For Quick Alerts
ALLOW NOTIFICATIONS  
For Daily Alerts

ಈ ದಿನದಿಂದ ಎಚ್‌ಡಿಎಫ್‌ಸಿ ವಹಿವಾಟು ಶುಲ್ಕ ಬದಲಾವಣೆ: ಎಷ್ಟು ಪರಿಶೀಲಿಸಿ

|

ಭಾರತದ ಪ್ರಮುಖ ಖಾಸಗಿ ವಲಯದ ಸಾಲದಾತ ಬ್ಯಾಂಕುಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಹಣಕಾಸಿನ ವಹಿವಾಟು ಶುಲ್ಕವನ್ನು ಬದಲಾಯಿಸಲಿದೆ. ದೇಶದಾದ್ಯಂತ 2,917 ನಗರಗಳು/ಪಟ್ಟಣಗಳಲ್ಲಿ 5,653 ಶಾಖೆಗಳು ಮತ್ತು 16,291 ATM ಗಳ ಬ್ಯಾಂಕಿಂಗ್ ನೆಟ್‌ವರ್ಕ್ ಹೊಂದಿರುವ ಈ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೆಬ್‌ಸೈಟ್‌ ಪ್ರಕಾರ ಹೊಸ ಶುಲ್ಕಗಳು 1ನೇ ಜನವರಿ 2022 ರಿಂದ ಅನ್ವಯವಾಗುತ್ತವೆ.

 

ಎಚ್‌ಡಿಎಫ್‌ಸಿ ಬ್ಯಾಂಕ್‌ ಪ್ರಸ್ತುತ ತಿಂಗಳಿಗೆ ಐದು ವಹಿವಾಟನ್ನು ಎಟಿಎಂ ಮೂಲಕ ಉಚಿತವಾಗಿ ಮಾಡಲು ಅವಕಾಶ ನೀಡುತ್ತದೆ. ಎಲ್ಲಾ ನಗರಗಳಲ್ಲಿ ಐದು ಎಟಿಎಂ ವಿತ್‌ಡ್ರಾಗೆ ಉಚಿತ ಸೇವೆ ಇದೆ. ಅದಕ್ಕಿಂತ ಅಧಿಕ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ. ಇನ್ನು ಹಣಕಾಸೇತರ ವಹಿವಾಟಿಗೆ ಎಚ್‌ಡಿಎಫ್‌ಸಿ ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ.

ಮುಂದಿನ ತಿಂಗಳು ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕ ದುಬಾರಿ: ಹೊಸ ದರ ಪರಿಶೀಲಿಸಿ

ಮುಂಬೈ, ನವದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಟಾಪ್ 6 ನಗರಗಳಲ್ಲಿ ಬ್ಯಾಂಕ್ ತಿಂಗಳಿಗೆ ಮೊದಲ 3 ವಹಿವಾಟುಗಳನ್ನು ಉಚಿತವಾಗಿ ನೀಡುತ್ತದೆ. ಇದರಲ್ಲಿ ಹಣಕಾಸು ಹಾಗೂ ಹಣಕಾಸೇತರ ವಹಿವಾಟು ಸೇರಿದೆ. ಇತರ ಬ್ಯಾಂಕ್ ಎಟಿಎಂಗಳಲ್ಲಿ ತಿಂಗಳಿಗೆ ಮೊದಲ 5 ವಹಿವಾಟುಗಳನ್ನು ಉಚಿತವಾಗಿ ನಡೆಸಲು ಎಚ್‌ಡಿಎಫ್‌ಸಿ ಅವಕಾಶ ನೀಡುತ್ತದೆ. ನಗರವಾಗಲಿ ಯಾವುದೇ ಪ್ರದೇಶವಾಗಲಿ ಬೇರೆ ಬ್ಯಾಂಕಿನ ಎಟಿಎಂನಿಂದ ತಿಂಗಳಿಗೆ ಐದು ಬಾರಿ ಉಚಿತವಾಗಿ ಹಣ ವಿತ್‌ಡ್ರಾ ಮಾಡಬಹುದಾಗಿದೆ.

 ಈ ದಿನದಿಂದ ಎಚ್‌ಡಿಎಫ್‌ಸಿ ವಹಿವಾಟು ಶುಲ್ಕ ಬದಲಾವಣೆ: ಪರಿಶೀಲಿಸಿ

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಉಚಿತ ಮಿತಿಗಿಂತ ಹೆಚ್ಚಿನ ವಹಿವಾಟುಗಳಿಗೆ ಈ ಕೆಳಗಿನಂತೆ ಶುಲ್ಕ ವಿಧಿಸಲಾಗುತ್ತದೆ, ಮುಂದೆ ಓದಿ.

