For Quick Alerts
ALLOW NOTIFICATIONS  
For Daily Alerts

ಒಂದು ದಿನಕ್ಕೆ ನೂರಕ್ಕೂ ಹೆಚ್ಚು ಕಂಪೆನಿ ನಿಮ್ಮಿಂದ ಲಾಭ ಮಾಡುತ್ತಿವೆ ಗೊತ್ತೆ?

|

ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ನಮ್ಮ ಬದುಕು ಹೀಗಿರಲಿಲ್ಲ. ಅಲ್ಲೊಂದು- ಇಲ್ಲೊಂದು ಬ್ರ್ಯಾಂಡ್ ಇರುತ್ತಿತ್ತು. ಆದರೆ ಈಗ ಹಾಗಿಲ್ಲ ಪರಿಸ್ಥಿತಿ. ದೇವರ ಮುಂದೆ ಹಚ್ಚಿಡುವ ಊದಿನಕಡ್ಡಿಯಿಂದ ಶುರುವಾಗಿ ಒಂದು ದಿನದಲ್ಲಿ ನೂರಕ್ಕೂ ಹೆಚ್ಚು ಕಂಪೆನಿಗಳಿಗೆ ಪ್ರತಿಯೊಬ್ಬರಿಂದಲೂ ಒಂದಲ್ಲ ಒಂದು ಲಾಭ ಆಗುತ್ತಿದೆ. ಅದು ಹೇಗೆ ಎಂಬುದನ್ನು ವಿವರಿಸುವ ಪ್ರಯತ್ನವೇ ಈ ಲೇಖನ.

ಒಂದು ದಿನದಲ್ಲಿ ನಾವು ಬಳಸುವ ವಸ್ತುಗಳ ಲಾಭ ಎಷ್ಟೆಲ್ಲ ಕಂಪೆನಿಗಳಿಗೆ ಆಗುತ್ತವೆ ಎಂಬುದನ್ನು ನೀವು ಎಂದಾದರೂ ಆಲೋಚನೆ ಮಾಡಿದ್ದೀರಾ? ಹಾಗೆ ಎಷ್ಟು ಕಂಪೆನಿಗಳಿಗೆ ನೀವು ವ್ಯಾಪಾರ- ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ ಎಂಬುದನ್ನು ಆಲೋಚನೆ ಮಾಡಿದರೆ ನೂರಾ ಮೂವತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರುವ ಭಾರತ ಎಂಥ ದೊಡ್ಡ ಮಾರುಕಟ್ಟೆ ಎಂಬುದು ಗೊತ್ತಾಗುತ್ತದೆ.

 

ನಿತ್ಯ ಬೆಳಗ್ಗೆ ಏಳುವುದಕ್ಕೆ ಅಲಾರಂ ಇಡುವ ಅಭ್ಯಾಸ ಇದ್ದಲ್ಲಿ ಅದು ಯಾವ ಗಡಿಯಾರ ಎಂಬುದರಿಂದ ಶುರುವಾಗಿ, ಎದ್ದು ಹಲ್ಲುಜ್ಜುವ ಬ್ರಷ್- ಟೂಥ್ ಪೇಸ್ಟ್ ಯಾವುದು ಬಳಸುತ್ತೀರಿ? ಕೋಲ್ಗೇಟ್, ಕ್ಲೋಸ್ ಅಪ್, ಪೆಪ್ಸೋಡೆಂಟ್, ಸೆನ್ಸೋಡೈನ್ ಅಥವಾ ಪತಂಜಲಿ ಪೇಸ್ಟ್ ಯಾವುದು ಬಳಸಿ ಹಲ್ಲುಜ್ಜುತ್ತೀರಿ? ಟೂಥ್ ಬ್ರಷ್ ಗಳಾದರೂ ಅಷ್ಟೇ ಸೋಪುಗಳಲ್ಲಂತೂ ಕೇಳುವುದೇ ಬೇಡ... ಎಷ್ಟೊಂದು ಕಂಪೆನಿಗಳಿವೆ.

