For Quick Alerts
ALLOW NOTIFICATIONS  
For Daily Alerts

ಸೆಪ್ಟೆಂಬರ್‌ನಲ್ಲಿ ಆಗಲಿದೆ ವೈಯಕ್ತಿಕ ಹಣಕಾಸಿನಲ್ಲಿ ಈ ಪ್ರಮುಖ ಬದಲಾವಣೆ

|

ವೈಯಕ್ತಿಕ ಹಣಕಾಸು ನಮ್ಮ ಜೀವನದ ಪ್ರಮುಖ ಅಂಶವಾಗಿದೆ. ಪ್ರತಿ ತಿಂಗಳು ಕೆಲವೊಂದು ಬದಲಾವಣೆಗಳು ವೈಯಕ್ತಿಕ ಹಣಕಾಸಿಗೆ ಪರಿಣಾಮ ಬೀರುತ್ತದೆ. ವಿಶ್ವದಲ್ಲಿ ಆಗುವ ಕೆಲವೊಂದು ಬದಲಾವಣೆಗಳು ಹಾಗೂ ಸ್ಥಳೀಯವಾಗಿ ನಡೆಯುವ ಕೆಲವೊಂದು ಬೆಳವಣಿಗೆಗಳು ನಮ್ಮ ವೈಯಕ್ತಿಕ ಜೀವನದ ಹಣಕಾಸು ನಿರ್ವಹಣೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ.

 

ಕಳೆದ ತಿಂಗಳು ವೈಯಕ್ತಿಕ ಹಣಕಾಸಿನಲ್ಲಿ ಪ್ರಮುಖವಾಗಿ ಎಂಟು ಬದಲಾವಣೆಗಳು ಆಗಿದೆ. ಎಟಿಎಂನಲ್ಲಿ ಹಣ ಪಡೆಯುವ ವ್ಯವಹಾರವು ದುಬಾರಿಯಾಗಿತ್ತು. ಉಚಿತ ಎಟಿಎಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಎಟಿಎಂ ವ್ಯವಹಾರದ ಬಗ್ಗೆ ಐಸಿಐಸಿಐ ಬ್ಯಾಂಕ್‌ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗೆಯೇ ಚೆಕ್‌ಬುಕ್‌ ವಿಚಾರದಲ್ಲೂ ಐಸಿಐಸಿಐ ಬ್ಯಾಂಕ್‌ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗೆಯೇ ಕಳೆದ ತಿಂಗಳು ಅಡುಗೆ ಅನಿಲ ಬೆಲೆಯು ಅಧಿಕವಾಗುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿತ್ತು. ಹಾಗೆಯೇ ಕೆಲವೊಂದು ಪ್ರಮುಖ ಬದಲಾವಣೆಗಳು ಆಗಿದ್ದವು.

ಇದ್ದಕ್ಕಿದ್ದಂತೆ ನಿಮ್ಮ ಪ್ರೀತಿ ಪಾತ್ರರು ಕೋವಿಡ್‌ಗೆ ಬಲಿಯಾದರೆ, ಮೊದಲು ಇದನ್ನು ಮಾಡಿ..

ಈ ಸೆಪ್ಟೆಂಬರ್‌ ತಿಂಗಳು ಕೂಡಾ ಕೆಲವೊಂದು ಬದಲಾವಣೆಗಳು ಆಗಿದೆ. ಹಾಗಾದರೆ ಸೆಪ್ಟೆಂಬರ್‌ ಆಗಿರುವ ವೈಯಕ್ತಿಕ ಹಣಕಾಸಿನ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದೆ ಓದಿ.

 ಕಾರು, ದ್ವಿಚಕ್ರ ವಾಹನಗಳ ಬೆಲೆ ದುಬಾರಿ

ಕಾರು, ದ್ವಿಚಕ್ರ ವಾಹನಗಳ ಬೆಲೆ ದುಬಾರಿ

ಹೊಸ ನಿರ್ದೇಶನದಂತೆ ಕಾರಿಗೆ ಉಂಟಾಗಿರುವ ಯಾವುದೇ ಹಾನಿಯನ್ನು ಸರಿಯಪಡಿಸಿಕೊಳ್ಳುವುದು ವಾಹನ ಖರೀದಿದಾರರ ಜವಾಬ್ದಾರಿಯಾಗಿದೆ. ಈ ಹೊಸ ನಿರ್ದೇಶನವು ಸೆಪ್ಟೆಂಬರ್‌ ತಿಂಗಳಿನಿಂದ ಜಾರಿಗೆ ಬರಲಿದೆ. ಹಾಗೆಯೇ ಕಾರು ಖರೀದಿ ಮಾಡುವಾಗ ಮೊದಲು ಪಾವತಿ ಮಾಡಬೇಕಾದ ಹಣವು ಹತ್ತರಿಂದ ಹನ್ನೆರಡು ಸಾವಿರಕ್ಕೆ ಏರಿಕೆಯಾಗುತ್ತದೆ. ಇನ್ನು ದ್ವಿ ಚಕ್ರ ವಾಹನ ಖರೀದಿದಾರರು ಮೊದಲು ಒಂದು ಸಾವಿರ ರೂಪಾಯಿಯವರೆಗೆ ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಕಾರು, ದ್ವಿಚಕ್ರ ವಾಹನಗಳ ಮೇಲಿನ ವಿಮೆಯೂ ಕೂಡಾ ಏರಿಕೆಯಾಗಲಿದೆ.