ಎಚ್‌ಡಿಎಫ್‌ಸಿ ವಹಿವಾಟಿನ ಶುಲ್ಕ

* ನಗದು ವಿತ್‌ಡ್ರಾ ಮಾಡುವುದಕ್ಕೆ ಪ್ರಸ್ತುತ ಪ್ರತಿ ವಹಿವಾಟಿಗೆ 20 ಜೊತೆಗೆ ತೆರಿಗೆಗಳು ಇದೆ. ಇನ್ನು ಮುಂದೆ ಅಂದರೆ ಜನವರಿ 1 ರಿಂದ ಪ್ರತಿ ವಹಿವಾಟಿಗೆ ರೂ 21 ಹಾಗೂ ಜಿಎಸ್‌ಟಿ ಇರಲಿದೆ.
* ಹಣಕಾಸಿನೇತರ ವಹಿವಾಟು: ಎಚ್‌ಡಿಎಫ್‌ಸಿ ಅಲ್ಲದ ಬ್ಯಾಂಕ್ ಎಟಿಎಂಗಳಲ್ಲಿ ಪ್ರತಿ ವಹಿವಾಟಿಗೆ 8.5 ರೂಪಾಗಿ ಹಾಗೂ ಜೊತೆಗೆ ಜಿಎಸ್‌ಟಿ ಅನ್ವಯ ಆಗಲಿದೆ.

 

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ: ನೂತನ ಬಡ್ಡಿದರವೆಷ್ಟು?

ಎಚ್‌ಡಿಎಫ್‌ಸಿ ಎಫ್‌ಡಿ, ಆರ್‌ಡಿ ಬಡ್ಡಿದರ ಪರಿಷ್ಕರಣೆ

ಇತ್ತೀಚೆಗೆ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ದೇಶೀಯ/ ಎನ್‌ಆರ್‌ಒ/ ಎನ್‌ಆರ್‌ಇ ಫಿಕ್ಸಿಡ್‌ ಡೆಪಾಸಿಟ್‌ ಹಾಗೂ ಆರ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಅನ್ವಯವಾಗುವ ಹೊಸ ಬಡ್ಡಿ ದರಗಳು ಡಿಸೆಂಬರ್ 1, 2021 ರಿಂದ ಜಾರಿಗೆ ಬಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಥಿರ ಠೇವಣಿಗಳ (ಎಫ್‌ಡಿ- ಫಿಕ್ಸಿ‌ಡ್‌ ಡೆಪಾಸಿಟ್‌) ಬಡ್ಡಿದರವನ್ನು ಅಧಿಕ ಮಾಡಿದೆ. ಈ ಹೊಸ ಬಡ್ಡಿ ದರವು ಡಿಸೆಂಬರ್ 1 ರಿಂದ ಅಂದರೆ ಬುಧವಾರದಿಂದಲೇ ಜಾರಿಗೆ ಬಂದಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ 7 ದಿನಗಳು ಮತ್ತು 10 ವರ್ಷಗಳ ನಡುವಿನ ಅವಧಿಯ ಠೇವಣಿಗಳ ಮೇಲೆ ಶೇಕಡ 2.50 ರಿಂದ ಶೇಕಡ 5.50 ರವರಗೆ ಬಡ್ಡಿಯನ್ನು ನೀಡುತ್ತದೆ. ಈ ದರಗಳು 21 ಮೇ 2021 ರಿಂದ ಜಾರಿಗೆ ಬರುತ್ತವೆ. HDFC ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್‌ ಆಗುವ ಎಫ್‌ಡಿಗಳ ಮೇಲೆ ಶೇಕಡ 3 ರಿಂದ ಶೇಕಡ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ.

ಮುಂಬರುವ ತಿಂಗಳಿನಿಂದ ಅಂದರೆ ಬರುವ ವರ್ಷದಿಂದ ಎಟಿಎಂನ ವಿತ್‌ಡ್ರಾ ಶುಲ್ಕವು ದುಬಾರಿ ಆಗಲಿದೆ. 2022 ರಿಂದ ಎಟಿಎಂಗಳಿಂದ ನಗದು ಹಿಂಪಡೆಯುವುದು ಹೆಚ್ಚು ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ ಎಟಿಎಂ ಬಳಕೆದಾರರು ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ಮೀರಿದರೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗು‌ತ್ತದೆ. ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸು ವಹಿವಾಟುಗಳಿಗೆ ಶುಲ್ಕ 21 ರೂ ಮತ್ತು ಜಿಎಸ್‌ಟಿ ಇರಲಿದೆ ಎಂದು ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಈ ಪರಿಷ್ಕೃತ ದರಗಳು ಜನವರಿ 1, 2022 ರಿಂದ ಜಾರಿಗೆ ಬರುತ್ತವೆ. ಈವರೆಗೆ ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಿದ ಗ್ರಾಹಕರು ರೂಪಾಯಿ 20 ಶುಲ್ಕವನ್ನು ಪಾವತಿ ಮಾಡಬೇಕಾಗಿತ್ತು. ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಿದ ಬಳಿಕ ಪ್ರತಿ ವಹಿವಾಟಿಗೆ ಇನ್ನು ಮುಂದೆ 21 ರೂ. ಜೊತೆ ಜಿಎಸ್‌ಟಿ ಕೂಡಾ ಪಾವತಿ ಮಾಡಬೇಕಾಗು‌ತ್ತದೆ.

English summary

HDFC Bank To Change Financial Transactions Fee On This Date

HDFC Bank To Change Financial Transactions Fee On This Date.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X