For Quick Alerts
ALLOW NOTIFICATIONS  
For Daily Alerts

Financial Planning: ಈ 5 ಲೆಕ್ಕಾಚಾರ ಇಲ್ಲದಿದ್ದರೆ 40ರ ನಂತರ ಆಪತ್ತು

By ಅನಿಲ್ ಆಚಾರ್
|

ಯಾವ ವಯಸ್ಸಿನಲ್ಲಿ ಎಂತಹ ಆರ್ಥಿಕ ಪ್ಲ್ಯಾನಿಂಗ್ ಇರಬೇಕು ಎಂಬುದು ಕೂಡ ಸರಿಯಾದ ರೀತಿ ತಿಳಿದಿರಬೇಕು. ಇಪ್ಪತ್ತರ ಹರೆಯದಲ್ಲಿ ಇರುವವರಿಗೆ ನಿವೃತ್ತಿಗೆ ಬೇಕಾದ ಉಳಿತಾಯ ಮುಖ್ಯವಲ್ಲ ಎನಿಸಬಹುದು. ಆದರೆ 40ನೇ ವಯಸ್ಸಿನ ಸಮೀಪ ಬರುವ ಹೊತ್ತಿರುವ ನಿವೃತ್ತಿಗೆ ಉಳಿತಾಯ ಮಾಡಬೇಕಾದ ಅಗತ್ಯ ಗೊತ್ತಾಗುತ್ತದೆ.

40ನೇ ವರ್ಷ ಅನ್ನೋದು ಯಾವುದೇ ವ್ಯಕ್ತಿಯ ಜೀವನದಲ್ಲಿ ಕವಲು ದಾರಿಯಲ್ಲಿ ನಿಂತಂಥ ಸನ್ನಿವೇಶ ಸೃಷ್ಟಿಸುತ್ತದೆ. ವೃತ್ತಿ ಅಥವಾ ಉದ್ಯೋಗ ಬದುಕಿನ ಉತ್ತುಂಗದ ಹೆಜ್ಜೆಯನ್ನು ಇಡುತ್ತಾ, ಕುಟುಂಬ ಬೆಂಬಲ, ಮಕ್ಕಳ ಶಿಕ್ಷಣದ ಜತೆಗೆ ಮನೆ ಸಾಲ, ಭವಿಷ್ಯದ ಭದ್ರತೆ ಹೀಗೆ ನಾನಾ ಗುರಿಗಳನ್ನು ಸಂಭಾಳಿಸಬೇಕಾಗುತ್ತದೆ.

ಆದ್ದರಿಂದ 39ನೇ ವಯಸ್ಸಿನೊಳಗೆ ಈ 5 ಜವಾಬ್ದಾರಿಗಳನ್ನು ಪೂರೈಸಿದ್ದರೆ ಹೆಚ್ಚಿನ ಒತ್ತಡ ಇಲ್ಲದೆ ಮುಂದಿನ ಭವಿಷ್ಯ ತೀರ್ಮಾನಿಸಬಹುದು. ಈ 5 ಜವಾಬ್ದಾರಿಗಳು ಯಾವುವು ಎಂಬುದು ತಿಳಿಯಲು ಮುಂದೆ ಓದಿ.

ಸ್ವಂತಕ್ಕೆ ಮನೆ ಇರಲಿ
 

ಸ್ವಂತಕ್ಕೆ ಮನೆ ಇರಲಿ

ಮನೆ ಸ್ವಂತದ್ದೋ ಅಥವಾ ಬಾಡಿಗೆಯದೋ ಎಂಬುದು ಅತಿ ದೊಡ್ಡ ಚರ್ಚೆ. 2019ರಲ್ಲಿ ಅಧ್ಯಯನವೊಂದರಿಂದ ಗೊತ್ತಾದ ಅಂಶ ಏನು ಗೊತ್ತಾ? ಸ್ವಂತ ಮನೆ ಇರಬೇಕು ಎಂಬುದು ಭಾರತದಲ್ಲಿನ ಜನರ ಆದ್ಯತೆ. ಸ್ವಂತ ಸೂರು ಅನ್ನೋ ಕಾರಣಕ್ಕೆ ಮಾತ್ರ ಅಲ್ಲ, ಆಸ್ತಿಯ ಬೆಲೆಯಲ್ಲಿ ಕೂಡ ಹೆಚ್ಚಳ ಆಗುತ್ತದೆ. 40 ವರ್ಷಕ್ಕೂ ಮುನ್ನ ಗೃಹ ಸಾಲ ತೆಗೆದುಕೊಂಡರೆ ಮರುಪಾವತಿಗೆ ದೀರ್ಘಾವಧಿ ದೊರೆಯುತ್ತದೆ. ಮನೆ ಸಾಲದ ಮೇಲೆ ಸೆಕ್ಷನ್ 80C, 24b, 80EEA ಅಡಿಯಲ್ಲಿ ತೆರಿಗೆ ವಿನಾಯ್ತಿ ದೊರೆಯುತ್ತದೆ. 2019ರಲ್ಲಿ ಪಡೆದ ಸಾಲದ ಪೈಕಿ 72% ಜನರು 30 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನೇ ಪಡೆದುಕೊಂಡಿದ್ದಾರೆ. ಆದ್ದರಿಂದ 30ರ ಹರೆಯದಲ್ಲಿ ಇರುವವರು ಮನೆ ಖರೀದಿ ಮಾಡುವ ಬಗ್ಗೆ ಗಮನ ನೀಡಬಹುದು.

