ಮಾಸಿಕ 1 ಸಾವಿರ ಹೂಡಿಕೆ ಮಾಡಿ 18 ಲಕ್ಷ ರೂ. ಪಡೆಯುವುದು ಹೇಗೆ?
ಈ ದುಬಾರಿ ದುನಿಯಾದಲ್ಲಿ ಹಣ ಎಂಬುವುದು ಬಹಳ ಮುಖ್ಯವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯ ತೈಲ, ತರಕಾರಿ ಎಲ್ಲ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ. ಈ ನಡುವೆ ಜನರು ತಮ್ಮ ಭವಿಷ್ಯಕ್ಕೆ ಹೂಡಿಕೆ ಈಗಲೇ ಉಳಿತಾಯ ಮಾಡುವುದರತ್ತ ಕೂಡಾ ಗಮನಹರಿಸುತ್ತಿದ್ದಾರೆ. ನಾವು ನಿಮಗಿಲ್ಲಿ ಅಧಿಕ ರಿಟರ್ನ್ ಪಡೆಯುವ ಬಗ್ಗೆ ವಿವರಣೆ ನೀಡಿದ್ದೇವೆ. ಈ ಒಂದು ಯೋಜನೆಯಲ್ಲಿ ನೀವು ತಿಂಗಳಿಗೆ ಒಂದು ಸಾವಿರ ಹೂಡಿಕೆ ಮಾಡಿದರೆ 18 ಲಕ್ಷ ರೂಪಾಯಿ ರಿಟರ್ನ್ ಪಡೆಯಬಹುದು.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಪ್ರಸ್ತುತ ದೇಶದಲ್ಲಿ ಅತ್ಯಂತ ಜನಪ್ರಿಯ, ದೀರ್ಘಾವಧಿಯ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ. ಎಲ್ಲಾ ಭಾರತೀಯ ನಾಗರಿಕರಲ್ಲಿ ಇದು ಅತ್ಯಂತ ಜನಪ್ರಿಯವಾದ ಉಳಿತಾಯದ ಯೋಜನೆಗಳಲ್ಲಿ ಒಂದಾಗಿದೆ ಎಂದು ನಂಬಿದ್ದಾರೆ.
15 ವರ್ಷದ ಬಳಿಕ ನಿಮ್ಮ ಪಿಪಿಎಫ್ ಖಾತೆ ಏನು ಮಾಡುವುದು?
ಜನರು ಹೆಚ್ಚಾಗಿ ಸುರಕ್ಷಿತ ಆಯ್ಕೆಯನ್ನು ಹುಡುಕುತ್ತಾರೆ. ತಾವು ಹೂಡಿಕೆ ಮಾಡಿದ ಹಣವು ತಮ್ಮ ಕೈಗೆ ಸಿಗದಿದ್ದರೆ ಆ ಹೂಡಿಕೆ ಬೇಡ ಎಂದೇ ಹೆಚ್ಚಿನ ಜನರು ಭಾವಿಸುತ್ತಾರೆ. ಹಾಗೆಯೇ ಹೂಡಿಕೆಯಿಂದ ಅಧಿಕ ಹಣ ಎಲ್ಲಿ ಲಭ್ಯವಾಗುತ್ತದೆ ಎಂಬುವುದನ್ನು ಜನರು ನೋಡುತ್ತಾರೆ. ಅಂತಹ ಜನರಿಗೆ ಉತ್ತಮ ಆಯ್ಕೆ ಪಿಪಿಎಫ್ ಆಗಿದೆ. ಪಿಪಿಎಫ್ ಹೂಡಿಕೆಯ ತೆರಿಗೆ ಮುಕ್ತ ಸಾಧನವಾಗಿಯೂ ಕಾರ್ಯನಿರ್ವಹಿಸುತ್ತದೆ.

ಬಡ್ಡಿ ದರ, ಪ್ರಯೋಜನವೇನು?
