For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಸದ್ಯಕ್ಕೆ ಇಳಿಕೆ ಆಗಬಹುದಾ? ಏನಂತಾರೆ ವಿಶ್ಲೇಷಕರು?

|

ಚಿನ್ನದ ಬೆಲೆ ಸ್ಪಲ್ಪ ಇಳಿಯಲಿ ಅಂತೇನಾದರೂ ಕಾಯ್ತಿದ್ದೀರಾ? ಮದುವೆಗೋ ಅಥವಾ ಮತ್ಯಾವ ಉದ್ದೇಶಕ್ಕೋ ಒಡವೆ ಮಾಡಿಸಬೇಕಾ? ಸ್ವಲ್ಪ ಹಣ ಇದೆ ಅದನ್ನು ಚಿನ್ನದಲ್ಲಿ ಹೂಡಿಕೆ ಮಾಡಬಹುದಾ ಎಂಬುದು ನಿಮ್ಮ ಪ್ರಶ್ನೆಯಾ? ಹಾಗಿದ್ದಲ್ಲಿ ಸದ್ಯಕ್ಕಂತೂ ಚಿನ್ನದ ಬೆಲೆ ಇಳಿಯುವ ಲಕ್ಷಣಗಳಿಲ್ಲ ಎನ್ನುತ್ತಾರೆ ವಿಶ್ಲೇಷಕರು. ಯಾಕೆ ಸದ್ಯಕ್ಕೆ ಚಿನ್ನದ ಬೆಲೆ ಇಳಿಯಲ್ಲ ಅನ್ನೋದನ್ನ ತಿಳಿದುಕೊಳ್ಳಿ.

ಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತೆ ಮಾಡಬಹುದಾದ 5 ಸಾಮಾನ್ಯ ತಪ್ಪು

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಈಗಲೋ ಆಗಲೋ ಭಾರೀ ಕುಸಿತ ಕಾಣಬಹುದು ಎಂಬ ಅನುಮಾನ ಇದ್ದೇ ಇದೆ. ಮಾರ್ಚ್ ತಿಂಗಳಿಂದ ಈಚೆಗೆ ಚಿನ್ನದ ಬೆಲೆಯಲ್ಲಿ 25% ಏರಿಕೆ ಆಗಿ, ಆಗಸ್ಟ್ ತಿಂಗಳಲ್ಲಿ ದೇಶೀ- ಅಂತರರಾಷ್ಟ್ರೀಯ ಮಾರ್ಕೆಟ್ ನಲ್ಲಿ ಸಾರ್ವಕಾಲಿಕ ದಾಖಲೆ ಬೆಲೆಯನ್ನು ಕಂಡಿದೆ.

ಒಂದು ವರ್ಷದಲ್ಲಿ 40% ಹೆಚ್ಚಳ
 

ಒಂದು ವರ್ಷದಲ್ಲಿ 40% ಹೆಚ್ಚಳ

ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ 40% ಹೆಚ್ಚಳವಾಗಿದೆ. ಕೊರೊನಾದ ಆರ್ಭಟದ ಮಧ್ಯೆ ಉಳಿದೆಲ್ಲ ಆಸ್ತಿಗಳ ಸ್ಥಿತಿ ಡೋಲಾಯಮಾನ ಆಗಿದ್ದರೂ ಚಿನ್ನ ಮಾತ್ರ ಅದ್ಭುತವಾದ ಏರಿಕೆ ದಾಖಲಾಗಿದೆ. ಕಳೆದ ನೂರು ವರ್ಷದಲ್ಲೇ ಕಾಣದಂಥ ಆರೋಗ್ಯ ಬಿಕ್ಕಟ್ಟನ್ನು ಕಂಡಿರುವ ಈ ಕಾಲಘಟ್ಟದಲ್ಲಿ ಇಡೀ ಎರಡು ತಿಂಗಳು (ಏಪ್ರಿಲ್- ಮೇ) ಆರ್ಥಿಕ ಚಟುವಟಿಕೆಗಳು ನಿಂತು ಹೋಗಿದ್ದರೂ ಚಿನ್ನ ಹೊಳೆಯುವುದು ನಿಲ್ಲಲಿಲ್ಲ. ಆಗಸ್ಟ್ ತಿಂಗಳಲ್ಲಿ ಗೋಲ್ಡ್ ಇಟಿಎಫ್ ಗೆ ಸತತ ಆರನೇ ತಿಂಗಳು ಹೂಡಿಕೆ ಹರಿದುಬಂದಿದೆ. ಜನವರಿಯಿಂದ ಆಗಸ್ಟ್ ಮಧ್ಯೆ ಅವಧಿಯಲ್ಲಿ ಚಿನ್ನದ ಇಟಿಎಫ್ ಗೆ ಹರಿದು ಬಂದ ಹಣ 5356 ಕೋಟಿ. ಅಂತರರಾಷ್ಟ್ರೀಯ ಮಟ್ಟದಲ್ಲೂ ಇದೇ ಪರಿಸ್ಥಿತಿ ಇದೆ. ಷೇರು ಮಾರ್ಕೆಟ್, ರಿಯಲ್ ಎಸ್ಟೇಟ್ ಅನಿಶ್ಚಿತತೆ ಕಾರಣಕ್ಕೆ ಹೂಡಿಕೆದಾರರಿಗೆ ಚಿನ್ನವೇ ಅತ್ಯುತ್ತಮ ಆಯ್ಕೆ ಎನಿಸಿದೆ.

