ಎಲ್ಐಸಿ ಷೇರು ಖರೀದಿಸಬೇಕೆ, ಮಾರಾಟ ಮಾಡಬೇಕೇ?
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಮಂಗಳವಾರ, ಮೇ 17 ರಂದು ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಾದಾರ್ಪಣೆ ಮಾಡಿದೆ. ಕೇಂದ್ರವು ಕಳೆದ ವಾರ ಎಲ್ಐಸಿಯ ದಾಖಲೆಯ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) 949 ರೂಪಾಯಿಗೆ ನಿಗದಿಪಡಿಸಿದೆ. ಆದರೆ ಷೇರು ಪೇಟೆಯಲ್ಲಿ ಎಲ್ಐಸಿ ಷೇರು ಇಳಿಕೆ ಕಂಡಿದೆ.
ಎಲ್ಐಸಿ ಆರಂಭಿಕ ಷೇರು ಮಾರಾಟದಲ್ಲಿ ದೇಶೀಯ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಮೇ 12 ರಂದು ಬಿಡ್ದಾರರಿಗೆ ಷೇರುಗಳನ್ನು ಹಂಚಲಾಯಿತು. ಆದರೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಎಲ್ಐಸಿ ನೀರಸ ಚೊಚ್ಚಲ ಪ್ರವೇಶವನ್ನು ಕಾಣುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಎಲ್ಐಸಿ ಷೇರು ಲೀಸ್ಟಿಂಗ್: ಈ ಮಾಹಿತಿ ತಿಳಿದಿರಿ
ಬೆಳಗ್ಗೆ 9:43 ರ ಹೊತ್ತಿಗೆ ಎಲ್ಐಸಿ ಷೇರುಗಳು 12.64 ಶೇಕಡಾ ರಿಯಾಯಿತಿಯಲ್ಲಿ ಅಂದರೆ 829 ರೂಪಾಯಿ ಆಗಿದೆ ಎಂದು ಬಿಎಸ್ಇ ಡೇಟಾ ತೋರಿಸಿದೆ. ಇನ್ನು ಎನ್ಎಸ್ಇಯಲ್ಲಿ 872 ಕ್ಕೆ ಎಲ್ಐಸಿ ಷೇರುಗಳು ಇದೆ. ಶೇಕಡ 8.11 ರಷ್ಟು ರಿಯಾಯಿತಿಯಲ್ಲಿ ಷೇರುಗಳು ಪಟ್ಟಿಮಾಡಲ್ಪಟ್ಟವು. ಹಾಗಾದರೆ ನೀವು ಎಲ್ಐಸಿ ಷೇರು ಖರೀದಿ ಮಾಡಬೇಕೆ? ಮಾರಾಟ ಮಾಡಬೇಕೆ ಅಥವಾ ಹೋಲ್ಡ್ ಮಾಡಬೇಕೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಎಲ್ಐಸಿ, ಇತರೆ ಷೇರುಗಳ ನಡುವೆ ಹೋಲಿಕೆ
ಎಲ್ಐಸಿ ಷೇರು ಪ್ರಸ್ತುತ ಮಾರುಕಟ್ಟೆ ಬೆಲೆ ರೂ 905 ಆಗಿದ್ದು, ಇತರೆ ಷೇರುಗಳಿಗಿಂತ ತೀರಾ ಕಡಿಮೆಯಾಗಿದೆ. ಎಚ್ಡಿಎಫ್ಸಿ ಲೈಫ್, ಎಸ್ಬಿಐ ಲೈಫ್ ಮತ್ತು ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ನಂತಹ ಕೆಲವು ಷೇರುಗಳು ಇತ್ತೀಚೆಗೆ ಕುಸಿತ ಕಂಡ ಬಳಿಕ ತಮ್ಮ ಎಂಬೆಡೆಡ್ ಮೌಲ್ಯದ ಸುಮಾರು 2 ರಿಂದ 3 ಪಟ್ಟು ವ್ಯಾಪಾರ ಮಾಡಲು ಆರಂಭ ಮಾಡಿದ್ದಾರೆ. ಈ ನಡುವೆ ಎಲ್ಐಸಿ ಭಾರೀ ರಿಯಾಯಿತಿ ನೀಡಿ ವ್ಯವಹಾರ ನಡೆಸುತ್ತಿದೆ. ಮೌಲ್ಯಗಳ ಆಧಾರದ ಮೇಲೆ ಸ್ಟಾಕ್ ಅನ್ನು ಖರೀದಿಸುವುದು ಆಕರ್ಷಕವಾಗಿದೆ. ಆದರೆ ನಾವು ಮೌಲ್ಯಮಾಪನಗಳ ಹೊರತಾಗಿ ಚರ್ಚಿಸಬೇಕಾದ ಇತರ ವಿಷಯಗಳಿವೆ. ಎಚ್ಡಿಎಫ್ಸಿ ಬ್ಯಾಂಕ್ ವರದಿಯ ಪ್ರಕಾರ ಎಲ್ಐಸಿಯ ಮೌಲ್ಯಮಾಪನವು 6.07 ಲಕ್ಷ ಕೋಟಿ ರೂ.ಗಳಷ್ಟಿದೆ, ಇದು ಅದರ ಸೆಪ್ಟೆಂಬರ್ 2021 ಎಂಬೆಡೆಡ್ ಮೌಲ್ಯದ (ಇವಿ) 1.1 ಪಟ್ಟು ಹೆಚ್ಚಾಗಿದೆ. ಅಂದರೆ, ಅದರ ನಿವ್ವಳ ಆಸ್ತಿ ಮೌಲ್ಯ ಮತ್ತು ಭವಿಷ್ಯದ ರಿಯಾಯಿತಿ ಲಾಭದ ಒಟ್ಟು ರೂ 539,686 ಕೋಟಿ ಆಗಿದೆ. ಇತರೆ ಷೇರುಗಳಿಗೆ ಹೋಲಿಕೆ ಮಾಡಿದಾಗ ಎಲ್ಐಸಿ ಷೇರು ಹೆಚ್ಚಿನ ರಿಯಾಯಿತಿಯಲ್ಲಿ ಲಭ್ಯವಿದೆ.

ಮಾರುಕಟ್ಟೆಯಲ್ಲಿ ಆಕರ್ಷಣೆ ಸೃಷ್ಟಿ
ಇತರ ವಿಮಾ ಕಂಪನಿಗಳಾದ ಎಚ್ಡಿಎಫ್ಸಿ ಲೈಫ್ ಇನ್ಶುರೆನ್ಸ್ ಕಂಪನಿಯು ಅದರ ಗಳಿಕೆಗಳ 82 ಪಟ್ಟು, ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ 79 ಬಾರಿ ಮತ್ತು ಎಸ್ಬಿಐ ಲೈಫ್ ಇನ್ಶುರೆನ್ಸ್ ಕಂಪನಿ 78 ಬಾರಿ ವಹಿವಾಟು ನಡೆಸುತ್ತದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ನ ಈಕ್ವಿಟಿ ಸ್ಟ್ರಾಟಜಿ, ಬ್ರೋಕಿಂಗ್ ಮತ್ತು ಡಿಸ್ಟ್ರಿಬ್ಯೂಷನ್ ಮುಖ್ಯಸ್ಥ ಹೇಮಂಗ್ ಜಾನಿ, "ಎಲ್ಐಸಿ ಲೀಸ್ಟಿಂಗ್ ಅದರ ಮೂಲ ಬೆಲೆಗಿಂತ ಕಡಿಮೆಯಾಗಿದೆ. ಆದರೆ ಮಾರುಕಟ್ಟೆಯಲ್ಲಿ ಆಕರ್ಷಣೆ ಸೃಷ್ಟಿ ಮಾಡುವುದನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ಹೂಡಿಕೆದಾರರಿಂದ ಷೇರುಗಳಲ್ಲಿ ಸ್ವಲ್ಪ ಖರೀದಿ ಆಸಕ್ತಿಯನ್ನು ನಾವು ನಿರೀಕ್ಷಿಸುತ್ತೇವೆ. ದೊಡ್ಡ ಪ್ರಮಾಣದ ಹಣವನ್ನು ಪಟ್ಟಿಯ ನಂತರ ಬಿಡುಗಡೆ ಮಾಡಲಾಗಿದೆ. ಎಲ್ಐಸಿಯ ಈ ಹಣದ ಒಂದು ಭಾಗವನ್ನು ಈಕ್ವಿಟಿ ಮಾರುಕಟ್ಟೆಗೆ ತಿರುಗಿಸಬಹುದು," ಎಂದು ಹೇಳಿದ್ದಾರೆ.

