For Quick Alerts
ALLOW NOTIFICATIONS  
For Daily Alerts

ಹಣದುಬ್ಬರದ ನಡುವೆ ಹಣ ಉಳಿತಾಯ ಮಾಡುವುದು ಹೇಗೆ?

|

ಹಣದುಬ್ಬರವು ದೇಶದಲ್ಲಿ ಏರಿಕೆ ಆಗುತ್ತಿದೆ. ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದೆ. ಈ ನಡುವೆ ನಿಮ್ಮ ಕೈಯಲ್ಲಿ ಇರುವ ಹಣವನ್ನು ಉಳಿತಾಯ ಮಾಡುವುದು ಹೇಗೆ, ಹಣವನ್ನು ಸರಿಯಾಗಿ ಹೊಂದಾಣಿಕೆ ಮಾಡಿ ವೆಚ್ಚ ಮಾಡುವುದು ಹೇಗೆ ಎಂಬುವುದೇ ತಲೆ ನೋವಾಗಿದೆ. ಈ ಹಣದುಬ್ಬರದ ಹಿನ್ನೆಲೆ ನಿಮ್ಮ ಕೈಯಲ್ಲಿ ಇರುವ ಹಣದ ಮೌಲ್ಯವು ಕಡಿಮೆ ಆಗುತ್ತಲೇ ಹೋಗುತ್ತಿದೆ. ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ.

 

ಈ ಮಧ್ಯೆ ನಿಮ್ಮ ಹಣವನ್ನು ನೀವು ಉಳಿತಾಯ ಮಾಡಬೇಕಾದರೆ ನಿಮ್ಮ ಹಣಕಾಸು ನಿರ್ವಹಣೆ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. "ಹಣದುಬ್ಬರವು ಹೂಡಿಕೆದಾರರು ಮತ್ತು ಉಳಿತಾಯದಾರರು ತಮ್ಮ ಕಾರ್ಯತಂತ್ರಗಳನ್ನು ಮರುಮೌಲ್ಯಮಾಪನ ಮಾಡುವ ಸಮಯವಾಗಿದೆ," ಎಂದು ಹಣಕಾಸು ಸಲಹೆಗಾರ ಸಂಸ್ಥೆ ರಸೆಲ್ ಮತ್ತು ಕಂಪನಿಯ ಸಿಇಒ ವಾಲ್ಟರ್ ರಸೆಲ್ ಹೇಳಿದ್ದಾರೆ.

ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ?

ಕೇಂದ್ರೀಯ ಬ್ಯಾಂಕ್‌ಗಳ ಮೂಲಕ, ಸರ್ಕಾರಗಳು ಪ್ರಮುಖ ಸಾಲದ ದರವನ್ನು ಹೆಚ್ಚಿಸುವ ಮೂಲಕ ಹಣದುಬ್ಬರವನ್ನು ಎದುರಿಸಲು ಪ್ರಯತ್ನಿಸುತ್ತಿವೆ. ಆದರೆ ಇದರಿಂದಾಗಿ ಸಾಲದ ಬಡ್ಡಿದರಗಳು ಏರಿಕೆ ಆಗಲಿದೆ. ಇದು ಜನರ ಮೇಲೆ ಹೊರೆಯಾಗಲಿದೆ. ಆದರೆ ಎಫ್‌ಡಿ ಮಾಡಿಕೊಳ್ಳುವವರಿಗೆ ಉತ್ತಮ ಆಯ್ಕೆ ಇದೆ. ಈ ನಡುವೆ ಭವಿಷ್ಯವು ಏನನ್ನು ತರುತ್ತದೆ ಎಂದು ಯಾರಿಗೂ ತಿಳಿದಿಲ್ಲ, ಆದರೆ ನೀವು ಹೇಗೆ ಖರ್ಚು ಮಾಡುತ್ತೀರಿ ಮತ್ತು ನಿಮ್ಮ ಹಣವನ್ನು ಎಲ್ಲಿ ಉಳಿತಾಯ ಮಾಡುತ್ತೀರಿ ಎಂಬುದರ ಬಗ್ಗೆ ನೀವು ಗಮನ ಹರಿಸಬೇಕು. ಆಗ ಮಾತ್ರ ನೀವು ಹಣದುಬ್ಬರದ ಸಮಯವನ್ನು ಹೆಚ್ಚು ಸುಲಭವಾಗಿ ಎದುರಿಸಬಹುದು. ಹಣದುಬ್ಬರದ ಅವಧಿಯಲ್ಲಿ ನೀವು ಹೆಚ್ಚು ಉಳಿತಾಯ ಮಾಡಲು ಪಾಲಿಸಬೇಕಾದ ಮಾರ್ಗಗಳು ಇಲ್ಲಿದೆ ಮುಂದೆ ಓದಿ..

