For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಮ್ಯೂಚುವಲ್‌ ಫಂಡ್‌ನಿಂದ ಬಿಎಎಫ್‌: ನೀವು ಹೂಡಿಕೆ ಮಾಡಬಹುದೇ?

|

ಎಲ್ಐಸಿ ಮ್ಯೂಚುವಲ್ ಫಂಡ್ ಇತ್ತೀಚೆಗೆ ಇಕ್ವಿಟಿ, ಸಾಲ ಮತ್ತು ಹಣ ಮಾರುಕಟ್ಟೆ ಸಾಧನಗಳಲ್ಲಿ ಹೂಡಿಕೆ ಮಾಡುವ ಹೊಸ ಸಮತೋಲಿತ ಪ್ರಯೋಜನ ನಿಧಿ ಅನ್ನು (ಬಿಎಎಫ್‌) ಆರಂಭ ಮಾಡಿದೆ. ಎಲ್ಐಸಿಯ ಬಿಎಎಫ್‌ ಒಂದು ಹೈಬ್ರಿಡ್ ಮ್ಯೂಚುವಲ್ ಫಂಡ್ ಎಂದೇ ನಾವು ಹೇಳಬಹುದು. ಇದು ಉತ್ತಮ ಲಾಭ ಇರುವ ಹಾಗೂ ಕಡಿಮೆ ಅಪಾಯವನ್ನು ಉಂಟು ಮಾಡುವ ಈಕ್ವಿಟಿಗಳು ಮತ್ತು ಸಾಲ ಎರಡರಲ್ಲೂ ಹೂಡಿಕೆ ಮಾಡುತ್ತದೆ.

 

ಬಿಎಎಫ್‌ ಅನ್ನು ಡೈನಾಮಿಕ್ ಆಸ್ತಿ ಹಂಚಿಕೆ ಯೋಜನೆ ಎಂದೂ ಕೂಡಾ ಕರೆಯುತ್ತಾರೆ. ಯಾವ ಸ್ಟಾಕ್‌ ಲಾಭದಾಯಕ ಎಂದು ನೋಡಿಕೊಂಡು ಹೂಡಿಕೆ ಮಾಡುವ ಈ ಯೋಜನೆಯು ಯಾವ ಸ್ಟಾಕ್‌ಗಳು ಲಾಭದಾಯಕವೆಂದು ಗುರುತಿಸಲು ಹಲವಾರು ಸಾಧನಗಳನ್ನು ಬಳಸಿಕೊಳ್ಳುತ್ತದೆ.

ಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿ

ಈಗ ಈಕ್ವಿಟಿ ಮತ್ತು ಸಾಲ ಎರಡಕ್ಕೂ ಹೂಡಿಕೆ ಮಾಡುವ ಮೂಲಕ ಎಲ್ಐಸಿ ಮ್ಯೂಚುವಲ್ ಫಂಡ್ ಈಗ ಬಿಎಎಫ್ ಕ್ಷೇತ್ರದಲ್ಲಿ ಉಳಿಯುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿದೆ. ಈ ನಡುವೆ ಎಲ್‌ಐಸಿ ಬಿಎಎಫ್‌ ಅನ್ನು ಎಲ್‌ಐಸಿ ಎಂಎಫ್‌ ಹೈಬ್ರಿಡ್‌ ಕಾಂಪೋಸಿಟ್‌ 50:50 ಸೂಚ್ಯಂಕದ ನಡುವೆ ಬೆಂಚ್‌ಮಾರ್ಕ್ ಮಾಡಲಾಗುತ್ತದೆ.

