For Quick Alerts
ALLOW NOTIFICATIONS  
For Daily Alerts

ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರ

|

ಮನೆ ಕಟ್ಟುವುದಕ್ಕೆ ಎಷ್ಟು ದುಡ್ಡು ಖರ್ಚು ಮಾಡಬಹುದು? ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿದ್ದೀರಾ. ಮನೆ ಕಟ್ಟಬೇಕು ಅಂತ ತೀರ್ಮಾನಿಸಿದರೆ ಸೈಟಿಗೆ ಎಷ್ಟು, ಮನೆ ನಿರ್ಮಾಣಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬ ಅಂದಾಜು ಇರದಿದ್ದಲ್ಲಿ ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುವುದು ಒಂದು ಕಡೆಯಾದರೆ, ವ್ಯರ್ಥವಾಗಿ ಹಣವನ್ನು ಖರ್ಚು ಮಾಡಿದಂತಾಗುತ್ತದೆ.

ಮನೆ ನಿರ್ಮಾಣ ಮಾಡುವುದು ನಿಮ್ಮ ಉದ್ದೇಶವಾಗಿದ್ದರೆ ಅಥವಾ ಭವಿಷ್ಯದಲ್ಲಿ ನಿರ್ಮಾಣದ ಮಾಡುವುದಕ್ಕೆ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳುವುದಕ್ಕೆ ಈ ಲೇಖನದಿಂದ ನೆರವಾಗಬಹುದು. ಮನೆಯನ್ನು ಕಟ್ಟುವಾಗ ಭೂಮಿ ಖರೀದಿಯಿಂದಲೂ ಪ್ಲ್ಯಾನಿಂಗ್ ಇರಬೇಕು.

ಸೈಟ್ ಇರುವ ಸ್ಥಳಕ್ಕೆ ಬಸ್ ಸ್ಟಾಪ್, ರೈಲ್ವೆ ಸ್ಟೇಷನ್, ಆಸ್ಪತ್ರೆ, ಒಂದೊಳ್ಳೆ ಶಾಲೆ ಹತ್ತಿರ ಇದೆಯಾ ಎಂಬುದು ಮುಖ್ಯ. ಇನ್ನು ಮನೆಯಲ್ಲಿ ಇರುವವರು ಕೆಲಸಕ್ಕೆ ಹೋಗುವ ಸ್ಥಳಕ್ಕೆ ಎಷ್ಟು ದೂರ ಆಗುತ್ತದೆ ಎಂಬುದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ವಿಪರೀತ ವಾಹನ- ಜನ ಸಂಚಾರ ಇರುವ ಕಡೆ ಇದ್ದರೆ ಖಾಸಗಿತನ ಇರುವುದಿಲ್ಲ. ಆದರೆ ಜನವಸತಿ ಪ್ರದೇಶವಾಗಿದ್ದು, ಸುತ್ತಮುತ್ತ ಜನಸ್ನೇಹಿ ನೆರೆಹೊರೆಯವರು ಇರಬೇಕು.

 

ಜೀವನದ ಸಂತೋಷಕ್ಕೆ IKIGAIನ 10 ಸೂತ್ರಗಳು: ಆನಂದ್ ಮಹೀಂದ್ರಾ ಟ್ವೀಟ್

ಇನ್ನು ಹೆಚ್ಚಿಗೆ ಪೀಠಿಕೆ ಹಾಕದೆ ನೇರವಾಗಿ ಲೇಖನವನ್ನು ಶುರು ಮಾಡುವುದು ಉತ್ತಮ ಎನಿಸುತ್ತದೆ.