ತುರ್ತು ಸಮಯಕ್ಕೆ ಹಣ ಉಳಿತಾಯ ಮಾಡಿ

ತುರ್ತು ಸಮಯಕ್ಕೆ ಹಣ ಉಳಿತಾಯ ಮಾಡಿ

ಎಲ್ಲ ವಯಸ್ಸಿನಲ್ಲೂ, ಪ್ರತಿ ಹಂತದಲ್ಲೂ ತುರ್ತು ಸಮಯಕ್ಕೆ ಹಣದ ಅಗತ್ಯ ಇರುತ್ತದೆ. ಆದ್ದರಿಂದ ಆ ವೇಳೆ ಪಡೆಯುವ ವೇತನದ ಆರು ಪಟ್ಟು ಮೊತ್ತವನ್ನು ತುರ್ತು ನಿಧಿ ಎಂದು ಎತ್ತಿಟ್ಟುಕೊಳ್ಳಬೇಕು. ಉದ್ಯೋಗ ಕಳೆದುಕೊಳ್ಳುವುದು, ಅನಾರೋಗ್ಯ ಸಮಸ್ಯೆ, ತುರ್ತು ಪ್ರಯಾಣ... ಹೀಗೆ ಏನಾದರೊಂದು ಕಾರಣಕ್ಕೆ ಹಣ ಬೇಕಾಗುತ್ತದೆ. ಅನಿಶ್ಚಿತತೆಯ ಬದುಕು ಮಾನಸಿಕ, ದೈಹಿಕ ಒತ್ತಡವನ್ನು ನೀಡುತ್ತದೆ. ಅದೇ ಒಂದಿಷ್ಟು ಹಣವನ್ನು ಉಳಿತಾಯ ಮಾಡಿಟ್ಟಿದ್ದರೆ ಆತ್ಮಸ್ಥೈರ್ಯ ನೀಡುತ್ತದೆ. ಒಂದು ವೇಳೆ ಈಗಲೂ ಎಮರ್ಜೆನ್ಸಿ ಫಂಡ್ ಇಟ್ಟುಕೊಂಡಿಲ್ಲ ಅಂದಲ್ಲಿ ಆರ್.ಡಿ. ಖಾತೆ ತೆರೆಯಬಹುದು. ಆರಂಭದಲ್ಲಿ ವೇತನದ ಮೂರು ಪಟ್ಟು ಕೂಡಿಡಿ. ಆ ನಂತರ ಆರು ಪಟ್ಟಿಗೆ ಗುರಿ ಹೆಚ್ಚಿಸಿಕೊಳ್ಳಿ.

ಜೀವ ವಿಮೆ ಮತ್ತು ಆರೋಗ್ಯ ವಿಮೆ

ಜೀವ ವಿಮೆ ಮತ್ತು ಆರೋಗ್ಯ ವಿಮೆ

40ರ ಹರೆಯದಲ್ಲಿ ಕೌಟುಂಬಿಕ, ಆರ್ಥಿಕ ಜವಾಬ್ದಾರಿಗಳು ಹಲವು ಪಟ್ಟು ಹೆಚ್ಚಾಗುತ್ತವೆ. ಅನಿರೀಕ್ಷಿತವಾದ ಆಪತ್ತು ಎದುರಾದಲ್ಲಿ ನಿಮ್ಮ ಗೈರಿನಲ್ಲೂ ಕುಟುಂಬದವರಿಗೆ ನೆರವಾಗುವಂಥ ಜೀವ ವಿಮೆ, ಆರೋಗ್ಯ ವಿಮೆ ಮಾಡಿಸಿಕೊಳ್ಳುವ ಬಗ್ಗೆ ಗಮನ ನೀಡಿ. ಆದ್ದರಿಂದ ಅತ್ಯುತ್ತಮ ಟರ್ಮ್ ಇನ್ಷೂರೆನ್ಸ್, ಹೆಲ್ತ್ ಇನ್ಷೂರೆನ್ಸ್ ಅನ್ನು ಹುಡುಕಿಕೊಂಡು, ಪ್ರೀಮಿಯಂ ಕಟ್ಟಿ. ಇನ್ನೊಂದು ವಿಚಾರ ನೆನಪಿರಲಿ, ವಯಸ್ಸು ಹೆಚ್ಚಾದಂತೆ ಟರ್ಮ್ ಇನ್ಷೂರೆನ್ಸ್ ಹಾಗೂ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಂ ಹೆಚ್ಚಾಗುತ್ತದೆ. ಆದ್ದರಿಂದ ನಲವತ್ತು ತುಂಬುವ ಮುನ್ನವೇ ಸೂಕ್ತ ವಿಮೆ ಆರಿಸಿಕೊಳ್ಳಿ.