ಎಲ್ಲಿಂದ ಎಲ್ಲಿಯ ತನಕ?

ಎಲ್ಲಿಂದ ಎಲ್ಲಿಯ ತನಕ?

ಬಿಸಿ ನೀರಿಗಾಗಿ ಗೀಸರ್ ಆನ್ ಮಾಡಿದಾಗ, ಆ ಗೀಸರ್ ಕಂಪೆನಿ ಯಾವುದು ಗಮನಿಸಿ. ಇನ್ನು ಸೋಲಾರ್ ವಾಟರ್ ಇದ್ದಲ್ಲಿ ಆ ಕಂಪೆನಿ ಯಾವುದು? ಜಾಗಿಂಗ್ ಹೋಗುವ ಅಭ್ಯಾಸ ಇದ್ದಲ್ಲಿ ಅದಕ್ಕಾಗಿ ಧರಿಸುವ ದಿರಿಸು, ಶೂ ಯಾವ ಕಂಪೆನಿಯದು?ಜಿಮ್ ಗೆ ಹೋಗುವುವರಾದರೆ ಯಾವ ಕಂಪೆನಿಯ ಜಿಮ್, ಅಲ್ಲಿ ಬಳಸುವ ಜಿಮ್ ಸಲಕರಣೆಗಳ ಕಂಪೆನಿ ಯಾವುವು? ಇನ್ನು ಸ್ಮಾರ್ಟ್ ವಾಚ್ ಧರಿಸಿದ್ದರೆ ಅದು ಎಲ್ಲಿ ತಯಾರಾದದ್ದು? ಷಟಲ್ ಬ್ಯಾಡ್ಮಿಂಟನ್ ಆಡುವ ರೂಢಿ ಇದ್ದರೆ ಅದು ಯಾವ ಕಂಪೆನಿಯದು ನೋಡಿ. ಸೈಕ್ಲಿಂಗ್ ಮಾಡುವಂತಿದ್ದರೆ ಯಾವ ಕಂಪೆನಿಯ ಸೈಕಲ್? ಮನೆಗೆ ಬರುವ ಹಾಲು, ಅದಕ್ಕೆ ಬಳಸುವ ಕಾಫಿ- ಟೀ ಪೌಡರ್, ಹಾರ್ಲಿಕ್ಸ್, ಬೂಸ್ಟ್, ಕಾಂಪ್ಲ್ಯಾನ್, ಯಾವ ದಿನಪತ್ರಿಕೆ ಬರುತ್ತದೆ? ಅವುಗಳು ಯಾವ ಕಂಪೆನಿಯ ಗ್ರೂಪಿನದು? ಟೀವಿಯಲ್ಲಿ ಸುದ್ದಿ ನೋಡೋಣ ಅಂದುಕೊಂಡರೆ ಆ ಟೀವಿ, ಬಳಸುವ ಸೆಟ್ ಟಾಪ್ ಬಾಕ್ಸ್ ಯಾವ ಕಂಪೆನಿಯದು?

