For Quick Alerts
ALLOW NOTIFICATIONS  
For Daily Alerts

ಸರ್ಕಾರಿ ಸ್ವಾಮ್ಯದ MMTCಯಿಂದ ಚಿನ್ನದ ಬೈಬ್ಯಾಕ್ ಹಾಗೂ ವಿನಿಮಯ ಸ್ಕೀಮ್

|

ಚಿನ್ನದ ಗಟ್ಟಿಯನ್ನು ಸಂಸ್ಕರಣೆ ಮಾಡುವ ಎಂಎಂಟಿಸಿ- ಪಿಎಎಂಪಿಯಿಂದ ಸೆಪ್ಟೆಂಬರ್ 26ನೇ ತಾರೀಕಿನಂದು ಚಿನ್ನದ ಬೈ ಬ್ಯಾಕ್ ಹಾಗೂ ವಿನಿಮಯ ಆಫರ್ ಅನ್ನು ಸೆಪ್ಟೆಂಬರ್ 26ರಿಂದ ಆರಂಭಿಸಲಾಗಿದೆ. ಕೊರೊನಾದಿಂದ ಸಂಕಷ್ಟಕ್ಕೆ ಎದುರಾಗಿ, ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ತಮ್ಮ ಬಳಿ ಇರುವ ಚಿನ್ನವನ್ನು ನಗದು ಮಾಡಿಕೊಳ್ಳಬಹುದು.

Gold, Silver Rate: ಇಳಿಜಾರಿನಲ್ಲಿ ಮುಂದುವರಿದ ಚಿನ್ನ, ಬೆಳ್ಳಿ ದರ

ಎಂಎಂಟಿಸಿ ಎಂಬುದು ಭಾರತ ಸರ್ಕಾರಿ ಸ್ವಾಮ್ಯದ ಸಂಸ್ಥೆ. ಇನ್ನು ಪಿಎಎಂಪಿ ಎಸ್ ಎ ಸ್ವಿಟ್ಜರ್ಲೆಂಡ್ ಗೆ ಸೇರಿದ ಸಂಸ್ಥೆ. ಈಗ ತಂದಿರುವ ಬೈಬ್ಯಾಕ್ ಯೋಜನೆ ಅಡಿಯಲ್ಲಿ ಚಿನ್ನವನ್ನು ಮಾರಾಟ ಮಾಡಲು ಮುಂದೆ ಬರುವವರಿಗೆ ಗರಿಷ್ಠ ಮೌಲ್ಯ ದೊರೆಯುತ್ತದೆ ಹಾಗೂ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಖರೀದಿ
 

ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಖರೀದಿ

ಒಂದು ವೇಳೆ ಚಿನ್ನವನ್ನು ವಿನಿಮಯ ಮಾಡಿಕೊಳ್ಳಲು ಬಯಸಿದಲ್ಲಿ 9999, 999 ಹಾಗೂ 995ರಷ್ಟು ಶುದ್ಧತೆ ಇರುವ ಚಿನ್ನದ ಗಟ್ಟಿಯೊಂದಿಗೆ ಬದಲಿಸಿಕೊಡಲಾಗುತ್ತದೆ. ಈ ಪ್ರಕ್ರಿಯೆಗೆ ಅಲ್ಪ ಪ್ರಮಾಣದ ಶುಲ್ಕವನ್ನು ವಿಧಿಸಲಾಗುತ್ತದೆ. ಮೊದಲಿಗೆ ದೆಹಲಿಯ ಲಜಪತ್ ನಗರ್ ನಲ್ಲಿ ಇರುವ ಕೇಂದ್ರದಿಂದ ಈ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಸದ್ಯದಲ್ಲೇ ದೇಶದಾದ್ಯಂತ ವಿಸ್ತರಿಸಲಾಗುತ್ತದೆ ಎಂದು MMTC- PAMP ತಿಳಿಸಿದೆ. ಇದೀಗ ವಿಶ್ವದಾದ್ಯಂತ ಸವಾಲಿನ ಸಮಯ. ಜತೆಗೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿದೆ. ಇನ್ನೂ ಕೆಲ ಸಮಯ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂಬ ಆತಂಕದಲ್ಲಿ ತಮ್ಮ ಬಳಿ ಇರುವ ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಎಂಎಂಟಿಸಿ- ಪಿಎಎಂಪಿ ಸಿಇಒ ಹಾಗೂ ಎಂ.ಡಿ. ವಿಕಾಸ್ ಸಿಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕನಿಷ್ಠ 10 ಗ್ರಾಮ್ ಚಿನ್ನವನ್ನು ಪರಿಶೀಲನೆಗಾಗಿ ನೀಡಬೇಕು

