For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಷೇರು: ಹೂಡಿಕೆದಾರರಿಗೆ ಬರೋಬ್ಬರಿ 50,000 ಕೋಟಿ ರೂ ನಷ್ಟ!

|

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಹೂಡಿಕೆದಾರರು ಮೇ 17 ರಂದು ನಡೆದ ವಹಿವಾಟಿನಲ್ಲಿ 50,000 ಕೋಟಿ ರೂಪಾಯಿಗಿಂತ ಅಧಿಕ ಷೇರುಗಳನ್ನು ಕಳೆದುಕೊಂಡಿದ್ದಾರೆ. ಎಲ್‌ಐಸಿ ಷೇರು ಪ್ರತಿ ಷೇರಿಗೆ ರೂ. 867.20 ರಂತೆ ಪಟ್ಟಿಯಾಗಿದೆ. ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅಧಿಕ ಚಂದಾದಾರಿಕೆಯಾಗಿತ್ತು. ಆದರೆ ಷೇರು ಪೇಟೆಯಲ್ಲಿ ಎಲ್‌ಐಸಿ ಶೇಕಡ 8.5 ಪ್ರತಿಶತದಷ್ಟು ರಿಯಾಯಿತಿಯಲ್ಲಿ ವಹಿವಾಟು ಆರಂಭ ಮಾಡಿದೆ.

 

ಸಂಸ್ಥೆಯು ಐಪಿಒ ಮೂಲಕ ಸುಮಾರು 21,000 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. 949 ರೂ.ಗಳ ಒಂದು ಷೇರಿನ ಮೇಲಿನ ಬೆಲೆಯ ಬ್ಯಾಂಡ್‌ನಲ್ಲಿ 6.01 ಟ್ರಿಲಿಯನ್ ಮೌಲ್ಯವನ್ನು ಹೊಂದಿದೆ. ಮೇ 17 ರಂದು ವಹಿವಾಟಿನ ಮುಕ್ತಾಯದಲ್ಲಿ, ಷೇರುಗಳು ಬಿಎಸ್‌ಇಯಲ್ಲಿ ರೂ 872.70 ನಲ್ಲಿ ಸ್ಥಿರಗೊಂಡಿದೆ. ಅದರ ವಿತರಣೆಯ ಬೆಲೆಗಿಂತ 8.04 ಶೇಕಡಾ ಕಡಿಮೆಯಾಗಿದೆ.

ಸೆನ್ಸೆಕ್ಸ್, ನಿಫ್ಟಿ ಶುಭಾಂತ್ಯ: ಮೊದಲ ದಿನವೇ ಎಲ್‌ಐಸಿ ಹೂಡಿಕೆದಾರರಿಗೆ ಶಾಕ್

ಇದರಿಂದಾಗಿ ಹೂಡಿಕೆದಾರರಿಗೆ ಮಾರುಕಟ್ಟೆ ಬಂಡವಾಳವು ರೂ 5.52 ಟ್ರಿಲಿಯನ್‌ಗೆ ತಲುಪಿದೆ. 867.20 ರೂ.ನಲ್ಲಿ ಪ್ರಾರಂಭವಾದ ನಂತರ, ಷೇರುಗಳು ಕ್ರಮವಾಗಿ ರೂ.920 ಗರಿಷ್ಠ ಮಟ್ಟ ಹಾಗೂ ರೂ.860.10 ರ ಕನಿಷ್ಠ ಮಟ್ಟವನ್ನು ತಲುಪಿದೆ.

