ಐಟಿ ರಿಟರ್ನ್ ಮುಂಚಿತವಾಗಿ ಸಲ್ಲಿಸಿದರೆ ನಿಮಗಿದೆ ಲಾಭ, ಇಲ್ಲಿದೆ ಮಾಹಿತಿ
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ನ ಕೊನೆಯ ದಿನಾಂಕವನ್ನು ಇತ್ತೀಚೆಗೆ ವಿಸ್ತರಣೆ ಮಾಡಿದೆ. ಡಿಸೆಂಬರ್ 31, 2021 ರವರೆಗೆ ಈಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಆನ್ಲೈನ್ನಲ್ಲಿ ಸಲ್ಲಿಸಲು ಇನ್ನೂ ಎರಡು ತಿಂಗಳುಗಳಿರುವ ಕಾರಣ ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಂಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಅನುಕೂಲಗಳು ಯಾವುದು ಎಂದು ಜನರಿಗೆ ತಿಳಿಸಿದೆ.
ಹಿರಿಯ ನಾಗರಿಕರಿಗಾಗಿ ಪ್ರಧಾನ ಮಂತ್ರಿ ವಯ ವಂದನ ಯೋಜನೆ, ಏನಿದೆ ಲಾಭ?
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ಬಿಐ, "ಯೋನೋ ಮೂಲಕ Tax2win ನಿಂದ ಮುಂಚಿತವಾಗಿಯೇ ನೀವು ಐಟಿಆರ್ ಅನ್ನು ಪಾವತಿ ಮಾಡಿದರೆ ನಿಮಗೆ ಅಧಿಕ ಲಾಭ ದೊರೆಯಲಿದೆ. ನೀವು ಉಚಿತವಾಗಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡಬಹುದು ಮಾತ್ರವಲ್ಲದೇ, ನಿಮಗೆ ಶೀಘ್ರವೇ ಮರು ಪಾವತಿ ಆಗಲಿದೆ," ಎಂದು ತಿಳಿಸಿದೆ. ಹಾಗಾದರೆ ಮುಂಚಿತವಾಗಿ ಐಟಿ ರಿಟರ್ನ್ ಸಲ್ಲಿಕೆ ಮಾಡಿದರೆ ಏನೆಲ್ಲಾ ಲಾಭವಿದೆ ಎಂದು ತಿಳಿಯಲು ಮುಂದೆ ಓದಿ.

ಮುಂಚಿತವಾಗಿ ಐಟಿ ರಿಟರ್ನ್ ಸಲ್ಲಿಕೆ ಮಾಡಿದರೆ ಏನು ಲಾಭ?
ನೀವು ಮುಂಚಿತವಾಗಿ ಆದಾಯ ತೆರಿಗೆ ಫೈಲ್ ಮಾಡುವುದರಿಂದ ನಿಮಗೆ ಪ್ರಕ್ರಿಯೆಗೆ ಕಡಿಮೆ ವೆಚ್ಚ ತಗುಲುತ್ತದೆ. ನೀವು ಮುಂಚಿತವಾಗಿಯೇ ಆದಾಯ ತೆರಿಗೆ ಫೈಲ್ ಮಾಡಿದರೆ ನಿಮಗೆ ಶೀಘ್ರವೇ ರೀಫಂಡ್ ಆಗಲಿದೆ. ಇನ್ನು ಅಷ್ಟು ಮಾತ್ರವಲ್ಲದೇ ನೀವು ಕೊನೆಯ ಕ್ಷಣದಲ್ಲಿ ಯಾವುದೇ ತರಾತುರಿಗೆ ಒಳಗಾಗಬೇಕಾಗಿ ಬರುವುದಿಲ್ಲ. ಯಾವುದೇ ದಾಖಲೆಯಲ್ಲಿ ತೊಂದರೆಗಳು ಇದ್ದರೆ ನೀವು ಈಗಲೇ ಪರಿಹರಿಸಿಕೊಳ್ಳಬಹುದು. ಅದಕ್ಕಾಗಿ ಸಾಕಷ್ಟು ಸಮಯ ದೊರೆಯಲಿದೆ. ಒಂದು ವೇಳೆ ಕೊನೆಯ ಕ್ಷಣದವರೆಗೆ ಕಾದರೆ ನಿಮಗೆ ಕೊನೆಯ ಕ್ಷಣದಲ್ಲಿ ಸಮಯವಕಾಶ ಕಡಿಮೆ ಎನಿಸಬಹುದು.

