For Quick Alerts
ALLOW NOTIFICATIONS  
For Daily Alerts

ಮನೆ ನಿರ್ಮಾಣ, ಖರೀದಿ ಸಾಲದ ಬಗ್ಗೆ ಇರುವ 5 ಮಿಥ್ಯೆಗಳು; ಹಾಗಿದ್ದರೆ ಸತ್ಯ ಏನು?

|

"ಸಾಲ ಮಾಡಿಯಾದರೂ ತುಪ್ಪ ತಿನ್ನು" ಎಂದಿದ್ದಾನೆ ಚಾರ್ವಾಕ. ಸಾಲ ಮಾಡಿಯಾದರೂ ಸರಿ, ಸುಖವಾಗಿರಬೇಕು ಎಂಬುದು ಅದರರ್ಥ. ನೀವು ಎಂಥ ಸಾಲ ಮಾಡ್ತೀರಿ? ಪರ್ಸನಲ್ ಲೋನ್, ಗೋಲ್ಡ್ ಲೋನ್, ಅಡಮಾನ ಸಾಲ, ಕಾರು ಸಾಲ, ಗೃಹ ಸಾಲ.... ನಿಲ್ಲಿಸಿ. ಗೃಹ ಸಾಲ ಅಂದಾಕ್ಷಣ ಲಕ್ಷಗಟ್ಟಲೆ ಹಣ ಕಣ್ಣುಮುಂದೆ ಬರುತ್ತದೆ.

ಯಾರ್ಯಾರೋ ನೀಡಿದ ಸಲಹೆಗಳು, ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಮಿಥ್ಯೆಗಳು, ಆ ಬ್ಯಾಂಕ್ ಹಾಗೆ- ಈ ಬ್ಯಾಂಕ್ ನಲ್ಲಿ ಹೀಗೆ... ಅಂತೂ ನಾನಾ ಬಗೆಯ ಮಾತುಗಳು. ಮನೆ ನಿರ್ಮಾಣದ ಅಥವಾ ಮನೆ ಖರೀದಿ ಸಲುವಾಗಿ ಸಾಲ ಮಾಡುತ್ತಿರುವವರು ಕಡ್ಡಾಯವಾಗಿ ಕೆಲವು ವಿಚಾರ ತಿಳಿದಿರಬೇಕು. ಅದರಲ್ಲೂ ಮುಖ್ಯವಾಗಿ ಈ ಐದು ಮಿಥ್ಯೆಗಳನ್ನು ತಿಳಿದುಕೊಳ್ಳಿ.

ಮಿಥ್ಯೆ ಒಂದು: ಕಡಿಮೆ ಬಡ್ಡಿದರದ ಸಾಲವು ಅತ್ಯುತ್ತಮವಾದುದು
 

ಮಿಥ್ಯೆ ಒಂದು: ಕಡಿಮೆ ಬಡ್ಡಿದರದ ಸಾಲವು ಅತ್ಯುತ್ತಮವಾದುದು

ಎಲ್ಲರಿಗೂ ಕಡಿಮೆ ಬಡ್ಡಿ ದರದ ಗೃಹಸಾಲ ಪಡೆಯಬೇಕು ಎಂಬುದೇ ಇಚ್ಛೆ. ಆದರೆ ವಾಸ್ತವದಲ್ಲಿ ಅದು ಸಾಧ್ಯ ಇಲ್ಲ. ಸಾಲ ನೀಡುವವರು ಹಲವು ಅಂಶಗಳನ್ನು ಗಮನಿಸಿ, ಬಡ್ಡಿ ದರವನ್ನು ನಿರ್ಧರಿಸುತ್ತಾರೆ. ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್, ಆದಾಯ, ಸಾಲ ಮರುಪಾವತಿ ವಿಚಾರದಲ್ಲಿ ಅವರ ನಡವಳಿಕೆ ಮುಂತಾದವು ಮುಖ್ಯವಾಗುತ್ತದೆ. ಕಡಿಮೆ ಬಡ್ಡಿ ದರ ಅಂದಾಕ್ಷಣ ಆಕರ್ಷಕ ಎನಿಸಬಹುದು. ಅದರರ್ಥ ಏನೆಂದರೆ ಆರಂಭದಲ್ಲಿ ನಿಮ್ಮ ಡೌನ್ ಪೇಮೆಂಟ್- ಹೂಡಿಕೆ ತುಂಬ ಹೆಚ್ಚು ಬೇಕಾಗುತ್ತದೆ. ಆಸ್ತಿ ಮೌಲ್ಯವನ್ನು ಕಡಿಮೆ ಬೆಲೆಗೆ ಲೆಕ್ಕ ಹಾಕುವುದರಿಂದ ಎಂಬತ್ತು ಪರ್ಸೆಂಟ್ ನಷ್ಟು ಸಾಲ ಕೂಡ ನಿಮಗೆ ಸಿಗದಿರಬಹುದು.

