For Quick Alerts
ALLOW NOTIFICATIONS  
For Daily Alerts

ಸಂಬಳ ಹೆಚ್ಚಿಸಿ ಎಂದು ನಿಮ್ಮ ಬಾಸ್ ಬಳಿ ಕೇಳಲು ಹಿಂಜರಿಕೆಯೇ? ಹಾಗಿದ್ದರೆ ಇದನ್ನೊಮ್ಮೆ ಓದಿ

|

ಹಣ ಎಂಬುದು ಮನುಷ್ಯನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಹೋಗಿದೆ. ಹಣವಿಲ್ಲದಿದ್ದರೇ ಏನೂ ಇಲ್ಲ ಎಂದು ಹೇಳುವವರು ಹೆಚ್ಚು. ಹಣದ ಬಗ್ಗೆ ಸಾಮಾನ್ಯವಾಗಿ ಮಾತನಾಡುವಾಗ ಭಾರತೀಯರು ಯಾವುದೇ ಅಂಜಿಕೆಯಿಲ್ಲದೆ ಮಾತನಾಡುತ್ತಾರೆ. ಹಣವನ್ನು ಹೇಗೆ ನಿಭಾಯಿಸಬೇಕು. ಎಷ್ಟು ಖರ್ಚಾಗುತ್ತೆ, ಇಲ್ಲವೇ ಎಷ್ಟು ಉಳಿತಾಯ ಮಾಡ್ತೀರಾ ಎಂದು ಸ್ನೇಹಿತರ ನಡುವೆ ಹಣದ ಬಗ್ಗೆ ಚರ್ಚೆ ನಡೆಯುವುದು ಸಾಮಾನ್ಯ.

''ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳ ಎದುರು ಹಣವನ್ನು ನಿಭಾಯಿಸುವುದರ ಕುರಿತು ಮಾತನಾಡುವುದು ಕಡಿಮೆ. ಬಹುತೇಕ ಜನರು ಹಣದ ಕುರಿತು ಮಾತನಾಡುವಾಗ ಗೌಪ್ಯತೆ ಕಾಪಾಡುತ್ತಾರೆ. ಅಂದರೆ ಹಣದ ಕುರಿತು ಮಾತನಾಡುವಾಗ ಖಾಸಗಿ ಚರ್ಚೆಗೆ ಒತ್ತು ನೀಡುತ್ತಾರೆ. ಇದು ಜನರು ಹಣದ ಕುರಿತು ಅಳವಡಿಸಿಕೊಂಡಿರುವ ಮನೋಭಾವವಾಗಿದೆ'' ಎಂದು ಹಣಕಾಸು ಸಲಹೆಗಾರ ಮತ್ತು ಶೃಜನ್ ಫೈನಾನ್ಷಿಯಲ್ ಅಡ್ವರ್ಟೈಸ್ Lip ಸಂಸ್ಥಾಪಕ ದೀಪಾಲಿ ಸೇನ್ ಹೇಳಿದ್ದಾರೆ.

 

ಹಣದ ಕುರಿತು ಮಾತನಾಡುವುದು ಅನಿವಾರ್ಯವಲ್ಲ. ಆದರೆ ವ್ಯಕ್ತಿಯ ಆರ್ಥಿಕ ಯೋಗಕ್ಷೇಮಕ್ಕೆ ಇದು ನಿರ್ಣಾಯಕವಾಗಿದೆ. ಅದು ನಿಮ್ಮ ಬಾಸ್‌ ಜೊತೆಯಾಗಿರಲಿ, ನಿಮ್ಮ ಪೋಷಕರೊಂದಿಗೆ ಆಗಿಲ್ಲ ಇಲ್ಲವೇ ಮಕ್ಕಳು, ಕುಟುಂಬ ಸದಸ್ಯರು, ಸ್ನೇಹಿತರು ಆಗಿರಲಿ. ಹಾಗಿದ್ದರೆ ಇವರೊಂದಿಗೆ ಹಣದ ಕುರಿತು ಮಾತನಾಡುವಾಗುವ ಹಿಂಜರಿಕೆಯನ್ನು ಹೋಗಲಾಡಿಸಿ ಹೇಗೆ ಸಂಭಾಷಣೆ ನಡೆಸಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ ಓದಿ

ನಿಮ್ಮ ಬಾಸ್ ಜೊತೆಗೆ ಮಾತನಾಡುವುದು

ನಿಮ್ಮ ಬಾಸ್ ಜೊತೆಗೆ ಮಾತನಾಡುವುದು

ನೀವು ಉದ್ಯೋಗ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಬಹುದು. ಆದರೆ ಬಹುತೇಕ ಜನರು ಹಣ ಸಂಪಾದಿಸಲು ದುಡಿಯುವುದು ಸಹಜ. ಆದ್ದರಿಂದ ಎಷ್ಟೇ ಅನಾನುಕೂಲತೆ ಇದ್ದರೂ ನೀವು ಹೊಸ ಉದ್ಯೋಗವನ್ನು ಹುಡುಕುವಾಗ ಅಥವಾ ವಾರ್ಷಿಕ ಮೌಲ್ಯಮಾಪನ ಸಂದರ್ಭದಲ್ಲಿ ನೀವು ಮಾಡಬೇಕಾದ ಕೆಲಸ ಇದಾಗಿದೆ.

