For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲೇ ಇನ್ನಷ್ಟು ಕುಸಿಯುತ್ತದೆಯೇ ಚಿನ್ನದ ಬೆಲೆ?

|

ಕಳೆದ ತಿಂಗಳಿನಿಂದ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಅಸ್ಥಿರತೆಯನ್ನು ಅನುಭವಿಸುತ್ತಿದೆ. ಮಾರುಕಟ್ಟೆಯು ಎಂಟರಿಂದ ಒಂಬತ್ತು ತಿಂಗಳ ಹಿಂದೆ ಇದ್ದುದ್ದಕ್ಕಿಂತ ಈಗ ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ ಸ್ಪಷ್ಟವಾಗಿ ಕೆಳಮಟ್ಟದಲ್ಲಿದೆ.

 

ಆಗಸ್ಟ್ 4 ರಂದು, ಎಂಸಿಎಕ್ಸ್‌ (FUTCOM) ನಲ್ಲಿ ಚಿನ್ನದ ಮಾರುಕಟ್ಟೆಯು ರೂ. 47920 (ಪ್ರತಿ 10 ಗ್ರಾಂಗೆ) ಸ್ಕೇಲ್ ಗರಿಷ್ಠ ರೂ. 47950 ಇತ್ತು. ಚಿನ್ನದ ಬೆಲೆಯಲ್ಲಿ ಶೇ. 0.17 ಬದಲಾವಣೆಯನ್ನು ಕಂಡಿದೆ. ಚಿನ್ನದ ಜೊತೆಗೆ ಬೆಳ್ಳಿ ರೂ. ಆರಂಭದಲ್ಲಿ 67,956 ಮತ್ತು ಕೊನೆಯದಾಗಿ ರೂ. 68156 ಇದೆ. ಈ ಏರಿಳಿತಗಳು ಭಾರತದ ಪ್ರತಿ ನಗರದಲ್ಲೂ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತಿವೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ವಿವಿಧ ನಗರಗಳಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಚಿನ್ನದ ಬೆಲೆ ಮತ್ತಷ್ಟು ಇಳಿಕೆ: ಆಗಸ್ಟ್‌ 04ರಂದು ಯಾವ ನಗರದಲ್ಲಿ ಎಷ್ಟಿದೆ?

 ಸ್ಪಾಟ್ ಗೋಲ್ಡ್‌ ಬೆಲೆಗಳು ಹೇಗೆ ಏರಿಳಿತ ಕಾಣುತ್ತಿದೆ?

ಸ್ಪಾಟ್ ಗೋಲ್ಡ್‌ ಬೆಲೆಗಳು ಹೇಗೆ ಏರಿಳಿತ ಕಾಣುತ್ತಿದೆ?

ಸ್ಪಾಟ್ ಗೋಲ್ಡ್‌ ಮಾರುಕಟ್ಟೆ ಬೆಲೆ ಇನ್ನೊಂದೆಡೆ ಕನಿಷ್ಠ ರೂ. 10 ಗ್ರಾಂಗೆ 47842 ಆಗಿದೆ. ಜುಲೈನಿಂದ ಭಾರತೀಯ ಸ್ಪಾಟ್ ಗೋಲ್ಡ್‌ ಬೆಲೆಗಳು ಸಮತಟ್ಟಾದ ಪ್ರಮಾಣವನ್ನು ತೋರಿಸುತ್ತಿವೆ. ಇದು ಕಳೆದ ವರ್ಷದ ಏರಿಳಿತವು ಈ ಬಾರಿ ಸಾಕಷ್ಟು ಕಡಿಮೆಯಾಗಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ತೈಲ ಮತ್ತು ಯುಎಸ್ ಡಾಲರ್ ಬಗ್ಗೆ ಹೂಡಿಕೆದಾರರ ಭಯವು ಚಿನ್ನವು ಅದರ ಗರಿಷ್ಠ ಮಟ್ಟವನ್ನು ತಲುಪಲು ನೆರವಾಯಿತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.

ಬಿಟ್‌ಕಾಯಿನ್‌ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿಗಳ ಆಗಸ್ಟ್‌ 05ರ ಬೆಲೆ ತಿಳಿದುಕೊಳ್ಳಿ

 ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ
 

ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ

ಈ ವಾರ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಯುಎಸ್ ಉದ್ಯೋಗಗಳ ದತ್ತಾಂಶದ ಮುಂದೆ ಇದು ಸಂಭವಿಸಿದೆ. ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರದ ಹರಡುವಿಕೆ ಮತ್ತು ಕಡಿಮೆ ಬಾಂಡ್ ಇಳುವರಿಯಿಂದಾಗಿ ಹೂಡಿಕೆದಾರರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಫೆಡರಲ್ ರಿಸರ್ವ್ ದೇಶದ ಉದ್ಯೋಗ ಸನ್ನಿವೇಶ ಮತ್ತು ಆರ್ಥಿಕತೆಗೆ ಸಂಬಂಧಿಸಿದಂತೆ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಫೆಡ್ ಬಾಂಡ್ ಇಳುವರಿ ಮತ್ತು ಬಡ್ಡಿ ದರಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಚಿನ್ನದ ಬೆಲೆಗಳು ಮತ್ತೆ ವೇಗವನ್ನು ಕಂಡಿದೆ.

ಜೂನ್ 16 ರಂದು ನಡೆದ ಸಭೆಯಲ್ಲಿ ಫೆಡ್ ಗವರ್ನರ್ ಜೆರೋಮ್ ಪೊವೆಲ್ ರಾಜ್ಯಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಮುನ್ಸೂಚನೆಯನ್ನು ನೀಡಿದರು. ಫೆಡ್ ಹೆಚ್ಚುವರಿಯಾಗಿ ಬಡ್ಡಿದರಗಳಲ್ಲಿ ಎರಡು ಸಂಭವನೀಯ ಹೆಚ್ಚಳಗಳನ್ನು ಯೋಜಿಸಿದೆ. ಈ ಬಿಗಿಯಾದ ವಿತ್ತೀಯ ನೀತಿಯನ್ನು ಎಲ್ಲ ಹೂಡಿಕೆದಾದರೂ ನಿರೀಕ್ಷಿಸಿರಲಿಲ್ಲ. ಈ ಪೈಕಿ ಕೆಲವರಿಗೆ ಇದು ಹಠಾತ್ ಬದಲಾವಣೆಯಾಗಿದೆ. ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ಈ ಬಗ್ಗೆ ಸಂಶಯ ಹೊಂದಿದರು.

ಮತ್ತೊಂದೆಡೆ, ಯುರೋಪಿಯನ್ ದೇಶಗಳಲ್ಲಿ ಅಥವಾ ಜಪಾನ್‌ನಲ್ಲಿರುವಂತೆ ಜಗತ್ತಿನ ಇತರ ಭಾಗಗಳಲ್ಲಿರುವ ಫೆಡರಲ್ ಬ್ಯಾಂಕುಗಳು ತಮ್ಮ ದೇಶಗಳಲ್ಲಿ ಬಡ್ಡಿದರ ಏರಿಕೆಯ ಬಗ್ಗೆ ಯೋಚಿಸಲಿಲ್ಲ. ಇತರ ದೇಶಗಳಿಗಿಂತ ಭಿನ್ನವಾಗಿ, ಯುಎಸ್ ಡಾಲರ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಮತ್ತು ಬಲವಾದ ಹಿಡಿತವನ್ನು ನೀಡಲು ಯುಎಸ್ ಖಂಡಿತವಾಗಿಯೂ ಹೆಚ್ಚು ಗಮನಹರಿಸಿದೆ ಎಂದು ಇದು ಹೇಳುತ್ತದೆ.

 ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿದ ಆರ್ಥಿಕ ಕುಸಿತ

ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿದ ಆರ್ಥಿಕ ಕುಸಿತ

ಕಳೆದ ವರ್ಷದಲ್ಲಿ ಯುಎಸ್ಎಯ ಆರ್ಥಿಕ ಕುಸಿತವು ಯುಎಸ್ ಫೆಡ್, ಆರ್ಥಿಕ ಸಮಸ್ಯೆಗಳ ಕುರಿತು ಸಲಹೆ ಮತ್ತು ಆಲೋಚನೆಗಳನ್ನು ಒದಗಿಸುವ ತಜ್ಞರ ಗುಂಪನ್ನು ಪ್ರಚೋದಿಸಿದೆ. ಇದು ನೇರವಾಗಿ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತಿದೆ. ಈ ವರ್ಷ ಯುಎಸ್ ಡಾಲರ್‌ನ ಮೌಲ್ಯವರ್ಧನೆಯು ದೀರ್ಘಾವಧಿಯಲ್ಲಿ ಚಿನ್ನದ ಬೆಲೆಗಳ ಕುಸಿತದ ಪ್ರಸ್ತುತ ಪ್ರವೃತ್ತಿಯನ್ನು ಸೂಚಿಸುತ್ತದೆ. ಆದರೆ ಕರೆನ್ಸಿ ವಿನಿಮಯದಲ್ಲಿ ಯುಎಸ್ ಡಾಲರ್ ಮೌಲ್ಯಮಾಪನವು ಆಗಸ್ಟ್‌ 4 ರಂದು ಹೆಚ್ಚು ಬದಲಾವಣೆಯನ್ನು ತೋರಿಸಲಿಲ್ಲ. ಇದು ನಿಜವಾಗಿ ಭಾರತದಲ್ಲಿ ಚಿನ್ನದ ಎಂಸಿಎಕ್ಸ್‌ಗೆ ಉತ್ತಮ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡಿತು.

ಚಿನ್ನದ ಮಾರುಕಟ್ಟೆ ಈಗ ಒಟ್ಟಾರೆಯಾಗಿ ಭವಿಷ್ಯದ ಮತ್ತು ಸ್ಪಾಟ್ ಎರಡಕ್ಕೂ ದೈನಂದಿನ ಚಿನ್ನದ ಬೆಲೆಗಳಲ್ಲಿ ಒಂದು ಅಸ್ಥಿರ ಪ್ರತಿಕ್ರಿಯೆಯನ್ನು ತೋರಿಸುತ್ತಿದೆ. ಮಾಸಿಕ ಪ್ರತಿಕ್ರಿಯೆಗಳು ಪ್ರಮುಖವಾಗಿವೆ. ಜನವರಿಯಿಂದ ಮಾಸಿಕ ದರಗಳು ದೊಡ್ಡ ಸಂಖ್ಯೆಯಲ್ಲಿ ಕುಸಿಯುತ್ತಿವೆ. ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಖಂಡಿತವಾಗಿಯೂ ಒಳ್ಳೆಯ ಸಮಯ. ಆದರೆ ಚಿನ್ನವನ್ನು ಅಡವಿಡಲು ಅಥವಾ ಮಾರಾಟ ಮಾಡಲು ಇದು ಉತ್ತಮ ಸಮಯವಲ್ಲ. ಯುಎಸ್ ನೈಜ ಇಳುವರಿಯಿಂದಾಗಿ ಹಣಕಾಸಿನ ಹೂಡಿಕೆಯ ಬೇಡಿಕೆಯ ಕುಸಿತದಿಂದಾಗಿ ಚಿನ್ನದ ಬೆಲೆಗಳು ಕುಸಿದವು (ಕ್ಯೂ 1 2021 ರಲ್ಲಿ 4%) ಎಂದು ಹೇಳಲಾಗಿದೆ.

