For Quick Alerts
ALLOW NOTIFICATIONS  
For Daily Alerts

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

|

ಭಾರತದ ಪ್ರಮುಖ ಖಾಸಗಿ ವಲಯದ ಸಾಲದಾತರಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ದೇಶೀಯ/ ಎನ್‌ಆರ್‌ಒ/ ಎನ್‌ಆರ್‌ಇ ಫಿಕ್ಸಿಡ್‌ ಡೆಪಾಸಿಟ್‌ ಹಾಗೂ ಆರ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಅನ್ವಯವಾಗುವ ಹೊಸ ಬಡ್ಡಿ ದರಗಳು ಡಿಸೆಂಬರ್ 1, 2021 ರಿಂದ ಜಾರಿಗೆ ಬರುತ್ತವೆ.

 

ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಿರ ಠೇವಣಿಗಳ (ಎಫ್‌ಡಿ- ಫಿಕ್ಸಿ‌ಡ್‌ ಡೆಪಾಸಿಟ್‌) ಬಡ್ಡಿದರವನ್ನು ಅಧಿಕ ಮಾಡಿದೆ. ಈ ಹೊಸ ಬಡ್ಡಿ ದರವು ಡಿಸೆಂಬರ್ 1 ರಿಂದ ಅಂದರೆ ಬುಧವಾರದಿಂದಲೇ ಜಾರಿಗೆ ಬಂದಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳು ಮತ್ತು 10 ವರ್ಷಗಳ ನಡುವಿನ ಅವಧಿಯ ಠೇವಣಿಗಳ ಮೇಲೆ ಶೇಕಡ 2.50 ರಿಂದ ಶೇಕಡ 5.50 ರವರಗೆ ಬಡ್ಡಿಯನ್ನು ನೀಡುತ್ತದೆ. ಈ ದರಗಳು 21 ಮೇ 2021 ರಿಂದ ಜಾರಿಗೆ ಬರುತ್ತವೆ.

ಚಿನ್ನದ ಬೆಲೆ ಇಳಿಕೆ: ಡಿಸೆಂಬರ್ 03ರ ದರ ತಿಳಿದುಕೊಳ್ಳಿ

HDFC ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್‌ ಆಗುವ ಎಫ್‌ಡಿಗಳ ಮೇಲೆ ಶೇಕಡ 3 ರಿಂದ ಶೇಕಡ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಎಚ್‌ಡಿಎಫ್‌ಸಿಯ ನೂತನ ಬಡ್ಡಿದರವನ್ನು ಈ ಕೆಳಗೆ ನೀಡಲಾಗಿದೆ. ಮುಂದೆ ಓದಿ.

ಎಚ್‌ಡಿಎಫ್‌ಸಿ ಎಫ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

ಎಚ್‌ಡಿಎಫ್‌ಸಿ ಎಫ್‌ಡಿ ಬಡ್ಡಿದರ

* 7 - 14 ದಿನಗಳು: ಶೇಕಡ 2.50 ಬಡ್ಡಿದರ
* 15 - 29 ದಿನಗಳು: ಶೇಕಡ 2.50 ಬಡ್ಡಿದರ
* 30 - 45 ದಿನಗಳು: ಶೇಕಡ 3.00 ಬಡ್ಡಿದರ
* 46 - 60 ದಿನಗಳು: ಶೇಕಡ 3.00 ಬಡ್ಡಿದರ
* 61 - 90 ದಿನಗಳು: ಶೇಕಡ 3.00 ಬಡ್ಡಿದರ
* 91 ದಿನದಿಂದ - 6 ತಿಂಗಳುಗಳು: ಶೇಕಡ 3.50 ಬಡ್ಡಿದರ
* 6 ತಿಂಗಳು ಒಂದು ದಿನದಿಂದ 9 ತಿಂಗಳುಗಳು: ಶೇಕಡ 4.40 ಬಡ್ಡಿದರ
* 9 ತಿಂಗಳು ಒಂದು ದಿನದಿಂದ ಒಂದು ವರ್ಷ: ಶೇಕಡ 4.40 ಬಡ್ಡಿದರ
* ಒಂದು ವರ್ಷ ಒಂದು ದಿನದಿಂದ ಎರಡು ವರ್ಷ: ಶೇಕಡ 5.00 ಬಡ್ಡಿದರ
* ಎರಡು ವರ್ಷ ಒಂದು ದಿನದಿಂದ ಮೂರು ವರ್ಷ: ಶೇಕಡ 5.15 ಬಡ್ಡಿದರ
* ಮೂರು ವರ್ಷ ಒಂದು ದಿನದಿಂದ ಐದು ವರ್ಷ: ಶೇಕಡ 5.35 ಬಡ್ಡಿದರ
* ಐದು ವರ್ಷ ಒಂದು ದಿನದಿಂದ ಹತ್ತು ವರ್ಷ: ಶೇಕಡ 5.50 ಬಡ್ಡಿದರ