 ಮೊದಲ ದಿನವೇ ನಷ್ಟ ಕಂಡ ಹೂಡಿಕೆದಾರರು

ಮೊದಲ ದಿನವೇ ನಷ್ಟ ಕಂಡ ಹೂಡಿಕೆದಾರರು

ಮೊದಲ ದಿನವೇ ಪಾಲಿಸಿದಾರರು ಮತ್ತು ಉದ್ಯೋಗಿಗಳು ತಮ್ಮ ಹೂಡಿಕೆಗಳಲ್ಲಿ ನಷ್ಟವನ್ನು ಕಂಡಿದ್ದಾರೆ. ಈ ಹಿಂದೆ ಐಪಿಒ ವೇಳೆ ಎಲ್‌ಐಸಿ ಅರ್ಹ ಪಾಲಿಸಿದಾರರಿಗೆ 60 ರೂಪಾಯಿ ರಿಯಾಯಿತಿ ಮತ್ತು ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳಿಗೆ 45 ರೂಪಾಯಿಗಳ ರಿಯಾಯಿತಿಯನ್ನು ನೀಡಿತು. ಇದು ಪಾಲಿಸಿದಾರರಿಗೆ ಷೇರಿನ ಬೆಲೆ 889 ಮತ್ತು ಚಿಲ್ಲರೆ ಹೂಡಿಕೆದಾರರು ಮತ್ತು ಉದ್ಯೋಗಿಗಳಿಗೆ 904 ರೂಪಾಯಿಯಂತೆ ತಲುಪಿಸಿತ್ತು. ಷೇರು ಪೇಟೆಯಲ್ಲಿ ಎಲ್‌ಐಸಿ ಶೇಕಡ 8.5 ಪ್ರತಿಶತದಷ್ಟು ರಿಯಾಯಿತಿಯಲ್ಲಿ ವಹಿವಾಟು ಆರಂಭ ಮಾಡಿದೆ. ವಹಿವಾಟಿನಲ್ಲಿ 50,000 ಕೋಟಿ ರೂಪಾಯಿಗಿಂತ ಅಧಿಕ ನಷ್ಟವನ್ನು ಹೂಡಿಕೆದಾರರು ಅನುಭವಿಸಿದ್ದಾರೆ.

 ಎಲ್‌ಐಸಿ ಷೇರು ಕುಸಿತಕ್ಕೆ ಕಾರಣವೇನು?
 

ಎಲ್‌ಐಸಿ ಷೇರು ಕುಸಿತಕ್ಕೆ ಕಾರಣವೇನು?

ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಒತ್ತಡದಿಂದ ಪರಿಸ್ಥಿತಿಯು ಹದಗೆಟ್ಟಿದೆ. ಕೋವಿಡ್ ಏಕಾಏಕಿ ಏರಿಕೆಯನ್ನು ಎದುರಿಸಲು ಚೀನಾದಲ್ಲಿ ವಿಧಿಸಲಾದ ಕಟ್ಟುನಿಟ್ಟಾದ ಲಾಕ್‌ಡೌನ್‌ಗಳು ಅದರ ಆರ್ಥಿಕತೆಗೆ ಹೊಡೆತವನ್ನು ಉಂಟು ಮಾಡಿದೆ. ಇದು ವಿಶ್ವದ ಆರ್ಥಿಕತೆ ಹಾಗೂ ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಈ ನಡುವೆ ನಿರಂತರವಾಗಿ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧಗಳು ಕೂಡಾ ಸರಕುಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿದೆ. ಹೂಡಿಕೆ ಹಿಂತೆಗೆದುಕೊಳ್ಳುವ ಮೂಲಕ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಸಾರ್ವಜನಿಕ ವಲಯದ ಉದ್ಯಮಗಳ ಷೇರುಗಳು ಪ್ರಾರಂಭವಾಗುವ ಸಮಸ್ಯೆ ಇದೆ ಎಂಬ ಸೂಚಕ ಎಂದು ವಿಶ್ಲೇಷಕರು ಹೇಳಿದ್ದಾರೆ. ಪ್ರಮುಖವಾಗಿ ಕಂಪನಿಯು ಸಂಪತ್ತು ಸೃಷ್ಟಿಯಿಂದ ಸಾಮಾಜಿಕ ಒಳಿತಿನ ಉದ್ದೇಶವನ್ನು ಹೊಂದಿವೆ. ಆದರೆ ಇದು ಹೂಡಿಕೆದಾರರ ಮನಸ್ಸಿನಲ್ಲಿ ನಕಾರಾತ್ಮಕ ಪ್ರಭಾವವನ್ನು ಉಂಟುಮಾಡಿದೆ. ಈ ಎಲ್ಲ ಬೆಳವಣಿಗೆಯ ಪರಿಣಾಮವಾಗಿ ಮೊದಲ ದಿನವೇ ಷೇರು ಕುಸಿತ ಕಂಡಿದೆ.

 ಅತ್ಯಂತ ಕೆಟ್ಟ ಲೀಸ್ಟಿಂಗ್ ಕಂಡ ಎರಡನೇ ಕಂಪನಿ

ಅತ್ಯಂತ ಕೆಟ್ಟ ಲೀಸ್ಟಿಂಗ್ ಕಂಡ ಎರಡನೇ ಕಂಪನಿ

ಬ್ಲೂಮ್‌ಬರ್ಗ್ ಸಂಶೋಧನೆಯ ಪ್ರಕಾರ, ಜಾಗತಿಕವಾಗಿ ಪಟ್ಟಿಮಾಡಲಾದ ಮತ್ತು ಈ ವರ್ಷ 1 ಡಾಲರ್ ಬಿಲಿಯನ್‌ಗಿಂತಲೂ ಹೆಚ್ಚಿನ ಹಣವನ್ನು ಸಂಗ್ರಹಿಸಿರುವ 11 ಸಂಸ್ಥೆಗಳಲ್ಲಿ ಎಲ್‌ಐಸಿ ಎರಡನೇ ಅತ್ಯಂತ ಕೆಟ್ಟ ಲೀಸ್ಟಿಂಗ್ ಆಗಿದೆ. ಶಾಂಘೈನಲ್ಲಿನ ಎಎಸ್‌ಆರ್‌ ಮೈಕ್ರೋಎಲೆಕ್ಟ್ರಾನಿಕ್ಸ್ ಕೋ ಲಿಮಿಟೆಡ್ ಒಂದು ಶತಕೋಟಿ ಡಾಲರ್‌ಗಿಂತಲೂ ಕೊಂಚ ಅಧಿಕ ಹಣವನ್ನು ಸಂಗ್ರಹ ಮಾಡಿದೆ. ಆದರೆ ಜನವರಿ 14 ರಂದು ಸುಮಾರು 34 ಪ್ರತಿಶತ ರಿಯಾಯಿತಿಯಲ್ಲಿ ಪಟ್ಟಿಮಾಡಲಾಗಿದೆ.

 ಲಾಭದಾಯಕ ಷೇರಾಗುವ ಭರವಸೆ

ಲಾಭದಾಯಕ ಷೇರಾಗುವ ಭರವಸೆ

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಆಕ್ಸಿಸ್ ಸೆಕ್ಯುರಿಟೀಸ್‌ನ ಎಂಡಿ ಮತ್ತು ಸಿಇಒ ಬಿ ಗೋಪ್‌ಕುಮಾರ್, "ಹೂಡಿಕೆದಾರರು ಪ್ರಸ್ತುತ ಎಲ್‌ಐಸಿ ಷೇರಿನ್ನು ತೊರೆಯುವ ನಿರ್ಧಾರಕ್ಕೆ ಬರಬಾರದು. ಷೇರುಗಳನ್ನು ಈಗ ಹಿಡಿದಿಟ್ಟುಕೊಳ್ಳುವುದು ಉತ್ತಮ. ಎಲ್‌ಐಸಿ ದೀರ್ಘಾವಧಿಯ ಲಾಭದಾಯಕ ಷೇರಾಗಿ ಮುಂದುವರಿಯಲಿದೆ ಎಂದು ನಾವು ನಂಬುತ್ತೇವೆ. ಏಕೆಂದರೆ ಇದು ದುರ್ಬಲ ಜೀವ ವಿಮಾ ಉದ್ಯಮದ ಬೆಳವಣಿಗೆಯ ಕಥೆಯಾಗಿದೆ," ಎಂದು ಹೇಳಿದ್ದಾರೆ.

English summary

LIC listing disappoints IPO investors, They Lose over Rs 50000 Crore

Investors of Life Insurance Corporation of India (LIC) lost over Rs 50,000 crore on the stock’s debut on May 17. It listed at Rs 867.20 per share, an over 8.5 percent discount to its issue price. Know more.
Story first published: Wednesday, May 18, 2022, 11:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X