ಕಾರು, ಸ್ಕೂಟರ್ ಇನ್ಯಾವುದು
 

ಕಾರು, ಸ್ಕೂಟರ್ ಇನ್ಯಾವುದು

ಮೊಬೈಲ್ ಎಲ್ಲಿದೆ ಅಂದುಕೊಂಡರೆ ಅದರ ತಯಾರಕರು ಯಾರು? ಬಳಸೋದು ಆಂಡ್ರಾಯಿಡಾ, ಐಒಎಸ್ ಅಥವಾ ವಿಂಡೋಸ್, ಅದರೊಳಗಿನ ಸಿಮ್ ಯಾವ ಕಂಪೆನಿಗೆ ಸೇರಿದ್ದು? ವಾಟ್ಸಾಪ್, ಫೇಸ್ ಬುಕ್, ಟ್ವಿಟ್ಟರ್, ಗೂಗಲ್ ಪೇ, ಪೇಟಿಎಂ, ಫೋನ್ ಪೇ ಅಪ್ಲಿಕೇಷನ್ ಗಳು ಯಾರ ಮಾಲೀಕತ್ವದ ಕಂಪೆನಿಗಳು? ವಾಟರ್ ಪ್ಯೂರಿಫೈಯರ್ ಇದ್ದರೆ ಕೆಂಟ್, ಅಕ್ವಾಗಾರ್ಡ್, ಎಒ ಸ್ಮಿತ್ ಇದರಲ್ಲಿ ಯಾವ ಕಂಪೆನಿಯದು? ಕಚೇರಿಗೆ ಹೋಗುವ ಮೊದಲು ಷರ್ಟ್, ಟ್ರೌಷರ್, ಟೈ, ಶೂ, ಒಳ ಉಡುಪುಗಳು, ಹೆಣ್ಣುಮಕ್ಕಳು ಧರಿಸುವ ಸೀರೆ, ವಾಚ್, ಹಣೆಯ ಬಿಂದಿ, ಕಿವಿಯೋಲೆ ಯಾವ ಕಂಪೆನಿಯವು? ಬೈಕ್ ನಲ್ಲೋ ಸ್ಕೂಟರ್ ನಲ್ಲೋ ಆದರೆ ಹೀರೋ ಮೋಟಾರ್ ಕಾರ್ಪ್, ಹೋಂಡಾ, ವೆಸ್ಪಾ, ಎಲೆಕ್ಟ್ರಿಕಲ್ ಸ್ಕೂಟರ್, ಟಿವಿಎಸ್... ಹೀಗೆ ಎಷ್ಟೊಂದು. ಕಾರು ಅಂತಾದರೆ ಮಾರುತಿ, ಹೋಂಡಾ, ಕಿಯಾ, ಮಹೀಂದ್ರಾ, ಟಾಟಾ, ಟೊಯೊಟಾ... ಹೀಗೆ ಸಾಕಷ್ಟು.

ಯಾರಿಗೆಲ್ಲ ದುಡ್ಡು ಹೋಗುತ್ತದೆ!

ಯಾರಿಗೆಲ್ಲ ದುಡ್ಡು ಹೋಗುತ್ತದೆ!

ಮನೆಯಲ್ಲೇ ಅಡುಗೆ- ತಿಂಡಿ ಅಂತಾದರೆ ಎಲ್ ಪಿಜಿ ಸಿಲಿಂಡರ್, ಬಳಸುವ ಗ್ಯಾಸ್ ಸ್ಟೌ, ಅಕ್ಕಿ, ಬೇಳೆ, ತರಕಾರಿ... ರಿಲಯನ್ಸ್ ಫ್ರೆಶ್, ಮೋರ್, ಬಿಗ್ ಬಜಾರ್, ಬಿಗ್ ಬ್ಯಾಸ್ಕೆಟ್... ಇನ್ನಷ್ಟು. ಇನ್ನು ಹೊರಗಿನಿಂದ ಆಹಾರ ಆರ್ಡರ್ ಮಾಡುವುದಾದರೆ ಸ್ವಿಗ್ಗಿ, ಝೊಮ್ಯಾಟೋ, ಫುಂಡ್ ಪಾಂಡಾ, ಡೊಮಿನೋಸ್, ಪಿಜ್ಜಾ ಹಟ್ ಇನ್ನೂ ಬೇಕಾದಷ್ಟು. ಮೆಟ್ರೋದಲ್ಲಿ ಹೋಗುವುದಾದರೆ ಆ ಬೋಗಿಗಳು ತಯಾರಿಸಿದ್ದು ಬಿಇಎಂಎಲ್ ನವರು. ಆ ಮೆಟ್ರೋದ ಕಂಪೆನಿ ಬಿಎಂಆರ್ ಸಿಎಲ್. ಬಸ್ಸಿನಲ್ಲಿ ಹೋಗುವುದಾದರೆ ಆಯಾ ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗೆ ಲಾಭ. ಆ ಬಸ್ಸನ್ನು ತಯಾರಿಸಿರುವ ಟಾಟಾ ಸೇರಿದಂತೆ ಇತರ ಕಂಪೆನಿಗಳಿಗೆ ಆದಾಯ ಮೂಲ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ರಸ್ತೆಯಲ್ಲಿ ಹೋಗುತ್ತೀರಾ ಅಂದರೆ, ಅದಕ್ಕೆ ತೆರಿಗೆ. ಈಗ ಟೋಲ್ ಕೂಡ ಕಟ್ಟಬೇಕು. ಮಾತ್ರೆ- ಔಷಧ ತೆಗೆದುಕೊಳ್ಳುವುದಾದರೆ ಔಷಧ ಮಾರಾಟ ಕಂಪೆನಿಗಳಿಗೆ ನಿಮ್ಮಿಂದ ಆದಾಯ. ಎಫ್.ಎಂ. ಕೇಳ್ತೀರಿ ಅಥವಾ ನ್ಯೂಸ್ ನೋಡ್ತೀರಿ ಅಂದರೆ ಅವುಗಳ ಕಂಪೆನಿಯವರಿಗೆ ಆದಾಯ. ಇಷ್ಟು ಹೇಳಿದ ಮೇಲೆ ಮಿಕ್ಕಿದ್ದು ನೀವೇ ಲೆಕ್ಕ ಹಾಕಬಹುದು.

