For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಐಪಿಒ: ಪಾಲಿಸಿದಾರರಿಗೆ ಏನಿದೆ ಆಫರ್‌?, ಇಲ್ಲಿದೆ ಸಂಫೂರ್ಣ ಮಾಹಿತಿ

|

ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸರ್ಕಾರವು ಭಾನುವಾರ ಕರಡು ಪತ್ರಗಳನ್ನು ಸಲ್ಲಿಸಿದೆ. ಅದರ ಮೂಲಕ 5 ಶೇಕಡಾ ಈಕ್ವಿಟಿ ಪಾಲನ್ನು ಮಾರಾಟ ಮಾಡಲು ಆಶಿಸುತ್ತಿದೆ.

 

ಎಲ್‌ಐಸಿ ಐಪಿಒ ಭಾರತದ ಅತಿದೊಡ್ಡ IPO ಆಗಿದ್ದು, ಮಾರ್ಚ್ 2022 ರ ಎರಡನೇ ವಾರದಲ್ಲಿ ಸಾರ್ವಜನಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸೆಬಿಗೆ ಕರಡು ಪತ್ರಗಳನ್ನು ಸಲ್ಲಿಕೆ ಮಾಡುವ ಮೊದಲು ಭಾರತ ಸರ್ಕಾರವು ಮುಂಬರುವ ಹಣಕಾಸು ವರ್ಷಕ್ಕೆ 65,000 ಕೋಟಿ ರೂಪಾಯಿಗಳ ಹೂಡಿಕೆಯ ಗುರಿಯನ್ನು ಬಜೆಟ್ 2022 ರಲ್ಲಿ ನಿಗದಿಪಡಿಸಿದೆ. ಪ್ರಸಕ್ತ ಹಣಕಾಸು ವರ್ಷದ ಗುರಿಯನ್ನು 1.75 ಲಕ್ಷ ಕೋಟಿ ರೂ.ಗಳಿಂದ 78,000 ಕೋಟಿ ರೂ.ಗೆ ಇಳಿಸಿದೆ.

ಬಹುನಿರೀಕ್ಷಿತ ಎಲ್‌ಐಸಿ ಐಪಿಒ: ಸೆಬಿಗೆ ಕರಡು ಪತ್ರ ಸಲ್ಲಿಕೆ

ಸೆಪ್ಟೆಂಬರ್ 30, 2021ರ ಪ್ರಕಾರ ಎಲ್‌ಐಸಿ ಐಪಿಒನ ಎಂಬೆಡೆಡ್ ಮೌಲ್ಯವು ಸುಮಾರು 5.39 ಲಕ್ಷ ಕೋಟಿ ರೂಪಾಯಿ ಆಗಿತ್ತು. ವರದಿಗಳ ಪ್ರಕಾರ, ಎಲ್ಐಸಿ ಐಪಿಒ ಮೌಲ್ಯಕ್ಕಿಂತ ಮೂರರಿಂದ ನಾಲ್ಕು ಪಟ್ಟು ಮೌಲ್ಯವನ್ನು ಹೊಂದಿರುತ್ತದೆ. ಕರಡು ವರದಿಯ ಪ್ರಕಾರ, ಕಂಪನಿಯು ನೀಡಲಾದ ವೈಯಕ್ತಿಕ ನೀತಿಗಳ ವಿಷಯದಲ್ಲಿ ಶೇಕಡ 74.6 ಮಾರುಕಟ್ಟೆ ಪಾಲನ್ನು ಹೊಂದಿದೆ.

ಎಲ್‌ಐಸಿ ಐಪಿಒ: ಪಾಲಿಸಿದಾರರಿಗೆ ಏನಿದೆ ಆಫರ್‌?, ಇಲ್ಲಿದೆ ಮಾಹಿತಿ

"ಎಲ್‌ಐಸಿ ಐಪಿಒದ ಡಿಆರ್‌ಎಚ್‌ಪಿಯನ್ನು ಇಂದು ಸೆಬಿಗೆ ಸಲ್ಲಿಸಲಾಗಿದೆ," ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಟ್ವೀಟ್ ಮಾಡಿದ್ದಾರೆ. ಮಾರ್ಚ್ ವೇಳೆಗೆ ಷೇರುಗಳಲ್ಲಿ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ಹೊರ ಬರುವ ಸಾಧ್ಯತೆ ಇದೆ.