 

ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಎಫ್‌ಡಿ ಬಡ್ಡಿದರ

ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್‌ ಆಗುವ ಎಫ್‌ಡಿಗಳ ಮೇಲೆ ಶೇಕಡ 3 ರಿಂದ ಶೇಕಡ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. 18ನೇ ಮೇ 20 ರಿಂದ 31ನೇ ಮಾರ್ಚ್ 22 ರವರೆಗಿನ ಒಪ್ಪಂದದ ಅವಧಿಯಲ್ಲಿ 5 ವರ್ಷ 1 ದಿನದಿಂದ 10 ವರ್ಷಗಳ ಅವಧಿಗೆ 5 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿ ನೋಂದಾಯಿಸಲು ಬಯಸುವ ಹಿರಿಯ ನಾಗರಿಕರು ಶೇಕಡ 0.25 ರಷ್ಟು ಹೆಚ್ಚುವರಿ ಪ್ರೀಮಿಯಂ ಅನ್ನು ಪಡೆಯುತ್ತಾರೆ. ಪ್ರಸ್ತುತ ಪ್ರೀಮಿಯಂ ಶೇಕಡ 0.50 ಆಗಿದೆ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ, ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಸ್ತುತ ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ನೀಡುತ್ತಿದೆ. ಈ ಬಡ್ಡಿದರದ ವಿವರ ಈ ಕೆಳಗೆ ಇದೆ.

* 7 - 14 ದಿನಗಳು: ಶೇಕಡ 3.00 ಬಡ್ಡಿದರ
* 15 - 29 ದಿನಗಳು: ಶೇಕಡ 3.00 ಬಡ್ಡಿದರ
* 30 - 45 ದಿನಗಳು: ಶೇಕಡ 3.50 ಬಡ್ಡಿದರ
* 46 - 60 ದಿನಗಳು: ಶೇಕಡ 3.50 ಬಡ್ಡಿದರ
* 61 - 90 ದಿನಗಳು: ಶೇಕಡ 3.50 ಬಡ್ಡಿದರ
* 91 ದಿನದಿಂದ - 6 ತಿಂಗಳುಗಳು: ಶೇಕಡ 4.00 ಬಡ್ಡಿದರ
* 6 ತಿಂಗಳು ಒಂದು ದಿನದಿಂದ 9 ತಿಂಗಳುಗಳು: ಶೇಕಡ 4.90 ಬಡ್ಡಿದರ
* 9 ತಿಂಗಳು ಒಂದು ದಿನದಿಂದ ಒಂದು ವರ್ಷದ ಒಳಗೆ: ಶೇಕಡ 4.90 ಬಡ್ಡಿದರ
* ಒಂದು ವರ್ಷ: ಶೇಕಡ 5.40 ಬಡ್ಡಿದರ
* ಒಂದು ವರ್ಷ ಒಂದು ದಿನದಿಂದ ಎರಡು ವರ್ಷ: ಶೇಕಡ 550 ಬಡ್ಡಿದರ
* ಎರಡು ವರ್ಷ ಒಂದು ದಿನದಿಂದ ಮೂರು ವರ್ಷ: ಶೇಕಡ 5.65 ಬಡ್ಡಿದರ
* ಮೂರು ವರ್ಷ ಒಂದು ದಿನದಿಂದ ಐದು ವರ್ಷ: ಶೇಕಡ 5.85 ಬಡ್ಡಿದರ
* ಐದು ವರ್ಷ ಒಂದು ದಿನದಿಂದ ಹತ್ತು ವರ್ಷ: ಶೇಕಡ 6.25 ಬಡ್ಡಿದರ

ಎಚ್‌ಡಿಎಫ್‌ಸಿ ಆರ್‌ಡಿ

ಎಚ್‌ಡಿಎಫ್‌ಸಿ ಬ್ಯಾಂಕ್ ನಿವಾಸಿ / ಎನ್‌ಆರ್‌ಒ / ಎನ್‌ಆರ್‌ಇಗಳಿಗೆ ಆರ್‌ಡಿಯ ಬಡ್ಡಿದರವನ್ನು ಕೂಡಾ ನವೀಕರಣ ಮಾಡಿದೆ. ಈ ಮಾಹಿತಿ ಈ ಕೆಳಗೆ ಇದೆ.