ಕಟ್ಟಡದ ಬೆಲೆ ವರ್ಷ ವರ್ಷಕ್ಕೂ ಇಳಿಯುತ್ತದೆ

ಕಟ್ಟಡದ ಬೆಲೆ ವರ್ಷ ವರ್ಷಕ್ಕೂ ಇಳಿಯುತ್ತದೆ

ಭಾರತದಲ್ಲಿ ಮಾತ್ರ ಭೂಮಿ ಬೆಲೆ ವರ್ಷ- ವರ್ಷಕ್ಕೂ ಏರಿಕೆಯಾಗುತ್ತಾ ಸಾಗುತ್ತದೆ. ಆದರೆ ಮನೆಗೆ ಸವಕಳಿ (ಡಿಪ್ರಿಸಿಯೇಷನ್) ತೆಗೆಯಲಾಗುತ್ತದೆ. ಇದು ಎಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ. ಮನೆಗೆ ಬಳಸಿರುವ ಫೋರಿಂಗ್, ಮರ, ಇಟ್ಟಿಗೆ, ಸಿಮೆಂಟ್, ಕಬ್ಬಿಣ ಯಾವುದೇ ಇರಲಿ. ವರ್ಷಗಳು ಕಳೆದಂತೆ ಕಟ್ಟಡದ ಬೆಲೆಯಲ್ಲಿ ಇಳಿಕೆಯಾಗುತ್ತಾ ಸಾಗಿದರೆ ಭೂಮಿಯ ಬೆಲೆಯಲ್ಲಿ ಏರಿಕೆಯಾಗುತ್ತದೆ. ಆದ್ದರಿಂದ ಮನೆಗೆ ತುಂಬ ದುಬಾರಿಯ ಇಂಟಿರೀಯರ್, ಫ್ಲೋರಿಂಗ್, ಮರ, ಪೇಂಟ್ ಮತ್ತೊಂದು ಏನೇ ಬಳಸಿದರೂ ಅದು ಮಾಲೀಕರ ಮನಸ್ಸಿನ ತೃಪ್ತಿಗಾಗಿಯೇ ವಿನಾ ಮತ್ತೇನಿಲ್ಲ. ಅದರ ಬದಲಿಗೆ ಭೂಮಿಗೆ ಹೆಚ್ಚಿನ ಹಣ ಇಟ್ಟು, ಕುಟುಂಬದ ಅಗತ್ಯಕ್ಕೆ ತಕ್ಕಂತೆ ಪ್ಲ್ಯಾನ್ ಮಾಡಿಕೊಂಡು ಖರ್ಚು ನಿಭಾಯಿಸುವುದು ಉತ್ತಮ. ಮನೆಯ ಇಂಟಿರೀಯರ್ ಗೆ ಎಷ್ಟೇ ಹಣ ಖರ್ಚು ಮಾಡಿದರೂ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಅಷ್ಟೇ ಏಕೆ, ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲೇ ಕಟ್ಟಡ ನಿರ್ಮಾಣ ಬಗೆಯಲ್ಲೇ ಹೊಸ ಹೊಸ ವಿಧಾನ ಬರುತ್ತಿದೆ.

ಯಾವುದು ಅಗತ್ಯ ಎಂದು ತೀರ್ಮಾನಿಸಿ
 

ಯಾವುದು ಅಗತ್ಯ ಎಂದು ತೀರ್ಮಾನಿಸಿ

ಬೆಂಗಳೂರಿನಂಥ ತಣ್ಣಗಿನ ಹವೆಯ ಊರಿನಲ್ಲಿ ಮಾರ್ಬಲ್ಸ್ (ಅಮೃತಶಿಲೆ ಫ್ಲೋರಿಂಗ್) ಬಳಸುವುದು ಬಹಳ ಹಿಂಸೆ. ಚಳಿಗಾಲದಲ್ಲಿ ಇನ್ನೂ ಹೆಚ್ಚು ಚಳಿಯಾಗುತ್ತದೆ. ಇದರಿಂದ ಉಬ್ಬಸ ಮತ್ತಿತರ ಸಮಸ್ಯೆ ಇರುವವರಿಗಂತೂ ಮತ್ತೂ ಕಷ್ಟ. ಆದರೂ ದುಬಾರಿ ಫ್ಲೋರಿಂಗ್ ಅಂದುಕೊಂಡು ಬಳಸಿದರೆ ಹೇಗೆ? ಇನ್ನು ಇತ್ತೀಚೆಗೆ ಮೇಲ್ಮಧ್ಯಮ ವರ್ಗದವರ ಮನೆಗಳಿಗೆ ಲಿಫ್ಟ್, ವೆಸ್ಟರ್ನ್ ಟಾಯ್ಲೆಟ್, ಸುರಕ್ಷತೆಗೆ ಅಗತ್ಯವಾದ ಸಿಸಿಟಿವಿ, ಯುಪಿಎಸ್, ಸೋಲಾರ್ ವಾಟರ್ ಹೀಟರ್- ಲೈಟಿಂಗ್ ಸಿಸ್ಟಮ್ ಮತ್ತಿತರ ಸಾಧನಗಳು ಬೇಕೇ ಬೇಕು ಎಂಬಂತಾಗಿದೆ. ಅಂಥದ್ದಕ್ಕೆ ಆದ್ಯತೆ ಮೇಲೆ ಹಣವನ್ನು ಖರ್ಚು ಮಾಡಿ. ಅದರ ಬದಲಿಗೆ ಮನೆಯ ಕಾಂಪೌಂಡ್ ಗೆ ಗ್ರಾನೈಟ್ ಹಾಕುವುದು, ಮೆಟ್ಟಿಲಿಗೆ, ಬಾತ್ ರೂಮ್ ಗೆ ಸಿಕ್ಕಾಪಟ್ಟೆ ಖರ್ಚು ಮಾಡಿದರೆ ಅದರಿಂದ ಉಳಿದ ಅಗತ್ಯಗಳಿಗೆ ಹಣವೇ ಇಲ್ಲದಂತಾಗುತ್ತದೆ. ತೀರಾ ಕಷ್ಟವಾಗಿ ಮನೆ ಮಾರಾಟ ಮಾಡುವ ಸ್ಥಿತಿ ಬಂದರೆ ಯಾವುದು ಅಗತ್ಯವೋ ಅದೇ ಇಲ್ಲ, ಕೊಂಡುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಬರುತ್ತದೆ.

