ಐಸಿಐಸಿಐ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಹೆಚ್ಚಳ: ಇಲ್ಲಿದೆ ವಿವರ
ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ನಂತಹ ಖಾಸಗಿ ಬ್ಯಾಂಕ್ಗಳು ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದ ಬಳಿಕ, ಈಗ ಐಸಿಐಸಿಐ ಬ್ಯಾಂಕ್ ಕೂಡಾ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಇದು ಇತ್ತೀಚಿನ ಎಫ್ಡಿ ದರಗಳು ಹೊಸ ಮತ್ತು ಹಳೆಯ ಎಫ್ಡಿ ಖಾತೆಗಳಿಗೆ ಅನ್ವಯ ಆಗಲಿದೆ. ಬಡ್ಡಿ ದರಗಳು ಜನವರಿ 20 ರಿಂದ ಅನ್ವಯವಾಗುತ್ತವೆ.
ಖಾಸಗಿ ಬ್ಯಾಂಕುಗಳು ಮಾತ್ರವಲ್ಲದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ನಂತಹ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಸಹ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಹೆಚ್ಚಿನ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಕೂಡಾ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದೆ.
ಬಜೆಟ್ 2022: ಗೃಹ ಸಾಲಗಳ ಮೇಲಿನ ತೆರಿಗೆ ಕಡಿತ ಹೆಚ್ಚಳ ನಿರೀಕ್ಷೆ
ಐಸಿಐಸಿಐ ಬ್ಯಾಂಕ್ ತನ್ನ ಅಧಿಕೃತ ಪೋರ್ಟಲ್ನಲ್ಲಿ ಬಡ್ಡಿದರಗಳಲ್ಲಿ ಬದಲಾವಣೆಯನ್ನು ಘೋಷಣೆ ಮಾಡಿದೆ. ಐಸಿಐಸಿಐ ಬ್ಯಾಂಕಿನಲ್ಲಿ ಎಫ್ಡಿ ಖಾತೆಯನ್ನು ತೆರೆಯುವ ಮೂಲಕ ಹೂಡಿಕೆದಾರರು ವಿವಿಧ ಬಡ್ಡಿದರಗಳನ್ನು ವಿವರಿಸಲು ಬ್ಯಾಂಕ್ ಒಂದು ಚಾರ್ಟ್ ಅನ್ನು ಸೇರಿಸಿದೆ.

ಹೊಸ ಬಡ್ಡಿದರ ಹೇಗಿದೆ?
ಇತ್ತೀಚಿನ ಬದಲಾವಣೆ ಬಳಿಕ ಹೂಡಿಕೆದಾರರು ಈಗ ತಮ್ಮ ಏಳರಿಂದ 29 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್ಡಿ ಖಾತೆಗಳಿಗೆ ಕನಿಷ್ಠ 2.50 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. 30 ದಿನಗಳಿಂದ 45 ದಿನಗಳೊಳಗೆ ಮೆಚ್ಯೂರಿಟಿ ಹೊಂದುವ ಎಫ್ಡಿಗಳ ಮೇಲೆ ಬ್ಯಾಂಕ್ ಶೇಕಡಾ 3 ರ ಬಡ್ಡಿದರವನ್ನು ನೀಡುತ್ತಿದೆ. ಇದಲ್ಲದೆ, 30 ರಿಂದ 90 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಖಾತೆಗಳಿಗೆ, ಹೂಡಿಕೆದಾರರು 3 ಶೇಕಡಾ ಬಡ್ಡಿದರವನ್ನು ಪಡೆಯಬಹುದು. ಮತ್ತೊಂದೆಡೆ, 91 ದಿನಗಳಿಂದ 120 ದಿನಗಳವರೆಗೆ ಮುಕ್ತಾಯದ ಅವಧಿಯ ಫಿಕ್ಸಿಡ್ ಡೆಪಾಸಿಟ್ಗಳಿಗೆ 3.50 ಶೇಕಡಾ ಬಡ್ಡಿದರವನ್ನು ಪಡೆಯಬಹುದು.