ಇನ್ನೊಂದು ಕಂಪೆನಿಗೆ ಲಾಭ ಮಾಡಿಕೊಡುತ್ತಿದ್ದೀರಿ ಅಂತಲೇ ಅರ್ಥ

ಇನ್ನೊಂದು ಕಂಪೆನಿಗೆ ಲಾಭ ಮಾಡಿಕೊಡುತ್ತಿದ್ದೀರಿ ಅಂತಲೇ ಅರ್ಥ

ಸಂಜೆ ಸ್ನೇಹಿತರ ಜತೆ ಪಾರ್ಟಿ ಮಾಡುವ ಹಾಗಿದ್ದರೆ, ಪಾರ್ಟಿ ಮಾಡುತ್ತಾ ಗುಂಡು ಹಾಕಿದರೆ, ಆ ಮದ್ಯದ ಕಂಪೆನಿಗಳು ಯಾವುವು? ಮನೆಗೆ ತಲುಪಲು ಓಲಾ, ಉಬರ್, ಬೌನ್ಸ್ ಬಳಸಿದರೆ ಅದರಿಂದ ಕೆಲವರಿಗೆ ಲಾಭ. ಮನೆ ತಲುಪಿದ ಮೇಲೆ ಯಾವುದೋ ಕಂಪೆನಿಯ ಮಂಚ, ಹಾಸಿಗೆ ಮೇಲೆ ಮಲಗಿ ನಿದ್ರಿಸುವ ತನಕ, ಅಷ್ಟೇ ಏಕೆ ಕಾಂಡೋಮ್ ಬಳಸಿದರೂ ಮಕ್ಕಳಾಗದಂತೆ ಹೆಣ್ಣುಮಕ್ಕಳು ತೆಗೆದುಕೊಳ್ಳುವ ಮಾತ್ರೆ ಅಥವಾ ಹಾಕಿಸಿಕೊಳ್ಳುವ ಕಾಪರ್ ಟಿ ತನಕ ಒಂದಲ್ಲ ಒಂದು ಕಂಪೆನಿಗೆ ನಿಮ್ಮ ಜೇಬಿನಿಂದ ಹಣ ಹೋಗುತ್ತಲೇ ಇರುತ್ತದೆ. ಅಷ್ಟೇ ಏಕೆ, ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್ ಲೈನ್ ಬ್ಯಾಂಕಿಂಗ್ ಬಳಸಿದಾಗಲೂ ಯಾರಿಗೋ ಲಾಭ ಆಗುತ್ತದೆ. ಈಗ ನೀವು ಓದುತ್ತಿರುವುದೆಲ್ಲ ನಿಜವಾ ಎಂದು ಗೂಗಲ್ ಅಥವಾ ಬೇರೆ ಯಾವ ಸರ್ಚ್ ಎಂಜಿನ್ ನಲ್ಲಿ ಹುಡುಕಲು ಆರಂಭಿಸಿದರೂ ಅದರಿಂದ ಇನ್ನೊಂದು ಕಂಪೆನಿಗೆ ಲಾಭವನ್ನು ಮಾಡಿಕೊಡುತ್ತಿದ್ದೀರಿ ಅಂತಲೇ ಅರ್ಥ.

