For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಸರಳ ಪಿಂಚಣಿ 2021: ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು

|

ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಜುಲೈ 1, 2021 ರಂದು ಸರಳ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಿದೆ. ಇತ್ತೀಚೆಗೆ ಘೋಷಿಸಲಾದ ಈ ಸರಳ ಪಿಂಚಣಿ ಯೋಜನೆಯು ಭಾರೀ ವಿಸ್ತಾರವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಈ ವರ್ಷಾಶನ ಯೋಜನೆಯು ವಿಮಾ ನಿಯಂತ್ರಕ ಐಆರ್‌ಡಿಎಐನ ಮಾರ್ಗಸೂಚಿಗಳ ಪ್ರಕಾರ ತಕ್ಷಣದ ವರ್ಷಾಶನ ಯೋಜನೆಯಾಗಿದೆ. ಒಂದು ದೊಡ್ಡ ಮೊತ್ತವನ್ನು ಪಾವತಿ ಮಾಡಿ ಒಮ್ಮೆ ಈ ಪಾಲಿಸಿಯನ್ನು ಖರೀದಿ ಮಾಡಿದರೆ ಜೀವನ ಪರ್ಯಂತ ನಾವು ಪಿಂಚಣಿಯನ್ನು ಪಡೆಯಲು ಸಾಧ್ಯವಾಗುವ ಯೋಜನೆಯಾಗಿದೆ.

 

ಇದು ಲಿಂಕ್ ಮಾಡದ ಏಕ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಪ್ರೀಮಿಯಂ ಅನ್ನು ಒಮ್ಮೆ ಮಾತ್ರ ಪಾವತಿಸಬೇಕಾಗುತ್ತದೆ. ಎಲ್ಐಸಿಯ ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಲಭ್ಯವಿರುವ ಎರಡು ವರ್ಷಾಶನ ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.

ಎಲ್ಐಸಿ ಸರಳ ಪಿಂಚಣಿ ಯೋಜನೆ: ಮಾಸಿಕ 1000 ರು. ಸ್ಥಿರ ಆದಾಯ ಪಡೆಯುವುದು ಹೇಗೆ?

ಎಲ್‌ಸಿಯು ಈ ಯೋಜನೆಯನ್ನು "ವರ್ಷಾಶನ" ಎಂದು ಹೇಳಿದ್ದು, ಜೀವನ ಪರ್ಯಂತ ಈ ವರ್ಷಾಶನ ಪಾವತಿದಾರರಿಗೆ ಪಿಂಚಣಿಯನ್ನು ಒದಗಿಸುವ ನಿಟ್ಟಿನಲ್ಲಿ ಮಡಲಾಗಿದೆ ಎಂದು ಹೇಳಿದೆ. ಈ ಮೊದಲು, ಭಾರತದ ಅತ್ಯುನ್ನತ ವಿಮಾ ನಿಯಂತ್ರಣ ಪ್ರಾಧಿಕಾರವಾದ ಐಆರ್‌ಡಿಎಐ ಈ ಯೋಜನೆಯನ್ನು ಪರಿಚಯಿಸುವಂತೆ ಎಲ್ಲ ವಿಮಾ ಕಂಪನಿಗಳಿಗೆ ಸಲಹೆ ನೀಡಿತ್ತು. ಆದ್ದರಿಂದ ಎಲ್‌ಐಸಿ ಈಗ ಈ ಸರಳ ಪಿಂಚಣಿ ಯೋಜನೆಯನ್ನು 2021 ಅನ್ನು ಪ್ರಾರಂಭಿಸಿದೆ. ಈ ಸರಳ ಪಿಂಚಣಿ ಯೋಜನೆಯು ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು ಆಗಲಿದೆ.

