For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ವ್ಯಾಪಾರ ವಲಯದಲ್ಲಿ ಛಾಪು ಮೂಡಿಸಿದ ಮಹಿಳೆಯರು

|

ಭಾರತದಲ್ಲಿ ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಹೆಣ್ಣು ಮಕ್ಕಳ ದಿನದ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಹೆಣ್ಣು ಮಕ್ಕಳ ಹಕ್ಕುಗಳು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಕಳೆದ 2008ರಲ್ಲಿ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವಾಲಯವು ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡಿದೆ.

 

ಈ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2022 ರಂದು, ಪ್ರತಿದಿನ ಲಕ್ಷಾಂತರ ಮಹಿಳೆಯರು ಮತ್ತು ಹುಡುಗಿಯರನ್ನು ಪ್ರೇರೇಪಿಸುವ ಮಹಿಳಾ ನಾಯಕರನ್ನು ನಾವು ನೋಡುತ್ತೇವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪಕ್ರಮವಾದ ಈ ದಿನವನ್ನು 2008 ರಿಂದ ಪ್ರತಿ ವರ್ಷ ಜನವರಿ 24 ರಂದು ಭಾರತದಲ್ಲಿ ಆಚರಿಸಲಾಗುತ್ತದೆ.

ಚಿನ್ನದ ಬೆಲೆ ಕೊಂಚ ಇಳಿಕೆ: ಜನವರಿ 24ರ ದರ ತಿಳಿದುಕೊಳ್ಳಿ

ಸರ್ಕಾರದ ಪ್ರಕಾರ, ದೇಶದ ಹೆಣ್ಣುಮಕ್ಕಳಿಗೆ ಎಲ್ಲಾ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸಲು ದಿನವನ್ನು ಗುರುತಿಸಲಾಗಿದೆ. ಇದು ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಮಹತ್ವ ಮತ್ತು ಅವರ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಹಾಗಾದರೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ವ್ಯಾಪಾರ ವಲಯದಲ್ಲಿ ಛಾಪು ಮೂಡಿಸಿದ ಮಹಿಳೆಯರ ಬಗ್ಗೆ ತಿಳಿಯೋಣ ಬನ್ನಿ..

ಮಕ್ಕಳಿಗೆ ಜೀವನ್ ತರುಣ್: ಯುವ ಜನತೆಗಾಗಿ ಮನಿ- ಬ್ಯಾಕ್ ಪಾಲಿಸಿ

 ಫಲ್ಗುಣಿ ನಾಯರ್‌ ಬಗ್ಗೆ ತಿಳಿಯಿರಿ

ಫಲ್ಗುಣಿ ನಾಯರ್‌ ಬಗ್ಗೆ ತಿಳಿಯಿರಿ

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ನವೆಂಬರ್ 10 ರಂದು ವ್ಯಾಪಾರವನ್ನು ಪ್ರಾರಂಭಿಸಿದಾಗ Nykaa ಸಂಸ್ಥೆಯ ಷೇರುಗಳು ಶೇಕಡಾ 79 ರಷ್ಟು ಏರಿಕೆಯಾಗಿದೆ. ಈ ಕಾರಣ Nykaa ಸಂಸ್ಥಾಪಕಿ ಲ್ಗುಣಿ ನಾಯರ್ ಅವರು 6.5 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್ ಆಗಿದ್ದಾರೆ. Nykaa ದ ಮೂಲ ಘಟಕ ಎಫ್‌ಎಸ್‌ಎನ್‌ ಇ-ಕಾಮರ್ಸ್ ವೆಂಚರ್ಸ್ ಸ್ಟಾಕ್ ಎಕ್ಸ್ಚೇಂಜ್ ಅನ್ನು ಹೊಡೆದ ಭಾರತದ ಮೊದಲ ಮಹಿಳಾ ನೇತೃತ್ವದ ಯುನಿಕಾರ್ನ್ ಆಗಿದೆ. ಮಾಜಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿದ್ದ ನಾಯರ್ 50 ವರ್ಷಕ್ಕೆ ಕಾಲಿಡುವ ಕೆಲವೇ ತಿಂಗಳುಗಳ ಮೊದಲು ಉದ್ಯಮಿಯಾದರು. ಅವರು 2012 ರಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದರು. ಅದರ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳನ್ನು ಮಾರಾಟ ಮಾಡಿದರು. ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾರಗಿಂತ ಆಸ್ತಿ ಹೆಚ್ಚಿಸಿಕೊಳ್ಳುವ ಮೂಲಕ ಫಲ್ಗುಣಿ ನಾಯರ್ ಭಾರತದ ಎರಡನೇ ಶ್ರೀಮಂತ ಮಹಿಳೆಯಾಗಿದ್ದಾರೆ.

