For Quick Alerts
ALLOW NOTIFICATIONS  
For Daily Alerts

1 ಕೋಟಿ ರೂ. ಹಣ ಗಳಿಸಬೇಕೆ?: ಕೇವಲ 4 ವರ್ಷ ಪ್ರೀಮಿಯಂ ಪಾವತಿಸಿ

|

ಷೇರು ಮಾರುಕಟ್ಟೆ ನಿಮಗೆ ಉತ್ತಮವಾದ ರಿಟರ್ನ್ ಅನ್ನು ನೀಡುತ್ತದೆ. ಆದರೆ ಅಲ್ಲಿ ಅಪಾಯ ನಿಮ್ಮ ಬೆನ್ನ ಹಿಂದೆಯೇ ನಿಂತಿರುತ್ತದೆ. ಸ್ಟಾಕ್‌ ಮಾರುಕಟ್ಟೆಯಲ್ಲಿ ಎಷ್ಟು ಅಧಿಕ ರಿಟರ್ನ್ ಸಿಗುತ್ತದೋ ಅಷ್ಟೇ ಅಧಿಕ ರಿಸ್ಕ್‌ ಇದೆ. ಈ ನಡುವೆ ನೀವು ನಿಮ್ಮ ಹಣ ಸುರಕ್ಷಿತವಾಗಿರಬೇಕು ಹಾಗೂ ಅಧಿಕ ರಿಟರ್ನ್ ಪಡೆಯಬೇಕು ಎಂದು ಬಯಸಿದರೆ, ನಿಮಗೆ ಉತ್ತಮ ಆಯ್ಕೆ ಇದೆ. ಅದುವೇ ಎಲ್‌ಐಸಿಯ ಜೀವನ್‌ ಶಿರೋಮಣಿ ಯೋಜನೆ.

 

ಈ ಎಲ್‌ಐಸಿ ಯೋಜನೆಯಲ್ಲಿ ನಿಮ್ಮ ಒಂದು ರೂಪಾಯಿಗೂ ಅಧಿಕ ಲಾಭವನ್ನು ಪಡೆಯುತ್ತೀರಿ. ಈ ಎಲ್‌ಐಸಿಯ ಜೀವನ್‌ ಶಿರೋಮಣಿ ಯೋಜನೆಯು ನಿಮ್ಮ ಭವಿಷ್ಯವನ್ನು ಸುರಕ್ಷೆ ಮಾಡುವುದು ಮಾತ್ರವಲ್ಲದೇ ನಿಮಗೆ ಉಳಿತಾಯವನ್ನು ಮಾಡಲು ಸಹಕಾರಿ ಆಗಿದೆ. ಇನ್ನು ಈ ಸಂದರ್ಭದಲ್ಲೇ ಎಲ್‌ಐಸಿಯ ಈ ಜೀವನ್‌ ಶಿರೋಮಣಿ ಯೋಜನೆ ನಾನ್‌ ಲಿಂಕ್ಡ್‌ ಪ್ಲ್ಯಾನ್‌ ಎಂಬುವುದನ್ನು ನೀವು ತಿಳಿಯಬೇಕು. ಈ ಯೋಜನೆಯಲ್ಲಿ ನೀವು ಕಡಿಮೆ ಎಂದರೆ ಒಂದು ಕೋಟಿ ರೂಪಾಯಿಯನ್ನಾದರೂ ಪಡೆಯಲು ಸಾಧ್ಯವಾಗುತ್ತದೆ.

ತನ್ನ ಗ್ರಾಹಕರ ಭವಿಷ್ಯವನ್ನು ಸುರಕ್ಷತೆಗೊಳಿಸಲು ಎಲ್‌ಐಸಿ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ ಅದರಲ್ಲಿ ಜೀವನ್‌ ಶಿರೋಮಣಿ ಯೋಜನೆಯು ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ನಿಮಗೆ ಒಂದು ಕೋಟಿ ರೂಪಾಯಿಯು ದೊರೆಯಲಿದೆ. ನೀವು ಅದಕ್ಕಾಗಿ 4 ವರ್ಷಗಳವರೆಗೆ ಒಂದು ರೂಪಾಯಿಯನ್ನು ಠೇವಣಿ ಮಾಡಬೇಕು. ನೀವು ಒಂದು ರೂಪಾಯಿಯಂತೆ ಹೂಡಿಕೆ ಮಾಡಿದರೆ, ನಿಮಗೆ 1 ಕೋಟಿ ರೂಪಾಯಿಗಳವರೆಗೆ ಒಟ್ಟು ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಏನಿದು ಜೀವನ್‌ ಶಿರೋಮಣಿ ಯೋಜನೆ?

