ರಿಯಾಯಿತಿ ಬಡ್ಡಿ ದರದಲ್ಲಿ SBIನಿಂದ ಚಿನ್ನದ ಸಾಲ: ಅಪ್ಲೈ ಮಾಡುವುದು ಹೇಗೆ ?
ಬಹುತೇಕ ಎಲ್ಲಾ ಸಾರ್ವಜನಿಕ, ಖಾಸಗಿ ಬ್ಯಾಂಕುಗಳು ಚಿನ್ನದ ಮೇಲೆ ಸಾಲ ನೀಡುವುದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಚಿನ್ನದ ಸಾಲದ ಮೇಲಿನ ಬಡ್ಡಿಯನ್ನು ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ.
ವೈಯಕ್ತಿಕ ಸಾಲಗಳು, ಗೃಹ ಸಾಲಗಳು, ವಾಹನ ಸಾಲಗಳು ಮತ್ತು ಚಿನ್ನದ ಸಾಲಗಳು ಸೇರಿದಂತೆ SBI ವಿವಿಧ ಸಾಲಗಳನ್ನು ನೀಡುತ್ತದೆ. ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಇತ್ತೀಚೆಗೆ ತನ್ನ ಚಿನ್ನದ ಸಾಲದ ದರಗಳನ್ನು ಪರಿಷ್ಕರಿಸಿದೆ. ಈ ಮೂಲಕ ಬಡ್ಡಿದರ 8.25% ನಲ್ಲಿ ಚಿನ್ನದ ಸಾಲ ನೀಡುತ್ತಿದೆ.
2021ರ ಸೆಪ್ಟೆಂಬರ್ 30ರವರೆಗೆ ಹೆಚ್ಚುವರಿ ಶೇಕಡಾ 0.75% ರಿಯಾಯಿತಿಯಲ್ಲಿ ಚಿನ್ನದ ಸಾಲ ಲಭ್ಯವಿರುತ್ತದೆ. ಹಾಗಾಗಿ, ಸೆಪ್ಟೆಂಬರ್ 30 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದರೆ ಬಡ್ಡಿ ದರ ಕೇವಲ 7.50% ಆಗಿರುತ್ತದೆ. ಎಸ್ಬಿಐ ಚಿನ್ನದ ಸಾಲದ ಸೇವೆಗಳನ್ನು ಯೋನೊ ಎಸ್ಬಿಐ ಪೋರ್ಟಲ್ ಮೂಲಕ ಕಡಿಮೆ ಪೇಪರ್ವರ್ಕ್ ಮತ್ತು ಕಡಿಮೆ ಪ್ರೊಸೆಸಿಂಗ್ ಟೈಮ್, ಮೂಲಕ ವೇಗವಾಗಿ ಪಡೆಯಬಹುದಾಗಿದೆ.

ಯೋನೋ ಮೂಲಕ ಅಪ್ಲೈ ಮಾಡುವುದು ಹೇಗೆ?
* SBI ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸಲು, ಗ್ರಾಹಕರು YONO ಪೋರ್ಟಲ್ಗೆ ಲಾಗ್ ಇನ್ ಆಗಬೇಕು.
* ನಂತರ ಮೆನುಗೆ ಹೋಗಿ ಮತ್ತು ಸಾಲಗಳ ಆಯ್ಕೆಯನ್ನು (ಮೂರನೇ ಆಯ್ಕೆ) ಆಯ್ಕೆ ಮಾಡಿ.
* ನಂತರ ನಿಮಗೆ ಕೊನೆಯ ಆಯ್ಕೆ ಕಾಣಿಸುತ್ತದೆ 'ಚಿನ್ನದ ಸಾಲ'
* ಈ ಆಯ್ಕೆಯನ್ನು ಆರಿಸಿದ ನಂತರ, 'Apply now' ಪೇಜ್ನಲ್ಲಿ ಕಾಣಿಸುತ್ತದೆ.
* ಈಗ ಆನ್ಲೈನ್ ಫಾರ್ ಕೆಲವು ಡ್ರಾಪ್ ಬಾಕ್ಸ್ಗಳೊಂದಿಗೆ ಬರುತ್ತದೆ - ಈ ಫಾರ್ಮ್ ಅನ್ನು ವಿವರಗಳೊಂದಿಗೆ ಭರ್ತಿ ಮಾಡಬೇಕು.
* ವಸತಿ, ಉದ್ಯೋಗ ಮತ್ತು ನಿವ್ವಳ ಮಾಸಿಕ ಆದಾಯ, ಆಭರಣದ ಪ್ರಕಾರ, ಪ್ರಮಾಣ, ಚಿನ್ನದ ನಿಖರವಾದ ಕ್ಯಾರೆಟ್ ಮತ್ತು ಚಿನ್ನದ ನಿವ್ವಳ ತೂಕದಂತಹ ವಿವರಗಳೊಂದಿಗೆ ಭರ್ತಿ ಮಾಡಬೇಕಾಗುತ್ತದೆ.
* ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಗ್ರಾಹಕರು ಆಭರಣ, 2 ಫೋಟೋಗಳು ಮತ್ತು ಕೆವೈಸಿ ದಾಖಲೆಗಳೊಂದಿಗೆ ಭೌತಿಕವಾಗಿ ಶಾಖೆಗೆ ಭೇಟಿ ನೀಡಬೇಕಾಗುತ್ತದೆ.
ಆಗಸ್ಟ್ 11ರ ಚಿನ್ನದ ಬೆಲೆ: ಯಾವ ನಗರದಲ್ಲಿ ಎಷ್ಟು ಕಡಿಮೆ?