ಹತ್ತು- ಹದಿನೈದು ವರ್ಷಕ್ಕೊಮ್ಮೆ ಟ್ರೆಂಡ್ ಬದಲು

ಹತ್ತು- ಹದಿನೈದು ವರ್ಷಕ್ಕೊಮ್ಮೆ ಟ್ರೆಂಡ್ ಬದಲು

ಹತ್ತು- ಹದಿನೈದು ವರ್ಷಕ್ಕಿಂತ ಹೆಚ್ಚು ಕಾಲ ಒಂದು ಮನೆಯ ಡಿಸೈನ್ ಮತ್ತೊಂದು ಟ್ರೆಂಡ್ ನಲ್ಲಿ ಇರುವುದು ಕಷ್ಟ. ಅಪ್ಪ ಕಟ್ಟಿದ ಮನೆ ಮಗನ ಕಾಲಕ್ಕೆ ಹಳತಾದರೆ, ಮೊಮ್ಮಗನ ಕಾಲಕ್ಕೆ ಅಪ್ಪ- ತಾತ ಇಬ್ಬರ ಕಾಲದ ಮನೆ ಔಟ್ ಡೇಟೆಡ್. ಆದ್ದರಿಂದ ಇನ್ನೂ ಐವತ್ತು ವರ್ಷಗಳಿಗೆ ಮನೆಯನ್ನು ಪ್ಲ್ಯಾನ್ ಮಾಡಿ ಕಟ್ಟಿಕೊಳ್ಳುತ್ತೇವೆ ಅಂದುಕೊಳ್ಳುವುದು ಬುದ್ಧಿವಂತಿಕೆ ಆಗುವುದಿಲ್ಲ. ಗೆಸ್ಟ್ ರೂಮ್, ಹೋಮ್ ಥಿಯೇಟರ್, ಅಟ್ಯಾಚ್ಡ್ ಬಾತ್ ರೂಮ್...ಇವೆಲ್ಲ ಎಷ್ಟು ವರ್ಷದಿಂದ ಬಂದ ಟ್ರೆಂಡ್? ಇನ್ನು ಐದು ವರ್ಷಕ್ಕೆ ಏನೇನಾಗಬಹುದು? ಓಪನ್ ಕಿಚನ್, ಡೈನಿಂಗ್ ಹಾಲ್ ಇವೆಲ್ಲ ಈಗಿದೆ. ಮುಂದೆ ಹೇಗೋ ಏನೋ? ಬದಲಾವಣೆ ಎಂಬುದು ಅದ್ಯಾವ ವೇಗದಲ್ಲಿ ಆಗುತ್ತಿದೆ ಅಂದರೆ, ಈಗಿನ ಟ್ರೆಂಡ್ ಆಗಲೇ ನಾಳೆಗೆ ಹಳತು. ಆದ್ದರಿಂದ ಎಲ್ಲವೂ ಟ್ರೆಂಡ್ ಅಂದುಕೊಂಡು ಅದರ ಮೇಲೆ ವಿಪರೀತ ಹಣ ಹಾಕುವ ಬದಲು ಅಗತ್ಯ ಏನಿದೆ ಅದಕ್ಕೆ ಖರ್ಚು ಮಾಡಿ ಮತ್ತು ಹದಿನೈದು ವರ್ಷಕ್ಕಿಂತ ಹೆಚ್ಚು ಅವಧಿಗೆ ಮನೆ ಕಟ್ಟುತ್ತಿದ್ದೇವೆ ಅಂದುಕೊಳ್ಳದಿರಿ.

ನಿರ್ವಹಣೆಗೆ ಎಷ್ಟು ಖರ್ಚು ಬರುತ್ತದೆ ಎಂಬ ಅಂದಾಜಿರಲಿ

ನಿರ್ವಹಣೆಗೆ ಎಷ್ಟು ಖರ್ಚು ಬರುತ್ತದೆ ಎಂಬ ಅಂದಾಜಿರಲಿ

ಮನೆ ಎಷ್ಟು ದೊಡ್ಡದಾಗಿ ಇರುತ್ತದೋ ಅದೆಷ್ಟು ಸೌಕರ್ಯ ಹೆಚ್ಚಿರುತ್ತದೋ ಅದರ ನಿರ್ವಹಣೆಗೂ ಅಷ್ಟೇ ವೆಚ್ಚ ಎಂಬುದನ್ನು ನೆನಪಿನಲ್ಲಿಡಿ. ಐದು ಬೆಡ್ ರೂಮಿನ ಮನೆ ಒಂದು ಸಲಕ್ಕೆ ಸಾಲ ಮಾಡಿ, ಕಟ್ಟಿ ಬಿಡಬಹುದು. ಆದರೆ ವರ್ಷಗಟ್ಟಲೆ ಅದರ ನಿರ್ವಹಣೆ ಕಷ್ಟಕಷ್ಟ. ಮನೆಯಲ್ಲಿ ಎಷ್ಟು ಜನ ಇರಲಿದ್ದೀರಿ? ಎಷ್ಟು ಸಮಯಕ್ಕೆ ಈ ಮನೆಯಲ್ಲಿ ವಾಸವಿರಬಹುದು? ಪ್ರತಿ ತಿಂಗಳು- ವರ್ಷ (ಟ್ಯಾಕ್ಸ್, ಪೇಂಟಿಂಗ್, ಸಂಪ್ ಕ್ಲೀನ್ ಇತ್ಯಾದಿ) ಎಷ್ಟು ಖರ್ಚು ಬರುತ್ತದೆ? ಒಂದು ವೇಳೆ ಮಾರಲು ಮುಂದಾದರೆ ಎಷ್ಟು ಮೊತ್ತಕ್ಕೆ ಸೇಲಾಗಬಹುದು? ಇಷ್ಟೆಲ್ಲ ಪ್ರಶ್ನೆಯನ್ನು ಕೇಳಿಕೊಂಡ ನಂತರವೇ ಮನೆ ನಿರ್ಮಾಣಕ್ಕೆ ಕೈ ಹಾಕಿ. ಈಗೆಲ್ಲ ಹೌಸಿಂಗ್ ಲೋನ್ ಸುಲಭವಾಗಿ ಸಿಗುತ್ತದೆ. ಲಕ್ಷ ರುಪಾಯಿ ಸಾಲಕ್ಕೆ ತಿಂಗಳಿಗೆ 800 ರುಪಾಯಿ ಅಷ್ಟೇ. ಮೂವತ್ತು ವರ್ಷದ ತನಕ ಮರುಪಾವತಿಗೆ ಅವಕಾಶ ಇದೆ. ಒಂದು ಸಲ ಮನೆ ಕಟ್ಟುತ್ತೇವೆ, ಹತ್ತಿಪ್ಪತ್ತು ಲಕ್ಷ ಜಾಸ್ತಿ ಖರ್ಚಾದರೂ ಚಿಂತೆ ಅಲ್ಲ ಅಂತ ಯೋಚಿಸಿದರೋ ಕಷ್ಟದಲ್ಲಿ ಸಿಲುಕಿಕೊಳ್ಳುವವರು ನೀವೇ. ಆದ್ದರಿಂದಲೇ ಭೂಮಿ ಖರೀದಿಗೆ ಶೇಕಡಾ 50ರಿಂದ60ರಷ್ಟು ಹಣ ಖರ್ಚು ಮಾಡಿದರೆ, ಮನೆ ಕಟ್ಟುವುದಕ್ಕೆ ಶೇಕಡಾ 40ರಿಂದ 50ರೊಳಗೆ ಖರ್ಚು ಮಾಡಬೇಕು ಎಂಬುದು ತಜ್ಞರ ಅಭಿಪ್ರಾಯ.

English summary

How Much Money Can Spend On House Construction?

How much can spend on plot and house construction? Here is an explainer.
Story first published: Friday, February 14, 2020, 17:19 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more