ಆಸ್ತಿ ಖರೀದಿ- ಮಾರಾಟದ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಸೂಪರ್ ಐಡಿಯಾ
ಆಸ್ತಿ ಖರೀದಿಗೆ ಮತ್ತು ನೋಂದಣಿಗೆ ಪ್ಯಾನ್ ಕಾರ್ಡ್ ಕಡ್ಡಾಯವೆ? 10 ಲಕ್ಷ ರುಪಾಯಿ ಮೇಲ್ಪಟ್ಟ ಸ್ಥಿರಾಸ್ತಿ ಖರೀದಿ ಮಾಡಬೇಕು ಅಂದರೆ, ಪರ್ಮನೆಂಟ್ ಅಕೌಂಟ್ ನಂಬರ್ (PAN) ಕಡ್ಡಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಈಚೆಗೆ ಸಂಸತ್ ನಲ್ಲಿ ಲಿಖಿತ ಉತ್ತರವನ್ನು ನೀಡಿದೆ. ಈ ಬಗ್ಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿಕೆ ನೀಡಿದ್ದಾರೆ.
ಮಾ. 31ರ ನಂತರ 17 ಕೋಟಿ ಹೆಚ್ಚು ಪ್ಯಾನ್ ಕಾರ್ಡ್ ಗಳು ಉಪಯೋಗಕ್ಕಿಲ್ಲ
ಯಾವುದೇ ಸ್ಥಿರಾಸ್ತಿಯ ನೋಂದಣಿ ಮೌಲ್ಯ 10 ಲಕ್ಷ ರುಪಾಯಿ ದಾಟಿದಲ್ಲಿ ಅದನ್ನು ಖರೀದಿ ಅಥವಾ ಮಾರಾಟ ಮಾಡುವ ವೇಳೆ ಕಡ್ಡಾಯವಾಗಿ PAN ನಮೂದಿಸಬೇಕು ಎಂದು ತಿಳಿಸಲಾಗಿದೆ. ಇನ್ನು ಪ್ಯಾನ್ ಕಾರ್ಡ್ ಜತೆಗೆ ಆಧಾರ್ ಜೋಡಣೆ ಮಾಡುವುದಕ್ಕೆ ಮಾರ್ಚ್ 31, 2020ರ ಗಡುವು ವಿಧಿಸಲಾಗಿದೆ.

ಬೇನಾಮಿ ವ್ಯವಹಾರಗಳನ್ನು ತಡೆಯುವುದಕ್ಕೆ ಹಾಗೂ ಪಾರದರ್ಶಕತೆ ತರುವುದಕ್ಕೆ ಇದರಿಂದ ನೆರವಾಗುತ್ತದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಬೇನಾಮಿ ವ್ಯವಹಾರ ತಡೆಯಲು ಹಾಗೂ ಪಾರದರ್ಶಕತೆ ತರಲು ಆಸ್ತಿ ವ್ಯವಹಾರಗಳನ್ನು ಆಧಾರ್ ನೊಂದಿಗೆ ಜೋಡಣೆ ಮಾಡುವ ಕಾರ್ಯ ಯಾವಾಗಿನಿಂದ ಸರ್ಕಾರ ಜಾರಿಗೆ ತರುತ್ತದೆ ಎಂಬ ಲಿಖಿತ ಪ್ರಶ್ನೆಗೆ ಉತ್ತರ ನೀಡಲಾಯಿತು.