For Quick Alerts
ALLOW NOTIFICATIONS  
For Daily Alerts

2009ರಿಂದ ಈಚೆಗೆ ಚಿನ್ನದ ಟ್ರೆಂಡ್ ಹೇಗಿದೆ? ಏರಿಕೆಯೋ ಇಳಿಕೆಯೋ ಇಲ್ಲಿದೆ ಲೆಕ್ಕಾಚಾರ

|

ಹಣ ಹೂಡಿಕೆಗೆ ಚಿನ್ನ ಸೂಕ್ತವೇ ಎಂಬುದು ಹಲವರು ಪ್ರಶ್ನೆ. ಅದರಲ್ಲೂ ಮಕ್ಕಳ ಮದುವೆಗೆ ಒಡವೆ ಮಾಡಿಸಿಟ್ಟುಕೊಳ್ಳುವವರು ಹೆಚ್ಚು. ಇಂಥ ಸನ್ನಿವೇಶದಲ್ಲಿ ಒಡವೆ ಮಾಡಿಸಿದುವುದು ಉತ್ತಮವೊ ಅಥವಾ ಹಣ ಇರುವಾಗ ಮ್ಯೂಚುವಲ್ ಫಂಡ್, ಷೇರು, ಎಫ್ ಡಿ ಅಥವಾ ಇನ್ಯಾವುದಾದರೂ ಹೂಡಿಕೆ ಮಾಡಿ, ಅಗತ್ಯ ಬಂದಾಗ ಆ ಹಣ ತೆಗೆದು, ಚಿನ್ನಾಭರಣ ಮಾಡಿಸುವುದು ಉತ್ತಮವಾ?

ಕಳೆದ ಹತ್ತು ವರ್ಷಗಳ, ಅಂದರೆ 2009ರ ಈಚೆಗೆ ಚಿನ್ನದ ದರದ ಟ್ರೆಂಡ್ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ. ಇಲ್ಲಿರುವ ಅಂಕಿ- ಅಂಶದ ಮೂಲಕ ನೀವೇ ನಿರ್ಧರಿಸಬಹುದು ಯಾವುದು ಸೂಕ್ತ?

2009ರಲ್ಲಿ 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 14,500 ರುಪಾಯಿ ಇತ್ತು. ಅಂದರೆ ಪ್ರತಿ ಗ್ರಾಮ್ ಗೆ 1,450 ರುಪಾಯಿ. ಅದರ ಮರು ವರ್ಷ- 2010ರಲ್ಲಿ ದರವು 18,500 ರುಪಾಯಿಗೆ ಜಿಗಿಯಿತು. ಅಂದರೆ ಹತ್ತು ಗ್ರಾಮ್ ಗೆ 4,500 ರುಪಾಯಿ ಏರಿಕೆ. ಪ್ರತಿ ಗ್ರಾಮ್ ಗೆ 450 ರುಪಾಯಿ ಹೆಚ್ಚಳ.

2009ರಿಂದ ಈಚೆಗೆ ಚಿನ್ನದ ಟ್ರೆಂಡ್ ಹೇಗಿದೆ? ಏರಿಕೆಯೋ ಇಳಿಕೆಯೋ?

 

2011ರಲ್ಲಿ ಚಿನ್ನದ ದರ ಪ್ರತಿ ಹತ್ತು ಗ್ರಾಮ್ ಗೆ 26,400 ರುಪಾಯಿ ತಲುಪಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 7,900 ರುಪಾಯಿ ಹೆಚ್ಚಳ. ಒಂದೇ ವರ್ಷದಲ್ಲಿ ನಲವತ್ತು ಪರ್ಸೆಂಟ್ ಗೂ ಹೆಚ್ಚಳ ಆದಂತಾಯಿತು. ಅದರ ಮರು ವರ್ಷ 2012ರಲ್ಲಿ 31,050 ರುಪಾಯಿ ತಲುಪಿತು.

ಅಲ್ಲಿಂದ ಆಚೆಗೆ 2013, 2014 ಹಾಗೂ 2015ರಲ್ಲಿ ನಿರಂತರ ಇಳಿಕೆ ಹಾದಿಯನ್ನು ಹಿಡಿದು, ಇಪ್ಪತ್ನಾಲ್ಕು ಕ್ಯಾರೆಟ್ ನ ಪ್ರತಿ ಹತ್ತು ಗ್ರಾಮ್ ಚಿನ್ನದ ದರ 26,343 ರುಪಾಯಿ ಮುಟ್ಟುವ ಮೂಲಕ 2011ನೇ ಇಸವಿಯಲ್ಲಿ ಇದ್ದ ದರಕ್ಕೆ ತಲುಪಿತು. 2016ರಲ್ಲಿ 28,633.50ಗೆ ಏರಿತು. ಏರಿಕೆ ಪ್ರಮಾಣ 2,300 ರುಪಾಯಿ.

2017ರಲ್ಲಿ 10 ಗ್ರಾಮ್ ಚಿನ್ನದ ಬೆಲೆ 29,667.50ಗೆ ಏರಿತು. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 1,000 ರುಪಾಯಿಗಿಂತ ಸ್ವಲ್ಪ ಜಾಸ್ತಿ. 2018ರಲ್ಲಿ 31,438 ತಲುಪಿದ ಚಿನ್ನ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಏರಿಕೆ ಕಂಡಿದ್ದು 775 ರುಪಾಯಿ ಮಾತ್ರ. ಈ ವರ್ಷ ಚಿನ್ನವು ಸಾರ್ವಕಾಲಿಕ ದಾಖಲೆ 39,885 ರುಪಾಯಿ ಮುಟ್ಟಿ, ಎಂಟು ಸಾವಿರದ ನಾನೂರಾ ಐವತ್ತು ರುಪಾಯಿ ಏರಿಕೆ ಕಂಡಿತ್ತು.

ಮ್ಯೂಚುವಲ್ ಫಂಡ್, ಈಕ್ವಿಟಿ ಷೇರು, ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಪ್ರತಿಫಲವನ್ನು ಗಮನಿಸಿದರೆ ಚಿನ್ನದ ಹೂಡಿಕೆ ಅಪಾಯಕಾರಿಯಂತೆ ಎನಿಸುತ್ತದೆ. ಆದರೆ ತಜ್ಞರ ಸಲಹೆಯಂತೆ ಎಚ್ಚರಿಕೆ ವ್ಯವಹಾರ ಮಾಡುವುದು ಸೂಕ್ತ ಎಂಬುದು ಗಮನಕ್ಕೆ ಬರುತ್ತದೆ.

English summary

How Is The Gold Trend For Investment; Here Is The 10 Years Data

2009-2019 gold price trend is here. On the basis of this one can decide whether gold is good for investment or not.
Story first published: Monday, November 25, 2019, 14:23 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more