For Quick Alerts
ALLOW NOTIFICATIONS  
For Daily Alerts

ಐಟಿ ರಿಫಂಡ್‌ ಪಡೆಯಲು ಬ್ಯಾಂಕ್ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡುವುದು ಹೇಗೆ?

|

ನೀವು ಆದಾಯ ತೆರಿಗೆಯ ಮರುಪಾವತಿಯನ್ನು (ಐಟಿ ರಿಫಂಡ್‌) ಪಡೆಯಬೇಕಾದರೆ ಪೂರ್ವ ಮೌಲ್ಯಮಾಪನ ಮಾಡುವುದು ಅಗತ್ಯವಾಗಿದೆ. ಹಾಗೆಯೇ ನಿಮ್ಮ ಬ್ಯಾಂಕ್‌ ಖಾತೆಗೆ ಪ್ಯಾನ್‌ ಕಾರ್ಡ್ ಅನ್ನು ಲಿಂಕ್‌ ಮಾಡಿಕೊಳ್ಳುವುದು ಕೂಡಾ ಅತ್ಯಗತ್ಯವಾಗಿದೆ. ನೀವು ಆದಾಯ ತೆರಿಗೆಯನ್ನು ಹೊಂದಿರುವ ತೆರಿಗೆದಾರರಾಗಿದ್ದರೆ ಮತ್ತು ಪಾವತಿ ಮಾಡಲು ವಿಫಲವಾದರೆ ನಿಮ್ಮ ತೆರಿಗೆ ಮರುಪಾವತಿಯನ್ನು ಪಡೆಯಲು ಈ ಹಂತವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ.

 

ಇನ್ನು ಪೂರ್ವ ಮೌಲ್ಯಮಾಪನ ಮಾತ್ರವಲ್ಲದೇ ಈ ಐಟಿ ರಿಫಂಡ್‌ ಬರಲಿರುವ ಬ್ಯಾಂಕ್‌ ಖಾತೆಗೆ ನಿಮ್ಮ ಪ್ಯಾನ್‌ ಸಂಖ್ಯೆಯು ಲಿಂಕ್‌ ಆಗಿದೆಯೇ ಎಂದು ಕೂಡಾ ನೀವು ಖಚಿತ ಪಡಿಸಿಕೊಳ್ಳಬೇಕಾಗುತ್ತದೆ. ಈ ಹಿಂದೆ 2019 ರ ಮಾರ್ಚ್ ತಿಂಗಳಿನಲ್ಲಿ ಆದಾಯ ತೆರಿಗೆ ಇಲಾಖೆಯು, ಮರುಪಾತಿಯನ್ನು ಪ್ರತ್ಯೇಕವಾಗಿ ವಿತರಣೆ ಮಾಡುತ್ತದೆ ಎಂದು ಹೇಳಿದೆ.

ಡಿಜಿಟಲ್‌ ಹೆಲ್ತ್‌ ಐಡಿ ಪಡೆಯಲು ಯಾವೆಲ್ಲಾ ದಾಖಲೆ ಬೇಕು?, ಇಲ್ಲಿದೆ ಮಾಹಿತಿ

ಇದರಂತೆ ಯಾರ ಬ್ಯಾಂಕ್‌ ಖಾತೆಗೆ ಪ್ಯಾನ್‌ ಕಾರ್ಡ್ ಲಿಂಕ್‌ ಆಗಿದೆಯೋ ಹಾಗೂ ಪೂರ್ವ ಮೌಲ್ಯಮಾಪನ ಮಾಡಲಾಗಿದೆಯೋ ಅವರಿಗೆ ಮಾತ್ರ ಅವರಿಗೆ ಮಾತ್ರ ರಿಫಂಡ್‌ ಮಾಡಲಾಗುತ್ತದೆ ಎಂದು ವೆಬ್‌ಸೈಟ್‌ ಹೇಳುತ್ತದೆ. ಹಾಗಾದರೆ ಈ ಪೂರ್ವ ಮೌಲ್ಯಮಾಪನ ಮಾಡುವುದು ಹೇಗೆ ಎಂಬುವುದನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ.