ನೀವು ನಿಮ್ಮ ಕೆಲಸಕ್ಕೆ ಅನುಗುಣವಾಗಿ ಎಷ್ಟು ನಿರೀಕ್ಷಿಸಬಹುದು ಎಂದು ನೇರವಾಗಿ ಹೇಳಿ ಬಿಡಿ. ಅಂದರೆ ನಿಮ್ಮ ಬಾಸ್ ಬಳಿ ಅಥವಾ ಉನ್ನತ ಅಧಿಕಾರಿಗಳ ಎದುರು ಮಾತನಾಡುವಾಗ ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚಾಗಿ ಅವರೆದುರು ಕೇಳಬೇಕು. ವೇತನದ ಕುರಿತು ಮಾತನಾಡಲು ತೆರಳುವ ಮುನ್ನವೇ ನಿಮ್ಮ ಕೌಶಲ್ಯ ಮತ್ತು ರಚಿಸಬಹುದಾದ ಮೌಲ್ಯವನ್ನು ಅಂದರೆ ನೀವು ಏನು ಮಾಡಲು ಸಾಮರ್ಥ್ಯ ಹೊಂದಿದ್ದೀರಿ ಎಂಬುದನ್ನು ಪಟ್ಟಿ ಮಾಡಿ. ಒಂದು ವೇಳೆ ನಿಮ್ಮ ಮನಸ್ಸಿನಲ್ಲೇ ನೆನಪಿಟ್ಟುಕೊಂಡಿದ್ದರೆ ಒಳ್ಳೆಯದು.

ಒಂದು ವೇಳೆ ನಿಮ್ಮ ನಿರೀಕ್ಷೆ ಮತ್ತು ಪ್ರಸ್ತಾಪದ ನಡುವೆ ಭಾರೀ ಅಂತರವಿದ್ದರೆ, ನಿಮಗೆ ಸರಿಯಾದುದನ್ನು ಹೊಂದಲು ನೀವು ಬಯಸಬಹುದು. ಆದರೆ ವಾಸ್ತವತೆಯನ್ನು ಚೆನ್ನಾಗಿ ಅರಿತಿರಿ.

ನಿಮ್ಮ ಪೋಷಕರೊಂದಿಗೆ ಮಾತನಾಡುವುದು
 

ನಿಮ್ಮ ಪೋಷಕರೊಂದಿಗೆ ಮಾತನಾಡುವುದು

ನಿಮ್ಮ ಪೋಷಕರ ಜೊತೆ ಹಣದ ವಿಚಾರ ಮಾತನಾಡುವಾಗ ಅತ್ಯಂತ ಸೂಕ್ಷ್ಮವಾದ ವಿಚಾರವಾಗಿರುತ್ತದೆ. ನೀವು ಪೋಷಕರ ಬಳಿ ಮಾತನಾಡುವಾಗ ವಿಷಯವನ್ನು ನೇರವಾಗಿ ತರಬೇಕು. ಸುತ್ತಿ ಬಳಸಿ ಮಾತನಾಡುವುದನ್ನು ಬಿಡಬೇಕು.

ಕುಟುಂಬದಲ್ಲಿ ಆರ್ಥಿಕ ಕ್ಷೇಮವನ್ನು ಹೆಚ್ಚಿಸಲು ಪೋಷಕರಿಗೆ ನೀವು ಸಹಾಯ ಮಾಡಬೇಕಾಗುತ್ತದೆ. ಅವರಿಗೆ ಯಾವುದೇ ರೀತಿಯ ಬೇಸರ ಉಂಟಾಗದಂತೆ ನೀವು ಆರ್ಥಿಕವಾಗಿ ಅವರ ಜೊತೆಗೆ ನಿಲ್ಲಬೇಕು. ಇನ್ನು ಹಣದ ವಿಚಾರ ಮಾತನಾಡುವಾಗ ನೀವು ಮಂಡಿಸುವ ವಿಚಾರವು ಅವರಿಗೆ ಅರ್ಥವಾಗುವಂತಿದ್ದು, ಅವರು ಅದನ್ನು ಕೇಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅರಿತಿದ್ದರೆ ಮಾತ್ರ ಅವರೊಂದಿಗೆ ಚರ್ಚಿಸಿ. ಅಂದರೆ ಅವರಿಗೆ ತಿಳಿಯದೇ ಬೇರೆಯವರೊಂದಿಗೆ ಆ ವಿಚಾರ ಹಂಚಿಕೊಳ್ಳುವಷ್ಟು ಮುಗ್ದರಾಗಿದ್ದಾರೆ ಎಂದರೆ ಮಾತ್ರ ಹಣದ ವಿಚಾರಗಳನ್ನು ಗೌಪ್ಯವಾಗಿಡಬೇಕಾಗಬಹುದು.

ಪತ್ನಿಯೊಂದಿಗೆ ಮಾತನಾಡುವುದು

ಪತ್ನಿಯೊಂದಿಗೆ ಮಾತನಾಡುವುದು

ಯಾವುದೇ ಪಾಲುದಾರಿಕೆ ಕೆಲಸ ಮಾಡಲು ಪಾರದರ್ಶಕತೆ ಮತ್ತು ಪರಸ್ಪರ ನಂಬಿಕೆ ಮುಖ್ಯವಾಗಿರುತ್ತದೆ. ಹಾಗೆಯೇ ನೀವು ಯಾವುದೇ ಹಣಕಾಸಿನ ವಿಚಾರಗಳನ್ನು ನಿಮ್ಮ ಪತ್ನಿಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ. ಆದರೆ ಅನೇಕ ಭಾರತೀಯ ಕುಟುಂಬಗಳಲ್ಲಿ ಪುರುಷನು ಹಣದ ವ್ಯವಹಾರಗಳನ್ನು ಹಾಗೂ ಹಣಕಾಸಿನ ಬಗ್ಗೆ ನಿಗಾ ವಹಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ.

ಇದು ಸಾಂಪ್ರದಾಯಿಕ ಮಾದರಿಯಾಗಿದ್ದು ಗೃಹಿಣಿಯರ ದುರದೃಷ್ಟಕರ ಪರಂಪರೆಯಾಗಿದೆ.

ಹೀಗೆ ಪುರುಷನೊಬ್ಬನೆ ಹಣಕಾಸಿನ ಬಗ್ಗೆ ನಿಗಾ ಇಡುವುದರಿಂದ ಹಣಕಾಸಿನ ಗೌಪ್ಯತೆಯು ಒಬ್ಬ ಪಾಲುದಾರನಲ್ಲಿಯೇ ಉಳಿಯುತ್ತದೆ. ಆದರೆ ಇದೇ ಸಮಸ್ಯೆಯು ಆಗಬಹುದು. ಉದಾಹರಣೆಗೆ ಅನಾರೋಗ್ಯ, ಅಪಘಾತ ಅಥವಾ ಸಾವಿನಂತಹ ತುರ್ತು ಸಂದರ್ಭಗಳಲ್ಲಿ ಈ ಹಣಕಾಸಿನ ರಹಸ್ಯವು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಅಲ್ಲದೆ ದಂಪತಿಯ ನಡುವೆ ಬಿರುಕಿಗೂ ಕಾರಣವಾಗಬಹುದು. ಹೀಗಾಗಿ ಹಣದ ಸಂಗತಿಗಳನ್ನು ದಂಪತಿಗಳು ಜಂಟಿಯಾಗಿ ನಿರ್ವಹಿಸಬೇಕು.

ಮಕ್ಕಳೊಂದಿಗೆ ಮಾತನಾಡುವಾಗ

ಮಕ್ಕಳೊಂದಿಗೆ ಮಾತನಾಡುವಾಗ

ಹಣದ ವಿಚಾರವಾಗಿ ಮಕ್ಕಳೊಂದಿಗೆ ಮಾತನಾಡುವಾಗ ಚಿಕ್ಕಂದಿನಿಂದಲೇ ಅವರಿಗೆ ಹಣದ ಮಹತ್ವದ ಪಾಠ ನಿಧಾನವಾಗಿ ಹೇಳಿ ಕೊಡಬೇಕು. ಅವರು ಕೇಳಿದ ತಕ್ಷಣ ಹಣ ಕೊಡುವುದು ಅಥವಾ ಪ್ರತಿದಿನ ಲೆಕ್ಕವಿಲ್ಲದೆ ಹಣ ನೀಡುವುದು ಅವರಿಗೆ ಹಣದ ಮೇಲಿನ ಗೌರವವನ್ನು ಕಡಿಮೆ ಮಾಡುವುದು. ಹಣದ ಪರಿಣಾಮಕಾರಿ ಬಳಕೆ ಮತ್ತು ಮೌಲ್ಯವನ್ನು ಚಿಕ್ಕಂದಿನಿಂದಲೇ ಮಕ್ಕಳಿಗೆ ತಿಳಿಸುವುದು ಸೂಕ್ತ.

ಮಕ್ಕಳು ಓದುತ್ತಿರುವಾಗಲೇ ಹಣದ ವಿಷಯಗಳನ್ನು ಮತ್ತು ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕು. ಉದಾಹರಣೆಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹೇಗೆ ಹಣವನ್ನು ಹೊಂದಿಸಲಾಗುತ್ತಿದೆ. ಫೀಸ್ ಇತ್ಯಾದಿ ಪಾವತಿಗೆ ಹಣವನ್ನು ಹೇಗೆ ನಿಭಾಯಿಸಲಾಗುತ್ತಿದೆ ಎಂದು ಅವರ ನಡುವೆ ಸಂಭಾಷಣೆ ನಡೆಸುವ ವಾತಾವರಣ ನಿರ್ಮಾಣವಾಗಬೇಕು. ಉನ್ನತ ಶಿಕ್ಷಣ ವೆಚ್ಚಗಳಿಗೆ ಸಹ ಸಂಭಾಷಣೆ ನೇರವಾಗಿರಬೇಕು.

ಸ್ನೇಹಿತರೊಂದಿಗೆ ಮಾತನಾಡುವಾಗ

ಸ್ನೇಹಿತರೊಂದಿಗೆ ಮಾತನಾಡುವಾಗ

ಪ್ರೀತಿ ಪಾತ್ರರು ಹಣವನ್ನು ಸಾಲವಾಗಿ ಕೇಳಿದರೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆ ವೇಳೆ ಎಷ್ಟೇ ಕಷ್ಟವಿದ್ದರೂ ಕಣ್ಣು ಮುಚ್ಚಿ ಕೊಡುವವರು ಇದ್ದಾರೆ. ಆದರೆ ಸಾಂಪ್ರದಾಯಿಕ ಬುದ್ದಿವಂತಿಕೆಯು ಪ್ರಕಾರ ನೀವು ಸ್ನೇಹಿತರಿಗೆ ಸಾಲವನ್ನು ನೀಡಿದರೆ ಹಣವನ್ನು ಇಲ್ಲವೇ ಸ್ನೇಹಿತರನ್ನು ಕಳೆದುಕೊಳ್ಳಲು ಸಿದ್ಧರಾಗಿರಿ. ಇದು ಅನೇಕ ಸಂದರ್ಭದಲ್ಲಿ ನಿಜವಾಗದಿದ್ದರೂ ಹಣ ನೀಡುವ ಮುನ್ನ ನಿಮ್ಮಲ್ಲಿ ಒಮ್ಮೆ ಪ್ರಶ್ನಿಸಿಕೊಳ್ಳಿ.

ನೀವು ಸ್ನೇಹಿತರಿಗೆ ಸಾಲ ಕೊಡುವ ಮುನ್ನ ದೀರ್ಘಕಾಲದವರೆಗೂ ಅದು ಹಿಂದಿರುಗದಿದ್ದರೂ ಒತ್ತಡವನ್ನು ಮೆಟ್ಟಿ ನಿಲ್ಲಲು ಸಾಧ್ಯವೇ ಎಂಬುದನ್ನು ಅರಿಯಿರಿ. ನೀವು ಒಮ್ಮೆ ಹಣ ನೀಡಿದರೆ ಅದನ್ನು ಹಿಂದಿರುಗಿ ವಾಪಸ್ ಕೇಳುವುದು ಅತ್ಯಂತ ಕಷ್ಟವಾಗಿರುತ್ತದೆ. ಆದರೆ ಹಣವು ಯಾರಿಗೂ ಸುಲಭವಾಗಿ ಬರುವುದಿಲ್ಲ. ಹೆಚ್ಚಿನ ಜನರು ಯೋಗ್ಯವಾದ ಮೊತ್ತವನ್ನು ಪಡೆಯಲು ಕಷ್ಟಪಟ್ಟು ದುಡಿಯುತ್ತಾರೆ. ಹೀಗಾಗಿ ಹಣವನ್ನು ಗೌರವಿಸಬೇಕು. ಹಣ ಸಾಲ ನೀಡಿದ ಮೇಲೆ ವಾಪಸ್ ಕೇಳಲು ಯಾವುದೇ ಮುಜುಗರ ಬೇಡ.

English summary

How To Ask Salary Increment Without Hesitant

This is tips of navigate difficult money conversations with employer, family and friends
Story first published: Friday, January 10, 2020, 16:49 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more