For Quick Alerts
ALLOW NOTIFICATIONS  
For Daily Alerts

LICಯ ಲ್ಯಾಪ್ಸ್ ಆದ ವಿಮೆಗಳಿಗೆ ಮತ್ತೆ ಜೀವ ನೀಡಲು ಅಕ್ಟೋಬರ್ 9ರ ತನಕ ಅವಕಾಶ

|

ಅವಧಿ ಮುಗಿದ ಅಥವಾ ಲ್ಯಾಪ್ಸ್ ಆದ ಪಾಲಿಸಿಗಳಿಗೆ ಮತ್ತೆ ಚಾಲನೆ ನೀಡಲು ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (LIC) 2 ತಿಂಗಳ ವಿಶೇಷ ಅವಕಾಶವನ್ನು ನೀಡಲಾಗುತ್ತಿದೆ. ಆಗಸ್ಟ್ 10ರಿಂದ ಈ ವಿಶೇಷ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಅಕ್ಟೋಬರ್ 9ನೇ ತಾರೀಕಿನ ತನಕ ಇದು ನಡೆಯುವುದು.

 

ಅನಿವಾರ್ಯ ಕಾರಣಗಳಿಗಾಗಿ ಪ್ರೀಮಿಯಂ ಪಾವತಿ ಮಾಡಲು ಸಾಧ್ಯವಾಗದೆ, ಪಾಲಿಸಿ ಲ್ಯಾಪ್ಸ್ ಆದವರ ಅನುಕೂಲಕ್ಕಾಗಿ ಈ ಅಭಿಯಾನ ಆರಂಭಿಸಲಾಗಿದೆ. ಇನ್ಷೂರೆನ್ಸ್ ಕವರ್ ಆಗುವುದಕ್ಕೆ ಹಳೆಯ ಪಾಲಿಸಿಗಳಿಗೆ ಮತ್ತೆ ಚಾಲನೆ ನೀಡುವುದು ಉತ್ತಮ ನಿರ್ಧಾರ ಎಂದು ಎಲ್ ಐಸಿ ತಿಳಿಸಿದೆ.

LICಯ ಲ್ಯಾಪ್ಸ್ ಆದ ವಿಮೆಗಳಿಗೆ ಮತ್ತೆ ಜೀವ ನೀಡಲು ಅ. 9ರ ತನಕ ಅವಕಾಶ

ಈ ಸಂದರ್ಭದಲ್ಲಿ ಎಲ್ ಐಸಿ ನೀಡಿರುವ ವಿಶೇಷ ಆಫರ್ ಬಗ್ಗೆ ತಿಳಿದುಕೊಳ್ಳಬೇಕಾದ ಐದು ಅಂಶಗಳು ಹೀಗಿವೆ:
* ವೈದ್ಯಕೀಯ ಅಗತ್ಯಗಳು ಇದ್ದಲ್ಲಿ ಅದರಿಂದ ವಿನಾಯಿತಿ ನೀಡುವುದಿಲ್ಲ. ಕೊರೊನಾ ವೈರಸ್ ಬಿಕ್ಕಟ್ಟು ಇದ್ದರೂ ಈಗಿನ ಸನ್ನಿವೇಶವನ್ನು ಮುಂದು ಮಾಡಿಕೊಂಡು, ವೈದ್ಯಕೀಯ ಅಗತ್ಯಗಳು ಪೂರೈಸಬೇಕಾದ್ದುದರಿಂದ ಯಾವ ವಿನಾಯಿತಿ ಸಿಗಲ್ಲ.

