For Quick Alerts
ALLOW NOTIFICATIONS  
For Daily Alerts

7 ದಿನಗಳಿಗೆ ಎಫ್‌ಡಿ ಯೋಜನೆ: ಆಕರ್ಷಕ ಬಡ್ಡಿ ದರ ಇಲ್ಲಿದೆ

|

ಜನರು ತಮ್ಮ ಹಣವನ್ನ ಸುರಕ್ಷಿತ ಹೂಡಿಕೆಗಳಲ್ಲಿ ಇರಿಸಲು ಬಯಸುವುದು ಸಾಮಾನ್ಯ. ಹೀಗಾಗಿ ಇವರ ಆಯ್ಕೆಗಳಲ್ಲಿ ಪ್ರಮುಖವಾದದ್ದು ನಿಶ್ಚಿತ ಠೇವಣಿ ಯೋಜನೆ ಆಗಿದೆ. ಇದೇ ಕಾರಣಕ್ಕೆ ಜನರು ಹಲವಾರು ವರ್ಷಗಳಿಂದ ತಮ್ಮ ನೆಚ್ಚಿನ ಬ್ಯಾಂಕ್‌ನಲ್ಲಿ ಎಫ್‌ಡಿ ಇಡುತ್ತಾರೆ.

 

ಕೆಲವೊಮ್ಮೆ ವ್ಯವಹಾರದ ಹಣ ಅಥವಾ ಇನ್ಯಾವುದೇ ಆದಾಯದ ಹಣವನ್ನು ಕೆಲ ದಿನಗಳು ಇರಿಸುಕೊಳ್ಳುವ ಸಂದರ್ಭ ಎದುರಾಗಬಹುದು. ಇಂತಹ ವೇಳೆಯಲ್ಲಿ ಸಾಮಾನ್ಯವಾಗಿ ಜನರು ಬ್ಯಾಂಕಿನಲ್ಲಿ ಇರಿಸುವುದು ಸುರಕ್ಷಿತ ಎಂದು ತಮ್ಮ ಉಳಿತಾಯ ಖಾತೆಗೆ ಜಮೆ ಮಾಡುತ್ತಾರೆ. ಆದರೆ ಉಳಿತಾಯ ಖಾತೆಯಲ್ಲಿ ನಿಮಗೆ ಸಿಗುವ ಬಡ್ಡಿ ತುಂಬಾ ಕಡಿಮೆ. ಹೀಗಿರುವಾಗಿ ನೀವು ಕನಿಷ್ಠ ಏಳು ದಿನಗಳ ಅವಧಿಗೆ ಎಫ್‌ಡಿಗಳಲ್ಲಿ ಹೂಡಿಕೆ ಮಾಡಬಹುದು.

ಕನಿಷ್ಠ ಏಳು ದಿನಗಳ ಅವಧಿಗೆ ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ಪಡೆಯಬಹುದು ಎಂಬ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಮಾಹಿತಿ ಓದಿ.

ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್

ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್

ಮೊದಲನೆಯದಾಗಿ, ಬ್ಯಾಂಕ್ ಆಫ್ ಬರೋಡಾದಲ್ಲಿ 7 ದಿನಗಳ ಎಫ್‌ಡಿಯಲ್ಲಿ ಶೇಕಡಾ 2.80ರಷ್ಟು (ವಾರ್ಷಿಕ) ಬಡ್ಡಿದರವನ್ನು ನೀಡಲಾಗುತ್ತಿದೆ. ಮತ್ತೊಂದೆಡೆ, ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ. ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಬರೋಡಾದಲ್ಲಿ 7 ದಿನಗಳ ಎಫ್‌ಡಿ ಯಲ್ಲಿ ಶೇ 3.30 ರಷ್ಟು ಬಡ್ಡಿದರ ಸಿಗಲಿದೆ. ಅದೇ ಸಮಯದಲ್ಲಿ, ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ, ಸಾಮಾನ್ಯ ನಾಗರಿಕರಿಗೆ 7 ದಿನಗಳ ಎಫ್‌ಡಿಗೆ ಶೇಕಡಾ 3.40 ರಷ್ಟು ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುವುದು.

ಇನ್ನು ಕೆನರಾ ಬ್ಯಾಂಕ್‌ನಲ್ಲಿ ನಿಮಗೆ 7 ದಿನಗಳ ಎಫ್‌ಡಿ ಯಲ್ಲಿ 2 ಕೋಟಿ ರೂ.ಗಿಂತ ಕಡಿಮೆ ಶೇಕಡಾ 2.95 ರಷ್ಟು ಬಡ್ಡಿ ಸಿಗುತ್ತದೆ. ಅದೇ ಸಮಯದಲ್ಲಿ, ಹಿರಿಯ ನಾಗರಿಕರ ಬಡ್ಡಿದರವು ಶೇಕಡಾ 3.45ರಷ್ಟು ಆಗಿರುತ್ತದೆ.

ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಿಎನ್‌ಬಿ

ಬ್ಯಾಂಕ್ ಆಫ್ ಇಂಡಿಯಾ ಮತ್ತು ಪಿಎನ್‌ಬಿ

ಬ್ಯಾಂಕ್ ಆಫ್ ಇಂಡಿಯಾದಲ್ಲಿ, ಸಾಮಾನ್ಯ ನಾಗರಿಕರಿಗೆ 7 ದಿನಗಳ ಎಫ್‌ಡಿ ಮೇಲಿನ ಬಡ್ಡಿದರ ಶೇಕಡಾ 3ರಷ್ಟಿದೆ. ಅದೇ ಸಮಯದಲ್ಲಿ, ಪಿಎನ್‌ಬಿ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕಿನ ಸಾಮಾನ್ಯ ನಾಗರಿಕರ ಬಡ್ಡಿದರ ಶೇಕಡಾ 3ರಷ್ಟಿದೆ. ಹಿರಿಯ ನಾಗರಿಕರು ಈ ಮೂರು ಬ್ಯಾಂಕುಗಳಲ್ಲಿ 7 ದಿನಗಳ ಎಫ್‌ಡಿ ಮಾಡಿದರೆ, ಶೇಕಡಾ 3.50 ರಷ್ಟು ಬಡ್ಡಿದರ ಅನ್ವಯವಾಗುತ್ತದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
 

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ, ಸಾಮಾನ್ಯ ನಾಗರಿಕರು 7 ದಿನಗಳ ಎಫ್‌ಡಿಯಲ್ಲಿ ಶೇಕಡಾ 3ರಷ್ಟು ಬಡ್ಡಿದರವನ್ನು ಪಡೆಯುತ್ತಿದ್ದಾರೆ. ಬಂಧನ್ ಬ್ಯಾಂಕಿನಲ್ಲಿ, 7 ದಿನಗಳ ಎಫ್‌ಡಿಯಲ್ಲಿ ಶೇಕಡಾ 3ರಷ್ಟು ಅನ್ವಯಿಸುತ್ತದೆ. ಈ ಅವಧಿಯ ಎಫ್‌ಡಿಗಳಲ್ಲಿ ಹಿರಿಯ ನಾಗರಿಕರಿಗೆ ಬಂದನ್ ಬ್ಯಾಂಕ್ ಶೇ 3.75 ರಷ್ಟು ಬಡ್ಡಿದರವನ್ನು ನೀಡಲಿದೆ.

ಯೆಸ್‌ ಬ್ಯಾಂಕ್ ಮತ್ತು ಆರ್‌ಬಿಎಲ್‌ ಬ್ಯಾಂಕ್

ಯೆಸ್‌ ಬ್ಯಾಂಕ್ ಮತ್ತು ಆರ್‌ಬಿಎಲ್‌ ಬ್ಯಾಂಕ್

ಯೆಸ್ ಬ್ಯಾಂಕ್‌ನಲ್ಲಿ 7 ದಿನಗಳ ನಿಶ್ಚಿತ ಠೇವಣಿಯಲ್ಲಿ ನೀವು ಶೇಕಡಾ 3.25 ರಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಆದರೆ ನೀವು ಹಿರಿಯ ನಾಗರಿಕರಾಗಿದ್ದರೆ, ನಿಮಗೆ ಶೇಕಡಾ 3.75 ರಷ್ಟು ಬಡ್ಡಿದರವನ್ನು ನೀಡಲಾಗುವುದು. ಇನ್ನು ಆರ್‌ಬಿಲ್ ಬ್ಯಾಂಕ್ ಯೆಸ್ ಬ್ಯಾಂಕ್‌ನಂತೆಯೇ ಅದೇ ಬಡ್ಡಿದರಗಳು ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ನೀಡುತ್ತದೆ.

ಡಿಸಿಬಿ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್

ಡಿಸಿಬಿ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್

ಡಿಸಿಬಿ ಬ್ಯಾಂಕಿನಲ್ಲಿ 7 ದಿನಗಳ ಎಫ್‌ಡಿ ಯಲ್ಲಿ ಶೇಕಡಾ 4.55 ರಷ್ಟು ಬಡ್ಡಿದರ ಅನ್ವಯವಾಗುತ್ತದೆ. ಅದೇ ಸಮಯದಲ್ಲಿ, ಹಿರಿಯ ನಾಗರಿಕರಿಗೆ ಶೇಕಡಾ 5.05 ರಷ್ಟು ಬಡ್ಡಿದರವನ್ನು ನೀಡಲಾಗುವುದು. ಇದಲ್ಲದೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕಿನಲ್ಲಿ 7 ದಿನಗಳ ಎಫ್‌ಡಿಗೆ ಶೇ. 3.40 ರಷ್ಟು ಬಡ್ಡಿದರವನ್ನು ಹೊಂದಿದೆ. ಹಿರಿಯ ನಾಗರಿಕರ ಬಡ್ಡಿದರವನ್ನು ಶೇಕಡಾ 3.90 ಕ್ಕೆ ನಿಗದಿಪಡಿಸಲಾಗಿದೆ.

English summary

How to Earn Good Interest On FD In Just 7 Days: Details Here

here the details of short time fixed deposits , which bank gives you good interest rate
Story first published: Monday, July 5, 2021, 16:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X