ನಿವೃತ್ತಿಗೆ ಯೋಜನೆ
 

ನಿವೃತ್ತಿಗೆ ಯೋಜನೆ

20 ಹಾಗೂ 30ರ ಹರೆಯದಲ್ಲಿ ನಿವೃತ್ತಿ ಬಗ್ಗೆ ಆಲೋಚನೆ ಮಾಡಿರುವ ಸಾಧ್ಯತೆ ಇರದ ನೀವು 40ರ ಹರೆಯಕ್ಕೆ ಕಾಲಿಟ್ಟ ಮೇಲೆ ನಿರ್ಲಕ್ಷ್ಯ ಮಾಡುವುದು ಸಾಧ್ಯವಿಲ್ಲ. ದೀರ್ಘಾವಧಿ ಹೂಡಿಕೆಯನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಮಾಡುವುದು ಉತ್ತಮ ಆಯ್ಕೆ. 30ರ ಹರೆಯದಲ್ಲೇ ಪಿಪಿಎಫ್, ಇಪಿಎಫ್, ಎನ್ ಪಿಎಸ್, ಈಕ್ವಿಟಿ ಮ್ಯೂಚುವಲ್ ಫಂಡ್ಸ್ ಇತ್ಯಾದಿಯನ್ನು ಸರಿಯಾಗಿ ಪ್ಲ್ಯಾನ್ ಮಾಡಿ. ಹಾಗೆ ಮಾಡುವುದರಿಂದ ಅದರ ಬೆಳವಣಿಗೆ ವೇಗ ಹೆಚ್ಚು ಮಾಡಿಕೊಳ್ಳುವ ಅವಕಾಶ ಹೆಚ್ಚಿರುತ್ತದೆ, ಒತ್ತಡ ಇಲ್ಲದಂತೆ ನಿರ್ವಹಿಸಬಹುದು. ಹೂಡಿಕೆ ತಜ್ಞರ ಜತೆ ಮಾತುಕತೆ ನಡೆಸಿ, ಆ ನಂತರ ನಿವೃತ್ತಿ ಜೀವನಕ್ಕೆ ನಿಮಗೆಷ್ಟು ಹಣ ಬೇಕು ಮತ್ತು ಅದನ್ನು ಉಳಿಸುವುದು ಹೇಗೆ ಎಂದು ನಿರ್ಧರಿಸಿ.

ಮಕ್ಕಳ ಶಿಕ್ಷಣಕ್ಕೆ ಪ್ಲ್ಯಾನ್ ಮಾಡಿ

ಮಕ್ಕಳ ಶಿಕ್ಷಣಕ್ಕೆ ಪ್ಲ್ಯಾನ್ ಮಾಡಿ

ಉನ್ನತ ಶಿಕ್ಷಣ ಎಂಬುದು ಅಗ್ಗವಾಗಿಲ್ಲ. ಆದ್ದರಿಂದ ಮಕ್ಕಳ ದೀರ್ಘಾವಧಿ ಅಗತ್ಯಗಳಿಗೆ ಸಿದ್ಧತೆ ಮಾಡಿರಬೇಕು. ಮಕ್ಕಳು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ನಿವೃತ್ತಿಗೆ ಸಮೀಪದಲ್ಲಿ ಇರುವ ಸಾಧ್ಯತೆ ಇದೆ. ಆದ್ದರಿಂದ ಈ ಸಂಕೀರ್ಣವಾದ ಹಣಕಾಸು ಅಗತ್ಯವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಯೋಜನೆ ಹಾಕಿಕೊಳ್ಳಿ. ಮಕ್ಕಳ ಶಿಕ್ಷಣಕ್ಕೆ ಹಣ ಕೂಡಿಡುವ ಅತ್ಯುತ್ತಮ ವಿಧಾನ ಅಂದರೆ, ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲ್ಯಾನ್ (ಎಸ್ ಐಪಿ). ಅದೇ ರೀತಿ ರಿಯಲ್ ಎಸ್ಟೇಟ್ ಮೇಲೆ ಕೂಡ ದೀರ್ಘಾವಧಿಯನ್ನು ಗಮನದಲ್ಲಿ ಇಟ್ಟುಕೊಂಡು ಹೂಡಿಕೆ ಮಾಡಬಹುದು. ಆದರೆ ಹೂಡಿಕೆ ಮಾಡುವಾಗ ರಿಸ್ಕ್ ಅನ್ನು ಗಮನದಲ್ಲಿ ಇಟ್ಟುಕೊಳ್ಳಿ.

English summary

Financial Planning: These 5 Responsibility Must Fulfill Before Turn 40

Before turn 40 these are the financial planning to follow. Here is the complete details.
Story first published: Friday, February 28, 2020, 18:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more