ಕೇವಲ 199 ರೂಪಾಯಿಗೆ ಆರ್ಥಿಕ ಸಹಕಾರ ಆಡಳಿತ ನೆರವು
ಇನ್ನು ಈ ಎಲ್ಲಾ ಲಾಭಗಳನ್ನು ಪಡೆಯಲು ಇಚ್ಛಿಸುವ ಎಸ್ಬಿಐನ ಗ್ರಾಹಕರು ಎಸ್ಬಿಐನ ಯೋನೋ ಆಪ್ ಮೂಲಕ ಈ ಪ್ರಕ್ರಿಯೆಯನ್ನು ನಡೆಸಬಹುದು. ಇದರಲ್ಲಿ ಉಚಿತವಾಗಿ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಬಹುದು. ಈ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಸಂದರ್ಭದಲ್ಲಿ ನಿಮ್ಮ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾಮ್-16, ಬಡ್ಡಿ ಆದಾಯ ಪ್ರಮಾಣಪತ್ರಗಳು, ಹೂಡಿಕೆ ಪುರಾವೆ ಅಥವಾ ದಾಖಲೆಗಳು ಸೇರಿದಂತೆ ಆದಾಯ ತೆರಿಗೆ ಕಡಿತದ ದಾಖಲೆಗಳು ಇರಬೇಕಾಗುತ್ತದೆ. ಉಚಿತ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಮಾತ್ರವಲ್ಲದೇ ಎಸ್ಬಿಐ ಗ್ರಾಹಕರಿಗೆ ಆರ್ಥಿಕ ಸಹಕಾರ ಆಡಳಿತ (ಇಸಿಎ) ನೆರವು ಕೇವಲ 199 ರೂಪಾಯಿಗೆ ದೊರೆಯಲಿದೆ. ಈ ಆಫರ್ ಡಿಸೆಂಬರ್ 31, 2021 ರವರೆಗೆ ಇರಲಿದೆ.
ಭಾರತದ ಟಾಪ್ 7 ಗೋಲ್ಡ್ ಕಂಪನಿಗಳ ಸ್ಟಾಕ್ಗಳು, ಇಲ್ಲಿದೆ ಸಂಪೂರ್ಣ ಮಾಹಿತಿ..

ಎಸ್ಬಿಐನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ?
ಎಸ್ಬಿಐ ಗ್ರಾಹಕರು ಎಸ್ಬಿಐನಲ್ಲಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲು ಕೆಲವು ಹಂತಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆ ಹಂತಗಳು ಈ ಕೆಳಗಿನಂತಿವೆ, ಮುಂದೆ ಓದಿ.