ಕನಿಷ್ಠ 10 ಗ್ರಾಮ್ ಚಿನ್ನವನ್ನು ಪರಿಶೀಲನೆಗಾಗಿ ನೀಡಬೇಕು

ಶುದ್ಧತೆ ಪರಿಶೀಲನಾ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಇದ್ದು, ಗರಿಷ್ಠ ಪ್ರಮಾಣದಲ್ಲಿ ವಿನಿಮಯ ಅಥವಾ ಬೈ ಬ್ಯಾಕ್ ಮೊತ್ತ ಸಿಗುತ್ತದೆ. ಗುಣಮಟ್ಟ ಪರಿಶೀಲನೆ ಪ್ರಕ್ರಿಯೆ ನಡೆಯುವಾಗ ನೇರವಾಗಿ ಸಿಸಿಟಿವಿ ಫೂಟೇಜ್ ಮೂಲಕ ಮಾರಾಟಗಾರರು ನೋಡಬಹುದು ಎಂದು ಅವರು ಹೇಳಿದ್ದಾರೆ. ಕನಿಷ್ಠ 10 ಗ್ರಾಮ್ ಚಿನ್ನವನ್ನು ಪರಿಶೀಲನೆಗಾಗಿ ನೀಡಬೇಕಾಗುತ್ತದೆ. ಒಂದು ವೇಳೆ ವಿನಿಮಯ ಪ್ರಕ್ರಿಯೆ ಪೂರ್ಣಗೊಳ್ಳದಿದ್ದಲ್ಲಿ ಚಿನ್ನದ ಮೌಲ್ಯಮಾಪನ ಶುಲ್ಕ ಎಂದು 1000 ರುಪಾಯಿ ಹಾಕಲಾಗುತ್ತದೆ. ಬ್ಯಾಂಕ್ ಗೆ ಹಣ ವರ್ಗಾವಣೆ ಸೌಲಭ್ಯ ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಲಭ್ಯವಿದೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ದೃಢೀಕರಣಕ್ಕಾಗಿ ನೀಡಬೇಕು. ಇದರ ಜತೆಗೆ ವಿನಿಮಯದ ಸಂದರ್ಭದಲ್ಲಿ ಕ್ಯಾನ್ಸಲ್ ಆದಂಥ ಚೆಕ್ ನೀಡಬೇಕು.

ಎಲ್ಲ ಪ್ರಕ್ರಿಯೆಗೆ 60 ನಿಮಿಷ ಸಮಯ
 

ಎಲ್ಲ ಪ್ರಕ್ರಿಯೆಗೆ 60 ನಿಮಿಷ ಸಮಯ

ಚಿನ್ನದ ಬೆಲೆಯನ್ನು ಆಯಾ ದಿನದ ದರದ ಮೇಲೆ ನಿರ್ಧರಿಸಲಾಗುತ್ತದೆ. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿನ ನೇರ ದರ ಹಾಗೂ ತೆರಿಗೆ ಅನ್ವಯ ಆಗುತ್ತದೆ. ಎಂಎಂಟಿಸಿ- ಪಿಎಎಂಪಿಯಿಂದ ಸ್ಥಳದಲ್ಲಿ ಇರುವ ಎಕ್ಸ್- ರೇ ಫ್ಲುರೋಸಿನ್ಸ್ ತಂತ್ರಜ್ಞಾನ (XRF) ಮಶೀನ್ ಬಳಸಿ 10 ಗ್ರಾಮ್ ನಿಂದ ಎರಡು ಕೇಜಿ ತನಕ ತೂಕದ ಪರೀಕ್ಷೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ 60 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಆ ಕ್ಷಣದಲ್ಲಿ ಏನೇನು ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದನ್ನು ಮಾರಾಟಗಾರರು ಸಿಸಿ ಟಿವಿ ಕ್ಯಾಮೆರಾದಲ್ಲಿ ನೋಡಬಹುದು. ಮಾರಾಟ ಮಾಡಲು ಬಂದವರು ನೀಡುವ ಚಿನ್ನದ ಆಭರಣಗಳನ್ನು ಅಲ್ಲೇ ಪರೀಕ್ಷಿಸಲಾಗುತ್ತದೆ. ತೂಕ ಹಾಕಿದ ನಂತರ, ಒಪ್ಪಂದ ಮಾಡಿಕೊಂಡು ಕರಗಿಸಲಾಗುತ್ತದೆ. ಅದನ್ನು ಗಟ್ಟಿಯಾಗಿ ಮಾಡಲಾಗುತ್ತದೆ.

English summary

MMTC, PAMP Offering Gold Buyback And Exchange

Government owned MMTC in association with PAMP India offering gold buy back and exchange scheme. Here is the details.
Company Search
COVID-19