 ಗೀತಾ ಗೋಪಿನಾಥ್‌ ಬಗ್ಗೆ ವಿವರ

ಗೀತಾ ಗೋಪಿನಾಥ್‌ ಬಗ್ಗೆ ವಿವರ

ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಐಎಂಎಫ್‌ ಗೀತಾ ಗೋಪಿನಾಥ್‌ರನ್ನು ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಮಾಡಿದೆ. 2022 ರ ಆರಂಭದಲ್ಲಿ ಐಎಂಎಫ್‌ ಅನ್ನು ತೊರೆಯಲು ಯೋಜಿಸಿರುವ ಜೆಫ್ರಿ ಒಕಾಮೊಟೊರ ಸ್ಥಾನವನ್ನು ಭಾರತೀಯ-ಅಮೆರಿಕನ್ ಆದ ಗೀತಾ ಗೋಪಿನಾಥ್ ಪಡೆಯಲಿದ್ದಾರೆ.

 ಕಿರಣ್ ಮಜುಂದಾರ್-ಶಾ ಬಗ್ಗೆ ತಿಳಿಯಿರಿ
 

ಕಿರಣ್ ಮಜುಂದಾರ್-ಶಾ ಬಗ್ಗೆ ತಿಳಿಯಿರಿ

ಬಯೋಟೆಕ್ ಪ್ರವರ್ತಕಿ ಎಂದೇ ಖ್ಯಾತಿ ಪಡೆದಿರುವ ಕಿರಣ್ ಮಜುಂದಾರ್-ಶಾ ಅವರು ಬಯೋಕಾನ್ ಲಿಮಿಟೆಡ್‌ನ ಸಂಸ್ಥಾಪಕಿ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. 68 ವರ್ಷ ಪ್ರಾಯದ ಕಿರಣ್ ಮಜುಂದಾರ್-ಶಾ ಭಾರತದ ಔಷಧೀಯ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. 1978 ರಲ್ಲಿ ಬೆಂಗಳೂರು ಮೂಲದ ಬಯೋಕಾನ್ ಲಿಮಿಟೆಡ್ ಅನ್ನು ಕೇವಲ ಇಬ್ಬರು ಉದ್ಯೋಗಿಗಳೊಂದಿಗೆ ಸ್ಥಾಪಿಸಿದರು. ಪ್ರಸ್ತುತ ಕಂಪನಿಯು ಮಾರುಕಟ್ಟೆಯ ವಲಯದಲ್ಲಿ 50,000 ಕೋಟಿ ರೂ ಆದಾಯ ಹೊಂದಿದೆ. 2020 ರಲ್ಲಿ, ಫೋರ್ಬ್ಸ್ ವಿಶ್ವದ 100 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 68 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

 ಸುಧಾ ಮೂರ್ತಿ ಕನ್ನಡಿಗರ ಹೆಮ್ಮೆ

ಸುಧಾ ಮೂರ್ತಿ ಕನ್ನಡಿಗರ ಹೆಮ್ಮೆ

ಸುಧಾ ಮೂರ್ತಿ ಭಾರತದ ಪ್ರಮುಖ ಪರೋಪಕಾರಿಗಳಲ್ಲಿ ಒಬ್ಬರು ಆಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೆಚ್ಚುಗೆ ಪಡೆದ ಬರಹಗಾರರಾಗಿದ್ದಾರೆ. ಕಾದಂಬರಿಗಳು, ಕೃತಿಗಳು, ಪ್ರವಾಸ ಕಥನಗಳು, ತಾಂತ್ರಿಕ ಪುಸ್ತಕಗಳು ಮತ್ತು ಆತ್ಮಚರಿತ್ರೆಗಳನ್ನು ಒಳಗೊಂಡಂತೆ ಅವರು 30 ಕ್ಕೂ ಹೆಚ್ಚು ಪುಸ್ತಕಗಳು ಮತ್ತು 200 ಬರಹಗಳನ್ನು ತನ್ನದಾಗಿಸಿಕೊಂಡಿದ್ದಾರೆ. 1996 ರಲ್ಲಿ ಪ್ರಾರಂಭವಾದಾಗಿನಿಂದ ಇನ್ಫೋಸಿಸ್ ಫೌಂಡೇಶನ್‌ನ (ಭಾರತದ ಎರಡನೇ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆ) 25 ವರ್ಷಗಳ ಕಾಲ ಮುಖ್ಯಸ್ಥರಾಗಿದ್ದ 71 ವರ್ಷದ ಸುಧಾ ಮೂರ್ತಿ, ಡಿಸೆಂಬರ್ 2020 ರಲ್ಲಿ ನಿವೃತ್ತರಾದರು.