* ಯೋನೋ ಎಸ್ಬಿಐ ಖಾತೆಗೆ ಮೊದಲು ಸೈನ್ ಇನ್ ಆಗಿ
* Shop & Order ಮೇಲೆ ಕ್ಲಿಕ್ ಮಾಡಿ
* ಬಳಿಕ Tax & Investment ಮೇಲೆ ಕ್ಲಿಕ್ ಮಾಡಿ
* Tax2win ಮೇಲೆ ಕ್ಲಿಕ್ ಮಾಡಿ ಎಲ್ಲಾ ದಾಖಲೆಗಳ ಮಾಹಿತಿ ಭರ್ತಿ ಮಾಡಿ

ಐಟಿ ರಿಟರ್ನ್ಸ್ ಸಲ್ಲಿಸುವ ಪ್ರಮುಖ ದಿನಾಂಕಗಳು, ನೀವು ತಿಳಿಯಲೇ ಬೇಕು
ಡಿಸೆಂಬರ್ 31, 2021 ರವರೆಗೆ ಈಗ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಇನ್ನು ಸಿಬಿಡಿಟಿ ಇದಕ್ಕೂ ಮುನ್ನ ಕೂಡಾ ದಿನಾಂಕವನ್ನು ವಿಸ್ತರಣೆ ಮಾಡಿದೆ. ಇದನ್ನು ತೆರಿಗೆದಾರರು ತಿಳಿದಿರಬೇಕು.
* 2020-21ರ ಹಣಕಾಸು ವರ್ಷದ ಲೆಕ್ಕಪರಿಶೋಧನೆಯ ವರದಿಯನ್ನು ಸಲ್ಲಿಸುವ ಗಡುವನ್ನು ಈ ಹಿಂದೆ ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿತ್ತು, ಈಗ 2022 ರ ಜನವರಿ 15 ರವರೆಗೆ ವಿಸ್ತರಿಸಲಾಗಿದೆ.
* 2020-21 ರ ಕಾಯಿದೆಯ ಸೆಕ್ಷನ್ 92 ಇ ಅಡಿಯಲ್ಲಿ ಅಂತಾರಾಷ್ಟ್ರೀಯ ವಹಿವಾಟು ಅಥವಾ ನಿರ್ದಿಷ್ಟ ದೇಶೀಯ ವಹಿವಾಟುಗಳಿಗೆ ಅವಕಾಶ ಪಡೆಯುವ ಗಡುವನ್ನು ಈ ಹಿಂದೆ 30 ನವೆಂಬರ್ 2021 ರವರೆಗೆ ವಿಸ್ತರಿಸಲಾಗಿತ್ತು, ಈಗ ಅದನ್ನು 31 ಜನವರಿ 2022 ಕ್ಕೆ ವಿಸ್ತರಿಸಲಾಗಿದೆ.
* 2021-22 ವರ್ಷದ ಆದಾಯ ರಿಟರ್ನ್ ಸಲ್ಲಿಸುವ ಗಡುವು ಈ ಹಿಂದೆ 30 ನವೆಂಬರ್ 2021 ರವರೆಗೆ ಇತ್ತು ಈಗ ಅದನ್ನು 15 ಫೆಬ್ರವರಿ 2022 ಕ್ಕೆ ವಿಸ್ತರಿಸಲಾಗಿದೆ.
* 2021-22 ವರ್ಷದ ಆದಾಯ ರಿಟರ್ನ್ ಸಲ್ಲಿಸುವ ಗಡುವು ಈ ಹಿಂದೆ ಕಾಯಿದೆಯ ಸೆಕ್ಷನ್ 139 ರ ಸೆಕ್ಷನ್ 139 ರ ಉಪ-ಸೆಕ್ಷನ್ (1) ಅಡಿಯಲ್ಲಿ 31 ನೇ ಡಿಸೆಂಬರ್ 2021 ರವರೆಗೆ ವಿಸ್ತರಿಸಲ್ಪಟ್ಟಿತ್ತು, ಈಗ 28 ಫೆಬ್ರವರಿ 2022 ಕ್ಕೆ ವಿಸ್ತರಿಸಲಾಗಿದೆ.
* 2021-22 ಕ್ಕೆ ತಡವಾಗಿ/ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಲು ಈ ಹಿಂದೆ 31 ಜನವರಿ 2022 ಕ್ಕೆ ವಿಸ್ತರಿಸಲಾಗಿತ್ತು. ಈಗ 31 ಮಾರ್ಚ್ 2022 ಕ್ಕೆ ವಿಸ್ತರಿಸಲಾಗಿದೆ.