For Quick Alerts
ALLOW NOTIFICATIONS  
For Daily Alerts

ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ: ಹೂಡಿಕೆಗೆ ಸುಸಮಯ

|

ಮೇ 2020ರ ಬಳಿಕ ಮೊದಲ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ಬುಧವಾರ ಆರ್‌ಬಿಐ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ 4.40 ಪ್ರತಿಶತಕ್ಕೆ ಹೆಚ್ಚಿಸಿದೆ. ವಿತ್ತೀಯ ನೀತಿ ಸಮಿತಿಯ ಅನಿರ್ದಿಷ್ಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಹಾಗೆಯೇ ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ.

 

ರೆಪೋ ದರದ ಏರಿಕೆ ಬಳಿಕ ಗೃಹ ಸಾಲದ ಇಎಂಐ ಏರಿಕೆ ಆಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆದಿದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡಾ ಹಾಗೂ ಐಸಿಐಸಿಐ ಬ್ಯಾಂಕ್ ರೆಪೋ ದರ ಲಿಂಕ್ಡ್ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಇನ್ನು ಹಲವಾರು ಬ್ಯಾಂಕ್‌ಗಳು ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಈ ನಡುವೆ ರೆಪೋ ದರ ಏರಿಕೆಯಿಂದಾಗಿ ಎಫ್‌ಡಿಯಲ್ಲಿ ಹೆಚ್ಚು ರಿಟರ್ನ್ ದೊರೆಯುವ ಸಾಧ್ಯತೆ ಇದೆ.

ರೆಪೋ ದರ ಏರಿಕೆ: ನಿಮ್ಮ ಇಎಂಐ ಹೊರೆ ಕಡಿಮೆ ಮಾಡುವುದು ಹೇಗೆ?

ಸಾಲದ ಇಎಂಐ ದರ ಏರಿಕೆಯ ನಡುವೆ ಹೂಡಿಕೆಯ ಬಡ್ಡಿದರವು ಏರಿಕೆ ಕೂಡಾ ಹೆಚ್ಚಾಗಲಿದೆ ಎಂಬುವುದು ಒಳ್ಳೆಯ ಸುದ್ದಿಯಾಗಿದೆ. ರೆಪೋ ದರವು ಸಾಮಾನ್ಯವಾಗಿ ಬ್ಯಾಂಕ್‌ನಿಂದ ಪಡೆದ ಸಾಲಗಳು ಹಾಗೂ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ. ದರಗಳಲ್ಲಿನ ನಿಜವಾದ ಬದಲಾವಣೆಗಳು ಬ್ಯಾಂಕ್‌ಗಳಿಗೆ ಅವಲಂಭಿತವಾಗಿದೆ.

ರೆಪೋ ದರ ಏರಿಕೆಯಿಂದ ಎಫ್‌ಡಿ ರಿಟರ್ನ್ ಹೆಚ್ಚಳ ಸಾಧ್ಯತೆ

ಫಿಕ್ಸಿಡ್ ಡೆಪಾಸಿಟ್‌ಗೆ ಸುಸಮಯವೇ?

ಫಿಕ್ಸಿಡ್ ಡೆಪಾಸಿಟ್‌ಗಳು ಸುರಕ್ಷಿತ ಹೂಡಿಕೆಯ ಆಯ್ಕೆಗಳಾಗಿದ್ದು ಅದು ಗ್ರಾಹಕರಿಗೆ ಖಾತರಿಯ ಲಾಭವನ್ನು ನೀಡುತ್ತದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಉಳಿತಾಯ ಠೇವಣಿಗಳ ಮೇಲೆ ಪಾವತಿಸಬೇಕಾದ ಇತ್ತೀಚಿನ ಬಡ್ಡಿ ದರ/ಕಾರ್ಡ್ ದರ ಮತ್ತು ವಿವಿಧ ಮೆಚುರಿಟಿಗಳ ಅವಧಿ ಠೇವಣಿಗಳನ್ನು ಬಳಸಿಕೊಂಡು ಠೇವಣಿಗಳ ದರವನ್ನು ಲೆಕ್ಕ ಹಾಕಬೇಕು.

ರೆಪೋ ದರ ಹೆಚ್ಚಳವಾದ ಕಾರಣ ಅನಿಶ್ಚಿತ ಸಾಲಗಳು ಮತ್ತು ಹೊಸ ಸಾಲಗಳು ಹೆಚ್ಚು ಬಡ್ಡಿದರವನ್ನು ಹೊಂದಿರಲಿದೆ. ಈಗಾಗಲೇ ಸಾಲ ಪಡೆದಿರುವವರಿಗೆ ಇಎಂಐಗಳು ಮತ್ತು ಬಡ್ಡಿ ದರಗಳು ಬದಲಾಗದೆ ಇರುತ್ತವೆ. ಬಡ್ಡಿದರಗಳು ಹೆಚ್ಚಾದಾಗ, ಅಲ್ಪಾವಧಿಯ ಮತ್ತು ಮಧ್ಯಮ ಅವಧಿಯ ಎಫ್‌ಡಿ ದರಗಳು ಮೊದಲು ಹೆಚ್ಚಳವನ್ನು ಕಾಣುತ್ತವೆ. ದೀರ್ಘಾವಧಿಯ ಠೇವಣಿ ದರಗಳು ನಂತರ ಹೆಚ್ಚಳವಾಗಲಿದೆ. ಆದರೆ ಬ್ಯಾಂಕ್‌ಗಳು ಈ ದರ ಪಾಲನೆಗೆ ಕೊಂಚ ಸಮಯವನ್ನು ತೆಗೆದುಕೊಳ್ಳಬಹುದು. ಇನ್ನು ಮುಂಬರುವ ತಿಂಗಳುಗಳಲ್ಲಿ ಹೀಗೆಯೇ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

English summary

How RBI’s Repo Rate Hike May Improve FD Returns?

How RBI’s Repo Rate Hike May Improve FD Returns?. Time to invest in fixed deposits?
Story first published: Friday, May 6, 2022, 15:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X