 ಬಡ್ಡಿದರ ಹೆಚ್ಚಿರುವೆಡೆ ಉಳಿತಾಯ ಮಾಡಿ

ಬಡ್ಡಿದರ ಹೆಚ್ಚಿರುವೆಡೆ ಉಳಿತಾಯ ಮಾಡಿ

ಹೆಚ್ಚಿನ ಹಣದುಬ್ಬರದ ಅವಧಿಯಲ್ಲಿ ದೊಡ್ಡ ಖರೀದಿಗಳಿಗೆ ಸಾಲವನ್ನು ಸುಲಭವಾಗಿ ಪಡೆಯಲು ಸಾಧ್ಯವಾಗದಿರುವುದು ನಿರಾಶೆಯನ್ನು ಉಂಟುಮಾಡಬಹುದು. ಆದರೂ, ಗ್ರಾಹಕರು ತಮ್ಮ ನಗದು ಮೇಲಿನ ಹಣದುಬ್ಬರದ ಪರಿಣಾಮಗಳ ವಿರುದ್ಧ ಹೋರಾಡಲು ಬ್ಯಾಂಕ್ ಖಾತೆಗಳ ಮೇಲಿನ ಹೆಚ್ಚಿನ ಬಡ್ಡಿದರಗಳ ಲಾಭವನ್ನು ಪಡೆಯಬಹುದು. ನೀವು ಹೆಚ್ಚು ಬಡ್ಡಿದರ ಇರುವ ಬ್ಯಾಂಕಿನಲ್ಲೇ ಉಳಿತಾಯ ಮಾಡಿಕೊಳ್ಳಬಹುದು. ಬ್ಯಾಂಕ್ ಖಾತೆಯ ಬಡ್ಡಿದರಗಳು ಸಾಮಾನ್ಯವಾಗಿ ಹಣದುಬ್ಬರದ ದರವನ್ನು ಸಂಪೂರ್ಣವಾಗಿ ಕಡಿಮೆ ಮಾಡಲಾರದು. ಆದರೆ ಈ ಖಾತೆಗಳು ಹಣದುಬ್ಬರದ ವಿರುದ್ಧ ಹಣವನ್ನು ಮನೆಯಲ್ಲಿ ಅಥವಾ ಕಡಿಮೆ ದರದ ಖಾತೆಯಲ್ಲಿ ಇಡಲು ಉತ್ತಮವಾಗಿ ಸಹಾಯಕವಾಗಿದೆ.

 ಕಡಿಮೆ ವೆಚ್ಚ ಮಾಡಲು ಮಾರ್ಗ ಕಂಡುಕೊಳ್ಳಿ

ಕಡಿಮೆ ವೆಚ್ಚ ಮಾಡಲು ಮಾರ್ಗ ಕಂಡುಕೊಳ್ಳಿ

ನೀವು ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಿ ನಿಮ್ಮ ಹಣ ಎಲ್ಲಿ ವೆಚ್ಚವಾಗುತ್ತಿದೆ ಎಂದು ಕೂಡಾ ನೀವು ಗಮನಹರಿಸುವುದು ಮುಖ್ಯವಾಗಿದೆ. ನೀವು ಕೊರೊನಾ ವೈರಸ್ ಸಂದರ್ಭದಲ್ಲಿ ಹಲವಾರು ಸೇವೆಗಳಿಗೆ ಚಂದಾದಾರಿಗರಬಹುದು. ಅದು ಈಗ ನಿಮಗೆ ಸದುಪಯೋಗಕ್ಕೆ ಬರುತ್ತಿದೆಯೇ ಎಂದು ನೋಡಿಕೊಳ್ಳಿ. ಇಲ್ಲವಾದರೆ ಲಾಭವಿಲ್ಲದೆ ಚಂದಾದಾರಾಗಿರಬೇಡಿ. ನೀವು ಹಣವನ್ನು ಹೆಚ್ಚು ಹೊರಗಡೆ ಹೋಟೆಲ್‌ಗಳಲ್ಲಿ ಆಹಾರ ಸೇವಿಸಲೆಂದೇ ದುಂದಾಗಿ ಖರ್ಚು ಮಾಡುತ್ತಿರಬಹುದು. ಆ ಕಡೆ ಗಮನಹರಿಸಿ. ಹೆಚ್ಚಾಗಿ ಹೊರಗಡೆ ಆಹಾರ ಸೇವನೆಗೆ ದುಂದುವೆಚ್ಚ ಮಾಡಿದರೆ ಈ ಹಣದುಬ್ಬರ ಸಂದರ್ಭದಲ್ಲಿ ಹಣ ಕೈಯಲ್ಲಿ ಉಳಿಯುವುದು ಹೇಗೆ ಹೇಳಿ. ಈ ಬಗ್ಗೆ ಸರಿಯಾಗಿ ಗಮನಹರಿಸಿ. ತಿಂಗಳ ಬಜೆಟ್ ನಿರ್ವಹಿಸಿ.

