ಭಾನುವಾರವೂ ಎಸ್ಬಿಐನ ಎಲ್ಲಾ ಶಾಖೆಗಳು ಓಪನ್: ಇಲ್ಲಿದೆ ಕಾರಣ
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಎಲ್ಐಸಿ ಐಪಿಒಗಾಗಿ ಅರ್ಜಿಗಳನ್ನು ಸ್ವೀಕಾರ ಮಾಡಲು ಎಲ್ಲಾ ಶಾಖೆಗಳನ್ನು ಭಾನುವಾರ ತೆರೆದಿರಲಿದೆ. ''ಎಲ್ಐಸಿ ಐಪಿಒ ಅರ್ಜಿ ಸ್ವೀಕಾರ ಮಾಡಲು ಮೇ 8 ರಂದು ನಮ್ಮ ಬ್ಯಾಂಕ್ನ ಎಲ್ಲಾ ಶಾಖೆಗಳು ತೆರೆದಿರುತ್ತದೆ,'' ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಭಾನುವಾರದ ಮೆಗಾ ಐಪಿಒಗಾಗಿ ಎಲ್ಲಾ ಎಎಸ್ಬಿಎ ಗೊತ್ತುಪಡಿಸಿದ ಶಾಖೆಗಳನ್ನು ತೆರೆದಿರಲು ಆರ್ಬಿಐ ನಿರ್ದೇಶನ ನೀಡಿದ ಒಂದು ದಿನದ ನಂತರ ಈ ಪ್ರಕಟಣೆಯನ್ನು ಎಸ್ಬಿಐ ನೀಡಿದೆ. ಎಸ್ಬಿಐ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ನೀಡಿದೆ. "ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸುವ ನಮ್ಮ ಎಲ್ಲಾ ಗ್ರಾಹಕರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ," ಎಂದು ಎಸ್ಬಿಐ ಹೇಳಿದೆ.
ಎಲ್ಐಸಿ ಐಪಿಒ: ಎರಡನೇ ದಿನವೇ ಸಂಪೂರ್ಣ ಚಂದಾದಾರಿಕೆ
"ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸುವ ನಮ್ಮ ಗ್ರಾಹಕರ ಅನುಕೂಲಕ್ಕಾಗಿ, ಅರ್ಜಿಗಳನ್ನು ಸ್ವೀಕರಿಸಲು ನಮ್ಮ ಎಲ್ಲಾ ಶಾಖೆಗಳು ಮೇ8, 2022 ರಂದು (ಭಾನುವಾರ) ತೆರೆದಿರುತ್ತವೆ ಎಂದು ತಿಳಿಸಲು ನಮಗೆ ಸಂತೋಷವಾಗಿದೆ," ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.
ಎಲ್ಐಸಿ ಐಪಿಒ ನಡುವೆ ರೆಪೋ ಏರಿಕೆ: ಬಾಹುಬಲಿಗೆ ಕಟ್ಟಪ್ಪನಿಂದಾದ ಮಿತ್ರದ್ರೋಹ!

ಮೇ 4 ರಂದು ಆರ್ಬಿಐನ ಘೋಷಣೆ
"ಎಲ್ಐಸಿ ಐಪಿಒನ ಬಿಡ್ಡಿಂಗ್ಗೆ ಅನುಕೂಲವಾಗುವಂತೆ ಭಾರತ ಸರ್ಕಾರವು ಎಎಸ್ಬಿಎ (ನಿರ್ಬಂಧಿತ ಮೊತ್ತದಿಂದ ಬೆಂಬಲಿತವಾದ ಅಪ್ಲಿಕೇಶನ್) ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಗೊತ್ತುಪಡಿಸಿದ ಎಲ್ಲಾ ಬ್ಯಾಂಕ್ ಶಾಖೆಗಳನ್ನು ಮೇ 8 ರಂದು ಸಾರ್ವಜನಿಕರಿಗೆ ತೆರೆದಿಡಲು ವಿನಂತಿಸಲಾಗುವುದು," ಎಂದು ಆರ್ಬಿಐ ಮೇ 4 ರಂದು ಹೇಳಿದೆ. ಈ ಹಿಂದೆ, ವಾರಾಂತ್ಯದಲ್ಲಿ ಶನಿವಾರದಂದು ಮಾತ್ರ ಭೀಮ್ ಐಪಿಒ ವಹಿವಾಟಿಗೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಭಾನುವಾರವೂ ಬಿಡ್ಡಿಂಗ್ಗೆ ಲಭ್ಯವಾಗಲಿದೆ.