ಹೂಡಿಕೆದಾರರು ತಮ್ಮ ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ 500 ರೂಪಾಯಿಗಳಷ್ಟು ಕಡಿಮೆ ಮತ್ತು ವರ್ಷಕ್ಕೆ 1.5 ಲಕ್ಷ ರೂಪಾಯಿಗಳಷ್ಟು ಹೂಡಿಕೆ ಮಾಡಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಅಥವಾ ಪಿಪಿಎಫ್ ಭಾರತದಲ್ಲಿ ಬಡ್ಡಿ-ಪಾವತಿಸುವ ಅಪಾಯ-ಮುಕ್ತ ಯೋಜನೆಗಳ ಅತ್ಯಂತ ಹೆಚ್ಚಿನ ದರಗಳಲ್ಲಿ ಒಂದಾಗಿದೆ. ಪಿಪಿಎಫ್ ಬಡ್ಡಿ ದರವು ಪ್ರಸ್ತುತ 7.1 ಪರ್ಸೆಂಟ್ ಆಗಿದೆ. ಇದು ಬ್ಯಾಂಕ್ನ ಎಫ್ಡಿಗಿಂತ ಅಧಿಕವಾಗಿದೆ. ಹೂಡಿಕೆ, ಬಡ್ಡಿ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುವ ಕೆಲವೇ ಕೆಲವು ಯೋಜನೆಗಳಲ್ಲಿ ಈ ಪಿಪಿಎಫ್ ಒಂದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆದಾರರು ತಮ್ಮ ಹಣವನ್ನು ಸತತವಾಗಿ 15 ವರ್ಷಗಳವರೆಗೆ ತಮ್ಮ ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಒಬ್ಬರಿಗೆ 15 ವರ್ಷಗಳ ಕೊನೆಯಲ್ಲಿ ಹಣದ ಅಗತ್ಯವಿಲ್ಲದಿದ್ದರೆ, ಅವನು ಅಥವಾ ಅವಳು ಪಿಪಿಎಫ್ ಖಾತೆಯ ಅವಧಿಯನ್ನು ಅಗತ್ಯವಿರುವಷ್ಟು ವರ್ಷಗಳವರೆಗೆ ವಿಸ್ತರಿಸಬಹುದು. ಪಿಪಿಎಫ್ ಖಾತೆ ವಿಸ್ತರಣೆ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಐದು ವರ್ಷಗಳವರೆಗೆ ವಿಸ್ತರಣೆ ಮಾಡಬಹುದು.

1,000 ರೂ. ಹೂಡಿಕೆ ಮಾಡಿ 8 ಲಕ್ಷಕ್ಕಿಂತ ಹೆಚ್ಚು ಪಡೆಯಿರಿ
ನಿಮ್ಮ ಪಿಪಿಎಫ್ ಖಾತೆಯಲ್ಲಿ ನೀವು ದಿನಕ್ಕೆ 33 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮಾಸಿಕ ಹೂಡಿಕೆ ಮೌಲ್ಯವು ಸುಮಾರು 1,000 ರೂಪಾಯಿ ಆಗಲಿದೆ. ಇದರರ್ಥ ವರ್ಷಕ್ಕೆ, ನೀವು ನಿಮ್ಮ ಸಾರ್ವಜನಿಕ ಭವಿಷ್ಯ ನಿಧಿ ಖಾತೆಯಲ್ಲಿ 12,000 ರೂಪಾಯಿಗಿಂತ ಸ್ವಲ್ಪ ಕಡಿಮೆ ಹೂಡಿಕೆ ಮಾಡುತ್ತಿದ್ದೀರಿ. ನಿಖರವಾಗಿ 11,988 ರೂಪಾಯಿ ಹೂಡಿಕೆ ಮಾಡುತ್ತಿದ್ದೀರಿ ಎಂದು ಅರ್ಥ.
ನೀವು 25 ವರ್ಷದಿಂದ 60 ವರ್ಷ ವಯಸ್ಸಿನವರೆಗೆ, ಅಂದರೆ 35 ವರ್ಷಗಳವರೆಗೆ ಹೀಗೆಯೇ ಹೂಡಿಕೆ ಮಾಡಿದರೆ ನೀವು ಮೆಚ್ಯೂರಿಟಿ ಸಮಯದಲ್ಲಿ ಪಡೆಯುವ ಮೊತ್ತವು 18.14 ಲಕ್ಷ ರೂಪಾಯಿ ಆಗಲಿದೆ. ಈ ಮೊತ್ತವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಗಳಿಸಿದ ಒಟ್ಟು ಬಡ್ಡಿಯು ಸುಮಾರು 14 ಲಕ್ಷ ಆಗಿರುತ್ತದೆ. 25 ವರ್ಷಗಳಲ್ಲಿ ನೀವು ಠೇವಣಿ ಇಡುವ ಒಟ್ಟು ಮೊತ್ತವು 4.19 ಲಕ್ಷ ರೂಪಾಯಿ ಆಗಿರಲಿದೆ.
ನೀವು ಅಂತಹ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ, ನೀವು ಮಾಡಬೇಕಾದ ಅಗತ್ಯವಿಲ್ಲ. ಸಾರ್ವಜನಿಕ ಭವಿಷ್ಯ ನಿಧಿಯು ಹೂಡಿಕೆಯ ವಿಷಯದಲ್ಲಿ ಜನರಿಗೆ ಆಯ್ಕೆಯನ್ನು ನೀಡುತ್ತದೆ. ನೀವು ಐನ್ನೂರು ರೂಪಾಯಿಗಿಂತಲೂ ಕಡಿಮೆ ಹೂಡಿಕೆ ಮಾಡಬಹುದು. ನೀವು ಆನ್ಲೈನ್ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಖಾತೆಯನ್ನು ಬ್ಯಾಂಕ್ನೊಂದಿಗೆ ಲಿಂಕ್ ಮಾಡಲು ಬ್ಯಾಂಕ್ಗೆ ಭೇಟಿ ನೀಡಬೇಕಾಗುತ್ತದೆ.