜಾನ್

ಅಮೆಜಾನ್ ನಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳು ಇಪ್ಪತ್ತು ಪರ್ಸೆಂಟ್ ರಿಯಾಯಿತಿ ತನಕ ದೊರೆಯುತ್ತವೆ. ಒಂದು, ಎರಡು, ಮೂರು, ಐದು, ಎಂಟು ಹಾಗೂ ಅದಕ್ಕೂ ಮೇಲ್ಪಟ್ಟ ತೂಕದ ನಾಣ್ಯಗಳು ದೊರೆಯುತ್ತವೆ. ಈ ಚಿನ್ನ ಮತ್ತು ಬೆಳ್ಳಿ ನಾಣ್ಯ ಅಥವಾ ಗಟ್ಟಿಗಳು ಜಾಯ್ ಅಲುಕ್ಕಾಸ್, ಬೆಂಗಳೂರ್ ರೀಫೈನರೀಸ್, ಮಲಬಾರ್ ಗೋಲ್ಡ್ ಹೀಗೆ ವಿವಿಧ ಬ್ರ್ಯಾಂಡ್ ಗಳಲ್ಲಿ ದೊರೆಯುತ್ತವೆ. ಇದರ ಜತೆಗೆ ಹಬ್ಬದ ಆಭರಣಗಳು ಮೇಕಿಂಗ್ ಚಾರ್ಜ್ ಮೇಲೆ ಐವತ್ತು ಪರ್ಸೆಂಟ್ ತನಕ ರಿಯಾಯಿತಿ ದೊರೆಯುತ್ತದೆ.

ತನಿಷ್ಕ್

ತನಿಷ್ಕ್

ಟಾಟಾ ಗ್ರೂಪ್ ಕಂಪೆನಿಯಾದ ತನಿಷ್ಕ್ ನಿಂದ ಮೇಕಿಂಗ್ ಚಾರ್ಜ್ ಮೇಲೆ ಇಪ್ಪತ್ತೈದು ಪರ್ಸೆಂಟ್ ತನಕ ರಿಯಾಯಿತಿ ಆಫರ್ ಇದೆ. ಚಿನ್ನದ ಆಭರಣಗಳು ಹಾಗೂ ವಜ್ರದ ಆಭರಣಗಳ ಮೇಲೆ ಇದು ಅನ್ವಯ ಆಗುತ್ತದೆ.

ಜಾಯ್ ಅಲುಕ್ಕಾಸ್
 

ಜಾಯ್ ಅಲುಕ್ಕಾಸ್

ದೀಪಾವಳಿಯ ಸಂದರ್ಭಕ್ಕಾಗಿ ಕಂಪೆನಿಯಿಂದ ಆಫರ್ ಇದ್ದು, ಐವತ್ತು ಸಾವಿರ ಮತ್ತು ಅದಕ್ಕೂ ಹೆಚ್ಚಿನ ಮೌಲ್ಯದ ಚಿನ್ನವನ್ನು ಖರೀದಿಸಿದರೆ ಇನ್ನೂರು ಮಿಲಿಗ್ರಾಂ ನಾಣ್ಯ ಉಚಿತವಾಗಿ ನೀಡಲಾಗುತ್ತದೆ. ಒಂದು ಲಕ್ಷ ರುಪಾಯಿ ಮೇಲ್ಪಟ್ಟ ವಜ್ರದ ಖರೀದಿಗೆ ಒಂದು ಗ್ರಾಮ್ ತೂಕದ ನಾಣ್ಯ ಉಚಿತವಾಗಿ ನೀಡಲಾಗುತ್ತದೆ. ನವೆಂಬರ್ ಹದಿನೈದನೇ ತಾರೀಕಿನ ತನಕ ದೇಶಾದ್ಯಂತ ಈ ಆಫರ್ ಇರುತ್ತದೆ, ಕೇರಳ ಹೊರತುಪಡಿಸಿ. ಇನ್ನು ಎಸ್ ಬಿಐ ಕಾರ್ಡ್ ಮೂಲಕ ಕನಿಷ್ಠ ಇಪ್ಪತ್ತೈದು ಸಾವಿರ ರುಪಾಯಿಗೆ ಖರೀದಿ ಮಾಡಿದಲ್ಲಿ ಐದು ಪರ್ಸೆಂಟ್ ಕ್ಯಾಶ್ ಬ್ಯಾಕ್ ಇದೆ. ಗರಿಷ್ಠ ಕ್ಯಾಶ್ ಬ್ಯಾಕ್ ಮೊತ್ತ ಒಂದು ಕಾರ್ಡ್ ಗೆ ಎರಡೂವರೆ ಸಾವಿರ ರುಪಾಯಿ ಇದೆ.

ಮಲಬಾರ್ ಗೋಲ್ಡ್

ಮಲಬಾರ್ ಗೋಲ್ಡ್

ಮಲಬಾರ್ ಗೋಲ್ಡ್ ನಿಂದ ಏಕ ಭಾರತ- ಏಕ ಬೆಲೆ ಎಂಬ ನಿಯಮವಿದೆ. ಜತೆಗೆ ವಜ್ರದ ಬೆಲೆ ಮೇಲೆ ಇಪ್ಪತ್ತು ಪರ್ಸೆಂಟ್ ರಿಯಾಯಿತಿ ಇದೆ. ಒಂದು ವೇಳೆ ಚಿನ್ನದ ಆಭರಣ ಖರೀದಿ ಮಾಡುತ್ತಿದ್ದಲ್ಲಿ ಅದೇ ತೂಕದ ಬೆಳ್ಳಿ ಉಚಿತ ಇದೆ. ಈ ಆಫರ್ ನವೆಂಬರ್ ಹದಿನೈದರ ತನಕ ಇದೆ.

ಪೇಟಿಎಂ

ಪೇಟಿಎಂ

ಪೇಟಿಎಂನ ಪೇಟಿಎಂ ಗೋಲ್ಡ್ ಧಮಾಕಾ 24K ಕೊಡುಗೆ ಅಡಿಯಲ್ಲಿ ಎರಡು ಸಾವಿರದಿಂದ ಒಂದು ಲಕ್ಷದ ತನಕ ವ್ಯವಹಾರಕ್ಕೆ ಗ್ರಾಹಕರಿಗೆ ಕಂಪೆನಿ ನಿಯಮಾನುಸಾರ ಗೋಲ್ಡ್ ಬ್ಯಾಂಕ್ ಇದೆ. ಇನ್ನು ತೆರಿಗೆ ಲೆಕ್ಕಾಚಾರಕ್ಕೆ ಬಂದಲ್ಲಿ, ಒಂದು ವೇಳೆ ಗಿಫ್ಟ್ ನೀಡಿದಲ್ಲಿ, ಆ ಉಡುಗೊರೆ ಪಡೆದ ವ್ಯಕ್ತಿ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಅದು ರಕ್ತಸಂಬಂಧಿಗಳಿಂದ ಉಡುಗೊರೆ ಪಡೆದಾಗ. ಆದರೆ ಯಾವುದೇ ಕ್ಯಾಪಿಟಲ್ ಗೇಯ್ನ್ಸ್ ಇದ್ದಲ್ಲಿ ಅದಕ್ಕೆ ತೆರಿಗೆ ಪಾವತಿಸಬೇಕು.

English summary

Diwali Gold Purchase Discounts And Offers From Jewellers And E- Tailers

Here is the various discount and offer by jewelers and e-tailers on Diwali.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X