 ಇಕ್ವಿಟಿ-ಸಾಲ ನಿರ್ವಹಣೆ ಮಾದರಿ

ಇಕ್ವಿಟಿ-ಸಾಲ ನಿರ್ವಹಣೆ ಮಾದರಿ

ಸಮತೋಲಿತ ಪ್ರಯೋಜನ ನಿಧಿಯಲ್ಲಿ (ಬಿಎಎಫ್‌) ಎಲ್ಲಿ ಹೂಡಿಕೆ ಮಾಡುವು ಹಾಗೂ ಬಾಂಡ್‌ ಹಾಗೂ ಸ್ಟಾಕ್‌ಗಳಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡುವುದು ಎಂಬುವುದು ಅತೀ ಮುಖ್ಯವಾದ ವಿಚಾರವಾಗಿದೆ. ಇಕ್ವಿಟಿ-ಸಾಲ ನಿರ್ವಹಣೆಯ ಈ ಬಿಎಎಫ್‌ ಖಾತೆಯನ್ನು ನಿರ್ವಹಣೆ ಮಾಡಲು ಎಲ್‌ಐಸಿ ಬಿಎಎಫ್‌ ತನ್ನದೇ ಆದ ಆಂತರಿಕ ಮಾದರಿಯನ್ನು ಹೊಂದಿದೆ. ಇಲ್ಲಿ ಬಡ್ಡಿದರಗಳು, 1 ವರ್ಷದ ಬೆಲೆ ಗಳಿಕೆಯ ಅನುಪಾತ ಹಾಗೂ ಗಳಿಕೆಯ ಇಳುವರಿಯನ್ನು ಗಮನಾರ್ಹ ಅಂಶಗಳಾಗಿ ಪರಿಗಣಿಸುತ್ತದೆ.

 ಈಕ್ವಿಟಿ ಹಂಚಿಕೆ ಹೇಗೆ?

ಈಕ್ವಿಟಿ ಹಂಚಿಕೆ ಹೇಗೆ?

ಈ ಸಂದರ್ಭದಲ್ಲಿ ಈಕ್ವಿಟಿ ಹಂಚಿಕೆಯ ಪ್ರಶ್ನೆ ಬರುತ್ತದೆ. ಈಕ್ವಿಟಿ ಹಂಚಿಕೆ ವಿಚಾರಕ್ಕೆ ಬಂದರೆ ಎಲ್‌ಐಸಿ ಬಿಎಎಫ್‌ ದೊಡ್ಡ ಕಂಪನಿಗಳಲ್ಲಿ ಹೆಚ್ಚು ಹೂಡಿಕೆ ಮಾಡುತ್ತದೆ. ಸ್ಥಿರ-ಆದಾಯದ ವಿಚಾರಕ್ಕೆ ಬಂದಾಗ ಎಲ್‌ಐಸಿ ಬಿಎಎಫ್‌ ಸರ್ಕಾರಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಎಎಎ-ರೇಟ್ ಮಾಡಿದ ಖಾಸಗಿ ವಲಯದ ಕಾರ್ಪೊರೇಟ್‌ಗಳು ನೀಡುವ ಉತ್ತಮ-ಗುಣಮಟ್ಟದ ಬಾಂಡ್‌ಗಳಿಗೆ ಆದ್ಯತೆ ನೀಡುತ್ತದೆ. ಈಕ್ವಿಟಿ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಬಡ್ಡಿ ದರ ಅಧಿಕವಾದಾಗ ಕೆಲವೊಂದು ಬದಲಾವಣೆ ಮಾಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಲ್‌ಐಸಿ ಮ್ಯೂಚುವಲ್ ಫಂಡ್‌ನ ಈಕ್ವಿಟಿಯ ಮುಖ್ಯಸ್ಥ ಯೋಗೇಶ್ ಪಾಟೀಲ್, "ನಾವು ಫಂಡ್‌ ಅನ್ನು ಹೇಗೆ ಹಂಚಿಕೆ ಮಾಡುತ್ತೇವೆ ಎಂಬುವುದು ಈಕ್ವಿಟಿ ಮತ್ತು ಬಡ್ಡಿದರಗಳ ನಡುವಿನ ಸಂಬಂಧದ ಮೇಲೆ ಪ್ರಮುಖವಾಗಿ ಆಧಾರಿಸಿದೆ," ಎಂದು ತಿಳಿಸಿದ್ದಾರೆ.

ಒಂದು ವರ್ಷದಲ್ಲಿ ಶೇ. 97-118 ರಿಟರ್ನ್ ನೀಡಿದ ಮ್ಯೂಚುವಲ್‌ ಫಂಡ್‌ಗಳು

 ಈಕ್ವಿಟಿ ಮಾರಾಟ, ಖರೀದಿ ಮಾಡುವುದು ಯಾವಾಗ?
 