* ವಿನಾಯಿತಿಯು ಲೇಟ್ ಫೀಗೆ (ತಡವಾಗಿ ಪ್ರೀಮಿಯಂ ಪಾವತಿ ಮಾಡಿದಲ್ಲಿ ವಿಧಿಸುವ ಶುಲ್ಕಕ್ಕೆ) ಮಾತ್ರ ಅನ್ವಯಿಸುತ್ತದೆ. ಟರ್ಮ್ ಇನ್ಷೂರೆನ್ಸ್, ಹೆಲ್ತ್ ಇನ್ಷೂರೆನ್ಸ್ ಹಾಗೂ ಮಲ್ಟಿಪಲ್ ರಿಸ್ಕ್ ಪಾಲಿಸಿಗಳಂಥವುಕ್ಕೆ ಲೇಟ್ ಫೀ ವಿನಾಯಿತಿ ಸಿಗುವುದಿಲ್ಲ.

* ಪ್ರೀಮಿಯಂ ಪಾವತಿಯ ಅವಧಿ ಇನ್ನೂ ಬಾಕಿ ಇರುವಂತೆಯೇ ಪಾಲಿಸಿ ಲ್ಯಾಪ್ಸ್ ಆಗಿದ್ದಲ್ಲಿ ಹಾಗೂ ಪಾಲಿಸಿಯ ಅವಧಿ ಪೂರ್ಣಗೊಳ್ಳದೆ ಇದ್ದಲ್ಲಿ ಮಾತ್ರ ಈಗಿನ ಅಭಿಯಾನದಲ್ಲಿ ಮತ್ತೆ ಪಾಲಿಸಿಗೆ ಚಾಲನೆ ನೀಡಲು ಅರ್ಹವಾಗಿರುತ್ತದೆ.

LIC ಷೇರು ಮಾರಾಟ ಎಲ್ಲಿಯವರೆಗೆ ಬಂತು? ಐಪಿಒ ಪೂರ್ಣ ಮಾಹಿತಿ

* ಎಲ್ಲಿಂದ ಪ್ರೀಮಿಯಂ ಪಾವತಿಸಿಲ್ಲವೋ, ಆ ಮೊದಲ ಪ್ರೀಮಿಯಂ ಬಾಕಿ ಉಳಿಸಿಕೊಂಡ ಐದು ವರ್ಷದೊಳಗೆ ನಿರ್ದಿಷ್ಟ ಅರ್ಹತಾ ಪ್ಲಾನ್ ಗಳಿಗೆ ಮಾತ್ರ ಮತ್ತೆ ಚಾಲನೆ ನೀಡಬಹುದು. ಆದರೆ ಷರತ್ತು ಮತ್ತು ನಿಬಂಧನೆಗಳು ಅನ್ವಯಿಸುತ್ತವೆ.

* ಇನ್ನು ಲೇಟ್ ಫೀ ವಿನಾಯಿತಿ ಎಂದು ಗರಿಷ್ಠ 1500ರಿಂದ 2500 ರುಪಾಯಿ ಮಧ್ಯೆ ವಿನಾಯಿತಿ ನೀಡಲಾಗುತ್ತದೆ. 1,00,000 ರುಪಾಯಿ ತನಕ 20% ಲೇಟ್ ಫೀ ವಿನಾಯಿತಿ, ಗರಿಷ್ಠ 1500 ರುಪಾಯಿ ಮತ್ತು 1,00,001 ರುಪಾಯಿಯಿಂದ 3,00,000 ರು. ತನಕ 25% ಲೇಟ್ ಫೀ ವಿನಾಯಿತಿ, ಗರಿಷ್ಠ 2000 ರುಪಾಯಿ ಹಾಗೂ 3,00,001 ರುಪಾಯಿ ಮೇಲ್ಪಟ್ಟು 30% ಲೇಟ್ ಫೀ, ಗರಿಷ್ಠ ವಿನಾಯಿತಿ 2500 ರುಪಾಯಿ ದೊರೆಯುತ್ತದೆ.

English summary

LIC Offers Special Concession For Lapsed Policies Till October 9

LIC launched special campaign on August 10th till October 9, 2020 for revival of lapsed policies. Concession for policy holders in late fee payment.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X