 ಹಣ ಉಳಿತಾಯಕ್ಕೆ ಹಲವಾರು ಮಾರ್ಗಗಳು
 

ಹಣ ಉಳಿತಾಯಕ್ಕೆ ಹಲವಾರು ಮಾರ್ಗಗಳು

ಕೆಲವರು ಹಣವನ್ನು ಉಳಿಸಲು ಇನ್ನೂ ಹೆಚ್ಚಿನ ಆಮೂಲಾಗ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಣದುಬ್ಬರದ ಹಿನ್ನೆಲೆಯಲ್ಲಿ ತನ್ನ ವೆಚ್ಚವನ್ನು ಕಡಿಮೆ ಮಾಡಲು ಇತ್ತೀಚೆಗೆ ದೊಡ್ಡ ಜೀವನಶೈಲಿಯನ್ನು ಬದಲಾಯಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಹಣಕಾಸು ಬ್ಲಾಗರ್ ಅಮಂಡಾ ಕ್ಲೇಪೂಲ್, "ಹೆಚ್ಚುತ್ತಿರುವ ಆಹಾರದ ವೆಚ್ಚಗಳು ಮತ್ತು ಸಂಪೂರ್ಣ ಪೂರೈಕೆ ಸರಪಳಿಯ ಮೇಲೆ ಪರಿಣಾಮ ಬೀರುವ ಬಗ್ಗೆ ನನಗೆ ಕಾಳಜಿ ಇದೆ. ನಾನು ತಿನ್ನುವುದನ್ನು ಆನಂದಿಸುವುದಕ್ಕಿಂತ ನನ್ನ ದೇಹಕ್ಕೆ ನಿಜವಾಗಿ ಯಾವ ಆಹಾರ ಬೇಕು ಎಂಬುದನ್ನು ಕೂಡಾ ನೋಡಬೇಕಾಗುತ್ತದೆ. ಹಾಗೆಯೇ ಭವಿಷ್ಯದ ಆಹಾರದ ಅಭದ್ರತೆಗೆ ತಯಾರಾಗಲು ನಾನು ಈಗ ಸಮಯವನ್ನು ಬಳಸುತ್ತಿದ್ದೇನೆ," ಎಂದು ಹೇಳಿದ್ದಾರೆ.

 ಉಳಿತಾಯಕ್ಕಾಗಿ ಹೂಡಿಕೆ ಮಾಡಿ

ಉಳಿತಾಯಕ್ಕಾಗಿ ಹೂಡಿಕೆ ಮಾಡಿ

ನೀವು ತುರ್ತು ನಿಧಿಯಾಗಿ ಉಳಿತಾಯ ಮಾಡುವುದು ಅತೀ ಮುಖ್ಯವಾಗಿದೆ. ನೀವು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ತಕ್ಷಣಕ್ಕೆ ಅಗತ್ಯವಿಲ್ಲದ ಉಳಿತಾಯವನ್ನು ಹೊಂದಿದ್ದರೆ, ಆ ಹಣವನ್ನು ಹೂಡಿಕೆ ಮಾಡಬಹುದು. ಈ ಮೂಲಕ ಉಳಿತಾಯ ಮಾಡಬಹುದು. ಬಾಂಡ್‌ಗಳನ್ನು ಖರೀದಿ ಮಾಡಬಹುದು. ಆದರೆ ಷೇರು ಮಾರುಕಟ್ಟೆ ಮಾತ್ರ ಅಪಾಯಕಾರಿ ಎಂಬುವುದು ಗಮನದಲ್ಲಿ ಇರಲಿ.

English summary

How to Save Money When Inflation Grows?, Explained in Kannada

How to Save Money When Inflation Grows?, Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X