ಎಲ್‌ಐಸಿ ಐಪಿಒನಲ್ಲಿ ಭಾಗಿಯಾಗಬೇಕೆ?, ಮೊದಲು ಇಲ್ಲಿ ಓದಿ

ಎಲ್‌ಐಸಿ ವಿಮೆಯ ಪಾಲಿಸಿದಾರರಿಗೆ ರಿಯಾಯಿತಿ? ದೇಶದಲ್ಲಿ ಶೀಘ್ರವೇ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಬರುವ ಸಾಧ್ಯತೆ ಇದೆ. ಈ ಐಪಿಒ ಮೂಲಕ ಕೇಂದ್ರ ಸರ್ಕಾರದಿಂದ ಭಾರತದ ಜೀವ ವಿಮಾ ನಿಗಮದ ಶೇಕಡ 5ರಷ್ಟು ಪಾಲು ಮಾರಾಟ ಮಾಡಲು ಮುಂದಾಗಿದೆ. ಭಾರತದ ಅತೀ ದೊಡ್ಡ ಐಪಿಒ ಆಗಲು ಎಲ್‌ಐಸಿ ಸಜ್ಜಾಗಿದೆ. ಇನ್ನು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಬಿಡ್ಡಿಂಗ್‌ನಲ್ಲಿ ಭಾಗವಹಿಸುವ ಲಕ್ಷಾಂತರ ಎಲ್‌ಐಸಿ ವಿಮೆಯ ಪಾಲಿಸಿದಾರರಿಗೆ ರಿಯಾಯಿತಿ ನೀಡಬಹುದು ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

 
ಎಲ್‌ಐಸಿ ಐಪಿಒ: ಪಾಲಿಸಿದಾರರಿಗೆ ಏನಿದೆ ಆಫರ್‌?, ಇಲ್ಲಿದೆ ಮಾಹಿತಿ

2,000 ಶಾಖೆಗಳನ್ನು ಹೊಂದಿರುವ ಆರು ದಶಕಗಳಷ್ಟು ಹಳೆಯದಾದ ಎಲ್‌ಐಸಿ ವಿಮಾ ಸಂಸ್ಥೆಯು 100,000 ಕ್ಕೂ ಹೆಚ್ಚು ಉದ್ಯೋಗಿಗಳು, ಸುಮಾರು 286 ಮಿಲಿಯನ್ ಪಾಲಿಸಿಗಳನ್ನು ಹೊಂದಿದೆ. ಎಲ್‌ಐಸಿ ಆಸ್ತಿ ಸುಮಾರು 530 ಶತಕೋಟಿ ಡಾಲರ್‌ ಆಗಿದೆ. ಪ್ರಸ್ತುತ ಪೇಟಿಎಂ ಭಾರತದ ಅತೀ ದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ ಈಗ ಎಲ್‌ಐಸಿ ಅದಕ್ಕಿಂತ ದೊಡ್ಡ ಐಪಿಒ ಆಗಲು ಸಿದ್ಧತೆ ನಡೆಸಿದೆ. ಐಪಿಒ ಮೂಲಕ ಕಂಪನಿಯು 316.25 ಮಿಲಿಯನ್ ಷೇರುಗಳನ್ನು ಅಥವಾ 31 ಕೋಟಿಗೂ ಹೆಚ್ಚು ಷೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಪಾಲಿಸಿದಾರರಿಗೆ ಶೇಕಡ ಹತ್ತರಷ್ಟು ಷೇರು ಮಾರಾಟ ಮಾಡಲಿದೆ. 13ನೇ ಫೆಬ್ರವರಿ, 2022 ಪಾಲಿಸಿದಾರರಿಗೆ ಅರ್ಹತೆಯ ದಿನಾಂಕವಾಗಿದೆ.

ಎಲ್‌ಐಸಿ ಐಪಿಒಗಾಗಿ "ಪಾಲಿಸಿದಾರ" ವರ್ಗದ ಅಡಿಯಲ್ಲಿ, ಎಲ್‌ಐಸಿ ಪಾಲಿಸಿದಾರರು ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಸಬಹುದು. ಆದರೆ ಈ ವರ್ಗದ ಅಡಿಯಲ್ಲಿ ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಲು ನಿಮ್ಮ ಎಲ್‌ಐಸಿ ಪಾಲಿಸಿಯೊಂದಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಅತ್ಯಗತ್ಯವಾಗಿದೆ. ಅಲ್ಲದೆ, ಆನ್‌ಲೈನ್‌ನಲ್ಲಿ ಎಲ್‌ಐಸಿ ಪಾಲಿಸಿಗೆ ಆಧಾರ್ ಲಿಂಕ್ ನಿಮ್ಮ ಹೆಚ್ಚಿನ ವಿಮಾ ರಕ್ಷಣೆಯನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ. ಎಲ್‌ಐಸಿ ಪಾಲಿಸಿದಾರರಲ್ಲದವರು ಕೂಡಾ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಬಹುದು.

English summary

LIC IPO: What Does The Mega IPO Hold For LIC Policyholders?

LIC IPO: What Does The Mega IPO Hold For LIC Policyholders?.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X