ಎಲ್ಐಸಿ ಬೆಳವಣಿಗೆಯ ನೈಜ ಸಮಸ್ಯೆ
ಎಲ್ಐಸಿ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುತ್ತಿದೆ, ಇದು ಕಳವಳಕಾರಿ ವಿಷಯವಾಗಿದೆ. ಎಲ್ಐಸಿಗಾಗಿ ಹಣಕಾಸು ವರ್ಷ 2021ರಲ್ಲಿ ಶೇಕಡ 9.9 ಮೌಲ್ಯವಾಗಿತ್ತು. ಆದರೆ ಇದು ಈಗ ಬೇರೆ ಖಾಸಗಿ ಷೇರುಗಳಿಗೆ ನೋಡಿದಾಗ ಭಾರೀ ಕಡಿಮೆಯಾಗಿದೆ. ಮಾರುಕಟ್ಟೆಗಳು ಈಗ ಪ್ರಮುಖವಾಗಿ ಸುತ್ತಮುತ್ತಲಿನ ಬೆಳವಣಿಗೆಯ ಮೇಲೆ ಗಮನಹರಿಸುತ್ತದೆ. ಆದರೆ ಆ ಷೇರಿನ ಮೌಲ್ಯದ ಮೇಲೆ ಅಲ್ಲ. ಅವರು ಬೆಳವಣಿಗೆಯ ಸ್ಟಾಕ್ಗಳನ್ನು ನೋಡಿದರೆ, ಅವರು ನಷ್ಟವಾಗಿದ್ದರೂ ಸಹ ಭಾರೀ ಪ್ರೀಮಿಯಂ ಅನ್ನು ಪಾವತಿಸಲು ಸಿದ್ಧರಿದ್ದಾರೆ. ಎಲ್ಐಸಿಯ ಷೇರುಗಳು ಅಗ್ಗವಾಗಿವೆ, ಆದಾಗ್ಯೂ, ವಿಮಾ ಭೀಮ್ ಮಾರುಕಟ್ಟೆ ಪಾಲನ್ನು ಕಳೆದುಕೊಂಡರೆ, ಅದು ಸಮಸ್ಯೆಯಾಗುತ್ತದೆ.

ಎಲ್ಐಸಿ ಷೇರು ಖರೀದಿ, ಮಾರಾಟ, ಹಿಡಿದುಕೊಳುವುದೇ?
ಈ ನಡುವೆ ಎಲ್ಐಸಿ ಷೇರುಗಳನ್ನು ನಾವು ಖರೀದಿ ಮಾಡುವುದೇ ಅಥವಾ ಮಾರಾಟ ಮಾಡುವುದೇ ಅಥವಾ ಹಿಡಿದಿಟ್ಟುಕೊಳ್ಳುವುದೇ ಎಂಬುವುದು ಪ್ರಶ್ನೆಯಾಗಿದೆ. ಈ ಹಿಂದೆ ಸರ್ಕಾರಿ ಕಂಪನಿಗಳು ಕೆಳಕ್ಕೆ ಇಳಿಯುವುದನ್ನು ನಾವು ನೋಡಿದ್ದೇವೆ. ಅದುವೇ ಸ್ಥಿತಿ ಎಲ್ಐಸಿಗೂ ಕೂಡಾ ಬರಬಹುದು. ಉದಾಹರಣೆಗೆ ಆರ್ಇಸಿ ಹಾಗೂ ಪಿಎಫ್ಸಿ ಲಾಭ ಹೊಂದಿದ್ದರೂ ಕೇವಲ ಎರಡು ಮೂರು ಬಾರಿ ಮಾತ್ರ ವಹಿವಾಟಿಗೆ ಒಳಗಾಗುತ್ತಿದೆ. ಕೋಲ್ ಇಂಡಿಯಾ, ಮಜಗಾಂವ್ ಡಾಕ್, ಕೊಚ್ಚಿನ್ ಶಿಪ್ಯಾರ್ಡ್, ಎನ್ಟಿಪಿಸಿಯಂತಹ ಕಂಪನಿಗಳು ಏಕಸ್ವಾಮ್ಯ ವ್ಯವಹಾರಗಳಿಗೆ ಸಮೀಪದಲ್ಲಿದೆ. ಸದ್ಯ ಎಲ್ಐಸಿ ಮಾರುಕಟ್ಟೆ ಬೆಲೆ ಗಮನಿಸಿದಾಗ ಇದು ಖರೀದಿ, ಮಾರಾಟಕ್ಕೆ ಉತ್ತಮವಲ್ಲ ಎಂದು ತಜ್ಷರು ಹೇಳುತ್ತಾರೆ. ಹಿಡಿದಿಟ್ಟುಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ.