ನಾಳೆಯೇ ಕೊನೆಯ ದಿನ: ಎಲ್ಐಸಿ ಪಾಲಿಸಿಗೆ ಪ್ಯಾನ್ ಲಿಂಕ್ ಮಾಡಿಸಿ
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಮುಂಬರುವ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಆಸಕ್ತಿ ಹೊರಹೊಮ್ಮಿದೆ. ಈ ಬಹುನಿರೀಕ್ಷಿತ ಎಲ್ಐಸಿ ಐಪಿಒ ದೇಶದ ಅತಿದೊಡ್ಡ ಐಪಿಒ ಆಗಲಿದ್ದು, ಫೆಬ್ರವರಿ 13 ರಂದು ಹೊರಬರಲಿದೆ.
ಈ ದೇಶದ ಅತಿದೊಡ್ಡ ಐಪಿಒಗಾಗಿ ವೇದಿಕೆಯನ್ನು ಸಿದ್ಧಪಡಿಸಿದ ಜೀವ ವಿಮಾ ನಿಗಮವು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಗೆ ಅಂದಾಜು 63,000 ಕೋಟಿಗೆ ಸರ್ಕಾರದಿಂದ ಶೇಕಡಾ 5 ರಷ್ಟು ಪಾಲನ್ನು ಮಾರಾಟ ಮಾಡಲು ಕರಡು ಪತ್ರಗಳನ್ನು ಸಲ್ಲಿಸಿದೆ. 31.6 ಕೋಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಥವಾ 5 ಪ್ರತಿಶತ ಸರ್ಕಾರಿ ಪಾಲು ಮಾರ್ಚ್ನಲ್ಲಿ ಐಪಿಒ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ.
ಎಲ್ಐಸಿ ಐಪಿಒ: ಹೂಡಿಕೆ ಮಾಡುವ ಮುನ್ನ ಇದನ್ನು ಓದಿ
ವಿಮಾ ಭೀಮ್ನ ನೌಕರರು ಮತ್ತು ಪಾಲಿಸಿದಾರರು ಇದರಲ್ಲಿ ನೈಜ ಬೆಲೆಗಿಂತ ರಿಯಾಯಿತಿಯನ್ನು ಪಡೆಯುತ್ತಾರೆ. ಕಾಯ್ದಿರಿಸಿದ ಕೋಟಾದ ಅಡಿಯಲ್ಲಿ ಬಿಡ್ ಮಾಡಲು ಬಯಸುವ ಎಲ್ಐಸಿ ಪಾಲಿಸಿದಾರರು ತಮ್ಮ ಪಾಲಿಸಿಯನ್ನು ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಹಾಗೆಯೇ ಆಧಾರ್ ಜೊತೆಗೂ ಲಿಂಕ್ ಮಾಡಿಕೊಳ್ಳಬೇಕಾಗಿದೆ. ಎಲ್ಐಸಿಯು ನ್ನೊಂದಿಗೆ ಪಾಲಿಸಿಯನ್ನು ಲಿಂಕ್ ಮಾಡಲು ಫೆಬ್ರವರಿ 28 ಅನ್ನು ಕೊನೆಯ ದಿನಾಂಕ ಎಂದು ಘೋಷಿಸಿದೆ.

ಈ ಕೊನೆಯ ದಿನಕ್ಕೂ ಮುನ್ನ ಎಲ್ಐಸಿ ಪಾಲಿಸಿಯನ್ನು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಕಾಯ್ದಿರಿಸಿದ ಕೋಟಾದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅನರ್ಹರೆಂದು ಪರಿಗಣಿಸಲಾಗುತ್ತದೆ. ಕೊನೆದ ದಿನಾಂಕ ಫೆಬ್ರವರಿ 28 ಅಂದರೆ ನಾಳೆಯೇ ಕೊನೆಯ ದಿನಾಂಕವಾಗಿದೆ. ಅದಕ್ಕಾಗಿ ಇಂದೇ ನೀವು ಪಾಲಿಸಿಗೆ ಪ್ಯಾನ್ ಲಿಂಕ್ ಮಾಡಿಕೊಳ್ಳಿ.
ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳುವುದು ಹೇಗೆ?