 ಯೋಜನೆಯ ಪ್ರಯೋಜನಗಳು ಮತ್ತು ನಿಯಮಗಳು

ಯೋಜನೆಯ ಪ್ರಯೋಜನಗಳು ಮತ್ತು ನಿಯಮಗಳು

ಸರಳ ಪಿಂಚಣಿ ಯೋಜನೆಯು ತಕ್ಷಣದ ವರ್ಷಾಶನ ಪಾಲಿಸಿ ಆಗಿದೆ. ಎಂದರೆ ಪಾಲಿಸಿದಾರರು ಯಾವಾಗ ಯೋಜನೆಯನ್ನು ಖರೀದಿ ಮಾಡುತ್ತಾರೋ, ಆ ಕ್ಷಣದಿಂದಲ್ಲೇ ಪಾಲಿಸಿದಾರರಿಗೆ ಪಿಂಚಣಿ ಪ್ರಾರಂಭವಾಗಲಿದೆ. ಇದು ಏಕ ಪ್ರೀಮಿಯಂ ಪಿಂಚಣಿ ಯೋಜನೆಯಾಗಿದೆ. ಅಂದರೆ ಪಾಲಿಸಿದಾರರು ಪಾಲಿಸಿಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಒಂದೇ ಭಾರಿಗೆ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಈ ಸರಳ ಪಿಂಚಣಿ ಯೋಜನೆಯಡಿ ಪಾಲಿಸಿಯನ್ನು 40 ರಿಂದ 80 ವರ್ಷ ವಯಸ್ಸಿನ ಜನರು ಖರೀದಿ ಮಾಡಬಹುದು. ಈ ಸರಳ ಪಿಂಚಣಿ ಯೋಜನೆ ದೊಡ್ಡ ಮೊತ್ತವನ್ನು ಹೊಂದಿರುವ ಜನರಿಗೆ ತಮ್ಮ ಉಳಿದ ಜೀವನವನ್ನು ಭದ್ರಪಡಿಸಲು ಸೂಕ್ತವಾದ ಯೋಜನೆ ಇದಾಗಿದೆ.

 ನಿಮ್ಮ ಮುಂದಿದೆ ವರ್ಷಾಶನ ಅಥವಾ ಪಿಂಚಣಿ ಆಯ್ಕೆ
 

ನಿಮ್ಮ ಮುಂದಿದೆ ವರ್ಷಾಶನ ಅಥವಾ ಪಿಂಚಣಿ ಆಯ್ಕೆ

ಈ ಸರಳ ಪಿಂಚಣಿ ಯೋಜನೆಯು ಹೆಸರಿಗೆ ತಕ್ಕಂತೆ ಜನರಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಸರಳ ಯೋಜನೆಯಾಗಿದೆ. ಯಾರು ತಮ್ಮ ಜೀವನದುದ್ದಕ್ಕೂ ಪಿಂಚಣಿಯನ್ನು ಪಡೆದುಕೊಳ್ಳುತ್ತಾ ಜೀವನವನ್ನು ಭದ್ರಪಡಿಸ ಬಯಸುತ್ತಾರೋ ಅವರಿಗೆ ಈ ಸರಳಿ ಪಿಂಚಣಿ ಯೋಜನೆಯು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವ ಪಾಲಿಸಿ ಯೋಜನೆಯಾಗಿದೆ. ಈ ಸರಳ ಪಿಂಚಣಿ ಯೋಜನೆಯ ಕನಿಷ್ಠ ಪಾಲಿಸಿ ಖರೀದಿ ಮೊತ್ತವು ಒಂದು ಲಕ್ಷ ರೂಪಾಯಿ ಆಗಿದೆ. ಇತರೆ ವಿಮೆ ಹಾಗೂ ಪಿಂಚಣಿ ಯೋಜನೆಯಂತೆ ಎಲ್‌ಐಸಿಯ ಸರಳ ಪಿಂಚಣಿ ಯೋಜನೆಯಲ್ಲಿ ವರ್ಷಾಶನ ಹಾಗೂ ಪಿಂಚಣಿಗಾಗಿ ಮಾಸಿಕ, ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ವಿಧಾನಗಳು ಕೂಡಾ ಇದೆ. ಸರಳ ಪಿಂಚಣಿ ಯೋಜನೆಯಡಿಯಲ್ಲಿ ಪಾಲಿಸಿ ಖರೀದಿ ಮಾಡುವವರು ಮಾಸಿಕ ಮಾದರಿಯನ್ನು ಆಯ್ಕೆ ಮಾಡಿದರೆ, ಪಾಲಿಸಿ ಖರೀದಿ ಮಾಡಿದ ಒಂದು ತಿಂಗಳ ನಂತರ ಪಿಂಚಣಿಯು ಆರಂಭವಾಗಲಿದೆ. ಹಾಗೆಯೇ ಉಳಿದಂತೆ ತ್ರೈಮಾಸಿಕ ಆಯ್ಕೆ ಮಾಡಿದರೆ, ಪಾಲಿಸಿ ಖರೀದಿ ಮಾಡಿದ ತ್ರೈಮಾಸಿಕ ಬಳಿಕ, ಅರ್ಧ ವಾರ್ಷಿಕ ವಿಧಾನ ಆಯ್ಕೆ ಮಾಡಿದರೆ ಪಾಲಿಸಿ ಖರೀದಿ ಮಾಡಿದ ಅರ್ಧ ವಾರ್ಷಿಕ ಬಳಿಕ ಪಿಂಚಣಿ ಲಭಿಸಲು ಆರಂಭವಾಗುತ್ತದೆ. ಒಂದು ವೇಳೆ ನಿಮಗೆ ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆ ಉಂಟಾದರೆ, ಪಾಲಿಸಿದಾರರು ತಮ್ಮ ಪಾಲಿಸಿಯನ್ನು ಹಿಂದಕ್ಕೆ ಪಡೆಯುವ ಮೂಲಕ ಹಣವನ್ನು ಹಿಂಪಡೆದುಕೊಳ್ಳಬಹುದು. ಈ ಸಂದರ್ಭದಲ್ಲಿ ನೀವು ಖರೀದಿ ಮಾಡಿದ ಪಾಲಿಸಿಯ ಶೇಕಡ 95 ರಷ್ಟನ್ನು ಮಾತ್ರ ನಿಮಗೆ ವಾಪಾಸ್‌ ನೀಡಲಾಗುತ್ತದೆ.

