ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಬಗ್ಗೆ ಮುಖ್ಯ ಸಂಗತಿ
ಪಿಎನ್ ಬಿ ಮೆಟ್ ಲೈಫ್ ಇಂಡಿಯಾ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ ಜತೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಕೈಜೋಡಿಸಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾವನ್ನು ಆರಂಭಿಸಿದೆ. ಯಾವುದೇ ಕಾರಣದಿಂದ ಸಾವು ಸಂಭವಿಸಿದರೂ ಲೈಫ್ ಕವರ್ ಆಗುತ್ತದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಬಗ್ಗೆ ಗೊತ್ತಿರಬೇಕಾದ ಸಂಗತಿಗಳು:
* ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆದಾರರಿಗೆ ಈ ಯೋಜನೆಯು ಐಚ್ಛಿಕವಾಗಿರುತ್ತದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ ಅಡಿಯಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಎಂಬುದು ಕೆವೈಸಿಗೆ ಪ್ರಾಥಮಿಕ ದಾಖಲಾತಿ.
ಎಲ್ ಪಿಜಿ ಸ್ಫೋಟ ಸಂಭವಿಸಿದಲ್ಲಿ ಆಗಲಿದೆ ಇನ್ಷೂರೆನ್ಸ್ ಕವರ್: ಈ ಬಗ್ಗೆ ಎಷ್ಟು ಗೊತ್ತು?
* ಈ ಯೋಜನೆ ನೋಂದಣಿಗೆ ಗ್ರಾಹಕರಿಗೆ ಕನಿಷ್ಠ ಹದಿನೆಂಟು ವರ್ಷಗಳಾಗಿರಬೇಕು. ಗರಿಷ್ಠ ವಯೋಮಿತಿ ಐವತ್ತು ವರ್ಷ.
* ಇನ್ಷೂರ್ಡ್ ವ್ಯಕ್ತಿ ಮೃತಪಟ್ಟಲ್ಲಿ ನಿಶ್ಚಿತವಾದ ಎರಡು ಲಕ್ಷ ರುಪಾಯಿ ಮೊತ್ತ ನಾಮಿನಿಗೆ ದೊರೆಯುತ್ತದೆ. ಈ ಯೋಜನೆ ಅಡಿಯಲ್ಲಿ ಮೆಚ್ಯೂರಿಟಿ ಅಥವಾ ಸರೆಂಡರ್ ಅನುಕೂಲ ಇಲ್ಲ.
* ಗ್ರಾಹಕರು ವರ್ಷಕ್ಕೆ 330 ರುಪಾಯಿ ಪ್ರೀಮಿಯಂ ಪಾವತಿಸಬೇಕು. ಒಂದು ವರ್ಷದ ಅವಧಿಗೆ ಕವರ್ ಆಗುತ್ತದೆ. ವರ್ಷದಿಂದ ವರ್ಷಕ್ಕೆ ರಿನೀವಲ್ ಆಗುತ್ತದೆ. ಜೂನ್ 1ರಿಂದ ಮೇ 31ರ ಮಧ್ಯೆ ನಿಶ್ಚಿತ ಟೈಮ್ ಲೈನ್ ಆಗಿರುತ್ತದೆ.
* ಗ್ರಾಹಕರ ಉಳಿತಾಯ ಖಾತೆಯಿಂದ ವಾರ್ಷಿಕ ಪ್ರೀಮಿಯಂ ಮೊತ್ತ ಕಡಿತ ಆಗುತ್ತದೆ. ಮೊದಲ ಪ್ರೀಮಿಯಂ ನಿರ್ಧಾರ ಆಗುವುದು ಯಾವ ತ್ರೈಮಾಸಿಕದಲ್ಲಿ ಯೋಜನೆ ಆರಿಸಿಕೊಳ್ಳುತ್ತೀರಿ ಎಂಬುದರ ಮೇಲೆ ಆಧಾರ ಪಟ್ಟಿರುತ್ತದೆ. ಗ್ರಾಹಕರ ಖಾತೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಮೊತ್ತ ಇರಬೇಕು.
* ಸದಸ್ಯರಿಗೆ 55 ವರ್ಷಗಳು ತುಂಬಿದ ಮೇಲೆ ಲೈಫ್ ಕವರ್ ಟರ್ಮಿನೇಟ್ ಮಾಡಬಹುದು.
* ನೋಂದಣಿಯಾದ ನಲವತ್ತೈದು ದಿನಗಳ ನಂತರ ಪಾಲಿಸಿದಾರರು ಸಾವನ್ನಪ್ಪಿದಲ್ಲಿ ನಾಮಿನಿಗೆ ಅನುಕೂಲ ವರ್ಗಾವಣೆ ಆಗುತ್ತದೆ. ಅಪಘಾತದಿಂದ ಸಾವು ಸಂಭವಿಸಿದಲ್ಲಿ 'ಕೂಲಿಂಗ್ ಪೀರಿಯಡ್' ಅಗತ್ಯ ಇಲ್ಲ.
* ಈ ಪಾಲಿಸಿಗಾಗಿ ಕಟ್ಟುವ ಪ್ರೀಮಿಯಂಗೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಅನುಕೂಲ ದೊರೆಯಲಿದೆ.