 ಗಮನಿಸಿ ಜಿಎಸ್‌ಟಿಆರ್ -1 ಸಲ್ಲಿಸಲು ಅನರ್ಹರಾಗುವಿರಿ

ಗಮನಿಸಿ ಜಿಎಸ್‌ಟಿಆರ್ -1 ಸಲ್ಲಿಸಲು ಅನರ್ಹರಾಗುವಿರಿ

ಜಿಎಸ್‌ಟಿ ಪಾವತಿದಾರರು ಕಳೆದ ಎರಡು ತಿಂಗಳಿನಿಂದ ಜಿಎಸ್‌ಟಿ 3 ಬಿ ಸಲ್ಲಿಕೆ ಮಾಡದಿದ್ದರೆ ಸೆಪ್ಟೆಂಬರ್‍ ಆರಂಭದಿಂದ ಆ ವ್ಯಕ್ತಿಯು ಜಿಎಸ್‌ಟಿಆರ್ -1 ರಲ್ಲಿ ಬಾಹ್ಯ ಪೂರೈಕೆಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜಿಎಸ್‌ಟಿಆರ್ -3 ಬಿ ಸಲ್ಲಿಸದಿದ್ದರೆ ಜಿಎಸ್‌ಟಿಆರ್ -1 ಸಲ್ಲಿಸಲು ನೀವು ಅನರ್ಹರಾಗುತ್ತೀರಿ. ಸತತ ಕೆಲವು ತಿಂಗಳಿನಿಂದ ಜಿಎಸ್‌ಟಿಆರ್ 3 ಬಿ ಅನ್ನು ತಿಂಗಳ 20-24ರ ನಡುವೆ ಸಲ್ಲಿಸಲಾಗುತ್ತಿದೆ.

ಆರ್ಥಿಕ ಸಂಕಷ್ಟದಲ್ಲಿದ್ದಾಗ ನಮ್ಮ ಖರ್ಚು ಸರಿದೂಗಿಸುವುದು ಹೇಗೆ?

 ಎಲ್‌ಪಿಜಿ ದರ ಮತ್ತೆ ಏರಿಕೆ
 

ಎಲ್‌ಪಿಜಿ ದರ ಮತ್ತೆ ಏರಿಕೆ

ಎಲ್‌ಪಿಜಿ ಅಡುಗೆ ಅನಿಲದ ದರವನ್ನು ಪ್ರತಿ ತಿಂಗಳು ಪರಿಷ್ಕರಣೆ ಮಾಡಲಾಗುತ್ತದೆ. ಈ ತಿಂಗಳು ಎಲ್‌ಪಿಜಿ ದರವು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಗಸ್ಟ್‌ ತಿಂಗಳ ಆರಂಭದಲ್ಲಿ ವರದಿಯಾಗಿದ್ದವು. ಈ ವರದಿಯಂತೆಯೇ ಆಗಸ್ಟ್‌ ತಿಂಗಳಿನಲ್ಲಿ ಎಲ್‌ಪಿಜಿ ದರವು ಏರಿಕೆಯಾಗಿದೆ. ಅಂತರಾಷ್ಟ್ರೀಯ ದರದ ಮೇಲೆ ಆಧಾರಿತವಾಗಿರುವ ಈ ಎಲ್‌ಪಿಜಿ ದರವು ಆಗಸ್ಟ್‌ ತಿಂಗಳಿನಿಂದಲ್ಲೇ ಸುಮಾರು 25 ರೂಪಾಯಿ ಅಧಿಕವಾಗಿದೆ. ಹೀಗಾಗಿ ನಿಮಗೆ ಸೆಪ್ಟೆಂಬರ್‌ ತಿಂಗಳಿನಲ್ಲಿ ಅಡುಗೆ ಅನಿಲ ಬಿಲ್‌ ಅಧಿಕ ಬರಲಿದೆ.

 ಈಗಲೇ ಯುಎಎನ್‌ ಅನ್ನು ಆಧಾರ್‌ ಲಿಂಕ್‌ ಮಾಡಿಸಿ

ಈಗಲೇ ಯುಎಎನ್‌ ಅನ್ನು ಆಧಾರ್‌ ಲಿಂಕ್‌ ಮಾಡಿಸಿ

ಯುಎಎನ್‌ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಮಾತ್ರ ಇಪಿಎಫ್ ಮೊತ್ತವನ್ನು ನಿಮ್ಮ ಪಿಎಫ್‌ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಆಧಾರ್‌ಗೆ ಯುಎಎನ್‌ ಸಂಖ್ಯೆ ಲಿಂಕ್‌ ಮಾಡಲು ಕೊನೆಯ ದಿನಾಂಕ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಆ ದಿನವೂ ಹತ್ತಿರ ಬರುತ್ತಿದೆ. ಆದ್ದರಿಂದ ಕೂಡಲೇ ಯುಎಎನ್‌ ಅನ್ನು ಆಧಾರ್‌ಗೆ ಲಿಂಕ್ ಮಾಡಿಸಿಕೊಳ್ಳಿ,. ಇಲ್ಲವಾದರೆ ನಿಮ್ಮ ಖಾತೆಗೆ ಪಿಎಫ್‌ ಹಣವನ್ನು ಜಮೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹೊಸ ನಿಯಮವನ್ನು ಜಾರಿಗೆ ತರಲು ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ರ ತಿದ್ದುಪಡಿ ಮಾಡಿ ಇತ್ತೀಚಿನ ತೀರ್ಪು ನೀಡಲಾಗಿದೆ.

English summary

New Personal Finance Changes To Come Into Effect From September 1, 2021

New Personal Finance Changes To Come Into Effect From September 1, 2021. Details in kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X