ಗರಿಷ್ಠ ಎಷ್ಟು ಸಾಲ ನೀಡಲಾಗುವುದು?
ಎಸ್ಬಿಐ ತನ್ನ ಗರಿಷ್ಠ ಸಾಲದ ಮೊತ್ತವನ್ನು 50 ಲಕ್ಷ ರೂಪಾಯಿಗೆವರೆಗೆ ಮತ್ತು ಕನಿಷ್ಠ ಸಾಲದ ಮೊತ್ತ 20,000 ರೂ. ನೀಡುತ್ತದೆ. ಸೇವೆಯ ಸಂಸ್ಕರಣಾ ಶುಲ್ಕವು ಅನ್ವಯವಾಗುವಂತೆ GST (ಕನಿಷ್ಠ ರೂ. 500 + ಅನ್ವಯವಾಗುವ GST) ಜೊತೆಗೆ ಸಾಲದ ಮೊತ್ತದ 0.50% ಆಗಿದೆ. ಚಿನ್ನದ ಮೌಲ್ಯಮಾಪಕ ಶುಲ್ಕವನ್ನು ಸಾಲದ ಅರ್ಜಿದಾರರು ಪಾವತಿಸಬೇಕಾಗುತ್ತದೆ. ಸಾಲದ ಅವಧಿ 36 ತಿಂಗಳುಗಳು (ಚಿನ್ನದ ಸಾಲ ಮರುಪಾವತಿಗೆ 12 ತಿಂಗಳುಗಳ ಬುಲೆಟ್ ಮರುಪಾವತಿ ವ್ಯವಸ್ಥೆಯಿದೆ).

ಇತರ ಬ್ಯಾಂಕುಗಳಲ್ಲಿ ಚಿನ್ನದ ಸಾಲ ಆಯ್ಕೆಗಳು
ಎಸ್ಬಿಐ ಜೊತೆಗೆ, ಚಿನ್ನದ ಸಾಲದ ಸೇವೆಗಳನ್ನು ನೀಡುವ ಇತರ ಬ್ಯಾಂಕುಗಳೂ ಇವೆ. ಕೆಲವು ಬ್ಯಾಂಕುಗಳು ಪ್ರಸ್ತುತ SBI ಗಿಂತ ಉತ್ತಮ ಬಡ್ಡಿದರಗಳನ್ನು ಹೊಂದಿವೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ 7%, ಬ್ಯಾಂಕ್ ಆಫ್ ಇಂಡಿಯಾ 7.30% ಮತ್ತು ಕೆನರಾ ಬ್ಯಾಂಕ್ 7.35% ಬಡ್ಡಿದರದಲ್ಲಿ 3 ವರ್ಷಗಳ ಅವಧಿಯೊಂದಿಗೆ 5 ಲಕ್ಷ ಸಾಲ ನೀಡುತ್ತವೆ. ಇವುಗಳು ಭಾರತದಲ್ಲಿ ಪ್ರಸ್ತುತ ಲಭ್ಯವಿರುವ ಟಾಪ್ 3 ಕಡಿಮೆ ಬಡ್ಡಿದರದ ಬ್ಯಾಂಕುಗಳ ಆಯ್ಕೆಗಳಾಗಿವೆ.
ಚಿನ್ನದ ಬೆಲೆ ಏರಿಳಿತ ಆಗುವುದರ ಹಿಂದೆ ಏನಿದೆ ಕಾರಣ?: ಇಲ್ಲಿದೆ ಮಾಹಿತಿ

ಬ್ಯಾಂಕೇತರ ಹಣಕಾಸು ಕಂಪನಿಗಳು
ಬ್ಯಾಂಕೇತರ ಹಣಕಾಸು ಕಂಪನಿಗಳು (NBFCs) ಸಹ ಚಿನ್ನದ ಸಾಲವನ್ನು ನೀಡುತ್ತವೆ. ಆದರೆ ಅವುಗಳ ದರಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗಿಂತ ಹೆಚ್ಚಾಗಿದೆ. ಸಾಮಾನ್ಯವಾಗಿ, ಅವರ ಬಡ್ಡಿದರಗಳು 9.12%ರಿಂದ ಆರಂಭವಾಗುತ್ತವೆ.