121 ದಿನಗಳಿಂದ 150 ದಿನಗಳವರೆಗೆ ಫಿಕ್ಸಿಡ್ ಡೆಪಾಸಿಟ್ಗಳ ಹೂಡಿಕೆದಾರರಿಗೆ 3.50 ಪ್ರತಿಶತವನ್ನು ಒದಗಿಸುತ್ತದೆ. ಇದಲ್ಲದೆ, ಬ್ಯಾಂಕ್ ಐದು ವರ್ಷಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ಗಳ ಮೇಲೆ ಶೇಕಡಾ 5.45 ರ ಬಡ್ಡಿದರವನ್ನು ಒದಗಿಸುತ್ತಿದೆ. ಅಲ್ಲದೆ, ಹೂಡಿಕೆದಾರರು ಫಿಕ್ಸಿಡ್ ಡೆಪಾಸಿಟ್ಗಳ ಮೇಲೆ ಶೇಕಡಾ 3.50 ರ ಬಡ್ಡಿದರವನ್ನು ಪಡೆಯಬಹುದು. ಮೇಲೆ ತಿಳಿಸಿದ ಎಲ್ಲಾ ಬಡ್ಡಿ ದರಗಳು ರೂ. 2 ಕೋಟಿಗಿಂತ ಕಡಿಮೆ ಮೌಲ್ಯದ ಸಾಮಾನ್ಯ ನಾಗರಿಕರ ಫಿಕ್ಸಿಡ್ ಡೆಪಾಸಿಟ್ಗಳಿಗೆ ಅನ್ವಯ ಆಗಲಿದೆ. ಹಿರಿಯ ನಾಗರಿಕ ಹೂಡಿಕೆದಾರರು ಫಿಕ್ಸಿಡ್ ಡೆಪಾಸಿಟ್ ಹೂಡಿಕೆಯ ಮೇಲೆ 50 ಬೇಸ್ ಪಾಯಿಂಟ್ಗಳ ಹೆಚ್ಚುವರಿ ಬಡ್ಡಿ ದರಗಳನ್ನು ಪಡೆಯುವುದು ಈ ಹಿಂದಿನಂತೆಯೇ ಮುಂದುವರಿಯಲಿದೆ ಹೂಡಿಕೆದಾರರು ತಮ್ಮ ಫಿಕ್ಸಿಡ್ ಡೆಪಾಸಿಟ್ ಹೂಡಿಕೆಗಳ ಮೇಲಿನ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಎಸ್ಬಿಐ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರ ಏರಿಕೆ
ಬ್ಯಾಂಕ್ ಸ್ಥಿರ ಠೇವಣಿ (ಎಫ್ಡಿ) ಮೇಲಿನ ಬಡ್ಡಿದರಗಳನ್ನು 10 ಬೇಸಿಸ್ ಪಾಯಿಂಟ್ಗಳವರೆಗೆ ಅಥವಾ ಶೇಕಡಾ 0.10 ರಷ್ಟು ಹೆಚ್ಚಿಸಿದೆ ಎಂದು ಶನಿವಾರ ಹೇಳಿದೆ. "ಎಸ್ಬಿಐ 1 ವರ್ಷದ ಅವಧಿಯ ಅಥವಾ 2 ವರ್ಷಕ್ಕಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು 5.0 ರಿಂದ ಶೇಕಡಾ 5.1 ಕ್ಕೆ ಹೆಚ್ಚಿಸಿದೆ. ಆದರೂ ಹಿರಿಯ ನಾಗರಿಕರಿಗೆ, 1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ದರವನ್ನು ಶೇ 5.50 ರಿಂದ 5.60 ಕ್ಕೆ ಹೆಚ್ಚಿಸಲಾಗಿದೆ ಎಂದು ಎಸ್ಬಿಐ ವೆಬ್ಸೈಟ್ ಉಲ್ಲೇಖ ಮಾಡಿದೆ. ಇನ್ನು ಇತರೆ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿ ದರಗಳು ಬದಲಾಗದೆ ಉಳಿದಿವೆ.