'ಕಮೊಡಿಟಿ ಮಾರ್ಕೆಟ್ಸ್ ಔಟ್‌ಲುಕ್ -ಏಪ್ರಿಲ್, 2021' ಶೀರ್ಷಿಕೆಯ ವರದಿಯು, "10 ವರ್ಷದ ಖಜಾನೆ ಹಣದುಬ್ಬರ-ಸಂರಕ್ಷಿತ ಸೆಕ್ಯುರಿಟಿಯ ಇಳುವರಿ ಜನವರಿಯಲ್ಲಿ -1% ರಿಂದ ಮಾರ್ಚ್‌ನಲ್ಲಿ -0.66% ಕ್ಕೆ ಏರಿತು. ಇದು ಜೂನ್ 2020 ರ ನಂತರದ ಅತ್ಯುನ್ನತ ಮಟ್ಟವಾಗಿದೆ. ಹೆಚ್ಚಿನ ನೈಜ ಇಳುವರಿ ಹೂಡಿಕೆದಾರರಿಗೆ ಚಿನ್ನವು ಕಡಿಮೆ ಆಕರ್ಷಕವಾಗುತ್ತದೆ. ಚಿನ್ನ-ಬೆಂಬಲಿತ ವಿನಿಮಯ-ವ್ಯಾಪಾರ ನಿಧಿಗಳು ಇತ್ತೀಚಿನ ತಿಂಗಳುಗಳಲ್ಲಿ ತೀವ್ರವಾಗಿ ಕುಸಿದಿವೆ ಮತ್ತು ಕೇಂದ್ರೀಯ ಬ್ಯಾಂಕುಗಳು ಚಿನ್ನದ ಖರೀದಿಯನ್ನು ಕಡಿಮೆ ಮಾಡಿವೆ.

 ಸುದ್ದಿ ನೆಗೆಟಿವ್‌ ಆದರೆ ಚಿನ್ನದ ಬೆಲೆಗಳು ಹೆಚ್ಚಾಗುತ್ತದೆಯೇ?

ಸುದ್ದಿ ನೆಗೆಟಿವ್‌ ಆದರೆ ಚಿನ್ನದ ಬೆಲೆಗಳು ಹೆಚ್ಚಾಗುತ್ತದೆಯೇ?

ನಿರಾಶವಾದ ಇದ್ದಾಗ ಅಥವಾ ಯಾವುದಾರೂ ಸಂಕಷ್ಟಗಳು ಇದ್ದಾಗ ಚಿನ್ನದ ದರಗಳು ಮೀರಿವೆ. ಕೋವಿಡ್ ಮೂರನೇ ಅಲೆಯ ಮುನ್ಸೂಚನೆ ಬೆನ್ನಲ್ಲೇ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಚಿನ್ನದ ಏರಿಕೆಗೆ, ನಂತರ ಇಳಿಕೆಗೆ ಹೆಚ್ಚಿನ ಕಾರಣಗಳಿವೆ. ಚಿನ್ನವು ಅಮೂಲ್ಯವಾದ ಲೋಹವಾಗಿದ್ದು ಹಣದುಬ್ಬರದ ವಿರುದ್ಧ ಬೇಲಿ ಎಂದು ಗುರುತಿಸಲಾಗಿದೆ. ಪ್ರಪಂಚದಾದ್ಯಂತ ಹೆಚ್ಚಿನ ಹಣದುಬ್ಬರದ ದರಗಳನ್ನು ಗಮನದಲ್ಲಿಟ್ಟುಕೊಂಡು, ಹಳದಿ ಲೋಹವು ಶೀಘ್ರದಲ್ಲೇ ಮತ್ತೆ ಏರಿಕೆಯಾಗಬಹುದು. ಚಿನ್ನದ ಭೌತಿಕ ಬೇಡಿಕೆಯ ಹೊರತಾಗಿ, ಎಸ್‌ಜಿಬಿ ಮತ್ತು ಇಟಿಎಫ್‌ಗಳ ಮೂಲಕ ಹೂಡಿಕೆಗಳು ಭರವಸೆಯ ವೀಕ್ಷಣೆಗಳನ್ನು ಹೊಂದಿವೆ. ಹಾಗಾಗಿ, ಈ ವರ್ಷ ಚಿನ್ನವು ಮಿನುಗುತ್ತಲೇ ಇದೆಯೋ ಇಲ್ಲವೋ ಎಂಬುದನ್ನು ಮಾತ್ರ ಸಮಯ ಹೇಳಲು ಸಾಧ್ಯವಾಗುತ್ತದೆ. ಹೂಡಿಕೆದಾರರು ಖಂಡಿತವಾಗಿಯೂ ದೀರ್ಘಾವಧಿಯ ಭರವಸೆಯಲ್ಲಿದ್ದಾರೆ.

English summary

Gold Rate Forecast: Will gold rate decrease in coming days 2021?

Gold Rate Forecast: Gold prices have been experiencing uncertainty in the MCX since last month. Will gold rate decrease in coming days 2021?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X