ಏನಿದು ಜೀವನ್‌ ಶಿರೋಮಣಿ ಯೋಜನೆ?

ಎಲ್‌ಐಸಿಯು ಈ ಜೀವನ್‌ ಶಿರೋಮಣಿ ಯೋಜನೆಯನ್ನು (ಟೇಬಲ್‌ ನಂಬರ್‌ 847) 2017 ಡಿಸೆಂಬರ್‌ 19 ರಂದು ಆರಂಭ ಮಾಡಲಾಗಿದೆ. ಇದು ನಾನ್‌ ಲಿಂಕ್ಡ್‌ ಯೋಜನೆ ಆಗಿದೆ. ಹಾಗೆಯೇ ಸೀಮಿತ ಪ್ರೀಮಿಯಂ ಪಾವತಿ ಮಾಡಿ ಹಣ ಪಡೆಯುವ ಯೋಜನೆ ಆಗಿದೆ. ಇದು ಮಾರುಕಟ್ಟೆ ಸಂಯೋಜಿತ ಯೋಜನೆ ಆಗಿದ್ದು, ವಿಶೇಷವಾಗಿ ಹೆಚ್ಚು ಆದಾಯ ಇರುವ ಜನರಿಗಾಗಿ ಮಾಡಲಾದ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಗಂಭೀರ ಕಾಯಿಲೆಗಳಿಗೆ ರಕ್ಷಣೆ ದೊರಕಲಿದೆ. ಇದರಲ್ಲಿ ಮೂವರಿಗೆ ಲಾಭ ಪಡೆಯಬಹುದಾಗಿದೆ.

ಜೀವನ್‌ ಶಿರೋಮಣಿ ಯೋಜನೆಯಿಂದ ಡೆತ್‌ ಬೆನಿಫಿಟ್‌

ಜೀವನ್‌ ಶಿರೋಮಣಿ ಯೋಜನೆಯಿಂದ ಡೆತ್‌ ಬೆನಿಫಿಟ್‌

ಇನ್ನು ಈ ಎಲ್‌ಐಸಿಯ ಜೀವನ್ ಶಿರೋಮಣಿ ಯೋಜನೆಯು ಪಾಲಿಸಿದಾರರ ಕುಟುಂಬಕ್ಕೆ ಡೆತ್‌ ಬೆನಿಫಿಟ್‌ ಅನ್ನು ನೀಡಲಿದೆ. ಪಾಸಿಸಿದಾರರು ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಡೆತ್‌ ಬೆನಿಫಿಟ್‌ ರೂಪದಲ್ಲಿ ಹಣಕಾಸಿನ ನೆರವು ದೊರೆಯಲಿದೆ. ಈ ಪಾಲಿಸಿಯಲ್ಲಿ ಪಾಲಿಸಿದಾರ ಬದುಕಿರುವ ಸಂದರ್ಭದಲ್ಲಿ ನಿಗಧಿತ ಅವಧಿಯ ಪಾವತಿ ಸೌಲಭ್ಯವನ್ನು ನೀಡಲಾಗಿದೆ. ಇದಲ್ಲದೆ ಮೆಚ್ಯೂರಿಟಿಯ ಮೇಲೆ ದೊಡ್ಡ ಮೊ‌ತ್ತವನ್ನು ಪಡೆಯಬಹುದಾಗಿದೆ.

ಸರ್ವೈವಲ್ ಬೆನಿಫಿಟ್‌ನ ವಿವರ ಇಲ್ಲಿದೆ ನೋಡಿ
 

ಸರ್ವೈವಲ್ ಬೆನಿಫಿಟ್‌ನ ವಿವರ ಇಲ್ಲಿದೆ ನೋಡಿ

ಸರ್ವೈವಲ್ ಬೆನಿಫಿಟ್ ಅಂದರೆ ಪಾಲಿಸಿದಾರರ ಬದುಕುಳಿಯುವಿಕೆಯ ಮೇಲೆ ಸ್ಥಿರ ಪಾವತಿಯನ್ನು ಮಾಡಲಾಗುತ್ತದೆ. ಅದರ ವಿವರ ಈ ಕೆಳಗೆ ಇದೆ ನೋಡಿ.

