ಎಲ್ಐಸಿ ಐಪಿಒ ಮೇಲೆ ವಿದೇಶಿ ಹೂಡಿಕೆದಾರರಿಗೆ ಏಕಿಲ್ಲ ಒಲವು?
ಎಲ್ಐಸಿ ಐಪಿಒ ಚಂದಾದಾರಿಕೆಗೆ ಇಂದು ಕೊನೆಯ ದಿನವಾಗಿದೆ. ಈ ದಿನ ಎರಡು ಪಟ್ಟು ಚಂದಾದಾರಿಕೆಯಾಗಿದೆ. ಎಲ್ಐಸಿ ಐಪಿಒದಲ್ಲಿ ಎಲ್ಐಸಿ ಹೂಡಿಕೆದಾರರು ಹಾಗೂ ಉದ್ಯೋಗಿಗಳಿಗೆ ಮೀಸಲಿಟ್ಟ ಐಪಿಒ ಮೊದಲ ದಿನವೇ ಪೂರ್ಣ ಚಂದಾದಾರಿಕೆಯಾಗಿದೆ. ಆದರೆ ಈ ನಡುವೆ ಎಲ್ಐಸಿ ಐಪಿಒ ಮೇಲೆ ವಿದೇಶಿ ಹೂಡಿಕೆದಾರರು ಹೆಚ್ಚಿನ ಒಲವು ತೋರಿಲ್ಲ.
ಎಲ್ಐಸಿ ಐಪಿಒಗಾಗಿ ಒಟ್ಟು ಮೌಲ್ಯವನ್ನು 21,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಇಲ್ಲಿಯವರೆಗೆ ದೇಶದ ಅತಿದೊಡ್ಡ ಐಪಿಒ ಆಗಿದೆ. ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ. ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.
ಎಲ್ಐಸಿ ಐಪಿಒ: ರೆಪೋ ದರ ಏರಿಕೆ ಬೆನ್ನಲ್ಲೇ ಗ್ರೇ ಮಾರ್ಕೆಟ್ ಶೇ.30 ಡೌನ್
ಬ್ಲೂಮ್ಬರ್ಗ್ನ ವರದಿಯ ಪ್ರಕಾರ, ವಿದೇಶಿ ಸಾಂಸ್ಥಿಕ ನಿಧಿಗಳು ಸಾಂಸ್ಥಿಕ ಖರೀದಿದಾರರಿಗೆ ಮೀಸಲಿಟ್ಟ ಷೇರುಗಳಲ್ಲಿ 2 ಪ್ರತಿಶತದಷ್ಟು ಮಾತ್ರ ಚಂದಾದಾರಿಕೆಯಾಗಿದೆ. ಎಲ್ಐಸಿ ಐಪಿಒದಲ್ಲಿ ಹೆಚ್ಚಿನ ಹೂಡಿಕೆದಾರರು ದೇಶೀಯ ಹೂಡಿಕೆದಾರರು ಆಗಿದ್ದಾರೆ. ಈ ನಡುವೆ ಎಲ್ಐಸಿ ಐಪಿಒ ಮೇಲೆ ವಿದೇಶಿ ಹೂಡಿಕೆದಾರರು ಯಾಕೆ ಒಲವು ತೋರಿಲ್ಲ ಎಂಬ ಪ್ರಶ್ನೆಗಳು ಮೂಡಿದೆ. ಇದಕ್ಕೆ ಪ್ರಮುಖ ಮೂರು ಕಾರಣಗಳು ಇದೆ. ಈ ಬಗ್ಗೆ ತಿಳಿಯಲು ಮುಂದೆ ಓದಿ..

ಫೆಡರಲ್ ದರ ಏರಿಕೆ
ಫೆಡರಲ್ ರಿಸರ್ವ್ ಬ್ಯಾಂಕ್ ದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇದು ಎಲ್ಐಸಿ ಐಪಿಒದಲ್ಲಿ ವಿದೇಶಿ ಹೂಡಿಕೆದಾರರ ಆಸಕ್ತಿ ಕಡಿಮೆ ಆಗಲು ಕಾರಣವಾಗಿದೆ. ಅಕ್ಟೋಬರ್ನಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡುವುದಕ್ಕೆ ವಿದೇಶಿ ಹೂಡಿಕೆದಾರರು ಮುಂದೆ ಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿನ ಷೇರು ಮಾರುಕಟ್ಟೆಯು ವಿದೇಶಿ ಬಂಡವಾಳ ಹೂಡಿಕೆಯು ತೀವ್ರ ಕಡಿಮೆಯಾಗಿದೆ. ಮಾರ್ಚ್ 2019 ರಿಂದ ಕಡಿಮೆಯಾಗಿದೆ.
ಎಲ್ಐಸಿ ಐಪಿಒ ನಡುವೆ ರೆಪೋ ಏರಿಕೆ: ಬಾಹುಬಲಿಗೆ ಕಟ್ಟಪ್ಪನಿಂದಾದ ಮಿತ್ರದ್ರೋಹ!

