For Quick Alerts
ALLOW NOTIFICATIONS  
For Daily Alerts

PF ಬಡ್ಡಿಯ ಮೊದಲ ಕಂತು EPFOನಿಂದ ದೀಪಾವಳಿ ಹೊತ್ತಿಗೆ ಜಮೆ

|

ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO)ನಿಂದ 2019- 20ನೇ ಹಣಕಾಸು ವರ್ಷದ PF ಮೊದಲ ಕಂತಿನ ಬಡ್ಡಿಯನ್ನು ಇಪಿಎಫ್ (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್) ಚಂದಾದಾರರ ಖಾತೆಗೆ ದೀಪಾವಳಿ ಹೊತ್ತಿಗೆ ಜಮೆ ಮಾಡಲಾಗುವುದು ಎಂದು ಇಪಿಎಫ್ ಕಾರ್ಯಕಾರಿ ಸಮಿತಿ ಸದಸ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

 

ಈ ಹಿಂದೆ ಇಪಿಎಫ್ ಒ ಶಿಫಾರಸಿನ ಪ್ರಕಾರ, 2019- 20ನೇ ಸಾಲಿನಲ್ಲಿ ಎರಡು ಕಂತಿನಲ್ಲಿ ಪಾವತಿಸಲಾಗುತ್ತದೆ ಎಂಬ ಮಾಹಿತಿ ಹೊರಬಂದಿತ್ತು. ಕೊರೊನಾ ಬಿಕ್ಕಟ್ಟಿನಿಂದಾಗಿ ಈಕ್ವಿಟಿ ಮಾರ್ಕೆಟ್ ಏರಿಳಿತಗಳಿಗೆ ಕಾರಣವಾಗಿ, ಆದಾಯದ ಮೇಲೆ ಪರಿಣಾಮ ಬೀರಿತ್ತು ಎಂದು ಈ ತೀರ್ಮಾನ ಮಾಡಲಾಗಿತ್ತು.

EPFO ಬಡ್ಡಿ ಪಾವತಿಯ 8.5% ಇಪಿಎಫ್ ಖಾತೆದಾರರಿಗೆ ಜಮೆ

8.15% ಬಡ್ಡಿಯ ಮೊದಲ ಕಂತನ್ನು 5 ಕೋಟಿ ಚಂದಾದಾರರಿಗೆ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನು ಬಾಕಿ 0.35% ಬಡ್ಡಿಯನ್ನು ಎಕ್ಸ್ ಚೇಂಜ್ ಟ್ರೇಡೆಡ್ ಈಕ್ವಿಟಿ ಫಂಡ್ಸ್ ಹೂಡಿಕೆಯನ್ನು ಮಾರಾಟ ಮಾಡಿ, ಡಿಸೆಂಬರ್ ಹೊತ್ತಿಗೆ ಪಾವತಿಸಲಾಗುತ್ತದೆ ಎಂದು ಸೆಪ್ಟೆಂಬರ್ ನಲ್ಲಿ ತಿಳಿಸಲಾಗಿತ್ತು.

PF ಬಡ್ಡಿಯ ಮೊದಲ ಕಂತು EPFOನಿಂದ ದೀಪಾವಳಿ ಹೊತ್ತಿಗೆ ಜಮೆ

ಕಳೆದ ವರ್ಷ ಬಡ್ಡಿ ದರವು 8.65% ಇತ್ತು. ಈ ಬಾರಿ ಅದು 8.5%ಗೆ ಇಳಿಕೆಯಾಗಿದೆ. ಚಂದಾದಾರರು ಎಸ್ಸೆಮ್ಮೆಸ್ ಮೂಲಕ ತಮ್ಮ ಇಪಿಎಫ್ ಬಾಕಿಯನ್ನು ಪರಿಶೀಲಿಸಬಹುದು. ಅಥವಾ ಉಮಂಗ್ ಆಪ್ ನಲ್ಲಿ ಪಾಸ್ ಬುಕ್ ಅಥವಾ ಇಪಿಎಫ್ ವೆಬ್ ಸೈಟ್ ನಲ್ಲಿ ಪರಿಶೀಲನೆ ಮಾಡಬಹುದು.

English summary

EPFO May Credit First Installment Of 2019- 20 PF Interest By Deepavali

EPFO may credit first installment of 2019- 20 financial year PF interest by Deepavali.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X