* 14 ವರ್ಷದ ಪಾಲಿಸಿ - 10ನೇ ಮತ್ತು 12ನೇ ವರ್ಷಕ್ಕೆ ವಿಮಾ ಮೊತ್ತ ಶೇಕಡ 30-30

* 16 ವರ್ಷಗಳ ಪಾಲಿಸಿ 12 ಮತ್ತು 14 ನೇ ವರ್ಷಕ್ಕೆ ಶೇಕಡ 35-35 ವಿಮಾ ಮೊತ್ತ

* 18 ವರ್ಷಗಳ ಪಾಲಿಸಿ - 14 ಮತ್ತು 16 ನೇ ವರ್ಷಕ್ಕೆ ಶೇಕಡ 40-40 ವಿಮಾ ಮೊತ್ತ

* 20 ವರ್ಷಗಳ ಪಾಲಿಸಿ - 16ನೇ ಮತ್ತು 18ನೇ ವರ್ಷಕ್ಕೆ ಶೇಕಡ 45-45 ವಿಮಾ ಮೊತ್ತ

ಪಾಲಿಸಿ ಸಂದರ್ಭದಲ್ಲಿ ಸಾಲವನ್ನು ಪಡೆಯಬಹುದು!

ಪಾಲಿಸಿ ಸಂದರ್ಭದಲ್ಲಿ ಸಾಲವನ್ನು ಪಡೆಯಬಹುದು!

ಈ ಜೀವನ್‌ ಶಿರೋಮಣಿ ಯೋಜನೆಯಲ್ಲಿ ಪಾಲಿಸಿದಾರರಿಗೆ ಮತ್ತೊಂದು ಪ್ರಯೋಜನ ಇದೆ. ಪಾಲಿಸಿದಾರರು ಈ ಯೋಜನೆಯ ಸಂದರ್ಭದಲ್ಲಿ ಸಾಲವನ್ನು ಕೂಡಾ ಪಡೆಯಬಹುದು. ಪಾಲಿಸಿಯ ಸರೆಂಡರ್‌ ಮೌಲ್ಯದ ಆಧಾರದ ಮೇಲೆ ಸಾಲವನ್ನು ಪಡೆಯಬಹುದು. ಆದರೆ ಸಾಲವು ಎಲ್‌ಐಸಿಯ ನಿಯಮಗಳು ಮತ್ತು ಷರತ್ತುಗಳ ಮೇಲೆ ಮಾತ್ರ ಲಭ್ಯವಾಗಲಿದೆ. ಕಾಲ ಕಾಲಕ್ಕೆ ನಿರ್ಧಾರ ಮಾಡಲಾಗುವ ಬಡ್ಡಿ ದರದ ಆಧಾರದಲ್ಲಿ ಈ ಸಾಲವು ಲಭ್ಯವಾಗಲಿದೆ.

ನಿಯಮ ಮತ್ತು ಷರತ್ತುಗಳು ಅನ್ವಯ!

ನಿಯಮ ಮತ್ತು ಷರತ್ತುಗಳು ಅನ್ವಯ!

* ಕನಿಷ್ಠ ವಿಮಾ ಮೊತ್ತವು ಒಂದು ಕೋಟಿ ರೂಪಾಯಿ ಆಗಿದೆ

* ಗರಿಷ್ಠ ವಿಮಾ ಮೊತ್ತ: ಯಾವುದೇ ಮಿತಿಯಿಲ್ಲ (ಮೂಲ ವಿಮಾ ಮೊತ್ತವು 5 ಲಕ್ಷ ಆಗಿರುತ್ತದೆ)

* ಪಾಲಿಸಿ ಅವಧಿ: 14, 16, 18 ಮತ್ತು 20 ವರ್ಷಗಳು

* ಪ್ರೀಮಿಯಂ ಪಾವತಿ ಅವಧಿ: 4 ವರ್ಷಗಳು

* ಯೋಜನೆ ಲಾಭ ಪಡೆಯಲು ಕನಿಷ್ಠ ವಯೋಮಿತಿ: 18 ವರ್ಷಗಳು

* ಯೋಜನೆ ಲಾಭ ಪಡೆಯಲು ಗರಿಷ್ಠ ವಯೋಮಿತಿ: 14 ವರ್ಷಗಳ ಪಾಲಿಸಿಗೆ 55 ವರ್ಷಗಳು, 16 ವರ್ಷಗಳ ಪಾಲಿಸಿಗೆ 51 ವರ್ಷಗಳು, 18 ವರ್ಷಗಳ ಪಾಲಿಸಿಗೆ 48 ವರ್ಷಗಳು, 20 ವರ್ಷಗಳ ಪಾಲಿಸಿಗೆ 45 ವರ್ಷಗಳು

English summary

LIC Jeevan Shiromani Plan: Get Rs 1 crore by just paying premium for 4 years

LIC: Get benefits worth Rs 1 crore, pay premium for just 4 years.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X