ನಿಮ್ಮ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವಾಗ ಈ ಅಂಶಗಳನ್ನು ಮರೆಯದಿರಿ..

 ಸಾಲ ಪಡೆಯುವ ಸೌಲಭ್ಯವೂ ಕೂಡಾ ನಿಮಗಿದೆ

ಸಾಲ ಪಡೆಯುವ ಸೌಲಭ್ಯವೂ ಕೂಡಾ ನಿಮಗಿದೆ

ಪಾಲಿಸಿದಾರರು ಈ ಯೋಜನೆ ಆರಂಭವಾದ ಆರು ತಿಂಗಳ ಬಳಿಕ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯಗಳು ಕೂಡಾ ಈ ಸರಳ ಪಿಂಚಣಿ ಯೋಜನೆಯಡಿಯಲ್ಲಿ ಇದೆ. ಆದಾಗ್ಯೂ, ಈ ಸರಳ ಪಿಂಚಣಿ ಯೋಜನೆಯಡಿ ನೀಡುವ ಸಾಲದ ಗರಿಷ್ಠ ಮೊತ್ತವು ಇದರ ವಾರ್ಷಿಕ ಬಡ್ಡಿದರದ ವಾರ್ಷಿಕ ವರ್ಷಾಶನ ಮೊತ್ತದ ಶೇಕಡ 50 ಕ್ಕಿಂತ ಅಧಿಕವಾಗಿರುವುದಿಲ್ಲ. ಏಪ್ರಿಲ್ 30, 2020 ರ ಒಳಗೆ ಸಾಲವನ್ನು ಪಡೆದುಕೊಂಡಿದ್ದರೆ, ಈ ಸಾಲದ ಬಡ್ಡಿ ದರವು ವಾರ್ಷಿಕ ಶೇಕಡ 8.44 ಆಗಿರುತ್ತಿತ್ತು.

 ವರ್ಷಾಶನ ಮೊತ್ತದ ಲೆಕ್ಕಾಚಾರ ಹೇಗೆ?

ವರ್ಷಾಶನ ಮೊತ್ತದ ಲೆಕ್ಕಾಚಾರ ಹೇಗೆ?

ಮೊತ್ತ 5,00,000 ಆದರೆ, ಏಕಪೇಮೆಂಟ್‌ನಲ್ಲಿ 5,09,000 ಪಾವತಿ ಮಾಡಬೇಕು. ವರ್ಷಕ್ಕೆ ವರ್ಷಾಶನವು 25,000 ಬರುತ್ತದೆ, ತ್ರೈಮಾಸಿಕಕ್ಕೆ ವರ್ಷಾಶನವು 6,100 ಬರಲಿದೆ. ಮೊತ್ತ 10,00,000 ಆದರೆ ಏಕಪೇಮೆಂಟ್‌ನಲ್ಲಿ 10,18,000 ಪಾವತಿ ಮಾಡಬೇಕು. ವರ್ಷಕ್ಕೆ ವರ್ಷಾಶನವು 50,650 ಬರುತ್ತದೆ, ತ್ರೈಮಾಸಿಕಕ್ಕೆ ವರ್ಷಾಶನವು 12,363 ಬರಲಿದೆ. ಈ ಲೆಕ್ಕಾಚಾರವನ್ನು GoodReturns 'All in one CALC' ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಮಾಡಿದೆ.

ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯ ಎಟಿಎಂ ಕಾರ್ಡ್, ಇಬ್ಯಾಂಕಿಂಗ್‌ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

 ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು ಸರಳ ಪಿಂಚಣಿ ಯೋಜನೆ

ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು ಸರಳ ಪಿಂಚಣಿ ಯೋಜನೆ

ಈ ಸರಳ ಪಿಂಚಣಿ ಯೋಜನೆಯು ಹಿರಿಯ ನಾಗರಿಕ ಬಾಳಿಗೆ ಹೊಂಬೆಳಕು ಆಗಲಿದೆ. ಈ ಸರಳ ಪಿಂಚಣಿ ಯೋಜನೆಯು ಹಿರಿಯ ನಾಗರಿಕರಿಗೆ ಸರಿಯಾದ ಪಿಂಚಣಿ ಯೋಜನೆ ಆಗಿದೆ. ಹಿರಿಯ ನಾಗರಿಕರು ತಮ್ಮ ಬಳಿಯಲ್ಲಿ ಇರುವ ದೊಡ್ಡ ಪ್ರಮಾಣದ ಹಣವನ್ನು ನೀಡಿ ಈ ಯೋಜನೆಯ ಪಾಲಿಸಿಯನ್ನು ಖರೀದಿ ಮಾಡಿದರೆ, ಬಳಿಕ ಜೀವನ ಪರ್ಯಂತ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ತಾವು ನಿವೃತ್ತಿ ಹೊಂದುವುದಕ್ಕೂ ಮೊದಲೇ ಈ ಪಾಲಿಸಿಯನ್ನು ಖರೀದಿ ಮಾಡಿದ್ದರೆ, ಹಿರಿಯ ನಾಗರಿಕರು ನಿವೃತ್ತಿ ಹೊಂದುವ ಸಂದರ್ಭದಲ್ಲಿ ಈ ಹಿರಿಯ ನಾಗರಿಕರು ತಮ್ಮ ಪಾಲಿಸಿಯನ್ನು ವಾಪಾಸ್‌ ಪಡೆದುಕೊಳ್ಳಬಹುದು. ನಿವೃತ್ತಿ ಹೊಂದುವ ಸಂದರ್ಭದಲ್ಲಿ ಪಿಎಫ್‌ ಹಣ, ಗ್ರಾಚ್ಯುಟಿ ಹಣವು ಲಭ್ಯವಾಗುವ ಕಾರಣದಿಂದಾಗಿ ಇದರ ಜೊತೆಗೆ ಈ ಪಾಲಿಸಿಯ ಹಣವು ವಾಪಾಸ್‌ ಲಭಿಸಿದರೆ ದೊಡ್ಡ ಮೊತ್ತದ ಹಣವು ಹಿರಿಯ ನಾಗರಿಕರ ಕೈಗೆ ಲಭಿಸಲಿದೆ. ಇದರಿಂದಾಗಿ ಹಿರಿಯ ನಾಗರಿಕರು ಈ ಹಣವನ್ನು ಫಿಕ್ಸಿಡ್‌ ಡೆಪಾಸಿಟ್‌ ಆಗಿ ಇಟ್ಟು ಕೊಳ್ಳಬಹುದು. ಆದರೆ ಈಗ ಎಫ್‌ಡಿ ಬಡ್ಡಿ ದರವನ್ನು ಕೆಲವು ಬ್ಯಾಂಕ್‌ಗಳಲ್ಲಿ ಕಡಿಮೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸರಳ ಪಿಂಚಣಿ ಯೋಜನೆಯು ಹಿರಿಯ ನಾಗರಿಕರಿಗೆ ಉಪಯುಕ್ತವಾಗಿದೆ.

English summary

LIC Saral Pension 2021: Suitable Lifetime Pension Option For Senior Citizens

LIC Saral Pension 2021: Suitable Lifetime Pension Option For Senior Citizens. To know more Read on.
Story first published: Thursday, September 16, 2021, 19:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X