* ಮೊದಲು ಎಲ್ಐಸಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://licindia.in/
* ಬಳಿಕ ಆನ್ಲೈನ್ ಪ್ಯಾನ್ ನೋಂದಣಿಯ ಆಯ್ಕೆಯನ್ನು ಆರಿಸಿ
* ನಂತರ ಆನ್ಲೈನ್ ಪ್ಯಾನ್ ನೋಂದಣಿ ಪುಟದ ಮೇಲೆ ಕ್ಲಿಕ್ ಮಾಡಿ
* ಅದೇ ಪುಟದಲ್ಲಿ continue ಮೇಲೆ ಕ್ಲಿಕ್ ಮಾಡಿ
* ನಿಮ್ಮ ಇಮೇಲ್ ಐಡಿ, ಪ್ಯಾನ್, ಮೊಬೈಲ್ ಸಂಖ್ಯೆ ಮತ್ತು ಎಲ್ಐಸಿ ಪಾಲಿಸಿ ಸಂಖ್ಯೆಯನ್ನು ಹಾಕಿ
* ಬಾಕ್ಸ್ನಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
* ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ರಿಕ್ವೇಸ್ಟ್ ನೀಡಿ
* ಒಟಿಪಿ ಬಂದ ಬಳಿಕ ಅದನ್ನು ಹಾಕಿ, submit ಮಾಡಿ
* ಫಾರ್ಮ್ ಅನ್ನು ಸಲ್ಲಿಸಿದ ನಂತರ, ನಿಮ್ಮ ಪ್ಯಾನ್ ಅಪ್ಡೇಟ್ ಆಗಿದೆ ಎಂದು ಬರಲಿದ್ದು, ಅಲ್ಲಿಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ
ಎಲ್ಐಸಿಗೆ ಪ್ಯಾನ್, ಆಧಾರ್ ಶೀಘ್ರ ಅಪ್ಡೇಟ್ ಮಾಡಿಕೊಳ್ಳಿ: ಇಲ್ಲಿದೆ ವಿವರ
ಪ್ಯಾನ್ ಸ್ಟೇಟ್ಮೆಂಟ್ ಹೇಗೆ ಪರಿಶೀಲಿಸುವುದು?
* https://linkpan.licindia.in/UIDSeedingWebApp/getPolicyPANStatus ಗೆ ಭೇಟಿ ನೀಡಿ
* ಪಾಲಿಸಿ ಸಂಖ್ಯೆ, ಜನ್ಮ ದಿನಾಂಕ ಮತ್ತು ಪ್ಯಾನ್ ಸಂಖ್ಯೆಯನ್ನು ಭರ್ತಿ ಮಾಡಿ
* ಬಾಕ್ಸ್ನಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ * ನಂತರ submit ಮೇಲೆ ಕ್ಲಿಕ್ ಮಾಡಿ
* ಪ್ರಕ್ರಿಯೆಯು ಪೂರ್ಣಗೊಂಡ ನಂತರ ನಿಮ್ಮ ಪ್ಯಾನ್ ಎಲ್ಐಸಿ ಪಾಲಿಸಿಯಲ್ಲಿ ಲಿಂಕ್ ಆಗಿದೆಯೇ, ಇಲ್ಲವೇ ತಿಳಿಯಲಿದೆ
ಪ್ರಸ್ತಾವಿತ ಯೋಜನೆಯ ಪ್ರಕಾರ, ಎಲ್ಐಸಿಯ ಐಪಿಒದ 10 ಪ್ರತಿಶತದವರೆಗೆ ಪಾಲಿಸಿದಾರರಿಗೆ ಕಾಯ್ದಿರಿಸಲಾಗುತ್ತದೆ. ಜೀವ ವಿಮೆಯ ಪ್ರಮುಖ ಸಂಸ್ಥೆಯಾದ ಎಲ್ಐಸಿಯು ಡಿಮ್ಯಾಟ್ ಖಾತೆಯನ್ನು ಹೊಂದಿರುವ ತನ್ನ ಪಾಲಿಸಿದಾರರಿಗೆ ತಮ್ಮ ಆದಾಯ ತೆರಿಗೆ ಪ್ಯಾನ್ ಅನ್ನು ತಮ್ಮ ಪಾಲಿಸಿಗಳೊಂದಿಗೆ ಲಿಂಕ್ ಮಾಡಲು ಹೇಳಿದೆ. ಹಾಗೆಯೇ ಹಾಗೆಯೇ ಪಾಲಿಸಿಗಳಿಗೆ ಆಧಾರ್ ಜೋಡಣೆ ಮಾಡಬೇಕಾಗಿದೆ.