65 ಸಾವಿರ ಮುಟ್ಟಲಿದೆಯಂತೆ ಚಿನ್ನ

65 ಸಾವಿರ ಮುಟ್ಟಲಿದೆಯಂತೆ ಚಿನ್ನ

ಚಿನ್ನದ ದರಗಳ ವಿಶ್ಲೇಷಕರು ಹೇಳುವ ಪ್ರಕಾರ, ಭಾರತದಲ್ಲಿ ಮುಂದಿನ ಹದಿನೆಂಟರಿಂದ ಇಪ್ಪತ್ನಾಲ್ಕು ತಿಂಗಳಲ್ಲಿ ಚಿನ್ನದ ದರ ಹತ್ತು ಗ್ರಾಮ್ ಗೆ 65 ಸಾವಿರ ಮುಟ್ಟಲಿದೆ. ಜಾಗತಿಕ ಆರ್ಥಿಕತೆಗೆ ಕೊರೊನಾ ಬಿಕ್ಕಟ್ಟು ಎಂಬುದು ಅಂದುಕೊಂಡದ್ದಕ್ಕಿಂತ ದೀರ್ಘ ಕಾಲ ಅಪಾಯ ತಂದೊಡ್ಡುವಂತಿದೆ. ಎಲ್ಲಿಯ ತನಕ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ದಿನದಿನಕ್ಕೂ ಹೆಚ್ಚಾಗುತ್ತಲೇ ಇರುತ್ತದೋ ಅಲ್ಲಿಯ ತನಕ ಆರ್ಥಿಕ ಚಟುವಟಿಕೆ ಹಾಗೂ ಹೂಡಿಕೆಯ ಇತರ ವಲಯಗಳ ಮೇಲೆ ದೃಢವಾದ ನಂಬಿಕೆ ಹೂಡಿಕೆದಾರರಲ್ಲಿ ಸೃಷ್ಟಿಯಾಗುವುದಿಲ್ಲ.

ಭಾರತದಲ್ಲಿ ಮದುವೆ ಸೀಸನ್ ಮುಂದಕ್ಕೆ ಹೋಯಿತು
 

ಭಾರತದಲ್ಲಿ ಮದುವೆ ಸೀಸನ್ ಮುಂದಕ್ಕೆ ಹೋಯಿತು

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಾರ, ಭಾರತದ ಕುಟುಂಬಗಳ ಬಳಿ 24- 25 ಸಾವಿರ ಟನ್ ಚಿನ್ನ ಇರಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2019-20ರಲ್ಲಿ 40.45 ಟನ್ ಚಿನ್ನ ಖರೀದಿ ಮಾಡಿದೆ. ಆ ಮೂಲಕ ಆರ್ ಬಿಐ ಬಳಿ ಈಗ 653.01 ಟನ್ ಚಿನ್ನ ಇದೆ. ಇನ್ನು ಭಾರತದ ವಿವಿಧ ದೇವಾಲಯಗಳಲ್ಲಿ ಚಿನ್ನ ಇದೆ. ಕೊರೊನಾ ಲಾಕ್ ಡೌನ್, ದರ ಹೆಚ್ಚಳ, ಮದುವೆಗಳ ಸೀಸನ್ ಮುಂದಕ್ಕೆ ಹೋಗಿದ್ದರಿಂದ ಭಾರತದಲ್ಲಿ ಚಿನ್ನದ ಗಟ್ಟಿ, ಆಭರಣಗಳಿಗೆ ಕಡಿಮೆ ಆಗುವಂತೆ ಆಯಿತು. ರೀಟೇಲ್ ಮಳಿಗೆಗಳಲ್ಲಿ ಕಳೆದ ವರ್ಷದ ಜನವರಿಯಿಂದ ಮಾರ್ಚ್ ಅವಧಿಗೆ ಹೋಲಿಸಿದರೆ ಈ ವರ್ಷ 36% ಬೇಡಿಕೆ ಕಡಿಮೆ ಆಗಿದೆ. ಚಿನ್ನದ ಮೇಲೆ ಆಮದು ಸುಂಕವನ್ನು 12.5%ಗೆ ಏರಿಕೆ ಮಾಡಿದ್ದರಿಂದಲೂ ಮಾರಾಟದ ಮೇಲೆ ಪ್ರಭಾವ ಬೀರಿದೆ. ಆಮದು ಸುಂಕ ಒಂದು ಕಡೆಯಾಯಿತು. ಅದರ ಜತೆಗೆ ಮೂರು ಪರ್ಸೆಂಟ್ ಜಿಎಸ್ ಟಿ ಕೂಡ ಪಾವತಿಸಬೇಕು. ಇವೆಲ್ಲ ಸೇರಿ ದುಬಾರಿ ಆಗಿದೆ. ಕಳೆದ ವಾರಕ್ಕೆ ಅನ್ವಯಿಸಿ ಹೇಳುವುದಾದರೆ, ಕೆಲವು ಮಾರಾಟಗಾರರು ಚಿನ್ನಕ್ಕೆ ರಿಯಾಯಿತಿಯನ್ನು ನೀಡುತ್ತಿದ್ದಾರೆ. ಖರೀದಿ ಮುಂದುವರಿದಿದೆ.

English summary

Why Gold Prices in India Are Likely To Stay High?

Here is an analysis about gold price. Why gold price in India likely to stay high?
Company Search
COVID-19