ಆರು ತಿಂಗಳು: ಬಡ್ಡಿದರ 3.50, ಹಿರಿಯ ನಾಗರಿಕರಿಗೆ 4.00, ಅವಧಿ: ಆಗಸ್ಟ್‌ 25, 2020
ಒಂಬತ್ತು ತಿಂಗಳು: ಬಡ್ಡಿದರ 4.40, ಹಿರಿಯ ನಾಗರಿಕರಿಗೆ 4.90 ಅವಧಿ: ಆಗಸ್ಟ್‌ 25, 2020
ಹನ್ನೆರಡು ತಿಂಗಳು: ಬಡ್ಡಿದರ 4.90, ಹಿರಿಯ ನಾಗರಿಕರಿಗೆ 5.40, ಎನ್‌ಆರ್‌ಐಗಳಿಗೆ 4.90 ಅವಧಿ: ಅಕ್ಟೋಬರ್‌ 15, 2020
ಹದಿನೈದು ತಿಂಗಳು: ಬಡ್ಡಿದರ 5.00, ಹಿರಿಯ ನಾಗರಿಕರಿಗೆ 5.50, ಎನ್‌ಆರ್‌ಐಗಳಿಗೆ 5.00, ಅವಧಿ: ಡಿಸೆಂಬರ್‌ 01, 2021
24 ತಿಂಗಳು: ಬಡ್ಡಿದರ 5.00, ಹಿರಿಯ ನಾಗರಿಕರಿಗೆ 5.50, ಎನ್‌ಆರ್‌ಐಗಳಿಗೆ 5.00, ಅವಧಿ: ಡಿಸೆಂಬರ್‌ 01, 2021
27 ತಿಂಗಳು: ಬಡ್ಡಿದರ 5.15, ಹಿರಿಯ ನಾಗರಿಕರಿಗೆ 5.65, ಎನ್‌ಆರ್‌ಐಗಳಿಗೆ 5.15, ಅವಧಿ: ಆಗಸ್ಟ್‌ 25, 2020
36 ತಿಂಗಳು: ಬಡ್ಡಿದರ 5.15, ಹಿರಿಯ ನಾಗರಿಕರಿಗೆ 5.65, ಎನ್‌ಆರ್‌ಐಗಳಿಗೆ 5.15, ಅವಧಿ: ಆಗಸ್ಟ್‌ 25, 2020
39 ತಿಂಗಳು: ಬಡ್ಡಿದರ 5.35, ಹಿರಿಯ ನಾಗರಿಕರಿಗೆ 5.85, ಎನ್‌ಆರ್‌ಐಗಳಿಗೆ 5.35, ಅವಧಿ: ಡಿಸೆಂಬರ್‌ 01, 2021
48 ತಿಂಗಳು: ಬಡ್ಡಿದರ 5.35, ಹಿರಿಯ ನಾಗರಿಕರಿಗೆ 5.85, ಎನ್‌ಆರ್‌ಐಗಳಿಗೆ 5.35, ಅವಧಿ: ಡಿಸೆಂಬರ್‌ 01, 2021
60 ತಿಂಗಳು: ಬಡ್ಡಿದರ 5.35, ಹಿರಿಯ ನಾಗರಿಕರಿಗೆ 5.85, ಎನ್‌ಆರ್‌ಐಗಳಿಗೆ 5.35, ಅವಧಿ: ಡಿಸೆಂಬರ್‌ 01, 2021
90 ತಿಂಗಳು: ಬಡ್ಡಿದರ 5.50, ಹಿರಿಯ ನಾಗರಿಕರಿಗೆ 6.00, ಎನ್‌ಆರ್‌ಐಗಳಿಗೆ 5.50, ಅವಧಿ: ಆಗಸ್ಟ್‌ 25, 2020
120 ತಿಂಗಳು: ಬಡ್ಡಿದರ 5.50, ಹಿರಿಯ ನಾಗರಿಕರಿಗೆ 6.00, ಎನ್‌ಆರ್‌ಐಗಳಿಗೆ 5.50, ಅವಧಿ: ಆಗಸ್ಟ್‌ 25, 2020

English summary

HDFC Bank Revises Interest Rates On FD & RD: Check Latest Rates Here

HDFC Bank Revises Interest Rates On FD & RD: Check Latest Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X