ಎಎಸ್ಬಿಎ ಎಂದರೆ ಏನು?
ಎಎಸ್ಬಿಎ ಎಂಬುದು ಹೂಡಿಕೆದಾರರ ಅಪ್ಲಿಕೇಶನ್ ಆಗಿದ್ದು, ಎಲ್ಐಸಿ ಐಪಿಒಗೆ ಚಂದಾದಾರರಾಗಲು ಬ್ಯಾಂಕ್ ಖಾತೆಯಲ್ಲಿನ ಅಪ್ಲಿಕೇಶನ್ ಹಣವನ್ನು ನಿರ್ಬಂಧಿಸಲು ಸ್ವಯಂ ಪ್ರಮಾಣೀಕೃತ ಸಿಂಡಿಕೇಟ್ ಬ್ಯಾಂಕ್ (ಎಸ್ಸಿಎಸ್ಬಿ) ಗೆ ಅಧಿಕಾರವನ್ನು ಈ ಅಪ್ಲಿಕೇಶನ್ ನೀಡುತ್ತದೆ. ಹೂಡಿಕೆದಾರರು ಎಎಸ್ಬಿಎ ಮೂಲಕ ಅರ್ಜಿ ಸಲ್ಲಿಸಬಹುದು. ಎಎಸ್ಬಿಎ ಮೂಲಕ ಅರ್ಜಿ ಸಲ್ಲಿಸಿದರೆ ಅವನ / ಅವಳ ಅರ್ಜಿಯನ್ನು ಆಯ್ಕೆ ಮಾಡಿದರೆ ಮಾತ್ರ ಅವರ ಅರ್ಜಿಯ ಹಣವನ್ನು ಬ್ಯಾಂಕ್ ಖಾತೆಯಿಂದ ಹಿಂದಕ್ಕೆ ಪಡೆಯಲಾಗುತ್ತದೆ. ಗಮನಾರ್ಹವಾಗಿ, ಈ ಎಸ್ಸಿಎಸ್ಬಿಗಳು ತನ್ನ ಗ್ರಾಹಕರಿಗೆ ಎಎಸ್ಬಿಎ ಸೇವೆಗಳನ್ನು ಒದಗಿಸಲು ಸಮರ್ಥವಾಗಿರುವ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿರುವ ಬ್ಯಾಂಕ್ ಆಗಿದೆ. ಎಸ್ಬಿಐ ಎಎಸ್ಬಿಎ ಗೊತ್ತುಪಡಿಸಿದ ಬ್ಯಾಂಕ್ಗಳಲ್ಲಿ ಒಂದಾಗಿದೆ.

ಎಲ್ಐಸಿ ಐಪಿಒ ಬಗ್ಗೆ ಮಾಹಿತಿ
ಎಲ್ಐಸಿ ಐಪಿಒಗಾಗಿ ಒಟ್ಟು ಮೌಲ್ಯವನ್ನು 21,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಇಲ್ಲಿಯವರೆಗೆ ದೇಶದ ಅತಿದೊಡ್ಡ ಐಪಿಒ ಆಗಿದೆ. ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ. ಆಸಕ್ತ ಚಂದಾದಾರರು ಲಾಟ್ಗಳಲ್ಲಿ ಅರ್ಜಿ ಸಲ್ಲಿಸಬಹುದು, ಒಂದು ಎಲ್ಐಸಿ ಐಪಿಒ ಲಾಟ್ 15 ಎಲ್ಐಸಿ ಷೇರುಗಳನ್ನು ಒಳಗೊಂಡಿರುತ್ತದೆ. ಒಬ್ಬ ಅರ್ಜಿದಾರರು ಕನಿಷ್ಠ ಒಂದು ಮತ್ತು ಗರಿಷ್ಠ 14 ಲಾಟ್ಗಳಿಗೆ ಅರ್ಜಿ ಸಲ್ಲಿಸಬಹುದು.

ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್
ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸಲು ಕನಿಷ್ಠ ಮೊತ್ತ 14,235 ರೂಪಾಯಿ ಆಗಿದೆ. ಈ ಹಿಂದೆ ಕೇಂದ್ರವು ಪಾಲಿಸಿದಾರರಿಗೆ 60 ರೂಪಾಯಿ ರಿಯಾಯಿತಿ ಮತ್ತು ಎಲ್ಐಸಿ ಉದ್ಯೋಗಿಗಳಿಗೆ 45 ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ. ಆರಂಭದಲ್ಲಿ, ಎಲ್ಐಸಿ ಐಪಿಒ ಅನ್ನು ಮಾರ್ಚ್ 31 ರ ಮೊದಲು ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣ ಐಪಿಒ ಅನ್ನು ಮುಂದೂಡಲಾಯಿತು. ಎಲ್ಐಸಿ ಷೇರುಗಳು ಮೇ 17 ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ. ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.