ಡಾಲರ್ ಎದುರು ರೂಪಾಯಿ ಕುಸಿತ
ಡಾಲರ್ ಎದುರು ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಸೋಮವಾರ, ರೂಪಾಯಿಯು ಯುಎಸ್ ಡಾಲರ್ ವಿರುದ್ಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ 77.42 ಕ್ಕೆ ಕುಸಿದಿದೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತದ ಅಧಿಕೃತ ಕರೆನ್ಸಿ ರೂಪಾಯಿ 51 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ರೂ 77.41 ಕ್ಕೆ ತಲುಪಿದೆ. ಇದು ವಿದೇಶಿ ಹೂಡಿಕೆದಾರರಿಗೆ ಹೂಡಿಕೆ ದುಬಾರಿಯಾಗಿದೆ. ಐಪಿಒ ಅನ್ನು ತುಂಬಾ ದುಬಾರಿ ಎಂದು ವಿದೇಶಿ ಹೂಡಿಕೆದಾರರು ಪರಿಗಣಿಸುತ್ತಿದ್ದಾರೆ.

ತತ್ತರಿಸಿದ ಜಾಗತಿಕ ಮಾರುಕಟ್ಟೆ
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಇದರ ಪ್ರಭಾವವು ಹಲವಾರು ರಾಷ್ಟ್ರಗಳ ಮೇಲೆ ಬೀರಿದೆ. ಯುದ್ಧವು ಜಾಗತಿಕ ಮಾರುಕಟ್ಟೆಯನ್ನೇ ಅಲ್ಲಾಡಿಸಿದೆ. ಎಲ್ಐಸಿ ಐಪಿಒ ಮಾರ್ಚ್ನಲ್ಲಿ ನಡೆಯಬೇಕಾಗಿತ್ತು. ಆದರೆ ಯುದ್ಧದ ಕಾರಣದಿಂದಾಗಿ ಎಲ್ಐಸಿ ಐಪಿಒ ಅನ್ನು ಸರ್ಕಾರವು ಮುಂದೂಡಿಕೆ ಮಾಡಬೇಕಾಯಿತು. ಅಪಾಯದ ಆತಂಕ ಕೊಂಚ ಕಡಿಮೆಯಾದ ಬಳಿಕ ಸರ್ಕಾರವು ಎಲ್ಐಸಿ ಐಪಿಒ ಅನ್ನು ಹೊರತರಲಾಗಿದೆ. ಯುದ್ಧದ ಕಾರಣದಿಂದಾಗಿ ಸರ್ಕಾರವು ಎಲ್ಐಸಿ ಐಪಿಒದ ಗಾತ್ರವನ್ನು ಕಡಿಮೆ ಮಾಡಿತು. ಶೇಕಡ 60ರಷ್ಟು ಗಾತ್ರವನ್ನು ಕಡಿಮೆ ಮಾಡಬೇಕಾಯಿತು. ಇದು ಕೂಡಾ ವಿದೇಶಿ ಹೂಡಿಕೆದಾರರ ಮೇಲೆ ಪರಿಣಾಮ ಉಂಟು ಮಾಡಿದೆ.

ಎಲ್ಐಸಿ ಐಪಿಒ ಜಿಎಂಪಿ
ಇತ್ತೀಚಿನ ಅಂದಾಜಿನ ಪ್ರಕಾರ, ಸೋಮವಾರದಂದು ಪ್ರತಿ ಈಕ್ವಿಟಿ ಷೇರಿಗೆ 36 ರೂಪಾಯಿ ಆಗಿದೆ. ಭಾರತದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಮಾರುಕಟ್ಟೆಗಳಲ್ಲಿನ ಹೂಡಿಕೆಯ ಒಟ್ಟಾರೆ ನಿಧಾನಗತಿಯ ಕಾರಣದಿಂದಾಗಿ ಜಿಎಂಪಿ ನಿರಂತರವಾಗಿ ಕುಸಿಯುತ್ತಿದೆ. ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ರೆಪೊ ದರವನ್ನು 40 ಬೇಸಿಸ್ ಪಾಯಿಂಟ್ಗಳ ಹೆಚ್ಚಳವನ್ನು ಘೋಷಿಸಿದಾಗಿನಿಂದ ಭಾರತೀಯ ಷೇರು ಮಾರುಕಟ್ಟೆಗಳು ಸಹ ಪಾತಾಳಕ್ಕೆ ಇಳಿಯುತ್ತಿದೆ.