 ಇಂದ್ರ ನೂಯಿ ಬಗ್ಗೆ ಮಾಹಿತಿ

ಇಂದ್ರ ನೂಯಿ ಬಗ್ಗೆ ಮಾಹಿತಿ

ಮಾಜಿ ಪೆಪ್ಸಿಕೋ ಸಿಇಒ ಆದ ಇಂದ್ರಾ ನೂಯಿ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಾಪಾರ ವಲಯದ ನಾಯಕರಲ್ಲಿ ಒಬ್ಬರು. ಜಾಗತಿಕವಾಗಿ ಸಂಸ್ಥೆಯೊಂದರ ಸಿಇಒ ಆದ ಇಬ್ಬರು ಭಾರತೀಯ ಮೂಲದ ಮಹಿಳೆಯರಲ್ಲಿ ಇವರು ಒಬ್ಬರಾಗಿದ್ದಾರೆ. ಎರಡನೆಯವರು ಶನೆಲ್‌ನ ಹೊಸ ಮುಖ್ಯಸ್ಥೆ ಲೀನಾ ನಾಯರ್. 66 ವರ್ಷದ ನೂಯಿ 24 ವರ್ಷಗಳ ಕಾಲ ಪೆಪ್ಸಿಕೋದಲ್ಲಿ ಕೆಲಸ ಮಾಡಿದ್ದಾರೆ. 2018 ರಲ್ಲಿ ತನ್ನ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಇಂದ್ರಾ ನೂಯಿ ಸಿಇಒ ಆಗಿದ್ದ ಸಂದರ್ಭದಲ್ಲಿ ಪೆಪ್ಸಿಕೋದ ಆದಾಯವು 35 ಶತಕೋಟಿ ಡಾಲರ್‌ನಿಂದ 63.5 ಶತಕೋಟಿ ಡಾಲರ್‌ಗೆ ಏರಿಕೆ ಕಂಡಿತ್ತು. ಲೇಸ್ ಎಂಬ ಆಲೂಗಡ್ಡೆ ಚಿಪ್ಸ್ ಮತ್ತು ಹಣ್ಣುಗಳು, ತರಕಾರಿಗಳಿಂದ ತಯಾರಿಸಿದ ಜ್ಯೂಸ್‌ಗಳಂತಹ ಆಹಾರವನ್ನು ಪ್ರಚಾರ ಮಾಡುವ ವಿಚಾರದಲ್ಲಿ ಇವರು ಹೆಸರುವಾಸಿಯಾಗಿದ್ದಾರೆ.

 ಲೀನಾ ನಾಯರ್ ಯಾರು?

ಲೀನಾ ನಾಯರ್ ಯಾರು?

ಲೀನಾ ನಾಯರ್, ಯೂನಿಲಿವರ್‌ನ ಮೊದಲ ಮಹಿಳೆ, ಮೊದಲ ಏಷ್ಯಾದ ಮತ್ತು ಅತ್ಯಂತ ಕಿರಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಒ) ಆಗಿದ್ದು ಈಗ ಚಾನೆಲ್‌ನ ಹೊಸ ಸಿಇಒ ಆಗಿದ್ದಾರೆ. ನಾಯರ್ 1992 ರಲ್ಲಿ ಯೂನಿಲಿವರ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಸೇರಿಕೊಂಡರು. ಕಂಪನಿಯಲ್ಲಿ ತಮ್ಮ ವೃತ್ತಿಪರ ಜೀವನದ 30 ವರ್ಷಗಳನ್ನು ಕಳೆದರು. ಮಾನವ ಸಂಪನ್ಮೂಲದ ಮುಖ್ಯಸ್ಥೆ ಜೊತೆಗೆ, ಅವರು ಯೂನಿಲಿವರ್‌ನ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ಫಾರ್ಚೂನ್ ಇಂಡಿಯಾದ ಅತ್ಯಂತ ಶಕ್ತಿಶಾಲಿ ಮಹಿಳೆಯರ 2021 ರಲ್ಲಿ ಪಟ್ಟಿಯಲ್ಲಿ ಇವರ ಹೆಸರು ಇದೆ.

 ರೋಶನಿ ನಾಡಾರ್ ಮಲ್ಹೋತ್ರಾ ಬಗ್ಗೆ ತಿಳಿಯಿರಿ

ರೋಶನಿ ನಾಡಾರ್ ಮಲ್ಹೋತ್ರಾ ಬಗ್ಗೆ ತಿಳಿಯಿರಿ

ರೋಶನಿ ನಾಡಾರ್ ಮಲ್ಹೋತ್ರಾ, ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಅಧ್ಯಕ್ಷೆ ಮತ್ತು ಭಾರತದಲ್ಲಿ ಐಟಿ ಕಂಪನಿಯನ್ನು ಮುನ್ನಡೆಸುವ ಮೊದಲ ಮಹಿಳೆ ಆಗಿದ್ದಾರೆ. 2020 ರಲ್ಲಿ ಫೋರ್ಬ್ಸ್‌ನ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 55 ನೇ ಸ್ಥಾನದಲ್ಲಿದ್ದರು. 1976 ರಲ್ಲಿ ಮಾತೃ ಕಂಪನಿಯಾದ ಹೆಚ್‌ಸಿಎಲ್‌ ಅನ್ನು ಸಹ-ಸ್ಥಾಪಿಸಿದ ತನ್ನ ತಂದೆ ಶಿವ ನಾಡರ್‌ನಿಂದ ಹೆಚ್‌ಸಿಎಲ್‌ನಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡದರು.

English summary

National Girl Child Day 2022: Few Women Who Made a Mark in Business Leadership

National Girl Child Day 2022: Here are a few women who made a mark in business leadership. Here are the list of 7 women business leaders. Take a look.
Story first published: Monday, January 24, 2022, 18:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X