For Quick Alerts
ALLOW NOTIFICATIONS  
For Daily Alerts

ಎಲ್‌ಐಸಿ ಷೇರು ಲೀಸ್ಟಿಂಗ್: ಈ ಮಾಹಿತಿ ತಿಳಿದಿರಿ

|

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮಂಗಳವಾರ, ಮೇ 17 ರಂದು ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಕೇಂದ್ರವು ಕಳೆದ ವಾರ ಎಲ್‌ಐಸಿಯ ದಾಖಲೆಯ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) 949 ರೂಪಾಯಿಗೆ ನಿಗದಿಪಡಿಸಿದೆ.

 

ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಲ್ಲಿನ ಶೇ.3.5 ಪಾಲನ್ನು ಮಾರಾಟ ಮಾಡುವ ಮೂಲಕ ಸುಮಾರು 21,000 ಕೋಟಿ ರೂಪಾಯಿ ಸಂಗ್ರಹಿಸಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಮೇ 4ರಂದು ಆರಂಭ ಮಾಡಿದ್ದು, ಮೇ 9ರವರೆಗೆ ಚಂದಾದಾರಿಕೆಗೆ ತೆರೆದಿತ್ತು.

ಭಾರತದಲ್ಲಿ ಅತಿದೊಡ್ಡ ಜೀವ ವಿಮಾದಾರರಾಗಿರುವುದರಿಂದ, ಎಲ್‌ಐಸಿಯ ಹತ್ತಿರದ ಪ್ರತಿಸ್ಪರ್ಧಿಗೆ ಹೋಲಿಸಿದರೆ ಎಲ್‌ಐಸಿ ಎನ್‌ಬಿಪಿನಲ್ಲಿ (ಹೊಸ ವ್ಯಾಪಾರ ಪ್ರೀಮಿಯಂ) ಶೇಕಡ 61.4 ಮಾರುಕಟ್ಟೆ ಪಾಲನ್ನು ಹೊಂದಿದೆ. ಎನ್‌ಬಿಪಿ ಆಧಾರದ ಮೇಲೆ 9.16 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ. ಡಿಸೆಂಬರ್ 31, 2021 ರಂತೆ, ಎಲ್‌ಐಸಿ ಭಾರತದಲ್ಲಿ 2,048 ಶಾಖಾ ಕಚೇರಿಗಳನ್ನು ಮತ್ತು 1,559 ಉಪಗ್ರಹ ಕಚೇರಿಗಳನ್ನು ಹೊಂದಿದ್ದು, ದೇಶದ ಎಲ್ಲಾ ಜಿಲ್ಲೆಗಳಲ್ಲಿ 91 ಪ್ರತಿಶತವನ್ನು ಒಳಗೊಂಡಿದೆ.

ಎಲ್‌ಐಸಿ ಷೇರು ಲೀಸ್ಟಿಂಗ್: ಈ ಮಾಹಿತಿ ತಿಳಿದಿರಿ

ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದ್ದು, ಸಂಪೂರ್ಣ ಚಂದಾದಾರಿಕೆಯಾಗಿದೆ. ಆರಂಭದಲ್ಲಿ, ಎಲ್‌ಐಸಿ ಐಪಿಒ ಅನ್ನು ಮಾರ್ಚ್ 31 ರ ಮೊದಲು ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣ ಐಪಿಒ ಅನ್ನು ಮುಂದೂಡಲಾಯಿತು. ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಯಾಗಿರುತ್ತದೆ.

ಎಲ್‌ಐಸಿ ಐಪಿಒ ಷೇರು ಹಂಚಿಕೆ ದಿನ: ಪರಿಶೀಲನೆ ಮಾಡುವುದು ಹೇಗೆ?

ಉತ್ತಮ ಪ್ರತಿಕ್ರಿಯೆ ಪಡೆದ ಎಲ್‌ಐಸಿ ಐಪಿಒ

ಎಲ್ಐಸಿ ಆರಂಭಿಕ ಷೇರು ಮಾರಾಟದಲ್ಲಿ ದೇಶೀಯ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಮೇ 12 ರಂದು ಬಿಡ್‌ದಾರರಿಗೆ ಷೇರುಗಳನ್ನು ಹಂಚಲಾಯಿತು. ಇಂದು ಬಿಎಸ್‌ಇ ಹಾಗೂ ಎನ್‌ಎಸ್‌ಇನಲ್ಲಿ ಪಟ್ಟಿ ಮಾಡಲಾಗುತ್ತದೆ. ಆದರೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಎಲ್‌ಐಸಿ ನೀರಸ ಚೊಚ್ಚಲ ಪ್ರವೇಶವನ್ನು ಕಾಣುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಬೆಳಗ್ಗೆ 9:43 ರ ಹೊತ್ತಿಗೆ ಎಲ್‌ಐಸಿ ಷೇರುಗಳು 12.64 ಶೇಕಡಾ ರಿಯಾಯಿತಿಯಲ್ಲಿ ಅಂದರೆ 829 ರೂಪಾಯಿ ಆಗಿದೆ ಎಂದು ಬಿಎಸ್‌ಇ ಡೇಟಾ ತೋರಿಸಿದೆ. ಇನ್ನು ಎನ್‌ಎಸ್‌ಇಯಲ್ಲಿ 872 ಕ್ಕೆ ಎಲ್‌ಐಸಿ ಷೇರುಗಳು ಇದೆ. ಶೇಕಡ 8.11 ರಷ್ಟು ರಿಯಾಯಿತಿಯಲ್ಲಿ ಷೇರುಗಳು ಪಟ್ಟಿಮಾಡಲ್ಪಟ್ಟವು.

English summary

LIC stock market listing : LIC To Make Debut On Stock Exchanges On May 17

Life Insurance Corporation of India (LIC) is all set to debut on Indian stock exchanges on Tuesday, May 17.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X