ಮಿಥ್ಯೆ ಎರಡು: ಕಡಿಮೆ ಅವಧಿಯ ಸಾಲವನ್ನು ಆರಿಸಿಕೊಳ್ಳುವುದು ಅತ್ಯುತ್ತಮ

ಮಿಥ್ಯೆ ಎರಡು: ಕಡಿಮೆ ಅವಧಿಯ ಸಾಲವನ್ನು ಆರಿಸಿಕೊಳ್ಳುವುದು ಅತ್ಯುತ್ತಮ

ಗೃಹ ಸಾಲ ಇರುವುದೇ ದೀರ್ಘಾವಧಿಗೆ. ಸಾಲ ಪಡೆಯುವವರು ಇಪ್ಪತ್ತು ವರ್ಷಗಳ ಕಾಲ ಸಾಲ ತೀರಿಸುತ್ತಲೇ ಇರುತ್ತಾರೆ. ಮೊದಲ ಬಾರಿಗೆ ಸಾಲ ಪಡೆಯುವವರು ಕಡಿಮೆ ಅವಧಿಯದೇ ಉತ್ತಮ ಎಂದು ಭಾವಿಸುತ್ತಾರೆ. ಕಡಿಮೆ ಅವಧಿಯ ಸಾಲಕ್ಕೆ ಹೆಚ್ಚಿನ ಇಎಂಐ ಪಾವತಿಸಬೇಕಾಗುತ್ತದೆ. ಇದರಿಂದ ಸಹಜವಾಗಿಯೇ ತಿಂಗಳ ಬಜೆಟ್ ಮೇಲೆ ಪರಿಣಾಮ ಆಗುತ್ತದೆ. ಹಣಕಾಸಿನ ತುರ್ತಿಗೆ ಏನೂ ಉಳಿತಾಯ ಮಾಡಲು ಸಾಧ್ಯವಾಗಲ್ಲ. ಆದ್ದರಿಂದ ಕಡಿಮೆ ಅವಧಿಯ ಸಾಲ ತೆಗೆದುಕೊಂಡರೆ ಶೀಘ್ರವಾಗಿ ಸಾಲದಿಂದ ಬಿಡುಗಡೆ ಪಡೆಯಬಹುದು; ಆದರೆ ಅದು ಸೂಕ್ತ ಆಯ್ಕೆ ಅಲ್ಲ. ಆ ಕಾರಣಕ್ಕೆ ಮಧ್ಯಮ ಅವಧಿಯ, ಮಧ್ಯಮ ಪ್ರಮಾಣದ ಬಡ್ಡಿ ದರದ ಹಾಗೂ ಕೈಗೆಟುಕುವ ಇಎಂಐ ಪಾವತಿಯನ್ನು ಆರಿಸಿಕೊಳ್ಳುವುದು ಅತ್ಯುತ್ತಮ.

ಮಿಥ್ಯೆ ಮೂರು: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಅರ್ಜಿ ತಿರಸ್ಕೃತ ಆಗುತ್ತದೆ

ಮಿಥ್ಯೆ ಮೂರು: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಅರ್ಜಿ ತಿರಸ್ಕೃತ ಆಗುತ್ತದೆ

ಗೃಹ ಸಾಲ ಪಡೆಯುವ ಸಂದರ್ಭದಲ್ಲಿ ನಿಮ್ಮ ಬಳಿ ಕ್ರೆಡಿಟ್ ಸ್ಕೋರ್ ಬಗ್ಗೆ ವಿಚಾರಿಸಲಾಗುತ್ತದೆ. ಹಲವರ ನಂಬಿಕೆ ಏನೆಂದರೆ, ಒಂಬೈನೂರಕ್ಕೆ ಏಳುನೂರಾ ಐವತ್ತಕ್ಕಿಂತ ಕಡಿಮೆ ಸ್ಕೋರ್ ಇದ್ದರೆ ತಾನಾಗಿಯೇ ಅರ್ಜಿ ತಿರಸ್ಕೃತವಾಗುತ್ತದೆ ಅಂದುಕೊಂಡಿರುತ್ತಾರೆ. ಆ ಕಾರಣಕ್ಕೆ ಲೋನ್ ಗೆ ಅಪ್ಲೈ ಕೂಡ ಮಾಡಲ್ಲ. ಬ್ಯಾಂಕ್ ಗಳು ಕ್ರೆಡಿಟ್ ಸ್ಕೋರ್ ಅನ್ನು ಕಠಿಣವಾಗಿ ಗಮನಿಸುವುದು ಹೌದು. ಆದರೆ ಹೌಸಿಂಗ್ ಫೈನಾನ್ಸ್ ಕಂಪೆನಿಗಳಲ್ಲಿ ಸಾಲಕ್ಕೆ ಪ್ರಯತ್ನಿಸಬಹುದು. ಈ ಹೌಸಿಂಗ್ ಫೈನಾನ್ಸ್ ಕಂಪೆನಿಯವರು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ವಿನಾಯಿತಿ ನೀಡುತ್ತಾರೆ. ಆದರೆ ಇವರ ಬಳಿ ಬಡ್ಡಿ ದರ ಹೆಚ್ಚಿರುತ್ತದೆ.

ಮಿಥ್ಯೆ ನಾಲ್ಕು: ಬದಲಾಗುವ ಬಡ್ಡಿದರಕ್ಕಿಂತ ನಿಶ್ಚಿತ ಬಡ್ಡಿ ದರ ಉತ್ತಮ
 

ಮಿಥ್ಯೆ ನಾಲ್ಕು: ಬದಲಾಗುವ ಬಡ್ಡಿದರಕ್ಕಿಂತ ನಿಶ್ಚಿತ ಬಡ್ಡಿ ದರ ಉತ್ತಮ

ಸಾಲ ಪಡೆಯುವವರ ಪೈಕಿ ಬಹುತೇಕರು ಬದಲಾಗುವ ಬಡ್ಡಿ ದರಕ್ಕಿಂತ ನಿಶ್ಚಿತ ಬಡ್ಡಿ ದರವನ್ನೇ ಆರಿಸಿಕೊಳ್ಳುತ್ತಾರೆ. ಏಕೆಂದರೆ ಮಾರುಕಟ್ಟೆ ಹೀಗೇ ಅಂತ ಹೇಳಲು ಸಾಧ್ಯವಿಲ್ಲ ಎಂಬುದು ಅವರ ಮಾತು. ಸಾಮಾನ್ಯವಾಗಿ ಫಿಕ್ಸೆಡ್ ಬಡ್ಡಿ ದರಕ್ಕಿಂತ ಫ್ಲೋಟಿಂಗ್ ದರವು ಒಂದೂವರೆಯಿಂದ ಎರಡು ಪರ್ಸೆಂಟ್ ಕಡಿಮೆ ಇರುತ್ತದೆ. ಅದರ ಪರಿಣಾಮವಾಗಿ ಒಟ್ಟಾರೆ ಸಾಲ ಮರುಪಾವತಿ ಅವಧಿಯಲ್ಲಿ ದೊಡ್ಡ ಮಟ್ಟದ ಉಳಿತಾಯ ಆಗುತ್ತದೆ. ಒಂದು ವೇಳೆ ಬಡ್ಡಿ ದರದಲ್ಲಿ ಏರಿಳಿತವಾದರೂ ಅದರ ಪರಿಣಾಮ ದೀರ್ಘಾವಧಿಯದ್ದಾಗಿರುವುದಿಲ್ಲ. ಬದಲಾಗುವ ಬಡ್ಡಿ ದರ ಆರಿಸಿಕೊಂಡರೆ ನಿಶ್ಚಿತ ಬಡ್ಡಿ ದರಕ್ಕಿಂತ ಹೆಚ್ಚು ಉಳಿತಾಯ ಮಾಡಬಹುದು.

ಮಿಥ್ಯೆ ಐದು: ಅವಧಿಗೆ ಮುನ್ನವೇ ಸಾಲ ಮರುಪಾವತಿ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ

ಮಿಥ್ಯೆ ಐದು: ಅವಧಿಗೆ ಮುನ್ನವೇ ಸಾಲ ಮರುಪಾವತಿ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ

ಈ ಹಿಂದೆ ಗೃಹ ಸಾಲವನ್ನು ಮುಂಚಿತವಾಗಿಯೇ ಮರು ಪಾವತಿಸಿದರೆ ದಂಡ ವಿಧಿಸಲಾಗುತ್ತಿತ್ತು. ಆದರೆ ಈಗ ಬದಲಾವಣೆ ಆಗಿದೆ. ಬದಲಾಗುವ ಬಡ್ಡಿ ದರಕ್ಕೆ ಪಡೆದ ಸಾಲವನ್ನು ಅವಧಿಗೆ ಪೂರ್ವವಾಗಿ ಮರುಪಾವತಿಸಿದರೆ ದಂಡ ಹಾಕುವುದಕ್ಕೆ ಬ್ಯಾಂಕ್ ಗಳು ಮತ್ತು ಹೌಸಿಂಗ್ ಫೈನಾನ್ಸ್ ಕಂಪೆನಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಬಂಧನೆಗಳನ್ನು ವಿಧಿಸಿದೆ. ನಿರ್ದಿಷ್ಟ ಅವಧಿ (ಮಾಮೂಲಿಯಾಗಿ ಐದು ವರ್ಷ) ನಂತರ ಅವಧಿ ಪೂರ್ವ ಮರುಪಾವತಿ ಮಾಡಿದರೆ ಯಾವುದೇ ಶುಲ್ಕ ಸಂಗ್ರಹಿಸುವುದಿಲ್ಲ. ಆದ್ದರಿಂದ ದಂಡ ಶುಲ್ಕದ ಬಗ್ಗೆ ತೀರಾ ಆಲೋಚನೆ ಮಾಡುವ ಅಗತ್ಯ ಇಲ್ಲದೆ ಅವಧಿಪೂರ್ವವಾಗಿಯೇ ಸಾಲ ಮರುಪಾವತಿಸಬಹುದು.

English summary

Housing Loan 5 Myths And Truths

Here is the explainer of housing loan 5 myths and truths.
Story first published: Wednesday, January 8, 2020, 14:07 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more