For Quick Alerts
ALLOW NOTIFICATIONS  
For Daily Alerts

ಮಾರುತಿ ಸುಜುಕಿಯಿಂದ ಆನ್ ಲೈನ್ ಹಣಕಾಸು ಸಾಲ ಯೋಜನೆಗೆ ಚಾಲನೆ

|

ಮಾರುತಿ ಸುಜುಕಿಯಿಂದ ARENA ಗ್ರಾಹಕರಿಗೆ 30+ ನಗರಗಳಲ್ಲಿ ಆನ್ ಲೈನ್ ಹಣಕಾಸು ಸಾಲ ಯೋಜನೆ ಪ್ಲಾಟ್ ಫಾರ್ಮ್- ಸ್ಮಾರ್ಟ್ ಫೈನಾನ್ಸ್ ಆರಂಭಿಸಲಾಗಿದೆ. ಈ ಸ್ಮಾರ್ಟ್ ಫೈನಾನ್ಸ್ ಆರಂಭದೊಂದಿಗೆ ಗ್ರಾಹಕರ ವಾಹನ ಖರೀದಿಯ 26 ಹಂತಗಳ ಪೈಕಿ 24 ಡಿಜಿಟೈಸ್ ಆಗುತ್ತದೆ ಎಂದು ಮಾರುತಿ ಸುಜುಕಿಯಿಂದ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ತಿಳಿಸಲಾಗಿದೆ.

ಕಾರು ಖರೀದಿ ಮಾಡಬೇಕು ಅಂತಿದ್ದೀರಾ? ಈ ಎಲ್ಲ ಅಂಶಗಳು ಗಮನದಲ್ಲಿರಲಿ

ವಾಹನ ಸಾಲ ಯೋಜನೆಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಹಲವು ಸೇವೆಗಳನ್ನು ಒಂದೇ ಕಡೆ ಒದಗಿಸುತ್ತದೆ ಈ ಸ್ಮಾರ್ಟ್ ಫೈನಾನ್ಸ್. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಹಣಕಾಸು ಪ್ರಾಡಕ್ಟ್ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಸಹ ಇದೆ. ಕೆಲವೇ 'ಕ್ಲಿಕ್'ಗಳಲ್ಲಿ ಹಣಕಾಸು ಸಾಲ ಸೌಲಭ್ಯಕ್ಕೆ ಸಂಬಂಧಿಸಿದ ಎಲ್ಲ ನಿಯಮಾವಳಿಗಳನ್ನು ಪೂರ್ಣಗೊಳಿಸಿ, ಸಾಲವನ್ನು ಸಹ ವಿತರಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

ಪಾರದರ್ಶಕವಾದ ಸಾಲ ಸೌಲಭ್ಯ
 

ಪಾರದರ್ಶಕವಾದ ಸಾಲ ಸೌಲಭ್ಯ

ಗ್ರಾಹಕರು ಹಾಗೂ ಹಣದ ಸಾಲ ನೀಡುವ ಸಂಸ್ಥೆಗಳ ಮಧ್ಯೆ ಮಧ್ಯಸ್ಥಿಕೆ ವಹಿಸುತ್ತದೆ ಮಾರುತಿ. ಈ ಮೂಲಕ ಯಾವುದೇ ಸಮಸ್ಯೆ ಇಲ್ಲದಂತೆ, ಪಾರದರ್ಶಕವಾಗಿ ಸಾಲ ಸೌಲಭ್ಯ ಸಿಗುತ್ತದೆ. ಸಾಲಕ್ಕೆ ಅರ್ಜಿ ಹಾಕಿದ ನಂತರ ಅದು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪ್ರತಿ ಹಂತದಲ್ಲಿಯೂ ಗ್ರಾಹಕರು ತಿಳಿದುಕೊಳ್ಳುವ ಅವಕಾಶ ಇದೆ.

ಹನ್ನೆರಡು ಬ್ಯಾಂಕ್ ಗಳ ಜತೆ ಒಪ್ಪಂದ

ಹನ್ನೆರಡು ಬ್ಯಾಂಕ್ ಗಳ ಜತೆ ಒಪ್ಪಂದ

ಇದಕ್ಕಾಗಿ ಮಾರುತಿ ಸುಜುಕಿಯು ಹನ್ನೆರಡು ಹಣಕಾಸು ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಮಹೀಂದ್ರಾ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಚೋಳಮಂಡಲಂ ಫೈನಾನ್ಸ್, ಕೊಟಕ್ ಮಹೀಂದ್ರಾ ಪ್ರೈಮ್, ಆಕ್ಸಿಸ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಯೆಸ್ ಬ್ಯಾಂಕ್ ಹಾಗೂ ಎಚ್ ಡಿಬಿ ಫೈನಾನ್ಷಿಯಲ್ ಸರ್ವೀಸಸ್ ಹೀಗೆ ಹನ್ನೆರಡು ಸಂಸ್ಥೆಗಳಿವೆ.

ದೇಶದ 30+ ನಗರಗಳಲ್ಲಿ ಲಭ್ಯ

ದೇಶದ 30+ ನಗರಗಳಲ್ಲಿ ಲಭ್ಯ

ದೆಹಲಿ, ಎನ್ ಸಿಆರ್, ಜೈಪುರ್, ಅಹ್ಮದಾಬಾದ್, ಪುಣೆ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್, ಲಖನೌ, ಇಂದೋರ್, ಕೋಲ್ಕತ್ತಾ, ಕೊಚ್ಚಿ, ಚಂಡೀಗಢ, ಗುವಾಹತಿ, ಗೋವಾ, ಭುವನೇಶ್ವರ್, ಭೋಪಾಲ್, ಕೊಯಮತ್ತೂರು, ಸೂರತ್, ವಡೋದರಾ, ರಾಂಚಿ, ರಾಯ್ ಪುರ್, ನಾಗ್ ಪುರ್, ತಿರುವನಂತಪುರಂ, ವಿಶಾಖಪಟ್ಟಣ, ಉದಯ್ ಪುರ್, ಕಾನ್ಪುರ್, ವಿಜಯವಾಡ ಮತ್ತು ಡೆಹ್ರಾಡೂನ್ ಸೇರಿದಂತೆ 30+ ನಗರಗಳಲ್ಲಿ ಸ್ಮಾರ್ಟ್ ಫೈನಾನ್ಸ್ ಸೇವೆ ಲಭ್ಯವಿದೆ.

English summary

Maruti Suzuki India Launches Online Finance Facility To ARENA Customer In 30 Plus Cities

Maruti Suzuki India Limited launches online finance facility to ARENA customers in 30+ cities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X