ಈಕ್ವಿಟಿ ಮಾರಾಟ, ಖರೀದಿ ಮಾಡುವುದು ಯಾವಾಗ?

"ಸ್ಟಾಕ್‌ ಮಾರುಕಟ್ಟೆಯಲ್ಲಿ ಯಾವ ರೀತಿಯಾಗಿ ಬದಲಾವಣೆ ಆಗುತ್ತಿರುತ್ತದೆ ಎಂಬುವುದರ ಪ್ರಯೋಜನವನ್ನು ಈ ಯೋಜನೆಯು ಪಡೆಯಬಹುದಾಗಿದೆ. ಆದ್ದರಿಂದ ಸ್ಟಾಕ್‌ಗಳ ಬೆಲೆ ಕಡಿಮೆ ಇದ್ದಾಗ ಈಕ್ವಿಟಿಯಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬಹುದು. ಹಾಗೆಯೇ ಬೆಲೆ ಹೆಚ್ಚಾದಾಗ ಈಕ್ವಿಟಿಯನ್ನು ಮಾರಾಟ ಮಾಡಬಹುದು," ಎಂದು ಕೂಡಾ ಎಲ್‌ಐಸಿ ಮ್ಯೂಚುವಲ್ ಫಂಡ್‌ನ ಈಕ್ವಿಟಿಯ ಮುಖ್ಯಸ್ಥ ಯೋಗೇಶ್ ಪಾಟೀಲ್ ಹೇಳಿದ್ದಾರೆ.

 ಎಲ್‌ಐಸಿಯ ಬಿಎಎಫ್‌ಗೆ ಹೂಡಿಕೆ ಮಾಡಬಹುದೇ?

ಎಲ್‌ಐಸಿಯ ಬಿಎಎಫ್‌ಗೆ ಹೂಡಿಕೆ ಮಾಡಬಹುದೇ?

ಈ ನಡುವೆ ನಾವು ಎಲ್‌ಐಸಿಯ ಬಿಎಎಫ್‌ಗೆ ಹೂಡಿಕೆ ಮಾಡಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಈ ಯೋಜನೆಯನ್ನು ತೆರಿಗೆ ವಿಚಾರದಲ್ಲಿ ಈಕ್ವಿಟಿ ಫಂಡ್‌ನಂತೆ ಪರಿಗಣಿಸಬೇಕು ಎಂಬ ನಿಟ್ಟಿನಲ್ಲಿ ಎಲ್‌ಐಸಿ ಶೇಕಡ 65 ರಷ್ಟು ಹಣವನ್ನು ಈಕ್ವಿಟಿಯಲ್ಲಿಯೇ ಹೂಡಿಕೆ ಮಾಡುತ್ತದೆ. ಆದ್ದರಿಂದ ಈ ಯೋಜನೆಯನ್ನು ನಾವು ತೆರಿಗೆಗಾಗಿ ಇಕ್ವಿಟಿ ಫಂಡ್ ಎಂದು ಪರಿಗಣಿಸಬಹುದು. ಬಿಎಎಫ್‌ ಇತ್ತೀಚೆಗೆ ಸಾಕಷ್ಟು ಉತ್ತಮ ರಿಸ್ಕ್-ಹೊಂದಾಣಿಕೆಯ ಆದಾಯವನ್ನು ನೀಡಿದೆ. ಆದ್ದರಿಂದ ನೀವು ಬಿಎಎಫ್‌ಗೆ ಹೂಡಿಕೆ ಮಾಡಬೇಕು ಎಂದು ಆಲೋಚನೆ ಮಾಡಿದ್ದರೆ, ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಎಲ್‌ಐಸಿಯ ಬಿಎಎಫ್‌ ಈ ವರ್ಷ ನವೆಂಬರ್‌ ಮೂರರಂದು ಕೊನೆಯಾಗುತ್ತದೆ.

English summary

LIC Mutual Fund Launched Balanced Advantage Funds (BAFs): Should you Invest?

LIC Mutual Fund Launched Balanced Advantage Funds (BAFs): Should you Invest?. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X