 ಪೂರ್ವ ಮೌಲ್ಯಮಾಪನ ಆಗಿದೆಯೇ ಎಂದು ಮೊದಲು ಚೆಕ್‌ ಮಾಡಿ

ಪೂರ್ವ ಮೌಲ್ಯಮಾಪನ ಆಗಿದೆಯೇ ಎಂದು ಮೊದಲು ಚೆಕ್‌ ಮಾಡಿ

ಇನ್ನು ನಿಮ್ಮ ಬ್ಯಾಂಕ್‌ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡುವುದಕ್ಕೂ ಮುನ್ನ ಬ್ಯಾಂಕ್‌ ಖಾತೆಯನ್ನು ಈಗಾಗಲೇ ಪೂರ್ವ ಮೌಲ್ಯಮಾಪನ ಮಾಡಲಾಗಿದೆಯೇ ಎಂದು ಕೂಡಾ ನೀವು ತಿಳಿದು ಕೊಳ್ಳಬೇಕು. ಅದಕ್ಕಾಗಿ ನೀವು ಯಾವೆಲ್ಲಾ ಹಂತವನ್ನು ಪಾಲನೆ ಮಾಡಬೇಕು ಎಂದು ಈ ಕೆಳಗೆ ವಿವರಿಸಲಾಗಿದೆ

* ಮೊದಲು https://www.incometax.gov.in/iec/foportal ಗೆ ಲಾಗಿನ್‌ ಆಗಬೇಕು

* ಬಳಿಕ ಲಾಗಿನ್‌ ಸೆಕ್ಷನ್‌ ಅಡಿಯಲ್ಲಿ ನಿಮ್ಮ ಪ್ಯಾನ್‌ ಸಂಖ್ಯೆಯನ್ನು ಹಾಕಿ

* ಆಧಾರ್‌ ಮಾಹಿತಿ ಅಥವಾ ಯೂಸರ್‌ ಐಡಿ ಹಾಕಿ

* ಹಾಗೆಯೇ ಅಲ್ಲಿ ಕೇಳಿರುವ ಅಧಿಕ ಮಾಹಿತಿಯನ್ನು ಪತ್ತೆ ಹಚ್ಚಿ

* ಬಳಿಕ Continue ಅನ್ನು ಕ್ಲಿಕ್‌ ಮಾಡಿ, ಆಗ ನೀವು ನಿಮ್ಮ ಖಾತೆಗೆ ಲಾಗಿನ್‌ ಆಗುತ್ತೀರಿ

* ಆ ನಂತರ My Profile ಸೆಕ್ಷನ್‌ಗೆ ಹೋಗಿ

* ಬಳಿಕ My Bank Account

* ಈಗ ನಿಮಗೆ ಪೂರ್ವ ಮೌಲ್ಯಮಾಪನ ಆಗಿರುವ ನಿಮ್ಮ ಬ್ಯಾಂಕ್‌ ಖಾತೆಯ ಮಾಹಿತಿ ಲಭಿಸುತ್ತದೆ

* ಈಗ ನೀವು ಈ ಬ್ಯಾಂಕ್‌ನ ಲೀಸ್ಟ್‌ನಲ್ಲಿ ಖಾತೆಯನ್ನು ಆಯ್ಕೆ ಮಾಡಿ ನಿಮ್ಮ ರಿಫಂಡ್‌ ಬಗ್ಗೆ ತಿಳಿಯಲು Nominate for refund ಮೇಲೆ ಕ್ಲಿಕ್‌ ಮಾಡಬಹುದು

 ಪೂರ್ವ ಮೌಲ್ಯಮಾಪನ ಮಾಡುವುದು ಹೇಗೆ?
 

ಪೂರ್ವ ಮೌಲ್ಯಮಾಪನ ಮಾಡುವುದು ಹೇಗೆ?

* https://www.incometax.gov.in/iec/foportal ಪೋರ್ಟಲ್‌ಗೆ ಭೇಟಿ ನೀಡಿ ಸೈನ್‌ಇನ್‌ ಆಗಿ

* My Profile ಮೇಲೆ ಕ್ಲಿಕ್‌ ಮಾಡಿ My Bank Account ಆಯ್ಕೆ ಮಾಡಿ

* ಬಳಿಕ Add Bank Account ಮೇಲೆ ಕ್ಲಿಕ್‌ ಮಾಡಿ ಬ್ಯಾಂಕ್‌ ಖಾತೆಯ ವಿವರ, ಅಲ್ಲಿ ಕೇಳಿರುವ ಮಾಹಿತಿಗಳನ್ನು ನೀಡಿ

* ಆ ನಂತರ Validate ಮೇಲೆ ಕ್ಲಿಕ್‌ ಮಾಡಿ, ಬಳಿಕ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್‌ ನಿಮ್ಮ ಖಾತೆಯನ್ನು ಪೂರ್ವ ಮೌಲ್ಯಮಾಪನ ಮಾಡುತ್ತದೆ

* ಆ ಬಳಿಕ ಪೂರ್ವ ಮೌಲ್ಯಮಾಪನ ಮಾಡಿದ ಬ್ಯಾಂಕ್‌ಗಳ ಪಟ್ಟಿಯಲ್ಲಿ ನಿಮ್ಮ ಬ್ಯಾಂಕ್‌ ಖಾತೆ ಬರಲಿದೆ ಅದರಲ್ಲಿ Nominate for refund ಆಯ್ಕೆಯನ್ನು ಕ್ಲಿಕ್‌ ಮಾಡಿ

ವಿದ್ಯಾರ್ಥಿಗಳೇ ಖರ್ಚು ಮಿತಿ ಮೀರುತ್ತಿದೆಯೇ?, ಇಲ್ಲಿದೆ ನಿಮಗೆ ಅಗತ್ಯ ಸಲಹೆ

 ಆದಾಯ ತೆರಿಗೆ ಮರುಪಾವತಿಗೆ ಯಾರೆಲ್ಲಾ ಅರ್ಹರು?

ಆದಾಯ ತೆರಿಗೆ ಮರುಪಾವತಿಗೆ ಯಾರೆಲ್ಲಾ ಅರ್ಹರು?

ಒಂದು ನಿರ್ದಿಷ್ಟ ಹಣಕಾಸು ವರ್ಷದ ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್‌) ಅನ್ನು ಸಲ್ಲಿಸಿದ ಬಳಿಕ ನಿಮ್ಮ ಒಟ್ಟಾರೆ ತೆರಿಗೆಗಿಂತ ಹೆಚ್ಚಿನ ತೆರಿಗೆಯನ್ನು ನೀವು ಪಾವತಿಸಿದರೆ, ನೀವು ಆದಾಯ ತೆರಿಗೆ ಮರುಪಾವತಿಗೆ ಅರ್ಹರಾಗಬಹುದು. ಆದಾಗ್ಯೂ, ನಿಮ್ಮ ಆದಾಯ ತೆರಿಗೆ ಮರುಪಾವತಿಯನ್ನು ಆದಾಯ ತೆರಿಗೆ ಇಲಾಖೆಯು ಪ್ರಕ್ರಿಯೆಗೊಳಿಸುವವರೆಗೆ ಮತ್ತು ಪರಿಶೀಲಿಸುವವರೆಗೆ ನಿಮಗೆ ಪಾವತಿ ಆಗುವುದಿಲ್ಲ. ಆದಾಯ ತೆರಿಗೆ ಮರುಪಾವತಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲು ಯಾವುದೇ ತೊಂದರೆ ಉಂಟಾದಲ್ಲಿ, ನೀವು ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಈಎಫ್‌ಎಸ್‌ಸಿ ಅನ್ನು ನಮೂದಿಸಿದ್ದೀರಾ ಎಂದು ಪರಿಶೀಲನೆ ಮಾಡಿಕೊಳ್ಳಿ.

 ಆದಾಯ ತೆರಿಗೆ ಮರುಪಾವತಿ ಆಗಿದೆಯೇ ಎಂದು ಪರಿಶೀಲನೆ ಮಾಡುವುದು ಹೇಗೆ?

ಆದಾಯ ತೆರಿಗೆ ಮರುಪಾವತಿ ಆಗಿದೆಯೇ ಎಂದು ಪರಿಶೀಲನೆ ಮಾಡುವುದು ಹೇಗೆ?

* https://www.incometax.gov.in/iec/foportal ಗೆ ಭೇಟಿ ನೀಡಿ ಸೈನ್‌ಇನ್‌ ಆಗಿ

* e-file ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ

* Income Tax Returns ಆಯ್ಕೆ ಮಾಡಿ

* View Filed Returns ಮೇಲೆ ಕ್ಲಿಕ್‌ ಮಾಡಿ, ಬಳಿಕ ನಿಮಗೆ ಮಾಹಿತಿ ಲಭಿಸಲಿದೆ.

* View Details ಮೇಲೆ ಕ್ಲಿಕ್‌ ಮಾಡಿದರೆ ನಿಮಗೆ ಎಲ್ಲಾ ಮಾಹಿತಿ ಲಭಿಸುತ್ತದೆ

English summary

How To Pre-validate Your Bank Account Online To Get Income Tax Refund?, Explained in Kannada

How To Pre-validate Your Bank Account Online To Get Income Tax Refund?, Explained in Kannada. Read on.
Story first published: Thursday, October 7, 2021, 14:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X