ಪಟ್ಟಿ ನಿಲ್ಲುವುದೇ ಇಲ್ಲ

ಪಟ್ಟಿ ನಿಲ್ಲುವುದೇ ಇಲ್ಲ

ಸಿನಿಮಾಗೆ ಪಿವಿಆರ್, ಐನಾಕ್ಸ್ ಯಾವುದಕ್ಕಾದರೂ ಹೋಗಿ, ಇಲ್ಲ ಮನೆಯಲ್ಲಿ ನೆಟ್ ಫ್ಲಿಕ್ಸ್, ಹಾಟ್ ಸ್ಟಾರ್, ಅಮೆಜಾನ್ ಪ್ರೈಮ್ ನಂಥ ನೋಡಿದರೆ ಒಟಿಟಿಗಳಿಗೆ ಲಾಭವಾಗುತ್ತದೆ. ಇಂಟರ್ ನೆಟ್ ಗೆ ಅನ್ ಲಿಮಿಟೆಡ್ ಅಂದುಕೊಂಡು ಯೂಟ್ಯೂಬ್ ನೋಡಿದರೆ, ಆ ಕಂಪೆನಿಗೂ ದುಡ್ಡು ಮಾಡಿಕೊಟ್ಟಂತಾಗುತ್ತದೆ. ಮನೆಯಲ್ಲಿ ಮಕ್ಕಳಿದ್ದಲ್ಲಿ ಆ ಮಕ್ಕಳ ಸೋಪು, ಪೌಡರ್, ಶಾಂಪೂ, ಎಣ್ಣೆ, ಡಯಪರ್. ಹಿರಿಯ ವಯಸ್ಸಿನವರಾದರೆ ಅವರಿಗೆ ಬಳಸುವ ವಸ್ತುಗಳು. ಇನ್ನು ಹೆಣ್ಣುಮಕ್ಕಳ ಮೇಕಪ್ ಗೆ ಬಳಸುವ ವಸ್ತುಗಳು, ಶ್ಯಾಂಪೂ ಇತ್ಯಾದಿ... ಗಂಡಸರ ಶೇವಿಂಗ್ ಸೆಟ್, ಕನ್ನಡಕದ ಫ್ರೇಮು, ಲೆನ್ಸ್ ಇತ್ಯಾದಿ... ಉಹುಂ ಈ ಪಟ್ಟಿ ನಿಲ್ಲುವುದೇ ಇಲ್ಲ. ದುಡಿದ ಹಣದಲ್ಲಿ ಎಷ್ಟೆಲ್ಲ ಕಂಪೆನಿಗಳಿಗೆ ಹಣ ಕಟ್ಟುತ್ತಿದ್ದೀವಲ್ಲವಾ? ಇದು ಒಮ್ಮೆ ಯೋಚಿಸುವುದಕ್ಕಷ್ಟೇ.

English summary

How Many Companies Getting Profit On A Daily Basis From You?

Here is an analysis, how many companies making profit by an Indian, who used their products on daily basis.
Story first published: Wednesday, February 5, 2020, 18:08 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more